ಚೀನಾ ಸೇನೆಯ ಬಲ ಹೆಚ್ಚಿಸಿದ ಜಲ ಡ್ರ್ಯಾಗನ್ ಎಜಿ600
ತನ್ನ ಸೇನೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ಚೀನಾ ಮಹತ್ವದ ಮೈಲುಗಲ್ಲೊಂದನ್ನು ಸಾಧಿಸಿದೆ. ನೆಲ ಮತ್ತು ನೀರಿನ ಮೇಲೆ ಇಳಿಯುವ ಮತ್ತು ಹಾರಾಟ ನಡೆಸುವ ಸಾಮರ್ಥ್ಯವಿರುವ ವಿಶೇಷ ವಿಮಾನವೊಂದನ್ನು ನಿರ್ಮಾಣ ಮಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ತನ್ನ ಸೇನೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ಚೀನಾ ಮಹತ್ವದ ಮೈಲುಗಲ್ಲೊಂದನ್ನು ಸಾಧಿಸಿದೆ. ನೆಲ ಮತ್ತು ನೀರಿನ ಮೇಲೆ ಇಳಿಯುವ ಮತ್ತು ಹಾರಾಟ ನಡೆಸುವ ಸಾಮರ್ಥ್ಯವಿರುವ ವಿಶೇಷ ವಿಮಾನವೊಂದನ್ನು ನಿರ್ಮಾಣ ಮಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಚೀನಾ ಸದ್ಯ ತಂತ್ರಜ್ಞಾನ ಅಭಿವೃದ್ಧಿ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ಮಧ್ಯೆ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ವಿಶ್ವದ ಅತ್ಯಂತ ದೊಡ್ಡ 'ಜಲ-ನೆಲ ವಿಮಾನ' ಎಜಿ600ನ ಲಘು ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ.

ಈ ಮೂಲಕ ಸೇನಾ ಬಲವನ್ನು ಹೆಚ್ಚಿಸಿರುವ ಚೀನಾ ಸರ್ಕಾರವು ವಿಶ್ವದ ಪ್ರಮುಖ ರಾಷ್ಟ್ರಗಳ ಬಳಿಯಿರುವ ಜಲ ಡ್ರ್ಯಾಗನ್‌ಗಳಿಂತಲೂ ಸುಧಾರಿತ ತಂತ್ರಜ್ಞಾನವನ್ನು ಅಳವಡಿಕೆ ಮಾಡಿದ್ದು, ಹಲವು ವಿಶೇಷತೆಗಳೊಂದಿಗೆ ನಿರ್ಮಾಣಗೊಂಡಿರುವ ಎಜಿ600 ವಿಮಾನಕ್ಕೆ ಕುನ್‌ಲಾಂಗ್ ಎಂಬ ಸಂಕೇತನಾಮ ಇಡಲಾಗಿದೆ.
Recommended Video


