ಪತ್ನಿಗೆ ಬ್ಯಾಟ್ ಮೊಬೈಲ್ ವಾಹನ ಉಡುಗೊರೆ ನೀಡಿದ ಬಾಲಿವುಡ್ ಚಿತ್ರ ನಿರ್ದೇಶಕ

ಅಹ್ಮದ್ ಖಾನ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಚಲನಚಿತ್ರ ನಿರ್ದೇಶಕರಾಗಿ, ನೃತ್ಯ ಸಂಯೋಜಕರಾಗಿ, ನಿರ್ಮಾಪಕರಾಗಿ ಹಾಗೂ ಬರಹಗಾರರಾಗಿ ಅವರು ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಹ್ಮದ್ ಖಾನ್ ವಿವಿಧ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಪತ್ನಿಗೆ ಬ್ಯಾಟ್ ಮೊಬೈಲ್ ವಾಹನ ಉಡುಗೊರೆಯಾಗಿ ನೀಡಿದ ಬಾಲಿವುಡ್ ಚಿತ್ರ ನಿರ್ದೇಶಕ

ಈಗ ಅವರು ತಮ್ಮ ಪತ್ನಿ ಶೈರಾ ಅಹಮದ್ ಖಾನ್ ರವರಿಗೆ ಅತ್ಯಂತ ಅಪರೂಪದ ಬ್ಯಾಟ್‌ ಮೊಬೈಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಪತ್ನಿಯ ಹುಟ್ಟುಹಬ್ಬದ ಮುನ್ನಾದಿನದಂದು ಅವರು ಈ ವಿಚಿತ್ರವಾದ ಉಡುಗೊರೆಯನ್ನು ನೀಡಿದ್ದಾರೆ. ಈ ಫೋಟೋಗಳನ್ನು ಶೈರಾ ಅಹ್ಮದ್ ಖಾನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಪತ್ನಿಗೆ ಬ್ಯಾಟ್ ಮೊಬೈಲ್ ವಾಹನ ಉಡುಗೊರೆಯಾಗಿ ನೀಡಿದ ಬಾಲಿವುಡ್ ಚಿತ್ರ ನಿರ್ದೇಶಕ

ಈ ವಿಶಿಷ್ಟ ಉಡುಗೊರೆಯನ್ನು ನೀಡಿದಕ್ಕಾಗಿ ಅವರು ಅಹ್ಮದ್ ಖಾನ್ ರವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ತಮ್ಮ ಕನಸು ನನಸಾಗಿದೆ ಎಂದೂ ಅವರು ಹೇಳಿದ್ದಾರೆ. ಶೈರಾ ಅಹ್ಮದ್ ಖಾನ್ ರವರು ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಫೋಟೋ ನೋಡಿರುವ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪತ್ನಿಗೆ ಬ್ಯಾಟ್ ಮೊಬೈಲ್ ವಾಹನ ಉಡುಗೊರೆಯಾಗಿ ನೀಡಿದ ಬಾಲಿವುಡ್ ಚಿತ್ರ ನಿರ್ದೇಶಕ

ಕೊನೆಯ ಬ್ಯಾಟ್ ಮ್ಯಾನ್ ಸಿನಿಮಾ 1989 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಮೈಕೆಲ್ ಕೀಟನ್ ನಟಿಸಿದ್ದರು. ಈ ಚಲನಚಿತ್ರದಲ್ಲಿ ಬಳಸುವ ಏಕೈಕ ಮೊಬೈಲ್ ಫೋನ್ ಬ್ಯಾಟ್‌ ಮೊಬೈಲ್ ಆಗಿದೆ. ಬ್ಯಾಟ್ ಮ್ಯಾನ್ ಈ ಬ್ಯಾಟ್ ಮೊಬೈಲ್ ನೊಂದಿಗೆ ವಿವಿಧ ರೀತಿಯ ಸಾಹಸಗಳನ್ನು ಮಾಡುತ್ತಾರೆ. ಹಿಂಭಾಗದಲ್ಲಿ ಬೆಂಕಿ ಇದ್ದರೂ ಬ್ಯಾಟ್‌ ಮೊಬೈಲ್ ಹೆಚ್ಚಿನ ವೇಗದಲ್ಲಿ ಚಲಿಸುತ್ತದೆ.

