ಜಾರಿಯಾಗಿದೆ ಸುಪ್ರೀಂಕೋರ್ಟ್ ಹೊಸ ರೂಲ್ಸ್- ಬೈಕ್, ಕಾರು ಖರೀದಿಗೂ ಮುನ್ನ ಇರಲಿ ಎಚ್ಚರ..!!
ಪರಿಸರ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರವು, ಬಿಎಸ್-3 ಎಂಜಿನ್ ವಾಹನಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಿದೆ.
ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಹೊಸ ಕಾಯ್ದೆ ರೂಪಿಸಿರುವ ಕೇಂದ್ರ ಸರ್ಕಾರ, ಇನ್ಮುಂದೆ ಬಿಎಸ್-3 ಎಂಜಿನ್ ಸಾಮರ್ಥ್ಯದ ಕಾರು ಮತ್ತು ಬೈಕ್‌ಗಳನ್ನು ಸಂಪೂರ್ಣ ನಿಷೇಧ ಮಾಡಿದೆ. ಇಂದಿನಿಂದಲೇ ಹೊಸ ಕಾಯ್ದೆ ಅನುಷ್ಠಾನಗೊಳ್ಳಲಿದ್ದು, ಬರಲಿರುವ ಹೊಸ ಕಾನೂನಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಪರಿಸರಕ್ಕೆ ಧಕ್ಕೆ ಉಂಟು ಮಾಡುವ ಬಿಎಸ್-3 ಎಂಜಿನ್ ಸಾಮರ್ಥ್ಯದ ವಾಹನಗಳನ್ನು ಬಂದ್ ಮಾಡುವಂತೆ ಈ ಹಿಂದೆ ಖಡಕ್ ಸೂಚನೆ ನೀಡಿದ್ದ ಸುಪ್ರೀಂಕೋರ್ಟ್, ಕೇಂದ್ರಕ್ಕೆ ಸೂಕ್ತ ಕಾನೂನು ಜಾರಿಗೆ ತರುವಂತೆ ಸಲಹೆ ನೀಡಿತ್ತು. ಅದರಂತೆ ಇದೀಗ ಹೊಸ ಕಾನೂನು ಜಾರಿಗೆ ಬರುತ್ತಿದ್ದು, ಬಿಎಸ್-3 ಸಾಮರ್ಥ್ಯದ ಹೊಸ ವಾಹನಗಳಿಗೆ ನಿಷೇಧ ಹೇರಲಾಗಿದೆ.

'ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್' (Bharat stage emission standards) ಎಂಬುದು ಆಂತರಿಕ ದಹನಕಾರಿ ಎಂಜಿನ್ (internal combustion engine) ವಾತಾವರಣಕ್ಕೆ ಬಿಡುಗಡೆ ಮಾಡುವ ಮಾಲಿನ್ಯಕಾರಕ ಹೊಗೆ ನಿಯಂತ್ರಿಸಲು ಭಾರತ ಸರಕಾರವು ಹೊರತಂದಿರುವ ಕಾನೂನಾತ್ಮಕ ಮಾಪನವಾಗಿದೆ.

ಹೊಸ ಕಾನೂನು ಪ್ರಕಾರ ಇನ್ಮುಂದೆ ಬಿಎಸ್-IV ಸಾಮರ್ಥ್ಯದ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಸದ್ಯ ಚಾಲ್ತಿಯಲ್ಲಿರುವ ಬಿಎಸ್-3 ಎಂಜಿನ್ ಸಾಮರ್ಥ್ಯದ ಕಾರು ಮತ್ತು ವಾಹನಗಳಿಗೆ ಇದು ಯಾವುದೇ ರೀತಿಯಲ್ಲೂ ಅನ್ವಯವಾಗುದಿಲ್ಲ.

ವರ್ಷದಿಂದ ವರ್ಷಕ್ಕೆ ದೇಶದಲ್ಲಿ ವಾಹನಗಳ ಸಂಖ್ಯೆಯು ಗಣನೀಯವಾಗಿ ವರ್ಧನೆಯಾಗುತ್ತಿದ್ದು, ಮಿತಿ ಮೀರಿದ ವಾಯು ಮಾಲಿನ್ಯ ಸೃಷ್ಠಿಯಾಗುತ್ತಿದೆ. ಇದರಿಂದ ಸುಸ್ಥಿರ ಪರಿಸರಕ್ಕೆ ಮುಂದಾಗಿರುವ ಕೇಂದ್ರ ಪರಿಸರ ಮತ್ತು ಅರಣ್ಯಗಳ ಸಚಿವಾಲಯದ ಅಡಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹೊಸ ಕಾಯ್ದೆಯನ್ನು ಜಾರಿಗೆ ಮಾಡಲಾಗಿದೆ.