ಎಜಿ600 ವಿಶೇಷತೆ ಏನು?
ರಕ್ಷಣಾ ಕಾರ್ಯಾಚರಣೆ ಮತ್ತು ಬೆಂಕಿ ನಂದಿಸುವ ಕಾರ್ಯಾಚರಣೆಗಳಿಗೆ ಬಳಸುವುದಾಗಿ ಚೀನಾ ಹೇಳಿದೆ. ಆದರೆ ವಿಮಾನದ ವಿನ್ಯಾಸಗಳನ್ನು ನೋಡುವುದಾರರೇ ಸೇನಾ ಕಾರ್ಯಾಚರಣೆಗೆ ಹೇಳಿ ಮಾಡಿಸಿದಂತಿದೆ ಎಂದು ಜಾಗತಿಕ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದಲ್ಲದೇ ಎಜಿ600 ಮಾದರಿಯ ಇನ್ನೂ 17 ವಿಮಾನಗಳ ನಿರ್ಮಾಣಕ್ಕೆ 'ಏವಿಯೇಷನ್ ಇಂಡಸ್ಟ್ರೀ ಕಾರ್ಪ್ ಆಫ್ ಚೀನಾ' ಸರ್ಕಾರದಿಂದ ಆದೇಶ ಪಡೆದಿದ್ದು, ದಕ್ಷಿಣ ಚೀನಾ ಕರಾವಳಿ ನಗರ ಜೂಹೇನಲ್ಲಿ ವಿಮಾನದ ನಿರ್ಮಾಣ ಮತ್ತು ಪರೀಕ್ಷೆಗಳು ನಡೆಯುತ್ತಿವೆ.
ತಪ್ಪದೇ ಓದಿ-ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇನ್ನು ಬೃಹತ್ ಗಾತ್ರದ ಎಂಜಿನ್ ಹೊಂದಿರುವ ಎಜಿ600 ವಿಮಾನವು ಒಮ್ಮೆ ಇಂಧನ ಭರ್ತಿ ಮಾಡಿದರೆ 2,250 ಕಿ.ಮೀ ಕ್ರಮಿಸಿ ತನ್ನ ನೆಲೆಗೆ ವಾಪಸ್ ಹಿಂತಿರುಗುವ ಸಾಮರ್ಥ್ಯ ಪಡೆದುಕೊಂಡಿದ್ದು, ಚೀನಾವೇ ಕೃತಕವಾಗಿ ನಿರ್ಮಿಸಿರುವ ಎಲ್ಲಾ ದ್ವೀಪಗಳ ಬಳಿಯೂ ಸಮುದ್ರದಲ್ಲಿ ಇಳಿಯುವ ಮತ್ತು ಹಾರಾಟ ಆರಂಭಿಸುವ ಸಾಮರ್ಥ್ಯ ಈ ವಿಮಾನಕ್ಕೆ ಇದೆ.

ಇದರ ಜೊತೆಗೆ ಶಸ್ತ್ರಸಜ್ಜಿತ ಸೈನಿಕರನ್ನು ಸಾಗಿಸುವ ಸಾಮರ್ಥ್ಯ ಇರುವುದರಿಂದ ತುರ್ತು ಸಂದರ್ಭದಲ್ಲಿ ಇದನ್ನು ಸೇನಾ ಕಾರ್ಯಾಚರಣೆಗೆ ಬಳಸಿಕೊಳ್ಳುವ ಸಾಧ್ಯತೆ ಇದ್ದು, ಈ ಮೂಲಕ ರಕ್ಷಾಣ ವಿಭಾಗದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದಂತಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಜಾಗತಿಕವಾಗಿ ಮುನ್ನಡೆ ಸಾಧಿಸಲು ನಾನಾ ಕಸರತ್ತು ನಡೆಸಿರುವ ಚೀನಾ ಸರ್ಕಾರವು ಎಜಿ600 ನಿರ್ಮಾಣ ಮಾಡುವ ಮೂಲಕ ರಕ್ಷಣಾ ವಿಭಾಗಕ್ಕೆ ಹೊಸ ಶಕ್ತಿ ತುಂಬಿದ್ದು, ಮುಂಬರುವ ದಿನಗಳಲ್ಲೇ ಮತ್ತಷ್ಟು ಸುಧಾರಿತ ಜಲ ಡ್ರ್ಯಾಗನ್‌ಗಳನ್ನು ಸೇನೆಗೆ ಪರಿಚಯಿಸಿಲಿದೆ ಎನ್ನಲಾಗಿದೆ.
ತಪ್ಪದೇ ಓದಿ-ನಿಷೇಧಿತ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್ ಹಾಕಿದ್ರೆ ದಂಡ ಎಷ್ಟು ಗೊತ್ತಾ?
Trending DriveSpark YouTube Videos
Subscribe To DriveSpark Kannada YouTube Channel - Click Here


Click it and Unblock the Notifications








