ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಭೀಮಾ ಜ್ಯುವೆಲ್ಲರ್ಸ್ ಮಾಲೀಕ

ಕೇರಳದ ಆಭರಣ ವ್ಯಾಪಾರಿಯೊಬ್ಬರು ಅತ್ಯಂತ ದುಬಾರಿ ಬೆಲೆಯ ಕಾರನ್ನು ಖರೀದಿಸಿದ್ದಾರೆ. ಪ್ರಸಿದ್ಧ ಆಭರಣ ವ್ಯಾಪಾರಿಯೊಬ್ಬರು Aston Martin ಡಿ‌ಬಿ‌ಎಕ್ಸ್ ಎಸ್‌ಯುವಿಯನ್ನು ಖರೀದಿಸಿದ್ದಾರೆ. ಬ್ರಿಟಿಷ್ ಮೂಲದ ಕಾರು ತಯಾರಕ ಕಂಪನಿಯಾದ Aston Martin ಈ ಕಾರನ್ನು 2020 ರ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಭೀಮಾ ಜ್ಯುವೆಲ್ಲರ್ಸ್ ಮಾಲೀಕ

ಈ ಐಷಾರಾಮಿ ಕಾರಿನ ಆರಂಭಿಕ ಬೆಲೆ ರೂ. 3.82 ಕೋಟಿಗಳಾಗಿದೆ. ಆದರೆ ಈ ಆಭರಣ ವ್ಯಾಪಾರಿ ಈ ಕಾರಿನ ಟಾಪ್ ಎಂಡ್ ಮಾದರಿಯನ್ನು ಖರೀದಿಸಿದ್ದಾರೆ. ಈ ಕಾರಿನ ಟಾಪ್ ಎಂಡ್ ಮಾದರಿಯ ಬೆಲೆ ರೂ. 5 ಕೋಟಿಗೂ ಹೆಚ್ಚು. ಅಂದ ಹಾಗೆ ಇಷ್ಟು ದುಬಾರಿ ಮೊತ್ತದ Aston Martin ಡಿಬಿಎಕ್ಸ್ ಐಷಾರಾಮಿ ಕಾರ್ ಅನ್ನು ಖರೀದಿಸಿದವರು ಭೀಮಾ ಆಭರಣ ಅಂಗಡಿಯ ಮಾಲೀಕರಾದ ಡಾ. ಬಿ. ಗೋವಿಂದನ್.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಭೀಮಾ ಜ್ಯುವೆಲ್ಲರ್ಸ್ ಮಾಲೀಕ

ಈ ಮೂಲಕ ಕೇರಳದಲ್ಲಿ ಈ ಕಾರನ್ನು ಖರೀದಿಸಿದ ಮೊದಲ ಉದ್ಯಮಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಕಾರ್ ಅನ್ನು ಖರೀದಿಸುವ ಮೂಲಕ ಇಡೀ ಕೇರಳ ಮಾಧ್ಯಮವು ಅವರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಸದ್ಯಕ್ಕೆ ಇಡೀ ಭಾರತದಲ್ಲಿ ಕೇವಲ ನಾಲ್ಕು ಜನರು ಮಾತ್ರ Aston Martin ಡಿಬಿಎಕ್ಸ್ ಕಾರನ್ನು ಬಳಸುತ್ತಿದ್ದಾರೆ. ಅವರಲ್ಲಿ ಭೀಮಾ ಜ್ಯುವೆಲ್ಲರ್ಸ್ ಮಾಲೀಕರಾದ ಗೋವಿಂದನ್ ಸಹ ಒಬ್ಬರಾಗಿದ್ದಾರೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಭೀಮಾ ಜ್ಯುವೆಲ್ಲರ್ಸ್ ಮಾಲೀಕ

Aston Martin ಡಿಬಿಎಕ್ಸ್ ಕಾರು ದೇಶಿಯ ಮಾರುಕಟ್ಟೆಯಲ್ಲಿ Porsche Caynne, Bentley Bentayga, Lamboghini Urus, Rolls Royce Cullinan ಸೇರಿದಂತೆ ವಿವಿಧ ಐಷಾರಾಮಿ ಕಾರುಗಳಿಗೆ ಪೈಪೋಟಿ ನೀಡುತ್ತದೆ. Aston Martin ಕಂಪನಿಯ ಕಾರುಗಳು ಐಷಾರಾಮಿತನಕ್ಕೆ ಹೆಸರುವಾಸಿಯಾಗಿವೆ. Aston Martin ಕಂಪನಿಯು ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ತನ್ನ ಕಾರುಗಳನ್ನು ಮಾರಾಟ ಮಾಡುತ್ತದೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಭೀಮಾ ಜ್ಯುವೆಲ್ಲರ್ಸ್ ಮಾಲೀಕ

ಗೋವಿಂದನ್ ರವರು ಕಪ್ಪು ಬಣ್ಣದ Aston Martin ಡಿಬಿಎಕ್ಸ್ ಕಾರನ್ನು ಖರೀದಿಸಿದ್ದಾರೆ. ಈ ಕಾರನ್ನು Aston Martin ಕಂಪನಿಯು ಬಾಂಡೆಡ್ ಅಲ್ಯೂಮಿನಿಯಂ ನಿರ್ಮಾಣ ತಾಣವನ್ನು ಆಧರಿಸಿ ತಯಾರಿಸಿದೆ. ಈ ತಾಣದಲ್ಲಿ ಎಸ್‌ಯುವಿಗಳನ್ನು ಪ್ರತ್ಯೇಕವಾಗಿ ಉತ್ಪಾದಿಸಲಾಗುತ್ತದೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಭೀಮಾ ಜ್ಯುವೆಲ್ಲರ್ಸ್ ಮಾಲೀಕ

ಈ ಕಾರು ಹಲವಾರು ಫೀಚರ್ ಗಳನ್ನು ಹೊಂದಿದೆ. ಈ ಫೀಚರ್ ಗಳಲ್ಲಿ ಅಡಾಪ್ಟಿವ್ ಏರ್ ಸಸ್ಪೆಂಷನ್, 22 ಇಂಚಿನ ಅಲಾಯ್ ವ್ಹೀಲ್, ಫ್ರೇಮ್ ಲೆಸ್ ಡೋರ್ಸ್, ರೂಫ್ ಸ್ಪಾಯ್ಲರ್, ಪ್ರೀಮಿಯಂ ಗ್ರೇಡ್ ಲೆದರ್, 22 ಇಂಚಿನ ಅಲಾಯ್ ವ್ಹೀಲ್, 10.25 ಇಂಚ್ ಟಚ್ ಇನ್ಫೋಟೇನ್ಮೆಂಟ್ ಸಿಸ್ಟಂ, 12.3 ಇಂಚಿನ ಡಿಎಫ್‌ಟಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್'ಗಳು ಸೇರಿವೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಭೀಮಾ ಜ್ಯುವೆಲ್ಲರ್ಸ್ ಮಾಲೀಕ

ಈ ಕಾರು ಐದು ಸೀಟುಗಳನ್ನು ಹೊಂದಿರುವ ಐಷಾರಾಮಿ ಕಾರ್ ಆಗಿದೆ. Aston Martin ಡಿಬಿಎಕ್ಸ್ ಕಾರು ಹೆಚ್ಚು ಸ್ಪೇಸ್ ಅನ್ನು ಹೊಂದಿದೆ. Aston Martin ಡಿಬಿಎಕ್ಸ್ ಕಾರು ಪ್ರಯಾಣಿಕರಿಗೆ ಐಷಾರಾಮಿ ಪ್ರಯಾಣದ ಅನುಭವವನ್ನು ನೀಡುತ್ತದೆ. ಈ ಕಾರು ಎಸ್‌ಯುವಿಯಂತೆ ಕಾಣುತ್ತದೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಭೀಮಾ ಜ್ಯುವೆಲ್ಲರ್ಸ್ ಮಾಲೀಕ