ಹೊಸ ಕಾಯ್ದೆಯಿಂದ ನಿಗದಿತ ಪ್ರಮಾಣದಲ್ಲಿ ವಾಯುಮಾಲಿನ್ಯ ತಗ್ಗಲಿದೆ ಎನ್ನಲಾಗುತ್ತಿದ್ದು, ಇಂದಿನಿಂದ ಹೊಸ ಕಾನೂನು ಜಾರಿಯಾಗಲಿದೆ. ಇದರಿಂದ ಬಿಎಸ್-3 ಎಂಜಿನ್ ಕಾರು ಮತ್ತು ಬೈಕ್‌ಗಳ ಖರೀದಿಗೆ ಬ್ರೇಕ್ ಬಿದ್ದಿದ್ದು, ಇನ್ನು ಖರೀದಿ ಮಾಡಿದ್ರೂ ಅವುಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ.

ಹೊಸ ಕಾಯ್ದೆ ಜಾರಿಗೂ ಮುನ್ನ ಬೃಹತ್ ಮೊತ್ತದ ಆಫರ್‌ಗಳ ಮೂಲಕ ಬಿಎಸ್-3 ಎಂಜಿನ್ ಸಾಮರ್ಥ್ಯದ ಬೈಕ್‌ಗಳು ಮತ್ತು ಕಾರುಗಳನ್ನು ಮಾರಾಟ ಮಾಡಿರುವ ಡೀಲರ್ಸ್‌ಗಳು, ಗ್ರಾಹಕರನ್ನು ಸೆಳೆಯುವಲ್ಲಿ ನಡೆಸಿದ ತಂತ್ರ ಅಷ್ಟಿಲ್ಲ.

ಕೇಂದ್ರ ಸರ್ಕಾರದ ಹೊಸ ಕಾಯ್ದೆಯಿಂದಾಗಿ ಬಿಎಸ್-3 ಎಂಜಿನ್ ಹೊಂದಿರುವ ಸುಮಾರು 20 ಸಾವಿರ ಹೊಸ ಕಾರುಗಳು, 7 ಲಕ್ಷ 50 ಸಾವಿರ ಬೈಕ್‌ಗಳು ಮತ್ತು 47 ಸಾವಿರ ಮೂರು ಚಕ್ರದ ವಾಹನಗಳು ಮೂಲೆಗುಂಪಾಗಲಿದ್ದು, ಯಾವುದೇ ನೀವು ಇವುಗಳನ್ನು ಖರೀದಿ ಮಾಡಲೇಬೇಡಿ.

ಹೊಸ ಕಾಯ್ದೆ ಪ್ರಕಾರ ಕೇವಲ ಬಿಎಸ್-IV ಎಂಜಿನ್ ಕಡ್ಡಾಯ ಮಾತ್ರವಲ್ಲದೇ AHO(ಅಟೋಮೆಟಿಕ್ ಹೆಡ್‌ಲೈಟ್ ಆನ್) ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿರಬೇಕೆಂದು ಆದೇಶ ನೀಡಲಾಗಿದೆ.

ಒಂದು ವೇಳೆ ನೀವು ಈ ಮೇಲಿನ ಎರಡು ವ್ಯವಸ್ಥೆಗಳು ಇಲ್ಲದ ವಾಹನಗಳನ್ನು ಖರೀದಿ ಮಾಡಿದರೂ ಆರ್‌ಟಿಓಗಳಲ್ಲಿ ಇವುಗಳನ್ನು ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ. ಅಲ್ಲದೇ ಅವುಗಳಿಗೆ ಮಾನ್ಯತೆ ಕೂಡಾ ಇರುವುದಿಲ್ಲ. ಹೀಗಾಗಿ ಖದೀರಿಗೂ ಮುನ್ನ ಈ ವಿಚಾರಗಳನ್ನು ತಿಳಿದುಕೊಂಡೇ ವಾಹನಗಳನ್ನು ಆಯ್ಕೆ ಮಾಡಿ.

ಈಗಾಗಲೇ ಮುಂದುವರಿದ ಅನೇಕ ರಾಷ್ಟ್ರಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದ್ದು, ಹಗಲು ವೇಳೆಯೂ ಬೈಕ್ ಚಾಲನೆ ವೇಳೆ ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್ ಮಾಡಿಕೊಂಡೇ ಇರಬೇಕಿರುವುದು ಕಡ್ಡಾಯವಾಗಿದೆ. ಜೊತೆಗೆ ಬಿಎಸ್-IV ಎಂಜಿನ್ ಹೊಂದಿರುವುದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದೆ.

