ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಕಾರು ಬ್ಯಾಟರಿಗಳಿವು...

ನಿಮ್ಮ ಕಾರಿನ ಬ್ಯಾಟರಿಯು ನಿಮ್ಮ ಕಾರಿನ ಪ್ರಮುಖವಾದದ್ದು ಮತ್ತು ವಿಶ್ವಾಸಾರ್ಹ ಅಂಶವಾಗಿದೆ. ನಿಮ್ಮ ಎಂಜಿನ್ ಅನ್ನು ಸ್ಟಾರ್ಟ್ ಮಾಡಲು ಬ್ಯಾಟರಿಯ ಅಗತ್ಯವಿದೆ. ಪ್ರತಿ ಬಾರಿಯೂ ನಿಮ್ಮ ಬ್ಯಾಟರಿಯನ್ನು ಚಾರ್ಜ್ ಮಾಡಬೇಕಾಗುತ್ತದೆ ಇಲ್ಲದಿದ್ದರೆ ನಿಮ್ಮ ಇಂಜಿನ್ ಅನ್ನು ಸ್ಟಾರ್ಟ್ ಮಾಡಲು ನೀವು ಸಮಸ್ಯೆಗಳನ್ನು ಎದುರಿಸಬಹುದು.

ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಕಾರು ಬ್ಯಾಟರಿಗಳಿವು...

ಸಾಮಾನ್ಯವಾಗಿ, ನೀವು ಕಾರನ್ನು ಚಾಲನೆ ಮಾಡುವಾಗ ಕಾರ್ ಬ್ಯಾಟರಿಗಳು ಸ್ವತಃ ಚಾರ್ಜ್ ಆಗುತ್ತವೆ ಆದರೆ ನಿಮ್ಮ ಹಳೆಯದು ಕೆಟ್ಟು ಹೋದಾಗ ನಿಮಗೆ ಹೊಸ ಬ್ಯಾಟರಿ ಅಗತ್ಯವಿರುತ್ತದೆ. ಕಾರು ಬ್ಯಾಟರಿಯನ್ನು ತಯಾರಿಸುವ ಹಲವು ಕಂಪನಿಗಳಿವೆ. ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಕಾರು ಬ್ಯಾಟರಿಗಳು ಮಾರಾಟವಾಗುತ್ತಿದೆ. ಅವುಗಳಲ್ಲಿ ಅತ್ಯುತ್ತಮ ಕಾರು ಬ್ಯಾಟರಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಕಾರು ಬ್ಯಾಟರಿಗಳಿವು...

ಟಾಟಾ ಗ್ರೀನ್ ಸಿಲ್ವರ್ ಬ್ಯಾಟರಿ

ಟಾಟಾ ಹಲವು ಕ್ಷೇತ್ರಗಳಲ್ಲಿ ಜನಪ್ರಿಯ ಬ್ಲ್ಯಾಂಡ್ ಆಗಿದೆ. ಟಾಟಾ ಗ್ರೀನ್ ಬ್ಯಾಟರಿ ಬ್ಯಾಟರಿಗಳ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬ್ಯಾಟರಿಗಳಲ್ಲಿ ಒಂದಾಗಿದೆ. ಬ್ಯಾಟರಿಗಳು ಕೂಡ ಹಲವು ರೂಪಾಂತರಗಳಲ್ಲಿ ಬರುತ್ತವೆ, ಆದ್ದರಿಂದ ನಿರ್ದಿಷ್ಟ ಕಾರು ಮಾದರಿಗೆ, ಸಾಮರ್ಥ್ಯ, ಬೆಲೆ ಇತ್ಯಾದಿಗಳ ಆಧಾರದ ಮೇಲೆ ಬ್ಯಾಟರಿಯ ಹಲವು ರೂಪಾಂತರಗಳು ಲಭ್ಯವಿವೆ.

ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಕಾರು ಬ್ಯಾಟರಿಗಳಿವು...

