ಯಾವ ಸ್ಟಾರ್ ನಟರಿಗೂ ಕಮ್ಮಿಯಿಲ್ಲ.. 1.62 ಕೋಟಿಯ ಮರ್ಸಿಡಿಸ್ ಎಲೆಕ್ಟ್ರಿಕ್ ಕಾರು ಖರೀದಿಸಿದ ಖ್ಯಾತ ಗಾಯಕ
ಬಾಲಿವುಡ್ ನಟ - ನಟಿಯರಿಗೆ ತಾವೇನು ಕಮ್ಮಿ ಇಲ್ಲವೆಂಬಂತೆ ನಿರ್ದೇಶಕರು, ಗಾಯಕರು, ಸಂಗೀತ ನಿರ್ದೇಶಕರು ಸೇರಿದಂತೆ ಸಿನಿಮಾ ತಂತ್ರಜ್ಞರು ಸಹ ಹೊಚ್ಚ ಹೊಸ ದುಬಾರಿ ಬೆಲೆಯ ಕಾರುಗಳನ್ನು ಕೊಂಡುಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಶಾನ್ (Shaan) ಎಂದೇ ಖ್ಯಾತಿಗಳಿಸಿರುವ ಗಾಯಕ ಶಾಂತನು ಮುಖರ್ಜಿ ಐಷಾರಾಮಿ ಮರ್ಸಿಡಿಸ್ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ.
ಮರ್ಸಿಡಿಸ್ ಕಂಪನಿಯ ಮುಂಬೈ ಡೀಲರ್‌ಶಿಪ್ ಆಗಿರುವ ಆಟೋಹ್ಯಾಂಗರ್ (Autohanger), ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕುಟುಂಬದೊಂದಿಗೆ ಗಾಯಕ ಶಾನ್, ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ ಇಕ್ಯೂಎಸ್ 580 4ಮ್ಯಾಟಿಕ್ (Mercedes-Benz EQS 580 4Matic) ಕಾರನ್ನು ವಿತರಣೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡಿದೆ. ಸದ್ಯ, ಈ ಎಲೆಕ್ಟ್ರಿಕ್ ಸೆಡಾನ್ ರೂ.1.62 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಗಾಯಕ ಶಾನ್ ಕೊಂಡುಕೊಂಡಿರುವ ಕಾರಿನ ಚಿತ್ರವನ್ನು ಗಮನಿಸಿದಾಗ, ಈ ಸೆಡಾನ್ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಹೊರಭಾಗದಲ್ಲಿ ಎಲ್ಲರನ್ನು ಸೆಳೆಯುವ ಸೊಡಲೈಟ್ ಬ್ಲೂ (Sodalite Blue) ಬಣ್ಣದ ಆಯ್ಕೆಯನ್ನು ಪಡೆದಿದೆ. ಒಳಭಾಗದಲ್ಲಿ ನೆವಾ ಗ್ರೇ/ಬಾಲಾವೊ ಬ್ರೌನ್ (Neva Grey/Balao Brown) ಬಣ್ಣವನ್ನು ಹೊಂದುವ ಮೂಲಕ ಹೆಚ್ಚು ಅತ್ಯಾಧುನಿಕವಾಗಿದೆ.