ಭಾರತದಲ್ಲಿ ಬಿಡುಗಡೆ ಸಜ್ಜುಗೊಂಡಿರುವ ಕೆಲವು ಬೈಕ್ ಮಾದರಿಗಳು ಜಾರಿಯಾಗಲಿರುವ ಹೊಸ ರೂಲ್ಸ್ ಅಳವಡಿಕೆ ಮಾಡಿಕೊಂಡಿವೆ. ಆದರೂ ಎಲ್ಲ ಮಾದರಿಗಳಲ್ಲೂ ಈ ವ್ಯವಸ್ಥೆ ಜಾರಿಯಾಗಬೇಕಿದ್ದು, ಈ ಕುರಿತಂತೆ ಕೇಂದ್ರಕ್ಕೆ ಸುಪ್ರೀಂ ಕೆಲವು ಸಲಹೆಗಳನ್ನು ಕೂಡಾ ಸೂಚಿಸಿತ್ತು.

ಇನ್ನು ಕೇಂದ್ರದ ಹೊಸ ಕಾಯ್ದೆ ಬಗ್ಗೆ ಪ್ರತಿಕ್ರಿಯೆ ನೀಡಿರೋ ಪರಿಸರು ತಜ್ಞರು, ಹೊಸ ಕಾನೂನು ಜಾರಿಯಾದಲ್ಲಿ ಪರಿಸರ ಮಾಲಿನ್ಯ ತಗ್ಗಲಿದೆ ಎಂದಿದ್ದಾರೆ. ಜೊತೆಗೆ ಆಟೋ ಉದ್ಯಮ ತಜ್ಞರು ಕೂಡಾ ಹೊಸ ಕಾಯ್ದೆಯನ್ನು ಸ್ವಾಗತಿಸಿದ್ದು, ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ವಾಹನ ಉತ್ಪಾದನೆಗೆ ತಮ್ಮ ಸಹಕಾರ ಇದೆ ಎಂದಿದ್ದಾರೆ.

ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಸುಪ್ರೀಂಕೋರ್ಟ್ ಈ ಹೊಸ ರೂಲ್ಸ್ ಜಾರಿಯಾಗಿದ್ದು, ಅದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೋ ಗೊತ್ತಿಲ್ಲ. ಆದ್ರೆ ಹೊಸ ಕಾಯ್ದೆಯಿಂದ ಈಗಾಗಲೇ ಉತ್ಪಾದನೆಗೊಂಡಿದ್ದ ಲಕ್ಷಾಂತರ ಬಿಎಸ್-3 ಎಂಜಿನ್ ವಾಹನಗಳು ಮೂಲೆಗುಂಪಾಗಿರುವುದು ಮಾತ್ರ ನಿಜ.

ಒಂದು ವೇಳೆ ನೀವು ಹೊಸ ಬೈಕ್ ಮತ್ತು ಕಾರು ಖರೀದಿಸುವ ಯೋಚನೆಯಲ್ಲಿದ್ದರೆ ಮೊದಲು ಹೊಸ ಕಾಯ್ದೆ ಬಗ್ಗೆ ಕೂಲಂಕುಶವಾಗಿ ತಿಳಿದುಕೊಳ್ಳಿ. ಡಿಸ್ಕೌಂಟ್ ಆಸೆಗೆ ಮುಗಿಬಿದ್ದು ಹಳೆ ಎಂಜಿನ್ ಮಾದರಿಯ ವಾಹನಗಳನ್ನ ಖರೀದಿ ಮಾಡಿ ಫಜೀತಿಗೆ ಸಿಲುಕಬೇಡಿ.

ಏಪ್ರಿಲ್ 1ರಿಂದಲೇ ಈ ಹೊಸ ರೂಲ್ಸ್ ಜಾರಿಯಾಗಲಿದ್ದು, ಬಿಎಸ್-IV ಮತ್ತು AHO(ಆಟೋಮೇಟಿಕ್ ಹೆಡ್‌ಲ್ಯಾಂಪ್ ಆನ್) ವ್ಯವಸ್ಥೆ ಹೊಂದಿರುವ ವಾಹನಗಳನ್ನು ಮಾತ್ರ ಖರೀದಿ ಮಾಡಿ ನೆಮ್ಮದಿಯಾಗಿರಿ.

2000ನೇ ಇಸವಿಯಲ್ಲಿ ಭಾರತ್ ಸ್ಟೇಜ್ ವಾಹನ ಹೊಗೆ ಮಾಲಿನ್ಯ ನಿಯಂತ್ರಣವು ಮೊದಲ ಬಾರಿಗೆ ಜಾರಿಗೆ ಬಂದಿತ್ತು. ಟು ಸ್ಟ್ರೋಕ್ ಬೈಕ್ ಹಾಗೂ ಮಾರುತಿ 800 ನಿರ್ಮಾಣ ಪ್ರಕ್ರಿಯೆ ಸ್ಥಗಿತಗೊಂಡಿರುವುದು ಇವೆಲ್ಲದರ ಭಾಗವಾಗಿದೆ.

ಬಿಡುಗಡೆಗೊಂಡಿರುವ ಟಾಟಾ ವಿನೂತನ ಟಿಗೋರ್ ಕಾರಿನ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.


Click it and Unblock the Notifications