ಈ ಕಾರು ಮರ್ಸಿಡಿಸ್ ಬೆಂಝ್ ಕಂಪನಿಯಿಂದ ಪಡೆದ 4.0 ಲೀಟರ್ ಟ್ವಿನ್ ಟರ್ಬೊ ವಿ 8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಗರಿಷ್ಠ 547 ಬಿ‌ಹೆಚ್‌ಪಿ ಪವರ್ ಹಾಗೂ 700 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು ಆಲ್ ವ್ಹೀಲ್ ಡ್ರೈವ್ ಕಾರು ಎಂಬುದು ವಿಶೇಷ. ಈ ಕಾರಿನಲ್ಲಿ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೀಡಲಾಗಿದೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಭೀಮಾ ಜ್ಯುವೆಲ್ಲರ್ಸ್ ಮಾಲೀಕ

ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 290 ಕಿ.ಮೀಗಳಾಗಿದೆ. ಈ ಕಾರು ಕೇವಲ 4.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಿನ ಒಟ್ಟು ತೂಕ 2.2 ಟನ್ ಗಳಾಗಿದೆ. ಇಂತಹ ಹಲವು ವಿಶೇಷತೆಗಳನ್ನು ಹೊಂದಿರುವ Aston Martin ಡಿಬಿಎಕ್ಸ್ ಐಷಾರಾಮಿ ಕಾರ್ ಅನ್ನು ಭೀಮಾ ಜ್ಯುವೆಲ್ಲರಿಯ ಮಾಲೀಕರಾದ ಗೋವಿಂದನ್ ರವರು ಖರೀದಿಸಿದ್ದಾರೆ.

ಗೋವಿಂದನ್ ರವರು ಈ ಕಾರು ಮಾತ್ರವಲ್ಲದೇ ಇನ್ನೂ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವುಗಳಲ್ಲಿ Rolls Royce, Bentley, Porsche ಸೇರಿದಂತೆ ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳು ಸೇರಿವೆ. ಇದರ ಜೊತೆಗೆ ಅವರು Toyota Innova ದಂತಹ ಕಾರುಗಳನ್ನು ಸಹ ಹೊಂದಿದ್ದಾರೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಭೀಮಾ ಜ್ಯುವೆಲ್ಲರ್ಸ್ ಮಾಲೀಕ

ಭಾರತದಲ್ಲಿ ಉದ್ಯಮಿಗಳು ಐಷಾರಾಮಿ ಕಾರುಗಳ ಬಗ್ಗೆಯೂ ಕ್ರೇಜ್ ಹೊಂದಿದ್ದಾರೆ. ಭಾರತದ ನಂ 1 ಶ್ರೀಮಂತರಾದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಖೇಶ್ ಅಂಬಾನಿ ರವರು Rolls Royce ಸೇರಿದಂತೆ ಹಲವು ಕಂಪನಿಗಳ ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ. ಅವರ ಅಂಗ ರಕ್ಷಕರಿಗೂ ಸಹ ದುಬಾರಿ ಬೆಲೆಯ ಕಾರುಗಳನ್ನೇ ನೀಡಿದ್ದಾರೆ. ಅವರು ರಸ್ತೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ದುಬಾರಿ ಬೆಲೆಯ ಬೆಂಗಾವಲು ಕಾರುಗಳು ಅವರನ್ನು ಹಿಂಬಾಲಿಸುತ್ತವೆ. ಮುಖೇಶ್ ಅಂಬಾನಿ ರವರು ಹಲವಾರು ಬಾರಿ ತಮ್ಮ ದುಬಾರಿ ಬೆಲೆಯ ಕಾರುಗಳೊಂದಿಗೆ ಕಾಣಿಸಿಕೊಂಡಿದ್ದಾರೆ.

ಮೂಲ: ಆನ್ ಮನೋರಮಾ

Most Read Articles

Kannada
English summary
Bhima jewelers owner buys aston martin luxury car details
Story first published: Thursday, August 26, 2021, 13:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X