ಶತಾಬ್ದಿ ರೈಲಿನಲ್ಲಿ ವೈಭವೋಪೇತ ಪ್ರಯಾಣಕ್ಕಾಗಿ ಸಿದ್ದವಾದ 'ಅನುಭೂತಿ ಕೋಚ್'

ರೈಲಿನಲ್ಲೇ ವಿಮಾನ ಪ್ರಯಾಣದ ಅನುಭವವನ್ನು ಪ್ರಯಾಣಿಕರಿಗೆ ಒದಗಿಸಲು ಮುಂದಾಗಿರುವ ರೈಲ್ವೆ ಇಲಾಖೆಯು ಚೆನ್ನೈನಿಂದ ಮೈಸೂರಿಗೆ ಹೊರಡುವ ಶತಾಬ್ಧಿ ರೈಲಿನಲ್ಲಿ ಅನುಭೂತಿ ಬೋಗಿಗಳನ್ನು ಸೇರ್ಪಡೆ ಮಾಡುತ್ತಿದ್ದು, ಪ್ರಯಾಣಿಕರಿಗೆ ಸಂಕ್ರಾಂತಿ ಹಬ್ಬದ ಉಡು

By Praveen

Recommended Video

Indian Army Soldiers Injured In Helicopter Fall - DriveSpark

ರೈಲಿನಲ್ಲೇ ವಿಮಾನ ಪ್ರಯಾಣದ ಅನುಭವವನ್ನು ಪ್ರಯಾಣಿಕರಿಗೆ ಒದಗಿಸಲು ಮುಂದಾಗಿರುವ ರೈಲ್ವೆ ಇಲಾಖೆಯು ಚೆನ್ನೈನಿಂದ ಮೈಸೂರಿಗೆ ಹೊರಡುವ ಶತಾಬ್ಧಿ ರೈಲಿನಲ್ಲಿ ಅನುಭೂತಿ ಬೋಗಿಗಳನ್ನು ಸೇರ್ಪಡೆ ಮಾಡುತ್ತಿದ್ದು, ಪ್ರಯಾಣಿಕರಿಗೆ ಸಂಕ್ರಾಂತಿ ಹಬ್ಬದ ಉಡುಗೊರೆ ನೀಡುತ್ತಿದೆ.

ಶತಾಬ್ದಿ ರೈಲಿನಲ್ಲಿ ವೈಭವೋಪೇತ ಪ್ರಯಾಣಕ್ಕಾಗಿ ಸಿದ್ದವಾದ 'ಅನುಭೂತಿ ಕೋಚ್'

ರೈಲು ಪ್ರಯಾಣಿಕರಿಗೆ ಸಂಕ್ರಾಂತಿ ಹಬ್ಬದ ಕೊಡುಗೆ ಇದು ಎಂದು ಹೇಳಿರುವ ರೈಲ್ವೇ ಇಲಾಖೆಯು ವಿಮಾನದಲ್ಲಿ ಸಿಗುವ ವೈಭವೋಪೇತ ವ್ಯವಸ್ಥೆಗಳನ್ನು ರೈಲುಗಳಲ್ಲಿಯೂ ಒದಗಿಸುವ ಪ್ರಯತ್ನವಾಗಿ ಈ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ ಎಂದು ಹೇಳಿಕೊಂಡಿದೆ.

ಶತಾಬ್ದಿ ರೈಲಿನಲ್ಲಿ ವೈಭವೋಪೇತ ಪ್ರಯಾಣಕ್ಕಾಗಿ ಸಿದ್ದವಾದ 'ಅನುಭೂತಿ ಕೋಚ್'

ಅನುಭೂತಿ ಕೋಚ್‌ಗಳು ಪ್ರಯಾಣಿಕ ಸ್ನೇಹಿ ಸೌಲಭ್ಯಗಳೊಂದಿಗೆ ನಿರ್ಮಾಣ ಮಾಡಲಾಗಿದ್ದು, ಸಾಮಾನ್ಯ ರೈಲ್ವೆ ದರಗಳಿಂತ ಶೇ.20ರಿಂದ ಶೇ.25ರಷ್ಟು ಹೆಚ್ಚುವರಿ ದರ ಹೊಂದಿರಲಿವೆ ಎನ್ನಲಾಗಿದೆ.

ಶತಾಬ್ದಿ ರೈಲಿನಲ್ಲಿ ವೈಭವೋಪೇತ ಪ್ರಯಾಣಕ್ಕಾಗಿ ಸಿದ್ದವಾದ 'ಅನುಭೂತಿ ಕೋಚ್'

ಇನ್ನು ಬೋಗಿಯಲ್ಲಿ ಸುಧಾರಣೆಗೊಂಡ ಒಳಾಂಗಣ ವಿನ್ಯಾಸ, ಆರಾಮದಾಯಕ ಸೀಟುಗಳು, ಎಲ್‌ಸಿಡಿ ಸ್ಕ್ರೀನ್, ಅತ್ಯಾಧುನಿಕ ಶೌಚಾಲಯ ವ್ಯವಸ್ಥೆ. ಪ್ರತಿಯೊಂದು ಕುರ್ಚಿಯ ಹಿಂದೆ ರೀಡಿಂಗ್ ಲೈಟ್ಸ್, ಜಿಪಿಎಸ್ ಆಧಾರಿತ ಪ್ರಯಾಣಿಕ ವ್ಯವಸ್ಥೆ, ಬೋಗಿಯ ಗೋಡೆಗಳಲ್ಲಿ ಭಿತ್ತಿ ಪತ್ರ ಅಂಟಿಸದಂತೆ ವ್ಯವಸ್ಥೆಗಳನ್ನು ನೀಡಲಾಗಿದೆ.

ಶತಾಬ್ದಿ ರೈಲಿನಲ್ಲಿ ವೈಭವೋಪೇತ ಪ್ರಯಾಣಕ್ಕಾಗಿ ಸಿದ್ದವಾದ 'ಅನುಭೂತಿ ಕೋಚ್'

ಈ ಸೌಲಭ್ಯವು ಕೇವಲ ಅನುಭೂತಿ ಕೋಚ್ ಗಳನ್ನು ಬುಕಿಂಗ್ ಮಾಡಿದ ಪ್ರಯಾಣಿಕರಿಗೆ ಮಾತ್ರ ಲಭ್ಯವಿರಲಿದ್ದು, ಪ್ರಯಾಣಿಕರು ರೈಲ್ವೆ ಟಿಕೇಟ್ ಗಳನ್ನು ಮುಂಗಡವಾಗಿ ಕಾಯ್ದಿರಿಸುವಾಗ ಬದಲಾದ ರೈಲುಗಳ ಸಂಖ್ಯೆಯನ್ನು ಆಧರಿಸಿ ಟಿಕೇಟ್ ಬುಕಿಂಗ್ ಮಾಡಿಸಲು ನೈಋತ್ಯ ರೈಲ್ವೆ ವಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಶತಾಬ್ದಿ ರೈಲಿನಲ್ಲಿ ವೈಭವೋಪೇತ ಪ್ರಯಾಣಕ್ಕಾಗಿ ಸಿದ್ದವಾದ 'ಅನುಭೂತಿ ಕೋಚ್'

ಹೀಗಾಗಿ ಚೆನ್ನೈ-ಮೈಸೂರು ಪ್ರಯಾಣಿಕರು ಅನುಭೂತಿ ಕೋಚ್‌ನಲ್ಲಿ ಸೀಟು ಕಾಯ್ದಿರಿಸಲು ಬೋಗಿಗಳ ಸಂಖ್ಯೆ 12007, 12008 ಬದಲಾಗಿ 22007, 22008 ಬೋಗಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ.