ಕಂಪನಿಯ ಮಾರಾಟ ಮಾಡಿದ ನಂತರದ ಸೇವೆಯು ತುಂಬಾ ಉತ್ತಮವಾಗಿದೆ ಮತ್ತು ನೀವು ಪ್ರತಿ ರೂಪಾಂತರಕ್ಕೂ ಒಂದೇ ರೀತಿಯ ಸೇವೆಗಳನ್ನು ಪಡೆಯುತ್ತೀರಿ. ಕಾರು ಬ್ಯಾಟರಿ ಖರೀದಿಸುಸುವರಿಗೆ ಟಾಟಾ ಗ್ರೀನ್ ಸಿಲ್ವರ್ ಬ್ಯಾಟರಿ ಉತ್ತಮ ಆಯ್ಕೆಯಾಗಿದೆ.

ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಕಾರು ಬ್ಯಾಟರಿಗಳಿವು...

ಒಡಿಸ್ಸಿ ಎಕ್ಸ್ಟ್ರೀಮ್

ಒಡಿಸ್ಸಿ ಸರಣಿಯು ಅನೇಕ ಗಾತ್ರಗಳಲ್ಲಿ ಬ್ಯಾಟರಿಗಳು ಲಭ್ಯವಿದೆ. ಗ್ರೂಪ್ 35 ಮಾದರಿಯು ಹೋಂಡಾ ಮತ್ತು ಟೊಯೋಟಾ ಕಾರುಗಳಿಗೆ ಬರುತ್ತದೆ ಮತ್ತು 850 ಕೋಲ್ಡ್-ಕ್ರ್ಯಾಂಕಿಂಗ್ ಆಂಪ್ಸ್‌ಗಳನ್ನು ಒದಗಿಸುತ್ತದೆ. ಇದು 25 ಆಂಪಿಯರ್‌ನಲ್ಲಿ 130 ನಿಮಿಷಗಳ ಸ್ಟ್ಯಾಂಡ್‌ಬೈ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಟರಿಯು 4 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ.

ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಕಾರು ಬ್ಯಾಟರಿಗಳಿವು...

ಒಕಾಯಾ ವೀಲ್ಜ್ ಬ್ಯಾಟರಿ

ಈ ಮಾದರಿಯು ಒಕಾಯಾದಿಂದ ಹೆಚ್ಚು ಮಾರಾಟವಾಗುವ ಬ್ಯಾಟರಿಗಳಲ್ಲಿ ಒಂದಾಗಿದೆ. ಬ್ಯಾಟರಿ ಯೋಗ್ಯವಾದ 35 amps ನೊಂದಿಗೆ ಬರುತ್ತದೆ ಮತ್ತು ಇದು 12ವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಟರಿಯು ಎಲ್ಲಾ ರೀತಿಯ ಕಾರುಗಳಿಗೆ ಸೂಕ್ತವಾಗಿದೆ ಮತ್ತು ಇದು ಸುಲಭವಾಗಿ ಸ್ಟಾರ್ಟ್ ಆಗುವ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಟರಿಯು 2 ವರ್ಷಗಳ ವಾರಂಟಿಯನ್ನು ಹೊಂದಿದೆ ಮತ್ತು ಇದು ಉತ್ತಮ ಆಯ್ಕೆಯಾಗಿರುತ್ತದೆ.

ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಕಾರು ಬ್ಯಾಟರಿಗಳಿವು...

ಲುಮಿನಸ್ ಬ್ಯಾಟರಿಗಳು

ಲುಮಿನಸ್ ನೀಡುವ ಬ್ಯಾಟರಿಗಳು ಸ್ವಿಲರ್ ಅಲಾಯ್ ತಂತ್ರಜ್ಞಾನವನ್ನು ಹೊಂದಿವೆ. ಇದು ಉತ್ತಮ ಪವರ್ ಒದಗಿಸುತ್ತದೆ, ಸುದೀರ್ಘ ಸರ್ವಿಸ್ ಲೈಫ್, ತುಕ್ಕು ನಿರೋಧಕ ಮತ್ತು ಒತ್ತಡ-ಮುಕ್ತ ಅನುಭವವನ್ನು ಹೊಂದಿದೆ.

ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಕಾರು ಬ್ಯಾಟರಿಗಳಿವು...

