ಕಳ್ಳರೇ ಎಚ್ಚರಿಕೆ; ಬಿಎಂಟಿಸಿ ಬಸ್ಸುಗಳಲ್ಲಿ ಸಿಸಿಟಿವಿ ಆಳವಡಿಕೆ

Written By:

ಪಿಕ್ ಪಾಕೆಟ್, ದುರ್ನಡತೆಗೆ ಮಾಸ್ಟರ್ ಪ್ಲಾನ್ ರೂಪಿಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಾಯೋಗಿಕವಾಗಿ 500 ಬಸ್ಸುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಆಳವಡಿಸಲು ಮುಂದಾಗಿದೆ.

ಬೆಳಗ್ಗೆಯ ಕಚೇರಿಯ ಸಮಯ ಹಾಗೂ ಸಂಜೆ ಹೊತ್ತಿಗೆ ಬಿಎಂಟಿಸಿ ಬಸ್ಸುಗಳಲ್ಲಿ ವಿಪರೀತ ಜನ ಸಂಚಾರ ಕಂಡುಬರುತ್ತಿದೆ. ಇದೇ ಸಮಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಕಳ್ಳರು ಪಿಕ್ ಪಾಕೆಟ್ ನಡೆಸುವ ಸಾಹಸಕ್ಕೆ ಕೈಹಾಕುತ್ತಾರೆ.

ಮಹಿಳೆಯರ ಮೇಲಿನ ಅಸಭ್ಯವರ್ತನೆಗೆ ಕಡಿವಾಣ

ಇನ್ನು ಮೂಲಗಳ ಪ್ರಕಾರ ಪ್ರತಿನಿತ್ಯ 250ಕ್ಕೂ ಪಿಕ್ ಪಾಕೆಟ್ ಪ್ರಕರಣಗಳು ನಡೆಯುತ್ತಿರುತ್ತದೆ. ಈ ಮೂಲಕ ಬೆಂಗಳೂರು ಪಿಕ್ ಪಾಕೆಟ್ ಮಾಡುವವರ ತವರೂರು ಎಂಬ ಅಪಖ್ಯಾತಿಗೂ ಒಳಗಾಗುತ್ತಿದೆ. ಸಿಸಿಟಿವಿ ಆಳವಡಿಕೆಯಿಂದ ಮಹಿಳೆಯರ ಮೇಲಿನ ಅಸಭ್ಯವರ್ತನೆ ಹಾಗೂ ಟಿಕೆಟ್ ರಹಿತ ಪಯಣಕ್ಕೂ ಇದರಿಂದ ಕಡಿವಾಣ ಬೀಳಲಿದೆ. ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್ ಕ್ಲಿಕ್ಕಿಸಿರಿ...

500 ಬಸ್ಸುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಆಳವಡಿಕೆ

ಬಿಎಂಟಿಸಿ ನೂತನ ಪ್ರಯೋಗ ಪ್ರಾಯೋಗಿಕವಾದರೂ ಜನ ಸಾಮಾನ್ಯರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಮಹಿಳೆಯರಿಗಂತೂ ತಮ್ಮ ಮೇಲಾಗುವ ಕೀಟಲೆಗಳನ್ನು ತಪ್ಪಿಸಲು ಇದರಿಂದ ನೆರವಾಗಲಿದೆ.

ಹಲ್ಲೆ ಮಾಡಿದ್ರೆ ಜಾಗ್ರತೆ

ಇದರಿಂದ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರಿಂದ ಕಾರ್ಯ ನಿರ್ವಾಹಕನಿಗೆ ಅಥವಾ ಸಹ ಪ್ರಯಾಣಿಕರ ಮೇಲೆ ನಡೆಸುವ ಹಲ್ಲೆಗಳನ್ನು ತಪ್ಪಿಸಬಹುದಾಗಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?

ಬಸ್‌ನಲ್ಲಿ ಆಳವಡಿಸುವ ಸಿಸಿಟಿವಿಗಳಲ್ಲಿ ಎಲ್ಲ ದೃಶ್ಯಗಳು ಚಿತ್ರೀಕರಣವಾಗಲಿದೆ. ಇದು ಕಂಟ್ರೋಲ್ ರೂಂನಲ್ಲಿ ಪ್ರತಿ ನಾಲ್ಕು ಬಸ್‌ಗಳ ಮುದ್ರಣ ದೃಶ್ಯಗಳು ಏಕಕಾಲದಲ್ಲಿ ಸಂಗ್ರಹವಾಗಲಿದೆ. ಪ್ರತಿ ಸೆಕೆಂಡುಗೆ 25 ಫ್ರೇಮ್ ವೀಡಿಯೋಗಳು ಲಭಿಸಲಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಲು ನೆರವಾಗಲಿದೆ.

ಪೊಲೀಸರಿಗೆ ಮಾಹಿತಿ ರವಾನೆ

ನೂಕುನುಗ್ಗಲಿರುವ ಬಸ್ಸುಗಳ್ಲಿ ಪಿಕ್ ಪಾಕೆಟ್ ಸಾಮಾನ್ಯಾವಾಗಿ ಕಂಡುಬರುತ್ತಿದೆ. ಇದರಿಂದ ಪೊಲೀಸರಿಗೂ ತಕ್ಷಣವೇ ಮಾಹಿತಿ ರವಾನೆಯಾಗಲಿದೆ. ಇದರಿಂದ ಆರೋಪಿಗಳು ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಯಾವೆಲ್ಲ ಬಸ್ಸುಗಳಲ್ಲಿ ಆಳವಡಿಕೆ

ಪ್ರಸ್ತುತ ನಗರದಲ್ಲಿ ಸಂಚರಿಸುತ್ತಿರುವ ಸಾಮಾನ್ಯ ಬಸ್ಸುಗಳಲ್ಲಿ, ಹೊಗೆರಹಿತ ಹಾಗೂ ಉತ್ತಮ ಕಂಡೀಷನ್ ಬಸ್ಸುಗಳಲ್ಲಿ ಸಿಸಿಟಿವಿ ಆಳವಡಿಕೆಯಾಗಲಿದೆ. ಇದು ಕಡಿಕೆ ಬೆಳಕಿನಲ್ಲೂ ದೃಶ್ಯಗಳನ್ನು ಸೆರೆಹಿಡಿಯಲಿದೆ. ಮುಂದಿನ ದಿನಗಳಲ್ಲಿ ಯೋಜನೆ 500ರಷ್ಟು ಬಸ್ಸುಗಳಿಗೆ ವಿಸ್ತರಣೆಯಾಗಲಿದೆ.

English summary
To ensure safety of passengers, Bangalore Metro Transport Corporation will introduce CCTV cameras in buses. On a testing purpose, about 500 buses will be fitted with CCTV cameras.
Story first published: Wednesday, June 5, 2013, 10:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark