ದೆಹಲಿಯ ದಟ್ಟವಾದ ಮಂಜಿಗೆ ಆಸ್ಟ್ರೇಲಿಯನ್ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರ ಬಲಿ
ದಟ್ಟವಾದ ಮಂಜು, ಹೊಗೆ ಮತ್ತು ದೂಳು ದೆಹಲಿಯ ಜನತೆಯನ್ನು ತತ್ತರಿಸುವಂತೆ ಮಾಡಿದೆ. ದಿನವಿಡೀ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮಂದ ಬೆಳಕಿನಿಂದಾಗಿ ವಾಹನ ಚಾಲನೆ ಕಷ್ಟವಾಗಿದೆ.
ದಟ್ಟವಾದ ಮಂಜು, ಹೊಗೆ ಮತ್ತು ದೂಳು ದೆಹಲಿಯ ಜನತೆಯನ್ನು ತತ್ತರಿಸುವಂತೆ ಮಾಡಿದೆ. ದಿನವಿಡೀ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮಂದ ಬೆಳಕಿನಿಂದಾಗಿ ವಾಹನ ಚಾಲನೆ ಕಷ್ಟವಾಗಿದೆ.

ಆದ್ರೆ, ಇಷ್ಟೇ ಆಗಿದ್ದರೆ ಯಾರಿಗೂ ತೊಂದರೆ ಆಗುತ್ತಿರಲಿಲ್ಲವೇನೋ !! ಆದರೆ, ಈ ಮಂಜು ನೂರಾರು ಜನರ ಪ್ರಾಣ ತೆಗೆದುಕೊಂಡಿರುವುದು ಸದ್ಯ ಎಲ್ಲರಿಗೂ ಭಯದ ವಾತಾವರಣದಲ್ಲಿ ಜೀವನ ಸಾಗಿಸುವಂತೆ ಮಾಡಿರುವುದಂತೂ ಖಂಡಿತ.

ಈಗ ಈ ದಟ್ಟವಾದ ಮಂಜು ಮತ್ತೊಂದು ಪ್ರಾಣವನ್ನು ಬಲಿತೆಗೆದುಕೊಂಡಿದೆ. ಹೌದು, 26 ವರ್ಷದ ಆಸ್ಟ್ರೇಲಿಯನ್ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರನೊಬ್ಬ ಈ ಮಹಾಮಾರಿಗೆ ಬಲಿಯಾಗಿದ್ದಾರೆ.

ಟ್ರಕ್ ಒಂದು ಮ್ಯಾಥ್ಯೂ ಆಂಟಿಯಾರ್ಡಲ್ ಅವರಿಗೆ ಬಂದು ಅಪ್ಪಳಿಸಿದ್ದು, ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಬೆನೆಟ್ ಕೊವಾಲ್ಟ್ ಮತ್ತು ಇಯಾನ್ ಬೋರ್ಗ್ ಎಂಬ ಹೆಸರಿನ ಇನ್ನೆರಡು ಸಹ ಸವಾರರು ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಈ ಘಟನೆಯು ದೆಹಲಿ ಆಗ್ರಾ ಎಕ್ಸ್‌ಪ್ರೆಸ್ ಹೆದ್ದಾರಿಯ ಡನ್‌ಕೌರ್ ಗ್ರಾಮದ ಸಮೀಪದಲ್ಲಿ ಸಂಭವಿಸಿದೆ. ಎಲ್ಲಾ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರರೂ ಸಹ ಆಗ್ರಾ ಕಡೆ ಪ್ರಯಾಣ ಬೆಳೆಸಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಅಪಘಾತದಲ್ಲಿ ಗಾಯಗೊಂಡ ಸಹ ಸವಾರರಾದ ಬೆನೆಟ್ ಕೊವಾಲ್ಟ್ ಮತ್ತು ಇಯಾನ್ ಬೋರ್ಗ್, ಬಸ್ ಚಾಲಕ ಧರ್ಮೇಂದ್ರ, ಕಂಡಕ್ಟರ್ ಪುಷ್ಪೇಂದ್ರ ಮತ್ತು ಪ್ರಯಾಣಿಕ ರಾಜ್ವತಿ ಎಂಬುವವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.

ಹಿಮವು, ಭಾರತದ ಉತ್ತರದ ರಾಜ್ಯಗಳಲ್ಲಿ, ವಿಶೇಷವಾಗಿ ನವೆಂಬರ್ ಮತ್ತು ಫೆಬ್ರವರಿಯ ಚಳಿಗಾಲದಲ್ಲಿ ಅಪಘಾತಗಳಿಗೆ ಪ್ರಮುಖ ಕಾರಣ. ಈ ತೊಂದರೆಯಿಂದ ದೂರವಿರಲು ಕೆಲವು ಟಿಪ್ಸ್‌ಗಳನ್ನು ಕೆಳಗೆ ನೀಡಲಾಗಿದೆ :

1. ತುರ್ತುಸ್ಥಿತಿಯ ಹೊರತು ಬೇರೆ ಸಮಯದಲ್ಲಿ ಹೊರಗಡೆ ಹೋಗುವುದನ್ನು ಕಡಿಮೆ ಮಾಡಿಕೊಳ್ಳಿ.
2. ಪ್ರಯಾಣ ಬೆಳಸಬೇಕಾದ ಸಂದರ್ಭ ಬಂದ ಸಂದರ್ಭದಲ್ಲಿ ಆದಷ್ಟು ನಿಧಾನವಾಗಿ ವಾಹನ ಚಾಲನೆ ಮಾಡಿ.

3 ಬೆಳಗಿನ ಹೊತ್ತು ಸಂಚಾರಕ್ಕೆ ಸೂಕ್ತ ಸಮಯವಾಗಿದೆ.
4 ಸಂಚಾರಿಸುವಾಗ, ಮಂಜು ದೀಪಗಳು ಮರೆಯದೆ ಚಾಲನೆ ಸ್ಥಿತಿಯಲ್ಲಿಟ್ಟಿರಿ.
5 ಲೇನ್ ಗುರುತುಗಳನ್ನು ಮರೆಯದೆ ಅನುಸರಿಸಿ.


Click it and Unblock the Notifications








