ಸಾಗರವೆಂಬ ಮಾಯಾಲೋಕದಲ್ಲಿ ಜಲಾಂತರ್ಗಾಮಿ ಪ್ರವಾಸ

Written By:

ಭೂಲೋಕದಲ್ಲಿರುವ ನಮಗೆ ಸಾಗರದೊಳಗೆ ದಿನದಿತ್ಯ ಏನೇನು ನಡೆಯುತ್ತಿರಬಹುದು ಎಂಬುದನ್ನು ತಿಳಿಯುವ ಕುತೂಹಲ ಇದ್ದೇ ಇರುತ್ತದೆ. ಭೂಮಿಯ ತರಹನೇ ಅಲ್ಲೂ ಜೀವಚರಗಳಿವೆಯೇ? ಅವುಗಳ ಜೀವನ ಪ್ರಕ್ರಿಯೆ ಹೇಗಿರಬಹುದು ಎಂಬುದನ್ನು ಯಾವತ್ತಾದರೂ ಯೋಚಿಸಿ ನೋಡಿರುವೀರಾ?

Also Read : ಪುನರ್ಜನ್ಮ ಪಡೆಯಲಿರುವ ಟೈಟಾನಿಕ್ ಹಡಗು

ನಿಜಕ್ಕೂ ನಮಗಿದು ಕನಸಿನ ಮಾಯಾಲೋಕವೇ ಸರಿ. ಇಡೀ ಭೂಲೋಕಕ್ಕೆ ಅಧಿಪತಿಯೆನಿಸಿರುವ ಮನುಕುಲವು ಈಗ ಸಾಗರದೊಳಗೂ ಕಣ್ಣಿಟ್ಟಿದೆ. ಆದರೆ ಪ್ರತಿಯೊಂದು ಜೀವಿಗೂ ಸೃಷ್ಟಿಕರ್ತ ಬ್ರಹ್ಮ ಕೆಲವೊಂದು ಪರಿಮಿತಿಗಳನ್ನು ಕೊಟ್ಟಿರುತ್ತಾನೆ. ಅದನ್ನು ಮೀರಿ ನಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅತಿ ಬುದ್ಧಿವಂತ ಮಾನವ ತನ್ನ ಪರಿಮಿತಿಯಲ್ಲಿ ಇದ್ದುಕೊಂಡೇ ಸಾಗರದೊಳಗೆ ಏನೇನು ನಡೆಯುತ್ತದೆ ಎಂಬುದನ್ನು ತಂತ್ರಜ್ಞಾನದ ಮೂಲಕ ವಿಶ್ವಕ್ಕೆ ಪರಿಚಯಿಸಿದ್ದಾನೆ.

ಸಾಗರವೆಂಬ ಮಾಯಾಲೋಕದಲ್ಲಿ ಜಲಾಂತರ್ಗಾಮಿ ಪ್ರವಾಸ

ಸಾಗರವೆಂಬ ವಿಸ್ಮಯ ನಗರಿಗೆ ನೀವು ಕಾಲಿಡಬಹುದು. ಅದು ಹೇಗೆ ಅಂತೀರಾ? ಹೌದು, ಪೂರ್ವ ಕೆರೆಬಿಯನ್ ದ್ವೀಪ ರಾಷ್ಟ್ರದಲ್ಲಿ ಇಂತಹದೊಂದು ಕನಸನ್ನು ನನಸಾಗಿಸುವಲ್ಲಿ ಅಟ್ಲಾಂಟಿಸ್ ಸಬ್ ಮರೈನ್ ಯಶಸ್ವಿಯಾಗಿದೆ.

ಸಾಗರವೆಂಬ ಮಾಯಾಲೋಕದಲ್ಲಿ ಜಲಾಂತರ್ಗಾಮಿ ಪ್ರವಾಸ

ಬಾರ್ಬಡೋಸ್ ಉತ್ತರ ಅಮೆರಿಕದ ಪುಟ್ಟ ದ್ವೀಪವಾಗಿದ್ದು, ಉತ್ತರ ಅಟ್ಲಾಂಟಿಕ್‌ನ ಪಶ್ಛಿಮ ಭಾಗದಲ್ಲಿ ಸ್ಥಿತಗೊಂಡಿದೆ. ಪ್ರಸ್ತುತ ದ್ವೀಪವೀಗ ನೆಚ್ಚಿನ ಜಲಾಂತರ್ಗಾಮಿ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

ಸಾಗರವೆಂಬ ಮಾಯಾಲೋಕದಲ್ಲಿ ಜಲಾಂತರ್ಗಾಮಿ ಪ್ರವಾಸ

ಇಲ್ಲಿಗೆ ಬರುವ ಪ್ರವಾಸಿಗಳಿಗಾಗಿ ಅಟ್ಲಾಂಟಿಸ್ ಜಲಾಂತರ್ಗಾಮಿ ಸಾಗರದೊಳಗೆ ವಿಶೇಷ ಪ್ರವಾಸವನ್ನು ಏರ್ಪಡಿಸುತ್ತಿದೆ.

