ಕರೋನಾ ಸೋಂಕಿತರಿಗಾಗಿ ಬಳಕೆಯಾಗಲಿದೆ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್

ದೇಶಾದ್ಯಂತ ಹರಡುತ್ತಿರುವ ಕರೋನಾ ವೈರಸ್ ಅನ್ನು ತಡೆಗಟ್ಟುವ ಕಾರಣಕ್ಕೆ ಇಡೀ ದೇಶವನ್ನು ಲಾಕ್ ಡೌನ್ ಮಾಡಲು ಕೇಂದ್ರ ಸರ್ಕಾರವು ಆದೇಶಿಸಿದೆ. ಈ ಲಾಕ್‌ಡೌನ್‌ನಿಂದಾಗಿ ಕರೋನಾ ವೈರಸ್ ಹರಡುವುದನ್ನು ತಡೆಯಬಹುದು ಎಂದು ಹೇಳಲಾಗಿದೆ.

ಕರೋನಾ ಸೋಂಕಿತರಿಗಾಗಿ ಬಳಕೆಯಾಗಲಿದೆ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್

ಆದರೆ ಈ ಲಾಕ್‌ಡೌನ್‌ನಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಹೆಚ್ಚಿನ ಸಂಖ್ಯೆಯ ಕೂಲಿ ಕಾರ್ಮಿಕರು ಕೆಲಸವಿಲ್ಲದ ಕಾರಣ ದಿಕ್ಕು ದೋಚದಂತಾಗಿದ್ದಾರೆ. ಉತ್ತರ ಪ್ರದೇಶ ಹಾಗೂ ಬಿಹಾರದ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿಗೆ ಕೆಲಸಕ್ಕಾಗಿ ಗುಳೆ ಹೋಗಿದ್ದಾರೆ.

ಕರೋನಾ ಸೋಂಕಿತರಿಗಾಗಿ ಬಳಕೆಯಾಗಲಿದೆ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್

ಲಾಕ್‌ಡೌನ್‌ ಮಾಡಿರುವ ಕಾರಣಕ್ಕೆ ಬಹುತೇಕ ಜನರು ಯಾವುದೇ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣಕ್ಕೆ ಕಾಲ್ನಡಿಗೆಯಲ್ಲಿ ತಮ್ಮ ಊರುಗಳಿಗೆ ವಾಪಸ್ ಆಗುತ್ತಿದ್ದಾರೆ. ನೋಯ್ಡಾದ ಗೌತಮ್ ಬುದ್ಧ ನಗರದ ಜಿಲ್ಲಾಡಳಿತವು ಸಹ, ಸಂಪೂರ್ಣವಾದ ಲಾಕ್‌ಡೌನ್‌ ಅನ್ನು ಜಾರಿಮಾಡಿದೆ. ಇದರಿಂದಾಗಿ ಅಲ್ಲಿರುವ ಜನರು ತಮ್ಮ ಊರುಗಳಿಗೆ ವಾಪಸ್ ಆಗಲು ಸಾಧ್ಯವಾಗುತ್ತಿಲ್ಲ.

ಕರೋನಾ ಸೋಂಕಿತರಿಗಾಗಿ ಬಳಕೆಯಾಗಲಿದೆ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್

ಈ ಪರಿಸ್ಥಿತಿಯಲ್ಲಿ, ಅವರ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಅಲ್ಲಿನ ಜಿಲ್ಲಾಡಳಿತ ಮಾಡಿದೆ. ಈ ಎಲ್ಲಾ ಜನರಿಗೆ ವಸತಿ ಹಾಗೂ ವಾಸ್ತವ್ಯವನ್ನು ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್ ನಲ್ಲಿ ಕಲ್ಪಿಸಲಾಗುವುದು.

ಕರೋನಾ ಸೋಂಕಿತರಿಗಾಗಿ ಬಳಕೆಯಾಗಲಿದೆ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್

ಇದರ ಜೊತೆಗೆ ಈ ಸರ್ಕ್ಯೂಟ್ ಅನ್ನು ಕರೋನಾ ವೈರಸ್ ನಿಂದ ಸೋಂಕಿತರಾಗಿರುವವರನ್ನು ಕ್ವಾರಂಟೈನ್ ಮಾಡಲು ಸಹ ಬಳಸಲಾಗುವುದು. ನೋಯ್ಡಾ ಹಾಗೂ ಗಾಜಿಯಾಬಾದ್ ನಲ್ಲಿ ಹೆಚ್ಚಿನ ಸಂಖ್ಯೆಯ ವಲಸಿಗರು ನೆಲೆಸಿದ್ದಾರೆ.

MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಕರೋನಾ ಸೋಂಕಿತರಿಗಾಗಿ ಬಳಕೆಯಾಗಲಿದೆ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್

ಉತ್ತರ ಪ್ರದೇಶ ಸರ್ಕಾರವು ಈ ಕೂಲಿ ಕಾರ್ಮಿಕರನ್ನು ಅವರ ಮನೆಗಳಿಗೆ ತಲುಪಿಸುವುದಕ್ಕಾಗಿ ಸುಮಾರು 1000 ಬಸ್ಸುಗಳ ವ್ಯವಸ್ಥೆಯನ್ನು ಮಾಡಿತ್ತು. ಆದರೆ ಕೇಂದ್ರ ಗೃಹ ಇಲಾಖೆಯು ಇವರನ್ನು ಅಲ್ಲಿಯೇ ಉಳಿಸಿಕೊಂಡು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವಂತೆ ಆದೇಶಿಸಿತು.

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ಸೋಂಕಿತರಿಗಾಗಿ ಬಳಕೆಯಾಗಲಿದೆ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್

ಈ ಆದೇಶದ ನಂತರ, ಉತ್ತರ ಪ್ರದೇಶ ಸರ್ಕಾರವು ಜಿಪಿ ಸ್ಪೋರ್ಟ್ಸ್ ಸಿಟಿಯನ್ನು ವಶಕ್ಕೆ ಪಡೆದು, ಈ ಜನರಿಗೆ ಅಲ್ಲಿಯೇ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲು ಮುಂದಾಗಿದೆ. ಜಿಪಿ ಸ್ಪೋರ್ಟ್ಸ್ ಸಿಟಿಯಲ್ಲಿಯೇ ಇರುವ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್ ವಸತಿ ಸೌಲಭ್ಯಗಳನ್ನು ಹೊಂದಿದೆ.

MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಕರೋನಾ ಸೋಂಕಿತರಿಗಾಗಿ ಬಳಕೆಯಾಗಲಿದೆ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್

ಜಿಲ್ಲಾಡಳಿತವು ಅಲ್ಲಿ ಆಶ್ರಯಕ್ಕಾಗಿ ಮನೆಗಳನ್ನು ನಿರ್ಮಿಸುತ್ತಿದೆ. ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್ ನ ಹೊರತಾಗಿ ಸರ್ಕಾರಿ ಶಾಲೆಗಳಲ್ಲಿಯೂ ಸಹ ಕರೋನಾ ಸೋಂಕು ಪೀಡಿತರನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತವು ಕ್ರಮ ಕೈಗೊಂಡಿದೆ.

Article Published On: Monday, March 30, 2020, 18:47 [IST]
English summary
Buddh International Circuit will be used as quarantine facility. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+