ಶತಾಬ್ದಿ ರೈಲಿನಲ್ಲಿ ವೈಭವೋಪೇತ ಪ್ರಯಾಣಕ್ಕಾಗಿ ಸಿದ್ದವಾದ 'ಅನುಭೂತಿ ಕೋಚ್'

ದುಬಾರಿ ವೆಚ್ಚದ ಅನುಭೂತಿ ಕೋಚ್

ಹೌದು, ಇತರೆ ರೈಲ್ವೆ ಕೋಚ್‌ಗಳ ನಿರ್ಮಾಣಕ್ಕೆ ತಗುಲುವ ವೆಚ್ಚಕ್ಕಿಂತ 35 ಲಕ್ಷ ರೂಪಾಯಿ ಹೆಚ್ಚುವರಿ ವೆಚ್ಚ ಹೊಂದಿರುವ ಅನುಭೂತಿ ಕೋಚ್‌ಗಳು ಪ್ರತಿ ಬೋಗಿಯ ನಿರ್ಮಾಣಕ್ಕೆ 2.85 ಕೋಟಿ ಖರ್ಚಾಗಿದೆ.

ಶತಾಬ್ದಿ ರೈಲಿನಲ್ಲಿ ವೈಭವೋಪೇತ ಪ್ರಯಾಣಕ್ಕಾಗಿ ಸಿದ್ದವಾದ 'ಅನುಭೂತಿ ಕೋಚ್'