ಪತ್ನಿಗೆ ಬ್ಯಾಟ್ ಮೊಬೈಲ್ ವಾಹನ ಉಡುಗೊರೆಯಾಗಿ ನೀಡಿದ ಬಾಲಿವುಡ್ ಚಿತ್ರ ನಿರ್ದೇಶಕ

ಅದರಲ್ಲೂ ವಿಶೇಷವಾಗಿ ಚೇಸಿಂಗ್ ಶಾಟ್‌ಗಳು ಬಿಸಿಯಾಗಿ ಹಾರುತ್ತವೆ. ಅಹ್ಮದ್ ಖಾನ್ ಈಗ ತಮ್ಮ ಪತ್ನಿಗೆ ಉಡುಗೊರೆಯಾಗಿ ನೀಡುತ್ತಿರುವ ಬ್ಯಾಟ್ ಮೊಬೈಲ್ ಅನ್ನು ಬ್ಯಾಟ್ ಮ್ಯಾನ್ ಸಿನಿಮಾದಲ್ಲಿ ಬಳಸಿದ ಬ್ಯಾಟ್ ಮೊಬೈಲ್ ಅನ್ನು ಗಮನದಲ್ಲಿಟ್ಟು ಕೊಂಡು ತಯಾರಿಸಲಾಗಿದೆ ಎಂಬುದು ಗಮನಾರ್ಹ. ಇದು ಸ್ಕ್ರೀನ್ ಉದ್ಯಮದಲ್ಲಿರುವ ಅತ್ಯಂತ ವಿಶಿಷ್ಟವಾದ ವಾಹನಗಳಲ್ಲಿ ಒಂದಾಗಿದೆ.

ಪತ್ನಿಗೆ ಬ್ಯಾಟ್ ಮೊಬೈಲ್ ವಾಹನ ಉಡುಗೊರೆಯಾಗಿ ನೀಡಿದ ಬಾಲಿವುಡ್ ಚಿತ್ರ ನಿರ್ದೇಶಕ

ಅನೇಕರು ಈ ವಾಹನವನ್ನು ಬ್ಯಾಟ್ ಮ್ಯಾನ್ ಚಿತ್ರದ ಪಾತ್ರವೆಂದು ಪರಿಗಣಿಸುತ್ತಾರೆ. ಬ್ಯಾಟ್‌ ಮೊಬೈಲ್ ಅನ್ನು ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ನೋಡುವ ಅವಕಾಶಗಳಿವೆ ಎಂದು ವರದಿಗಳು ಸೂಚಿಸುತ್ತವೆ. ಏಕೆಂದರೆ ಬ್ಯಾಟ್ ಮೊಬೈಲ್ ಅನ್ನು 2022 ರಲ್ಲಿ ಬಿಡುಗಡೆಯಾಗಲಿರುವ ಸಿನಿಮಾದಲ್ಲಿ ಬಳಸಲಾಗುವುದು ಎಂದು ಹೇಳಲಾಗಿದೆ.

ಪತ್ನಿಗೆ ಬ್ಯಾಟ್ ಮೊಬೈಲ್ ವಾಹನ ಉಡುಗೊರೆಯಾಗಿ ನೀಡಿದ ಬಾಲಿವುಡ್ ಚಿತ್ರ ನಿರ್ದೇಶಕ

ಅಹ್ಮದ್ ಖಾನ್ ರವರು ಈಗ ತಮ್ಮ ಪತ್ನಿ ಸೈರಾ ರವರಿಗೆ ಉಡುಗೊರೆಯಾಗಿ ನೀಡುತ್ತಿರುವ ವಾಹನ ಅಮೆರಿಕಾದಿಂದ ಬಂದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಬ್ಯಾಟ್ ಮೊಬೈಲ್ ವಾಹನವು ಅಮೆರಿಕಾದಿಂದ ಭಾರತಕ್ಕೆ ಬರಲು ಸುಮಾರು 8 ತಿಂಗಳು ಬೇಕಾಯಿತು. ಈ ಬ್ಯಾಟ್‌ ಮೊಬೈಲ್ ಅನ್ನು ಮುಂಬೈನಲ್ಲಿ ಜೋಡಿಸಲಾಗಿದೆ ಎಂದು ಹೇಳಲಾಗಿದೆ.

ಪತ್ನಿಗೆ ಬ್ಯಾಟ್ ಮೊಬೈಲ್ ವಾಹನ ಉಡುಗೊರೆಯಾಗಿ ನೀಡಿದ ಬಾಲಿವುಡ್ ಚಿತ್ರ ನಿರ್ದೇಶಕ

ಈಗ ಮುಖ್ಯ ವಿಷಯದ ಬಗ್ಗೆ ಹೇಳುವುದಾದರೆ ಬ್ಯಾಟ್ ಮ್ಯಾನ್ ಹಾಗೂ ಬ್ಯಾಟ್ ಮ್ಯಾನ್ ರಿಟರ್ನ್ಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಈ ಬ್ಯಾಟ್ ಮೊಬೈಲ್ ಕಾಣಿಸಿಕೊಂಡಿದೆ. ಇದು ಶೆವ್ರೊಲೆಟ್ ಇಂಪಾಲಾ ಕಾರಿನ ಚಾಸಿಸ್ ಅನ್ನು ಆಧರಿಸಿದೆ. ಈ ಕಾರು ಅತ್ಯಂತ ಹಳೆಯ ಕಾರುಗಳಲ್ಲಿ ಒಂದು ಎಂಬುದು ಗಮನಾರ್ಹ.