ಇನ್ನು ಸಿಲ್ವರ್ ಅಲಾಯ್ ತಂತ್ರಜ್ಞಾನದಿಂದ ಒದಗಿಸಲಾದ ಕ್ರ್ಯಾಂಕಿಂಗ್ ಕರೆಂಟ್ ಶೇಕಡಾ 30 ರಷ್ಟು ಹೆಚ್ಚು. ಸ್ಪೈಡರ್ ವೆಬ್ ರಚನೆಯಿಂದಾಗಿ ಹವಾಮಾನ ವೈಪರೀತ್ಯದ ಪರಿಸ್ಥಿತಿಗಳಲ್ಲಿ ಬ್ಯಾಟರಿ ಬಾಳಿಕೆ ಬರುತ್ತದೆ. ಬ್ಯಾಟರಿ ಕಡಿಮೆ ನಿರ್ವಹಣೆ ಮತ್ತು ಸ್ಪಿಲ್ ಪ್ರೂಫ್ ಆಗಿದೆ.

ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಕಾರು ಬ್ಯಾಟರಿಗಳಿವು...

ಆಮ್ಕೊ ಬ್ಯಾಟರಿ

ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಕಾರ್ ಬ್ಯಾಟರಿಗಳಲ್ಲಿ ಒಂದು ಆಮ್ಕೊ ಪವರ್ ಸ್ಟಾರ್. ಬ್ಯಾಟರಿಯ ಈ ಮಾದರಿಯನ್ನು ಕಾರುಗಳಿಗಾಗಿ ತಯಾರಿಸಲಾಗುತ್ತದೆ ಮತ್ತು 11 ಕೆಜಿ ತೂಕವನ್ನು ಹೊಂದಿದೆ. ಇದು ಗಾತ್ರದಲ್ಲಿ ಚಿಕ್ಕದಾಗಿದೆ ಮತ್ತು ಸಾಗಿಸಲು ಸುಲಭವಾಗಿದೆ. ಬ್ಯಾಟರಿ 32 ah ಸಾಮರ್ಥ್ಯದಲ್ಲಿ ಲಭ್ಯವಿದೆ ಇದು ಕಾರುಗಳಿಗೆ ಸಾಕಾಗುತ್ತದೆ. ಬ್ಯಾಟರಿಯ ಮೇಲೆ 36 ತಿಂಗಳುಗಳ ವಾರಂಟಿ ಲಭ್ಯವಿದೆ.

ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಕಾರು ಬ್ಯಾಟರಿಗಳಿವು...

ಪವರ್‌ಜೋನ್ ಅಮರ ರಾಜ

ಪವರ್‌ಜೋನ್ ಬ್ಯಾಟರಿಯು 80 ah ಸಾಮರ್ಥ್ಯದೊಂದಿಗೆ ಬರುತ್ತದೆ ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆಯೊಂದಿಗೆ ಬಾಳಿಕೆ ಬರುವಂತಹದ್ದಾಗಿದೆ. ಬ್ಯಾಟರಿಯು ಪ್ರತಿರೋಧವಿಲ್ಲದ ಮತ್ತು ಮಡಿಸಲಾಗದ ವಿನ್ಯಾಸದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 12 ವ್ಯಾಟ್ ಪವರ್ ಸಾಮರ್ಥ್ಯದಲ್ಲಿ ಲಭ್ಯವಿದೆ. ಈ ಬ್ಯಾಟರಿಯೊಂದಿಗೆ ಜೋಡಣೆ ಅಗತ್ಯವಿಲ್ಲ.

ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಕಾರು ಬ್ಯಾಟರಿಗಳಿವು...

ಎಕ್ಸೈಡ್ ಮ್ಯಾಟ್ರಿಕ್ಸ್

ಎಕ್ಸೈಡ್‌ನಿಂದ ಜನಪ್ರಿಯ ಬ್ಯಾಟರಿಗಳಲ್ಲಿ ಒಂದಾಗಿದೆ ಎಕ್ಸೈಡ್ ಮ್ಯಾಟ್ರಿಕ್ಸ್ ಬ್ಯಾಟರಿ. ಬ್ಯಾಟರಿಯ ಸಾಮರ್ಥ್ಯವು 45Ah ಮತ್ತು 12 ವ್ಯಾಟ್ ಪವರ್ ಆಗಿದೆ. ಇದು ಕೇವಲ 14.5 ಕೆಜಿ ತೂಗುತ್ತದೆ ಮತ್ತು ಕಾಂಪ್ಯಾಕ್ಟ್ ವಿನ್ಯಾಸದೊಂದಿಗೆ ಬರುತ್ತದೆ. ಬ್ಯಾಟರಿಯು ಸುಧಾರಿತ Ca-Ca ಸಿಸ್ಟಂ ಅನ್ನು ಹೊಂದಿದೆ ಮತ್ತು ಅದರ ಕಾರಣದಿಂದಾಗಿ, ಇದು ಇತರ ಬ್ಯಾಟರಿಗಳಲ್ಲಿ ಪ್ರತ್ಯೇಕವಾಗಿದೆ. ಗ್ಲಾಸ್ ಮ್ಯಾಟ್ ಬೇರ್ಪಡಿಕೆ ಮತ್ತು ಡಬಲ್-ಅರೇಡ್ ಪಾಲಿಥೀನ್‌ನಿಂದ ಬ್ಯಾಟರಿಯ ಜೀವಿತಾವಧಿಯನ್ನು ಹೆಚ್ಚಿಸಲಾಗಿದೆ.

ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಕಾರು ಬ್ಯಾಟರಿಗಳಿವು...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಾರಿನ ಬ್ಯಾಟರಿಯು ನಿಮ್ಮ ಕಾರಿನ ಪ್ರಮುಖವಾದ ಅಂಶವಾಗಿದೆ. ಕಾರಿನ ಎಂಜಿನ್ ಅನ್ನು ಸ್ಟಾರ್ಟ್ ಮಾಡಲು ಬ್ಯಾಟರಿಯ ಅಗತ್ಯವಿದೆ. ಇದರಿಂದ ಕಾರಿನಲ್ಲಿ ಅತ್ಯುತ್ತಮ ಬ್ಯಾಟರಿಯ ಅಗತ್ಯವಿದೆ. ನಿಮ್ಮ ಕಾರನ್ನು ದೀರ್ಘಕಾಲದವರೆಗೆ ಬಳಸದಿದ್ದರೆ ಬ್ಯಾಟರಿಯನ್ನು 'ರೀಚಾರ್ಜ್' ಮಾಡಲು ಕಷ್ಟವಾಗಬಹುದು. ಹಾಗಾಗಿ ಕಾರನ್ನು ಬಹಳ ದಿನಗಳ ಕಾಲ ಬಳಸದೇ ಇಡಬೇಡಿ. ನಿಮ್ಮ ಕಾರು ನಿರಂತರ ಬಳಕೆಯಲ್ಲಿದ್ದಾಗ ಮಾತ್ರ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಕಾರು ಬ್ಯಾಟರಿಗಳಿವು...

ನಿಮ್ಮ ಕಾರಿನ ಬ್ಯಾಟರಿ ಹಾಳಾದಾಗ ಅದನ್ನು ಬದಲಾಯಿಸಿ ಅತ್ಯುತ್ತಮ ಬ್ಯಾಟರಿಯನ್ನು ಅಳವಡಿಸಿ. ವಾಹನದಲ್ಲಿನ ತಾಂತ್ರಿಕ ವೈಶಿಷ್ಟ್ಯಗಳು ಕೆಲಸಮಾಡಬೇಕಾದರೆ ಬ್ಯಾಟರಿ ಉತ್ತಮವಾಗಿರಬೇಕು, ಇಲ್ಲದಿದ್ದರೆ ಕಾರಿಗೆ ಸಮಸ್ಯೆಗಳು ತಪ್ಪಿದ್ದಲ್ಲ. ಅದ್ದರಿಂದ ಕಾರಿನಲ್ಲಿ ಬ್ಯಾಟರಿ ಅಳವಡಿಸುವಾಗ ಅತ್ಯುತ್ತಮ ಬ್ಯಾಟರಿಯನ್ನು ಅಳವಡಿಸಿ.

Most Read Articles

Kannada
English summary
Best batteries for car find here all details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X