ಭಾರತದಲ್ಲಿ ಇಟಾಲಿಯನ್ ಕಾರುಗಳೊಂದಿಗೆ ಮಿಂಚುತ್ತಿರುವ ಕೆಲವೇ ಬಾಲಿವುಡ್ ನಟರಿವರು!
ಲ್ಯಾಂಬೋರ್ಘಿನಿ ಉರುಸ್ ಇಟಾಲಿಯನ್ ಸೂಪರ್‌ಕಾರ್ ತಯಾರಕರ ಅತ್ಯಂತ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿದೆ. ಇದನ್ನು ಭಾರತದಲ್ಲಿ ಅಧಿಕೃತವಾಗಿ ಮಾರಾಟ ಮಾಡಲಾಗುತ್ತದೆ. ಉದ್ಯಮಿಗಳು ಮತ್ತು ಕೆಲವೇ ಬಾಲಿವುಡ್ ಸೆಲೆಬ್ರಿಟಿಗಳು ಈ ಐಷಾರಾಮಿ ಸೂಪರ್ SUV ಹೊಂದಿದ್ದಾರೆ. ಈ ಲ್ಯಾಂಬೋರ್ಘಿನಿ ಉರುಸ್ ಹೊಂದಿರುವ ಬಾಲಿವುಡ್‌ನ ಪ್ರಸಿದ್ಧರನ್ನು ಇಲ್ಲಿ ನೋಡೋಣ.
ಕಾರ್ತಿಕ್ ಆರ್ಯನ್: ಪಟ್ಟಿಯಲ್ಲಿರುವ ಮೊದಲ ನಟ ಕಾರ್ತಿಕ್ ಆರ್ಯನ್. 2021 ರಲ್ಲಿ ತಮ್ಮ ಉರುಸ್ SUV ಅನ್ನು ಖರೀದಿಸಿದರು. ಅವರು 3 ತಿಂಗಳ ಕಾಯುವ ಅವಧಿಯನ್ನು ಬಿಟ್ಟು ಇಟಲಿಯ ಸ್ಯಾಂಟ್ ಅಗಾಟಾ ಬೊಲೊಗ್ನೀಸ್‌ನಿಂದ ಏರ್-ಲಿಫ್ಟ್ ಮಾಡಿಸಲು ಹೆಚ್ಚವರಿ 50 ಲಕ್ಷ ರೂ. ಪಾವತಿಸಿದ್ದರು. ನಟ ಬ್ಲಾಕ್ ಬಣ್ಣದ SUV ಖರೀದಿಸಿದ್ದಾರೆ.

ರಣವೀರ್ ಸಿಂಗ್: ಅತ್ಯಂತ ಜನಪ್ರಿಯ ಬಾಲಿವುಡ್ ನಟರಲ್ಲಿ ಒಬ್ಬರಾದ ರಣವೀರ್ ಸಿಂಗ್, ಕ್ಯಾಂಡಿ ಆರೆಂಜ್ ಎಂದೂ ಕರೆಯಲ್ಪಡುವ ಅರಾನ್ಸಿಯೊ ಬೋರಿಯಾಲಿಸ್ ಬಣ್ಣದ ಲ್ಯಾಂಬೋರ್ಘಿನಿ ಉರುಸ್ ಖರೀದಿಸಿದ್ದಾರೆ. ಅದನ್ನು ಪರ್ಲ್ ಕ್ಯಾಪ್ಸುಲ್ ಆವೃತ್ತಿಯಾಗಿ ಮಾರ್ಪಡಿಸಿದ್ದಾರೆ. ಇದು ಸಾಮಾನ್ಯ ಉರುಸ್‌ಗಿಂತ ಶೇ20 ರಷ್ಟು ಹೆಚ್ಚು ದುಬಾರಿಯಾಗಿದೆ.
ರಣವೀರ್ ಒಬ್ಬ ದೊಡ್ಡ ಕಾರು ಉತ್ಸಾಹಿ, ಅವರ ಕಾರ್ ಸಂಗ್ರಹಣೆಯಲ್ಲಿ ಆಸ್ಟನ್ ಮಾರ್ಟಿನ್ ಸ್ಪೋರ್ಟ್ಸ್ ಕಾರ್, ಮರ್ಸಿಡಿಸ್ - ಮೇಬ್ಯಾಕ್ S500, ಮರ್ಸಿಡಿಸ್ - ಮೇಬ್ಯಾಕ್ GLS600 ಮತ್ತು ಮರ್ಸಿಡಿಸ್ - ಬೆಂಝ್ GLS ಸೇರಿವೆ. ಕುತೂಹಲಕಾರಿಯಾಗಿ, ರಣವೀರ್ ಇತ್ತೀಚೆಗೆ ಟೊಯೊಟಾ ಫಾರ್ಚುನರ್ ಎಸ್‌ಯುವಿ ಖರೀದಿಸಿದ್ದಾರೆ.

ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ: ಉದ್ಯಮಿಯಾಗಿರುವ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಇತ್ತೀಚೆಗೆ ಸೂಪರ್ ಎಸ್‌ಯುವಿ ಖರೀದಿಸಿದ್ದಾರೆ. ಗಿಯಾಲೊ ಇಂಟಿಯ ಬಣ್ಣದ SUV ಅನ್ನು ಖರೀದಿಸಿದ್ದಾರೆ. ಇದು ಆಳವಾದ ಮುತ್ತು ಹಳದಿ ಬಣ್ಣವಾಗಿದ್ದು, ಇದರ 22-ಇಂಚಿನ ವೀಲ್‌ಗಳು ವಾಹನದ ಒಟ್ಟಾರೆ ನೋಟವನ್ನು ಬದಲಾಯಿಸುತ್ತದೆ. ಇನ್ನೂ ಶಿಲ್ಪಾ ಶೆಟ್ಟಿ ಕೂಡ ಬೆಂಟ್ಲಿ ಸೂಪರ್ ಐಷಾರಾಮಿ ಸೆಡಾನ್ ಅನ್ನು ಹೊಂದಿದ್ದಾರೆ. .
ರೋಹಿತ್ ಶೆಟ್ಟಿ: ಬಾಲಿವುಡ್‌ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರು ಫೋರ್ಡ್ ಮಸ್ಟಾಂಗ್ ಸೇರಿದಂತೆ ವ್ಯಾಪಕವಾದ ಕಾರು ಸಂಗ್ರಹವನ್ನು ಹೊಂದಿದ್ದಾರೆ. ಅವರ ಗ್ಯಾರೇಜ್‌ನಲ್ಲಿರುವ ದುಬಾರಿ ಕಾರುಗಳಲ್ಲಿ ಲ್ಯಾಂಬೋರ್ಗಿನಿ ಉರಸ್ ಕೂಡ ಒಂದು. ಲ್ಯಾಂಬೋರ್ಗಿನಿಗಳಿಗೆ ಹೆಸರುವಾಸಿಯಾದ ಹಳದಿ ಬಣ್ಣದ SUV ಅನ್ನು ಖರೀದಿಸಿದ್ದಾರೆ.

ಬಾದ್ಷಾ: ಭಾರತದ ಜನಪ್ರಿಯ ಗಾಯಕ ಮತ್ತು ರಾಪರ್ ಬಾದ್ಷಾ ಅವರು ಲ್ಯಾಂಬೋರ್ಘೊನಿ ಉರುಸ್‌ನ ದೊಡ್ಡ ಅಭಿಮಾನಿಯಾಗಿದ್ದು, ತಮ್ಮ ಗ್ಯಾರೇಜ್‌ನಲ್ಲಿ ಒಂದಲ್ಲ, ಎರಡು ಐಷಾರಾಮಿ ಎಸ್‌ಯುವಿಗಳನ್ನು ಹೊಂದಿದ್ದಾರೆ. ಅವರು ಖರೀದಿಸಿದ ಮೊದಲ ಉರುಸ್ ಕೆಂಪು ಬಣ್ಣದ್ದಾಗಿದ್ದು, ಎರಡನೇ ಲ್ಯಾಂಬೋರ್ಘಿನಿ ಉರುಸ್ ಕಪ್ಪು ಬಣ್ಣದ್ದಾಗಿದೆ.
ಸಾಜಿದ್ ನಾಡಿಯಾಡ್ವಾಲಾ: ಬಾಲಿವುಡ್‌ನ ಜನಪ್ರಿಯ ಚಲನಚಿತ್ರ ನಿರ್ಮಾಪಕ, ಸಾಜಿದ್ ನಾಡಿಯಾವಾಲಾ ಅವರು ಲ್ಯಾಂಬೋರ್ಘಿನಿ ಉರಸ್ ಅನ್ನು ಹೊಂದಿರುವ ನಮ್ಮ ಪಟ್ಟಿಯಲ್ಲಿ ಕೊನೆಯ ವ್ಯಕ್ತಿಯಾಗಿದ್ದಾರೆ. ಅವರು ಹಳದಿ ಬಣ್ಣದ SUV ಅನ್ನು ಖರೀದಿಸಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳನ್ನು ಹೊರತುಪಡಿಸಿ, ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾರಂತಹ ಕ್ರೀಡಾ ಪಟುಗಳು ಈ ಸೂಪರ್ ಎಸ್‌ಯುವಿ ಹೊಂದಿದ್ದಾರೆ.


Click it and Unblock the Notifications








