ಕೊವೀಡ್ 19: ವೈರಸ್ ಕುರಿತು ವಿಶೇಷ ಜಾಗೃತಿ ಮೂಡಿಸಿದ ಕಲಾವಿದ ಬಾದಲ್ ನಂಜುಂಡಸ್ವಾಮಿ

ವಿಶ್ವಾದ್ಯಂತ ಕರೋನಾ ವೈರಸ್ ಅಟ್ಟಹಾಸವು ದಿನಂದಿನಕ್ಕೆ ಹೆಚ್ಚುತ್ತಲೇ ಇದ್ದು, ಭಾರತದಲ್ಲೂ ಕೂಡಾ ಈಗಾಗಲೇ ಸಾವಿರಕ್ಕೂ ಅಧಿಕ ಜನರ ಬಲಿಪಡೆದಿದೆ. ಹೀಗಿದ್ದರೂ ಜನ ಮಾತ್ರ ಅನಗತ್ಯವಾಗಿ ಹೊರಗೆ ಸುತ್ತುವ ಮೂಲಕ ಸೋಂಕಿಗೆ ತುತ್ತಾಗಿರುವುದು ಮಾತ್ರ ಕಡಿಮೆಯಾಗುತ್ತಿಲ್ಲ.

ಕರೋನಾ ವೈರಸ್ ಕುರಿತು ವಿಶೇಷ ಜಾಗೃತಿ ಮೂಡಿಸಿದ ಕಲಾವಿದ ಬಾದಲ್ ನಂಜುಂಡಸ್ವಾಮಿ

ಮಹಾಮಾರಿ ಕರೋನಾ ವೈರಸ್‌ಗೆ ಸೂಕ್ತ ಔಷಧಿ ಇಲ್ಲದಿರುವುದೇ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಸೋಂಕಿನಿಂದ ರಕ್ಷಣೆ ಮಾಡಿಕೊಳ್ಳಲು ಅಗತ್ಯ ಮುಂಜಾಗ್ರತೆಯೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದೇ ಸದ್ಯಕ್ಕಿರುವ ಸೂಕ್ತ ಮದ್ದು ಎಂದರೇ ತಪ್ಪಾಗಲಾರದು. ಆದರೆ ಸೋಂಕು ಭೀತಿಯ ನಡುವೆಯೂ ಹಲವರು ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳದೆ ಅನಾವಶ್ಯಕವಾಗಿ ಹೊರಗೆ ತಿರುಗುವ ಮೂಲಕ ಸೋಂಕಿಗೆ ಬಲಿಯಾಗುತ್ತಿದ್ದಾರೆ.

ಕರೋನಾ ವೈರಸ್ ಕುರಿತು ವಿಶೇಷ ಜಾಗೃತಿ ಮೂಡಿಸಿದ ಕಲಾವಿದ ಬಾದಲ್ ನಂಜುಂಡಸ್ವಾಮಿ

ಜನತೆಯು ಅನಗತ್ಯವಾಗಿ ಹೊರಬರದಿರುವಂತೆ ಕಟ್ಟುನಿಟ್ಟಿನ ಲಾಕ್‌ಡೌನ್ ನಡುವೆಯೂ ದಿನಂಪ್ರತಿ ಸಾವಿರಾರು ಲಾಕ್‌ಡೌನ್ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದು, ಸೋಂಕು ತಡೆಯಲು ಹರಸಾಹಸ ಮಾಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಇದು ಮತ್ತಷ್ಟು ತಲೆಬಿಸಿಯಾಗಿದೆ.

ಕರೋನಾ ವೈರಸ್ ಕುರಿತು ವಿಶೇಷ ಜಾಗೃತಿ ಮೂಡಿಸಿದ ಕಲಾವಿದ ಬಾದಲ್ ನಂಜುಂಡಸ್ವಾಮಿ

ಹೀಗಿರುವಾಗ ಜನತೆಯಲ್ಲಿ ಮಾಹಾಮಾರಿ ವೈರಸ್ ಕುರಿತು ಅರಿವು ಮೂಡಿಸಲು ಸರ್ಕಾರಿ ಸಂಸ್ಥೆಗಳ ಜೊತೆಗೆ ವಿವಿಧ ಸಂಘ-ಸಂಸ್ಥೆಗಳು ಕೂಡಾ ಕೈಜೋಡಿಸಿದ್ದು, ಅಗತ್ಯವಾಗಿ ಮನೆ ಹೊರಗೆ ಬರದಂತೆ ಎಚ್ಚರಿಕೆಯ ಸಂದೇಶ ನೀಡುತ್ತಿವೆ.

MOST READ: ಲಾಕ್‌ಡೌನ್ ವೇಳೆ ಪೊಲೀಸರನ್ನೇ ಯಾಮಾರಿಸಿದ್ದ ಈ ಕಿಲಾಡಿ ಲೇಡಿಗಳು ಕೊನೆಗೂ ಲಾಕ್ ಆಗಿದ್ದು ಹೇಗೆ ಗೊತ್ತಾ?

ಕರೋನಾ ವೈರಸ್ ಕುರಿತು ವಿಶೇಷ ಜಾಗೃತಿ ಮೂಡಿಸಿದ ಕಲಾವಿದ ಬಾದಲ್ ನಂಜುಂಡಸ್ವಾಮಿ

ಆದರೂ ಕೂಡಾ ಸೋಂಕು ಹರಡುವ ಭೀತಿ ನಡುವೆಯೂ ಯಾವುದೇ ಸುರಕ್ಷಾ ಕ್ರಮಗಳಿಲ್ಲದೇ ಜನ ಹೊರಗೆ ತಿರುಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಜನತೆ ಎಚ್ಚೆತ್ತುಕೊಳ್ಳದೆ ಇದ್ದಲ್ಲಿ ಪರಿಸ್ಥಿತಿಯು ಮತ್ತಷ್ಟು ಶೋಚನೀಯವಾಗುವುದರಲ್ಲಿ ಎರಡು ಮಾತಿಲ್ಲ.

ಕರೋನಾ ವೈರಸ್ ಕುರಿತು ವಿಶೇಷ ಜಾಗೃತಿ ಮೂಡಿಸಿದ ಕಲಾವಿದ ಬಾದಲ್ ನಂಜುಂಡಸ್ವಾಮಿ

ಈ ಕುರಿತು ಪ್ರತಿಯೊಬ್ಬರಿಗೆ ಮನದಟ್ಟು ಆಗುವಂತೆ ಜನತೆಯಲ್ಲಿ ಅರಿವು ಮೂಡಿಸುತ್ತಿರುವ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ರಸ್ತೆಗಳಲ್ಲಿ 3ಡಿ ಕರೋನಾ ಚಿತ್ರಗಳನ್ನು ಬಿಡಿಸುವ ಮೂಲಕ ಗಮನಸೆಳೆಯುತ್ತಿದ್ದಾರೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಕರೋನಾ ವೈರಸ್ ಕುರಿತು ವಿಶೇಷ ಜಾಗೃತಿ ಮೂಡಿಸಿದ ಕಲಾವಿದ ಬಾದಲ್ ನಂಜುಂಡಸ್ವಾಮಿ

ರಸ್ತೆಗಳಲ್ಲಿ 3ಡಿ ಚಿತ್ರಗಳನ್ನು ಬಿಡಿಸುವ ಮೂಲಕ ಈ ಹಿಂದೆ ಹಲವಾರು ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾಗಿರುವ ಬಾದಲ್ ನಂಜುಂಡಸ್ವಾಮಿ ಅವರು ಇದೀಗ ಮಹಾಮಾರಿ ಕರೋನಾ ವೈರಸ್ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಕರೋನಾ ವೈರಸ್ ಕುರಿತು ವಿಶೇಷ ಜಾಗೃತಿ ಮೂಡಿಸಿದ ಕಲಾವಿದ ಬಾದಲ್ ನಂಜುಂಡಸ್ವಾಮಿ

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ 3ಡಿ ಮಾದರಿಯ ಕರೋನಾ ವೈರಸ್ ಚಿತ್ರಗಳನ್ನು ಬಿಡಿಸಲಾಗಿದ್ದು, ಅನಗತ್ಯವಾಗಿ ಹೊರೆಗೆ ಬಂದು ವೈರಸ್‌ಗೆ ತುತ್ತಾಗಬೇಡಿ ಎನ್ನುವ ಸಂದೇಶವನ್ನು ನೀಡುತ್ತಿರುವುದು ವಿಶೇಷವಾಗಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಕರೋನಾ ವೈರಸ್ ಕುರಿತು ವಿಶೇಷ ಜಾಗೃತಿ ಮೂಡಿಸಿದ ಕಲಾವಿದ ಬಾದಲ್ ನಂಜುಂಡಸ್ವಾಮಿ

ಸದ್ಯ ಭಾರತದಲ್ಲಿ ಕರೋನಾ ವೈರಸ್ ಹರಡುವಿಕೆಯ ಪ್ರಮಾಣವು ಮುಂದುವರಿದ ರಾಷ್ಟ್ರಗಳಿಗೆ ಹೊಲಿಕೆ ಮಾಡಿದ್ದಲ್ಲಿ ಸಾಕಷ್ಟು ನಿಯಂತ್ರಣದಲ್ಲಿದ್ದು, ಸ್ವಲ್ಪವೇ ಎಚ್ಚರ ತಪ್ಪಿದರೂ ಸೋಂಕಿತರ ಪ್ರಮಾಣವು ಲೆಕ್ಕಕ್ಕೆ ಸಿಗದಂತಾಗುತ್ತದೆ.

ಕರೋನಾ ವೈರಸ್ ಕುರಿತು ವಿಶೇಷ ಜಾಗೃತಿ ಮೂಡಿಸಿದ ಕಲಾವಿದ ಬಾದಲ್ ನಂಜುಂಡಸ್ವಾಮಿ

ಹೀಗಾಗಿ ಕರೋನಾ ವೈರಸ್‌ನಿಂದ ಬಚಾವ್ ಆಗಲು ಸದ್ಯಕ್ಕೆ ಲಾಕ್‌ಡೌನ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಲೇಬೇಕಾದ ಅನಿವಾರ್ಯತೆಗಳಿದ್ದು, ಈ ನಿಟ್ಟಿನಲ್ಲಿ ಜನತೆಯಲ್ಲಿ ಜಾಗೃತಿ ಮೂಡಿಸುತ್ತಿರುವ ಕಲಾವಿದರ ಕಾರ್ಯವನ್ನು ಮೆಚ್ಚಲೇಬೇಕು.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಕರೋನಾ ವೈರಸ್ ಕುರಿತು ವಿಶೇಷ ಜಾಗೃತಿ ಮೂಡಿಸಿದ ಕಲಾವಿದ ಬಾದಲ್ ನಂಜುಂಡಸ್ವಾಮಿ

ಇನ್ನು ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ರಸ್ತೆಗಳಲ್ಲಿ 3ಡಿ ಚಿತ್ರಗಳನ್ನು ಬಿಡಿಸುವ ಮೂಲಕ ಹಲವಾರು ಬದಲಾವಣೆಗೆ ಕಾರಣವಾಗಿದ್ದು, ಪ್ರತಿ ವರ್ಷ ಸಾವಿರಾರು ವಾಹನ ಸವಾರರ ಜೀವ ಬಲಿಪಡೆಯುವ ರಸ್ತೆಗುಂಡಿಗಳನ್ನು ಮುಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

ಕರೋನಾ ವೈರಸ್ ಕುರಿತು ವಿಶೇಷ ಜಾಗೃತಿ ಮೂಡಿಸಿದ ಕಲಾವಿದ ಬಾದಲ್ ನಂಜುಂಡಸ್ವಾಮಿ

ಸಾರ್ವಜನಿಕ ಬೇಡಿಕೆಗಳನ್ನು ಸರ್ಕಾರಕ್ಕೆ ತಲುಪಿಸಲು ಮಾರ್ಮಿಕವಾಗಿ 3ಡಿ ಚಿತ್ರಗಳನ್ನು ರಸ್ತೆಗಳಲ್ಲಿ ಬಿಡಿಸುವ ಮೂಲಕ ಗಮನಸೆಳೆಯುವ ಬಾದಲ್ ನಂಜುಂಡಸ್ವಾಮಿ ಅವರು ಇದೀಗ ಮಹಾಮಾರಿ ವೈರಸ್‌ನಿಂದ ರಕ್ಷಿಸಿಕೊಳ್ಳುವ ಬಗೆಗೆ ತಮ್ಮದೆ ಆದ ರೀತಿಯಲ್ಲಿ ವಿಶೇಷ ಜಾಗೃತಿ ಮೂಡಿಸುತ್ತಿದ್ದಾರೆ.

Most Read Articles

Kannada
English summary
Bangalore Artist Baadal Nanjundaswamy Paints 3D Pictures Of Covid-19 On Road To Spread Awareness. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more