ನೂತನ ಮರ್ಸಿಡಿಸ್ ಬೆಂಜ್ ಇಕ್ಯೂಎಸ್ 580 4ಮ್ಯಾಟಿಕ್ ಎಲೆಕ್ಟ್ರಿಕ್ ಸೆಡಾನ್, 107.8 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹಾಗೂ 2 ಎಲೆಕ್ಟ್ರಿಕ್ ಮೋಟಾರ್ ಅನ್ನು ಒಳಗೊಂಡಿದೆ. ಅದಕ್ಕೆ ಅನುಗುಣವಾಗಿ 523 ಎಚ್‌ಪಿ ಗರಿಷ್ಠ ಶಕ್ತಿ (ಪವರ್), 855 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

ಈ ಹೊಸ ಮರ್ಸಿಡಿಸ್ ಬೆಂಜ್ ಇಕ್ಯೂಎಸ್ 580 4ಮ್ಯಾಟಿಕ್ ಕಾರು, ಭರ್ತಿ ಚಾರ್ಜ್ ನಲ್ಲಿ 857 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. ಜೊತೆಗೆ ಈ ಎಲೆಕ್ಟ್ರಿಕ್ ಸೆಡಾನ್ ಕೇವಲ 4.3 ಸೆಕೆಂಡುಗಳಲ್ಲಿ 0 - 100 ಕೆಎಂಪಿಎಚ್ ವೇಗವನ್ನು ಪಡೆಯಲಿದ್ದು, ಗಂಟೆಗೆ 210 ಕಿ.ಮೀ ಗರಿಷ್ಠ ವೇಗ (ಟಾಪ್ ಸ್ವೀಡ್)ವನ್ನು ಹೊಂದಲಿದೆ.
ಈ ನೂತನ ಕಾರು ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 56 - ಇಂಚಿನ ಎಂಬಿಯುಎಕ್ಸ್ ಹೈಪರ್‌ಸ್ಕ್ರೀನ್, 15 - ಸ್ಪೀಕರ್ 710 ಡಬ್ಲ್ಯೂ ಬರ್ಮೆಸ್ಟರ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ಮಲ್ಟಿ - ಝೋನ್ ಕ್ಲೈಮೇಟ್ ಕಂಟ್ರೋಲ್, ಮಸಾಜ್ ಫಂಕ್ಷನ್ ನೊಂದಿಗೆ ಪವರ್ಡ್ ಸೀಟ್ ಅನ್ನು ಒಳಗೊಂಡಿದೆ.
ಸುರಕ್ಷತೆಯ ದೃಷ್ಟಿಯಿಂದಲೂ ಮರ್ಸಿಡಿಸ್ ಬೆಂಜ್ ಇಕ್ಯೂಎಸ್ ಎಲೆಕ್ಟ್ರಿಕ್ ಸೆಡಾನ್ ಅತ್ಯುತ್ತಮವಾಗಿದ್ದು, 9 ಏರ್ ಬ್ಯಾಗ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಒಳಗೊಂಡಿದೆ. ಇದು ಆಕ್ಟಿವ್ ಡಿಸ್ಟೆನ್ಸ್ ಅಸಿಸ್ಟ್, ಆಕ್ಟಿವ್ ಬ್ರೇಕ್ ಅಸಿಸ್ಟ್, ಆಕ್ಟಿವ್ ಸ್ಟೀರಿಂಗ್ ಅಸಿಸ್ಟ್ ರೀತಿಯ ಅಂಶಗಳನ್ನು ಪಡೆದಿದೆ. ಈ ಕಾರಿಗೆ ಆಡಿ ಆರ್‌ಎಸ್ ಇ-ಟ್ರಾನ್ ಜಿಟಿ ಮತ್ತು ಪೋರ್ಷೆ ಟೇಕಾನ್ ಪ್ರಬಲ ಎದುರಾಳಿಯಾಗಿವೆ.
ಕಳೆದ ಡಿಸೆಂಬರ್ ತಿಂಗಳು ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡ ಅಗ್ಗದ ಬೆಲೆಯ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದರು. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಅವರು, 'ನನ್ನ ಮೊದಲ ಇವಿ 'ಎಂಜಿ ಕಾಮೆಟ್... ಲವ್ ಇಟ್' ಎಂದು ಶೀರ್ಷಿಕೆ ಬರೆದಿದ್ದರು. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಎಂಜಿ ಕಾಮೆಟ್ ಇವಿ ರೂ.6.99 ಲಕ್ಷದಿಂದ ರೂ.8.58 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