ಸಾಗರವೆಂಬ ಮಾಯಾಲೋಕದಲ್ಲಿ ಜಲಾಂತರ್ಗಾಮಿ ಪ್ರವಾಸ

ಅಟ್ಲಾಂಟಿಸ್ ಜಲಾಂತರ್ಗಾಮಿ ನೈಜವಾದ ಅನನ್ಯ, ವಿನೋದ, ಕುಟುಂಬ ಸ್ನೇಹಿ, ನೈಸರ್ಗಿಕ ನೀರಿನ ಕೆರಿಬಿಯನ್ ಸಾಹಸಗಳನ್ನು ನೀಡುತ್ತದೆ.

ಸಾಗರವೆಂಬ ಮಾಯಾಲೋಕದಲ್ಲಿ ಜಲಾಂತರ್ಗಾಮಿ ಪ್ರವಾಸ

ಇಲ್ಲಿ ಸಬ್ ಮರೈನ್ ಡೇ ಡ್ರೈವ್, ಸಬ್ ಮರೈನ್ ನೈಟ್ ಡ್ರೈವ್, ಖಾಸಗಿ ಪ್ರವಾಸ, ಕ್ರೂಸ್ ಗೆಸ್ಟ್ ಮುಂತಾದ ವಿಶೇಷ ಪ್ಯಾಕೇಜ್ ಗಳನ್ನು ಒದಗಿಸುತ್ತಿದೆ.

ಸಾಗರವೆಂಬ ಮಾಯಾಲೋಕದಲ್ಲಿ ಜಲಾಂತರ್ಗಾಮಿ ಪ್ರವಾಸ

ವಿವಾಹದ ಬಳಿಕ ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಿರುವ ನವದಂಪತಿಗೆ ಪರಿಪೂರ್ಣ ಮಧುಚಂದ್ರದ ಪ್ರವಾಸದ ಅನುಭವ ಇಲ್ಲಿ ದೊರೆಯುತ್ತದೆ.

ಸಾಗರವೆಂಬ ಮಾಯಾಲೋಕದಲ್ಲಿ ಜಲಾಂತರ್ಗಾಮಿ ಪ್ರವಾಸ

ವರದಿಗಳ ಪ್ರಕಾರ ಜಗತ್ತಿನೆಲ್ಲೆಡೆಯಿಂದ ಇಲ್ಲಿಗೆ ಭೇಟಿ ಕೊಡುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಈ ಮೂಲಕ ಜಲಾಂತರ್ಗಾಮಿ ಪಯಣವನ್ನು ಸ್ಮರಣೀಯವಾಗಿಸಬಹುದಾಗಿದೆ.

ಸಾಗರವೆಂಬ ಮಾಯಾಲೋಕದಲ್ಲಿ ಜಲಾಂತರ್ಗಾಮಿ ಪ್ರವಾಸ

ಕೇವಲ ಬಾರ್ಬಡೋಸ್ ನಲ್ಲಿ ಮಾತ್ರವಲ್ಲದೆ ಅಟ್ಲಾಂಟಿಸ್ ಸಬ್ ಮರೈನ್, ಗ್ರಾಂಡ್ ಕೇಮ್ಯಾನ್, ಅರುಬಾ, ಗುಯಾಮ್, ಸೈಂಟ್ ಥಾಮಸ್, ಕೊಝುಮೆಲ್ ಮತ್ತು ಹವಾಯಿ ದ್ವೀಪದಲ್ಲೂ ತನ್ನ ಸೇವೆಯನ್ನು ಒದಗಿಸುತ್ತಿದೆ.

ಸಾಗರವೆಂಬ ಮಾಯಾಲೋಕದಲ್ಲಿ ಜಲಾಂತರ್ಗಾಮಿ ಪ್ರವಾಸ

ಇದುವರೆಗೆ 12 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ಪ್ರಯಾಣಿಕರು ಅಂಟ್ಲಾಟಿಂಸ್ ಜಲಾಂತರ್ಗಾಮಿ ಪ್ರವಾಸದ ರುಚಿ ಅನುಭವಿಸಿದ್ದಾರೆ. ನೀರಿನೊಳಗಿನ ಪಯಣ ಇದರ ಪ್ರಮುಖ ವೈಶಿಷ್ಟ್ಯವಾಗಿದೆ.

ಸಾಗರವೆಂಬ ಮಾಯಾಲೋಕದಲ್ಲಿ ಜಲಾಂತರ್ಗಾಮಿ ಪ್ರವಾಸ

ಒಟ್ಟಿನಲ್ಲಿ ಸಾಗರದೊಳಗೆ ಇಂತಹ ಜಲಾಂತರ್ಗಾಮಿಯಲ್ಲಿ ಪ್ರವಾಸ ಕೈಗೊಳ್ಳುವ ಮೂಲಕ ನೀವು ನಿಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದಾಗಿದೆ.

ಇವನ್ನೂ ಓದಿ

ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ

English summary
Atlantis Submarine Underwater Tour
Story first published: Monday, July 13, 2015, 15:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark