ಮೊಬೈಲ್‍‍ಗಳ್ಳರನ್ನು ಬೆನ್ನಟ್ಟಿ ಹಿಡಿದ ಕೆಟಿ‍ಎಂ ಬೈಕ್ ಸವಾರ

ಮೊಬೈಲ್ ಹಾಗೂ ಸರಗಳ್ಳತನಗಳು ಭಾರತದ ಬಹುತೇಕ ಮೂಲೆಗಳಲ್ಲಿ ಪ್ರತಿದಿನ ಸಾಮಾನ್ಯವಾಗಿವೆ. ದ್ವಿಚಕ್ರ ವಾಹನಗಳಲ್ಲಿ ಬರುವ ಸರಗಳ್ಳರು ಚಿನ್ನದ ಆಭರಣಗಳು, ಮೊಬೈಲ್ ಫೋನ್ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡು ಪರಾರಿಯಾಗುತ್ತಾರೆ.

ಮೊಬೈಲ್‍‍ಗಳ್ಳರನ್ನು ಬೆನ್ನಟ್ಟಿ ಹಿಡಿದ ಕೆಟಿ‍ಎಂ ಬೈಕ್ ಸವಾರ

ಇದೇ ರೀತಿಯ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆದರೆ ಸಾರ್ವಜನಿಕರೊಬ್ಬರು ಧೈರ್ಯವಾಗಿ ಮುಂದೆ ಬಂದು ಅವನನ್ನು ತಮ್ಮ ಕೆಟಿಎಂ 250 ಡ್ಯೂಕ್ ಬೈಕಿನಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ. ಈ ಘಟನೆಯು ಬೆಂಗಳೂರಿನಲ್ಲಿರುವ ಕೋಲ್ಸ್ ಪಾರ್ಕ್ ಬಳಿಯ ಹೇನ್ಸ್ ರಸ್ತೆಯಲ್ಲಿ ನಡೆದಿದೆ.

ಮೊಬೈಲ್‍‍ಗಳ್ಳರನ್ನು ಬೆನ್ನಟ್ಟಿ ಹಿಡಿದ ಕೆಟಿ‍ಎಂ ಬೈಕ್ ಸವಾರ

ಸರಗಳ್ಳನನ್ನು ಹಿಡಿದ ಕೆಟಿಎಂ 250 ಡ್ಯೂಕ್ ಸವಾರ ಫ್ರೆಡ್ರಿಕ್ ಆಂಡ್ರ್ಯೂಸ್ ಈ ಬಗ್ಗೆ ಮಾತನಾಡಿದ್ದಾರೆ. ಫ್ರೆಡ್ರಿಕ್‍‍ರವರ ಪ್ರಕಾರ ಈ ಘಟನೆಯು ರಾತ್ರಿ ಸುಮಾರು 9:30 ಗಂಟೆಗೆ ನಡೆದಿದೆ. ಆ ಸಮಯದಲ್ಲಿ ಆ ರಸ್ತೆಯಲ್ಲಿ ಬಹಳಷ್ಟು ಜನದಟ್ಟಣೆ ಇತ್ತೆಂದು ಹೇಳಿದ್ದಾರೆ.

ಮೊಬೈಲ್‍‍ಗಳ್ಳರನ್ನು ಬೆನ್ನಟ್ಟಿ ಹಿಡಿದ ಕೆಟಿ‍ಎಂ ಬೈಕ್ ಸವಾರ

ಆಗ ಫ್ರೆಡ್ರಿಕ್‍‍ರವರು ಯುವಕನೊಬ್ಬ ಕೂಗುತ್ತಾ ಸ್ಕೂಟರಿನ ಹಿಂದೆ ಓಡುತ್ತಿರುವುದನ್ನು ನೋಡಿದ್ದಾರೆ. ತಕ್ಷಣವೇ ತಮ್ಮ ಡ್ಯೂಕ್ ಬೈಕ್ ಅನ್ನು ಸ್ಟಾರ್ಟ್ ಮಾಡಿ ಆ ಯುವಕನ ಬಳಿ ತೆರಳಿ ವಿಚಾರಿಸಿದ್ದಾರೆ. ಯುವಕನು ಸುಜುಕಿ ಆಕ್ಸೆಸ್ ಸ್ಕೂಟರ್‌ನಲ್ಲಿದ್ದ ಇಬ್ಬರು ಸವಾರರು ತನ್ನ ಮೊಬೈಲ್ ಕಸಿದು ಪರಾರಿಯಾಗುತ್ತಿರುವುದಾಗಿ ತಿಳಿಸಿದ್ದಾನೆ.

ಮೊಬೈಲ್‍‍ಗಳ್ಳರನ್ನು ಬೆನ್ನಟ್ಟಿ ಹಿಡಿದ ಕೆಟಿ‍ಎಂ ಬೈಕ್ ಸವಾರ

ನಂತರ ಫ್ರೆಡ್ರಿಕ್‍‍ರವರು ಮೊಬೈಲ್ ಕಳೆದುಕೊಂಡವನನ್ನು ತಮ್ಮ ಬೈಕಿನಲ್ಲಿ ಕೂರಿಸಿಕೊಂಡು ಸ್ಕೂಟರ್ ಅನ್ನು ಬಹಳ ದೂರದವರೆಗೆ ಬೆನ್ನಟ್ಟಿದ್ದಾರೆ. ನಂತರ ಡ್ರೀಮ್ ವರ್ಲ್ಡ್ ನಲ್ಲಿರುವ ಕೆನರಾ ಬ್ಯಾಂಕ್ ಬಳಿ ಕಳ್ಳರನ್ನು ಹಿಡಿದಿದ್ದಾರೆ.

ಮೊಬೈಲ್‍‍ಗಳ್ಳರನ್ನು ಬೆನ್ನಟ್ಟಿ ಹಿಡಿದ ಕೆಟಿ‍ಎಂ ಬೈಕ್ ಸವಾರ

ಗದ್ದಲವನ್ನು ನೋಡಿದ ನಂತರ, ಜನರು ಗುಂಪುಗೂಡಿದ್ದಾರೆ. ಸುಮಾರು 20 ಜನರಿದ್ದ ಗುಂಪು ಕಳ್ಳರನ್ನು ಹಿಗ್ಗಾಮುಗ್ಗಾ ಥಳಿಸಲು ಶುರು ಮಾಡಿದ್ದಾರೆ. ಫ್ರೆಡ್ರಿಕ್‍‍ರವರು ಹೇಳಿರುವಂತೆ ಆ ಇಬ್ಬರು ಕಳ್ಳರನ್ನು ಸ್ಥಳದಲ್ಲಿ ನೆರೆದಿದ್ದ ಜನರು ಕ್ರೂರವಾಗಿ ಥಳಿಸಿದ್ದಾರೆ.

ಮೊಬೈಲ್‍‍ಗಳ್ಳರನ್ನು ಬೆನ್ನಟ್ಟಿ ಹಿಡಿದ ಕೆಟಿ‍ಎಂ ಬೈಕ್ ಸವಾರ

ಫ್ರೆಡ್ರಿಕ್‍‍ರವರು ತಮ್ಮ ಕೆಟಿಎಂ ಬೈಕ್ ಅನ್ನು ರಸ್ತೆಯ ಮಧ್ಯದಿಂದ ತೆಗೆದು ಸೈಡ್‍‍ನಲ್ಲಿ ಪಾರ್ಕಿಂಗ್ ಮಾಡಲು ಹೋದಾಗ, ಕಳ್ಳರು ಸ್ಕೂಟರ್‌ ಅನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಜನರು ಸ್ಕೂಟರ್ ಅನ್ನು ಹತ್ತಿರದ ಪೊಲೀಸ್ ಠಾಣೆಗೆ ಕೊಂಡೊಯ್ದು ದೂರು ಸಲ್ಲಿಸಿದ್ದಾರೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಮೊಬೈಲ್‍‍ಗಳ್ಳರನ್ನು ಬೆನ್ನಟ್ಟಿ ಹಿಡಿದ ಕೆಟಿ‍ಎಂ ಬೈಕ್ ಸವಾರ

ತನಿಖೆಯ ನಂತರ, ಸ್ಕೂಟರ್‌ನಲ್ಲಿರುವ ರಿಜಿಸ್ಟ್ರೇಷನ್ ನಂಬರ್ ನಕಲಿಯಾಗಿದ್ದು, ಆ ನಂಬರ್ ಬೈಕಿಗೆ ಸೇರಿದೆಂದು ತಿಳಿದು ಬಂದಿದೆ. ಅಲ್ಲದೆ, ಸ್ಕೂಟರ್‌ನಲ್ಲಿ ಬಳಸಿದ ಕೀ ಬಜಾಜ್ ಬೈಕಿನದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ಹಲವಾರು ದೂರುಗಳು ಬಂದಿದ್ದು, ಎಲ್ಲವೂ ಬಹುತೇಕ ಒಂದೇ ಮಾದರಿಯಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಮೊಬೈಲ್‍‍ಗಳ್ಳರನ್ನು ಬೆನ್ನಟ್ಟಿ ಹಿಡಿದ ಕೆಟಿ‍ಎಂ ಬೈಕ್ ಸವಾರ

ಕಳ್ಳರು ಒಂದೇ ರೀತಿಯಲ್ಲಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳರಿಂದ ಜನರು ಕಿತ್ತುಕೊಂಡ ಮೊಬೈಲ್ ಫೋನ್ ಅನ್ನು ಮತ್ತೆ ಅದರ ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಪೊಲೀಸರು ಆ ಕಳ್ಳರನ್ನು ಹಿಡಿದರೇ ಇಲ್ಲವೇ ಎಂಬ ಮಾಹಿತಿಯು ಇದುವರೆಗೂ ಲಭ್ಯವಾಗಿಲ್ಲ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಮೊಬೈಲ್‍‍ಗಳ್ಳರನ್ನು ಬೆನ್ನಟ್ಟಿ ಹಿಡಿದ ಕೆಟಿ‍ಎಂ ಬೈಕ್ ಸವಾರ

ಚಿನ್ನದ ಆಭರಣ ಹಾಗೂ ಮೊಬೈಲ್ ಫೋನ್‌ಗಳನ್ನು ಕಸಿದುಕೊಳ್ಳುವುದು ಕಳ್ಳರಿಗೆ ಹಣ ಸಂಪಾದಿಸುವ ಸುಲಭ ಮಾರ್ಗವಾಗಿದೆ. ಸಿಕ್ಕಿಬೀಳಬಾರದೆಂಬ ಕಾರಣಕ್ಕೆ ಅವರು ಕದ್ದ ವಾಹನಗಳನ್ನು ಬಳಸುತ್ತಾರೆ. ಆದ ಕಾರಣ ರಾತ್ರಿ ವೇಳೆಯಲ್ಲಿ ನಡೆದುಕೊಂಡು ಹೋಗುವ ಬಹಳ ಜಾಗರೂಕರಾಗಿರ ಬೇಕು. ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ನಿಗಾ ಇಡಬೇಕು.

ಮೊಬೈಲ್‍‍ಗಳ್ಳರನ್ನು ಬೆನ್ನಟ್ಟಿ ಹಿಡಿದ ಕೆಟಿ‍ಎಂ ಬೈಕ್ ಸವಾರ

ತಮ್ಮ ಬೈಕಿನಲ್ಲಿ ಕಳ್ಳರನ್ನು ಹಿಂಬಾಲಿಸಿ ಹಿಡಿದ ಫ್ರೆಡ್ರಿಕ್‍‍ರವರನ್ನು ಶ್ಲಾಘಿಸಲೇ ಬೇಕು. ಅವರ ಸಹಾಯವಿಲ್ಲದಿದ್ದರೆ ಕಳ್ಳರು ಸಿಕ್ಕಿ ಬೀಳುತ್ತಿರಲಿಲ್ಲ. ಫ್ರೆಡ್ರಿಕ್‍‍ರವರು ಬಲಶಾಲಿ ಎಂಜಿನ್‌ ಹೊಂದಿರುವ ತಮ್ಮ ಕೆಟಿಎಂ 250 ಡ್ಯೂಕ್‌ ಬೈಕಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Most Read Articles

Kannada
English summary
Bangalore ktm duke 250 rider chases catches thieves - Read in Kannada
Story first published: Thursday, November 7, 2019, 11:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X