ಕಾರು ಖರೀದಿಗೂ ಮುನ್ನ ಈ ಕೆಲಸ ಮಾಡ್ತಾರೆ ಗ್ರಾಹಕರು

ಇಂಟರ್‌ನೆಟ್ ಹಾಗೂ ಡಿಜಿಟಲ್ ಮಾಧ್ಯಮಗಳು ಕಾರುಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ನೆರವಾಗುತ್ತಿವೆ. ಕಾರು ಖರೀದಿಗೂ ಮುನ್ನ, ಗ್ರಾಹಕರು ಯಾವ ಕಾರು ಸೂಕ್ತ ಎಂಬುದನ್ನು ನಿರ್ಧರಿಸಲು ಇಂಟರ್‌ನೆಟ್ ಅನ್ನು ಶೋಧಿಸುತ್ತಿದ್ದಾರೆ.

ಕಾರು ಖರೀದಿಗೂ ಮುನ್ನ ಈ ಕೆಲಸ ಮಾಡ್ತಾರೆ ಗ್ರಾಹಕರು

ಎಕನಾಮಿಕ್ ಟೈಮ್ಸ್ ಆಟೋ ವರದಿಗಳ ಪ್ರಕಾರ, ಗೂಗಲ್ ಕಾಂತರ್ ಟಿಎನ್ಎಸ್ ನಡೆಸಿದ ಸಂಶೋಧನೆಯ ಪ್ರಕಾರ, 90%ನಷ್ಟು ಖರೀದಿದಾರರು ಕಾರು ಖರೀದಿಯ ಬಗ್ಗೆ ನಿರ್ಧರಿಸಲು ಇಂಟರ್‌ನೆಟ್ ಅಥವಾ ಡಿಜಿಟಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಾರೆ.

ಕಾರು ಖರೀದಿಗೂ ಮುನ್ನ ಈ ಕೆಲಸ ಮಾಡ್ತಾರೆ ಗ್ರಾಹಕರು

ಇದರಿಂದಾಗಿ ಕಾರ್ ಶೋ ರೂಂಗಳಲ್ಲಿನ ದಟ್ಟಣೆ ಕಡಿಮೆಯಾಗಿದೆ ಎಂಬುದನ್ನು ಈ ಸಂಶೋಧನೆಯು ಬಹಿರಂಗಪಡಿಸಿದೆ. ಕಾರಿನ ಬಗ್ಗೆ ಮಾಹಿತಿ ಸಂಗ್ರಹಿಸಲು ಗೂಗಲ್ ಮತ್ತು ಯೂಟ್ಯೂಬ್‌ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚು ಬಳಸಲಾಗುತ್ತಿದೆ. ಇದಲ್ಲದೆ ಕಂಪನಿಗಳ ವೆಬ್‌ಸೈಟ್ ಮೂಲಕವೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.

MOST READ: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಕಾರು ಖರೀದಿಗೂ ಮುನ್ನ ಈ ಕೆಲಸ ಮಾಡ್ತಾರೆ ಗ್ರಾಹಕರು

ಈ ಪ್ಲಾಟ್‌ಫಾರ್ಮ್‌ಗಳ ಮೂಲಕ ಗ್ರಾಹಕರು ತಮ್ಮ ನೆಚ್ಚಿನ ಕಾರಿನಲ್ಲಿರುವ ಫೀಚರ್, ಅವುಗಳ ಸಾಮರ್ಥ್ಯ, ಮೈಲೇಜ್, ಬೆಲೆಗಳ ಬಗೆಗಿನ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಸಣ್ಣ ನಗರ ಹಾಗೂ ಪಟ್ಟಣಗಳಲ್ಲಿಯೂ ಸಹ ವಾಹನವನ್ನು ಖರೀದಿಸುವ ಮೊದಲು ಗ್ರಾಹಕರು ಆನ್‌ಲೈನ್‌ನಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.

ಕಾರು ಖರೀದಿಗೂ ಮುನ್ನ ಈ ಕೆಲಸ ಮಾಡ್ತಾರೆ ಗ್ರಾಹಕರು

ಆದರೆ ಆನ್‌ಲೈನ್‌ನಲ್ಲಿ ವಾಹನಗಳನ್ನು ಖರೀದಿಸಲು ಗ್ರಾಹಕರು ಆಸಕ್ತಿ ತೋರಿಸುತ್ತಿಲ್ಲ. ಕಾರು ದುಬಾರಿಯಾಗಿರುವ ಕಾರಣಕ್ಕೆ ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಸಂಗ್ರಹಿಸಿದ ನಂತರ, ಶೋ ರೂಂಗೆ ಹೋಗಿ ಪರಿಶೀಲಿಸಿ, ಖರೀದಿಸುತ್ತಾರೆ.

MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಕಾರು ಖರೀದಿಗೂ ಮುನ್ನ ಈ ಕೆಲಸ ಮಾಡ್ತಾರೆ ಗ್ರಾಹಕರು

ಇತ್ತೀಚೆಗೆ, ಹ್ಯುಂಡೈ ಕಂಪನಿಯು ಕ್ಲಿಕ್ ಟು ಬೈ ಎಂಬ ಸೌಲಭ್ಯವನ್ನು ಪರಿಚಯಿಸಿದೆ. ಇದರಲ್ಲಿ ಗ್ರಾಹಕರು ಮನೆಯಿಂದ ಆನ್‌ಲೈನ್‌ನಲ್ಲಿ ಕಾರುಗಳನ್ನು ಆರ್ಡರ್ ಮಾಡಬಹುದು. ಆನ್‌ಲೈನ್‌ನಲ್ಲಿ ಕಾರನ್ನು ಖರೀದಿಸಿದ ನಂತರ, ಕಂಪನಿಯು ಕಾರ್ ಅನ್ನು ಹೋಂ ಡೆಲಿವರಿ ಮಾಡುತ್ತದೆ.

Most Read Articles

Kannada
English summary
Car purchases in India going digital confirms recent study. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X