ಪತ್ನಿಗೆ ಬ್ಯಾಟ್ ಮೊಬೈಲ್ ವಾಹನ ಉಡುಗೊರೆಯಾಗಿ ನೀಡಿದ ಬಾಲಿವುಡ್ ಚಿತ್ರ ನಿರ್ದೇಶಕ

ಈ ಬ್ಯಾಟ್‌ ಮೊಬೈಲ್ ನಲ್ಲಿ ವಿ 8 ಎಂಜಿನ್ ಬಳಸಲಾಗಿದೆ. ಇದನ್ನು ಸಹ ಶೆವ್ರೊಲೆಟ್ ನಿಂದ ಪಡೆಯಲಾಗಿದೆ. ಅಹ್ಮದ್ ಖಾನ್ ತಮ್ಮ ಪತ್ನಿ ಸೈರಾ ರವರಿಗೆ ಅತ್ಯಂತ ಅಪರೂಪದ ಬ್ಯಾಟ್‌ ಮೊಬೈಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಬ್ಯಾಟ್ ಮ್ಯಾನ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿರುವುದು ಸುಳ್ಳಲ್ಲ. ಬ್ಯಾಟ್ ಮ್ಯಾನ್ ಅಭಿಮಾನಿಗಳು ಸಹ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ.

ಪತ್ನಿಗೆ ಬ್ಯಾಟ್ ಮೊಬೈಲ್ ವಾಹನ ಉಡುಗೊರೆಯಾಗಿ ನೀಡಿದ ಬಾಲಿವುಡ್ ಚಿತ್ರ ನಿರ್ದೇಶಕ

ಸಿನಿಮಾ ನಟರು ಹಾಗೂ ನಿರ್ದೇಶಕರು ತಮ್ಮ ಪತ್ನಿಯರಿಗೆ ಅವರ ಹುಟ್ಟುಹಬ್ಬಕ್ಕೆ ಕಾರುಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ ಸಂಗತಿ. ಇದಕ್ಕೂ ಮುನ್ನ ಹಲವು ತಾರೆಯರು Mercedes Benz, Audi, BMW, Lamborghini ಯಂತಹ ಹಲವು ಕಂಪನಿಗಳ ದುಬಾರಿ ಕಾರುಗಳನ್ನು ತಮ್ಮ ಪತ್ನಿಯರಿಗೆ ಉಡುಗೊರೆಯಾಗಿ ನೀಡಿರುವ ಹಲವು ಸುದ್ದಿಗಳು ವರದಿಯಾಗಿದ್ದವು.

ಪತ್ನಿಗೆ ಬ್ಯಾಟ್ ಮೊಬೈಲ್ ವಾಹನ ಉಡುಗೊರೆಯಾಗಿ ನೀಡಿದ ಬಾಲಿವುಡ್ ಚಿತ್ರ ನಿರ್ದೇಶಕ

ಆದರೆ ಅಹ್ಮದ್ ಖಾನ್ ಮಾತ್ರ ತಮ್ಮ ಪತ್ನಿ ಶೈರಾರವರಿಗೆ ವಿಭಿನ್ನವಾದ ಬ್ಯಾಟ್‌ ಮೊಬೈಲ್ ವಾಹನವನ್ನು ಉಡುಗೊರೆಯಾಗಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಈ ವಾಹನದ ಮೌಲ್ಯ ಎಷ್ಟು ಎಂದು ನಿಖರವಾಗಿ ತಿಳಿದು ಬಂದಿಲ್ಲ. ಆದರೆ ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಂಡಿರುವ ಈ ಬ್ಯಾಟ್‌ ಮೊಬೈಲ್ ವಾಹನವು ಖಂಡಿತವಾಗಿಯೂ ದುಬಾರಿ ಬೆಲೆ ಹೊಂದಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪತ್ನಿಗೆ ಬ್ಯಾಟ್ ಮೊಬೈಲ್ ವಾಹನ ಉಡುಗೊರೆಯಾಗಿ ನೀಡಿದ ಬಾಲಿವುಡ್ ಚಿತ್ರ ನಿರ್ದೇಶಕ

ಸಿನಿಮಾ ತಾರೆಯರು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಖರೀದಿಸುವುದು ಹೊಸತೇನಲ್ಲ. ಇತ್ತೀಚಿಗಷ್ಟೇ ನಟ ರಕ್ಷಿತ್ ಶೆಟ್ಟಿರವರು Audi ಕಂಪನಿಯ ಕಾರ್ ಅನ್ನು ಖರೀದಿಸಿದ್ದರು. ಇವರು ಮಾತ್ರವಲ್ಲದೇ ರಾಜಕುಮಾರ, ಯುವ ರತ್ನ ಸಿನಿಮಾಗಳ ನಿರ್ದೇಶಕರಾದ ಸಂತೋಷ್ ಆನಂದ್ ರಾಮ್ ರವರು BMW 5 Series ಕಾರ್ ಅನ್ನು ಖರೀದಿಸಿದರೆ, ಬಿಗ್ ಬಾಸ್ ರಿಯಾಲಿಟಿ ಶೋ ವಿಜೇತರಾದ ಶೈನ್ ಶೆಟ್ಟಿರವರು BMW X 1 ಕಾರ್ ಅನ್ನು ಖರೀದಿಸಿದ್ದಾರೆ.

Most Read Articles

Kannada
English summary
Bollywood director ahmed khan gifts his wife a batmobile vehicle details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X