ಈ ಮೂಲಕ ಪ್ರತಿ ಬೋಗಿಯಲ್ಲಿ 56 ಜನ ಪ್ರಯಾಣಿಕರು ಅರಾಮದಾಯಕವಾಗಿ ಪ್ರಯಾಣಿಸಬಹುದಾಗಿದ್ದು, ವಿಮಾನದಲ್ಲಿ ಇರುವಂಥ ವೈಭವೋಪೇತ ವ್ಯವಸ್ಥೆಗಳು ಇನ್ಮುಂದೆ ರೈಲ್ವೆಗಳಲ್ಲೇ ಸಿಗುತ್ತಿರುವುದು ಖುಷಿಯ ವಿಚಾರ ಅಂದ್ರೆ ತಪ್ಪಾಗಲಾರದು.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ನಾವು ನೀವೆಲ್ಲಾ ಕೆಲವು ವಿಷಯಗಳನ್ನು ಪ್ರತಿದಿನ ಕೇಳುತ್ತಲೇ ಇರುತ್ತೇವೆ. ಆದ್ರೆ ಅದರ ಬಗ್ಗೆ ವಿಶೇಷವಾದ ಗಮನಹರಿಸುವುದಿಲ್ಲ. ಯಾರಾದರೂ ಅದರ ಶ್ರೇಷ್ಠತೆ ಬಗ್ಗೆ ಹೇಳಿದರೆ ಮಾತ್ರ ನಮಗೆ ತಿಳಿಯುವುದು. ಅಂತಹ ವಿಷಯಗಳಲ್ಲಿ ರೈಲಿನ ಹಿಂಭಾಗದಲ್ಲಿ X ಗುರುತಿನ ರಹಸ್ಯ ಕೂಡಾ ಒಂದು.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಪ್ರತಿ ದಿವಸ ಲಕ್ಷಾಂತರ ಜನ ಪ್ರಯಾಣಿಕರು ರೈಲ್ವೆ ಸೇವೆಯನ್ನೇ ನೆಚ್ಚಿಕೊಂಡಿದ್ದಾರೆ. ಆದ್ರೆ ಕೊನೆಯ ಬೋಗಿಯಲ್ಲಿ ಬರೆದಿರುವ ಎಕ್ಸ್ ಗುರುತಿನ ಅರ್ಥ ಬಹುತೇಕ ಜನಕ್ಕೆ ಗೊತ್ತಿಲ್ಲ.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಒಂದು ವೇಳೆ ರೈಲಿನ ಕೊನೆಯ ಬೋಗಿಯ ಎಕ್ಸ್ ಗುರುತಿನ ಅರ್ಥವನ್ನು ತಿಳಿದುಕೊಂಡಲ್ಲಿ ಓ.. ಹೋ.. ಇದೇನಾ ಇದರ ಅರ್ಥ ಎಂದು ಬೆರಗಾಗುವಿರಿ.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಇದರರ್ಥ ಈ ರೈಲಿನಲ್ಲಿ ಇದೇ ಕೊನೆಯ ಬೋಗಿ ಎಂದರ್ಥ. ಇನ್ನೊಂದೆಡೆ, ಸರಿಯಾಗಿ ಗಮನಿಸಿ ನೋಡಿದರೆ 'LV' ಎಂದು ಆ ಬೋಗಿಯ ಎಡಭಾಗದಲ್ಲಿ ಒಂದು ಸಣ್ಣ ಪದದ ಬೋರ್ಡ್ ಸಹ ಗೋಚರಿಸುತ್ತದೆ. ಅಂದರೆ ಅದು ಕೊನೆಯ ವಾಹನ ಎಂದರ್ಥ.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಈ ಎಕ್ಸ್ ಗುರುತು ಅಂತಿಮ ಬೋಗಿ ಹಿಂದೆ ಹಳದಿ ಬಣ್ಣದಲ್ಲಿ ಬರೆಯಲಾಗಿರುತ್ತದೆ. ಇಷ್ಟೇ ಅಲ್ಲ ರೈಲಿನ ಅಂತಿಮ ಬೋಗಿಯಲ್ಲಿ ಕೆಂಪು ವಿದ್ಯುತ್ ದೀಪವನ್ನು ಅಳವಡಿಸಲಾಗಿರುತ್ತದೆ.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಇದು ಐದು ಸೆಕೆಂಡ್‍ನಲ್ಲಿ ಒಂದು ಬಾರಿ ಈ ದೀಪ ಹೊಳೆಯುತ್ತದೆ. ಈ ನಿಯಮದ ಪ್ರಕಾರ ವಿಶೇಷ ರೈಲು ಅಂತಿಮ ಬೋಗಿಯಲ್ಲಿ ಈ ಗುರುತು ಇರಬೇಕಾಗುತ್ತದೆ.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಮಾತ್ರವಲ್ಲ ಅಂತಿಮ ಬೋಗಿಯಲ್ಲಿ ಒಂದು ಬೋರ್ಡ್ ಇರುತ್ತದೆ. ಇದರಲ್ಲಿ ಎಲ್‍ವಿ ಬರೆದಿರುತ್ತದೆ. ಈ ಬೋರ್ಡು ಇಂಗ್ಲಿಷ್‍ನಲ್ಲಿ ಬರೆದಿರುತ್ತದೆ. ಮತ್ತು ಅದರ ಬಣ್ಣ ಕಪ್ಪು ಅಥವಾ ಬಿಳಿ ಆಗಿರುತ್ತದೆ. ಈ ಬೋರ್ಡು ಅರ್ಥ ಅಂತಿಮ ವಾಹನ ಅಥವಾ ಲಾಸ್ಟ್ ವೆಹಿಕಲ್ ಎಂದಾಗಿದೆ.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಇನ್ನು ರಾತ್ರಿ ವೇಳೆ ಬೆಳಕು ಮತ್ತು ಹಗಲು ಬೆಳಕಿಗೆ 'X' ಮಾರ್ಕ್ ಗಮನಿಸುವುದು ಸುಲಭವಾಗಿದ್ದು, ಇದೇ ಉದ್ದೇಶದಿಂದ ದೊಡ್ಡ ಅಕ್ಷರಗಳಲ್ಲಿ ಬರೆದಿರಲಾಗುತ್ತದೆ.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಒಂದು ವೇಳೆ ರೈಲಿನ ಹಿಂಭಾಗದಲ್ಲಿ 'LV' ಅಥವಾ 'X' ಗುರುತಿನ ಬೋಗಿ ಕಾಣದಿದ್ದರೆ ಏನೋ ಅಗಿದೆ ಎಲ್ಲ ಬೋಗಿಗಳು ಬಂದಿಲ್ಲ ಎಂದಾಯಿತು. ಈ ಸ್ಥಿತಿಯಲ್ಲಿ ತುರ್ತು ಕಾರ್ಯಚರಣೆಯನ್ನು ಆರಂಭಿಸಲು ನೇರವಾಗಲಿದೆ.

Most Read Articles

Kannada
Read more on train off beat
English summary
Chennai-Mysuru Shatabdi to get features-rich 'Anubhuti' coach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X