ಚಲಿಸುತ್ತಿರುವ ಬೊಲೆರೊದಿಂದ ಟಾಟಾ ಇಂಡಿಗೊದೊಳಗೆ ಜಿಗಿದ ಸಿ‍ಐ‍ಎಸ್‍ಎಫ್ ಯೋಧ

ಭಾರತದಲ್ಲಿರುವ ಅತಿ ದೊಡ್ಡ ಭದ್ರತಾ ಪಡೆಯಾದ ಸಿ‍ಐ‍ಎಸ್‍ಎಫ್ ದೇಶದಲ್ಲಿರುವ ಪ್ರಮುಖ ಕೈಗಾರಿಕೆಗಳಿಗೆ ಹಾಗೂ ಸ್ಮಾರಕಗಳಿಗೆ ಭದ್ರತೆಯನ್ನು ನೀಡುತ್ತದೆ. ಈ ಭದ್ರತಾ ಪಡೆಯು ಉಗ್ರಗಾಮಿಗಳು ದಾಳಿ ನಡೆಸಿದರೆ ಹೇಗೆ ಎದುರಿಸಲಾಗುತ್ತದೆಂಬ ಬಗ್ಗೆ ಆಗಾಗ ಪ್ರದರ್ಶನವನ್ನು ನೀಡುತ್ತದೆ.

ಚಲಿಸುತ್ತಿರುವ ಬೊಲೆರೊದಿಂದ ಟಾಟಾ ಇಂಡಿಗೊದೊಳಗೆ ಜಿಗಿದ ಸಿ‍ಐ‍ಎಸ್‍ಎಫ್ ಯೋಧ

ಇತ್ತೀಚಿಗೆ ರಾಷ್ಟ್ರೀಯ ಏಕತಾ ದಿವಸದ ಹಿನ್ನೆಲೆಯಲ್ಲಿ ಸಿಐ‍ಎಸ್‍ಎಫ್ ಯೋಧರು ಉಗ್ರಗಾಮಿಗಳು ದಾಳಿ ನಡೆಸಿದರೆ ಯಾವ ರೀತಿಯಲ್ಲಿ ಅವರನ್ನು ಹೊಡೆದುರುಳಿಸಬೇಕೆಂಬ ಪ್ರದರ್ಶನವನ್ನು ಗುಜರಾತ್‍‍ನ ಏರ್‍‍ಪೋರ್ಟಿನಲ್ಲಿ ಹಮ್ಮಿಕೊಂಡಿದ್ದರು. ಅಂದ ಹಾಗೆ ಈ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಾಕ್ಷಿಯಾಗಿದ್ದರು.

ಚಲಿಸುತ್ತಿರುವ ಬೊಲೆರೊದಿಂದ ಟಾಟಾ ಇಂಡಿಗೊದೊಳಗೆ ಜಿಗಿದ ಸಿ‍ಐ‍ಎಸ್‍ಎಫ್ ಯೋಧ

ಸಾರ್ವಜನಿಕರ ಹಾಗೂ ಸರ್ಕಾರಿ ಹಿರಿಯ ಅಧಿಕಾರಿಗಳ ಮುಂದೆ ಪ್ರದರ್ಶನ ನೀಡುವ ಕಾರಣಕ್ಕೆ ತಾತ್ಕಾಲಿಕ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ನಿರ್ಮಿಸಲಾಗಿತ್ತು. ಅದನ್ನು ಅಣಕು ಭಯೋತ್ಪಾದಕ ದಾಳಿಗಾಗಿ ಬಳಸಿಕೊಳ್ಳಲಾಯಿತು.

ಚಲಿಸುತ್ತಿರುವ ಬೊಲೆರೊದಿಂದ ಟಾಟಾ ಇಂಡಿಗೊದೊಳಗೆ ಜಿಗಿದ ಸಿ‍ಐ‍ಎಸ್‍ಎಫ್ ಯೋಧ

ಸಿಐಎಸ್ಎಫ್ ಸಿಬ್ಬಂದಿ ವಿಮಾನ ನಿಲ್ದಾಣದ ಟರ್ಮಿನಲ್‍‍ನಲ್ಲಿ ನಕಲಿ ಉಗ್ರಗಾಮಿಗಳಿಗೆ ಸೆರೆ ಸಿಕ್ಕಿರುವ ವಿಐಪಿಗಳನ್ನು ರಕ್ಷಿಸಲು ಎಲ್ಲಾ ರೀತಿಯ ಸಾಹಸಗಳನ್ನು ಮಾಡುತ್ತಿರುವುದನ್ನು ಈ ಕೆಳಗಿನ ವೀಡಿಯೊದಲ್ಲಿ ಕಾಣಬಹುದು.

ಚಲಿಸುತ್ತಿರುವ ಬೊಲೆರೊದಿಂದ ಟಾಟಾ ಇಂಡಿಗೊದೊಳಗೆ ಜಿಗಿದ ಸಿ‍ಐ‍ಎಸ್‍ಎಫ್ ಯೋಧ

ಉಗ್ರರ ಹಿಡಿತದಿಂದ ವಿಐಪಿಯನ್ನು ಸುರಕ್ಷಿತವಾಗಿ ಹೊರಕ್ಕೆ ಕರೆ ತಂದ ನಂತರ, ಅವರನ್ನು ಮಾರುತಿ ಸುಜುಕಿ ಜಿಪ್ಸಿಯಲ್ಲಿ ಕೂರಿಸಲಾಯಿತು. ಈ ವೀಡಿಯೊದಲ್ಲಿ ಜಿಪ್ಸಿಯನ್ನು ಹಿಂಬಾಲಿಸುವ ಭಯೋತ್ಪಾದಕ ವಾಹನವನ್ನು ಕಾಣಬಹುದು.

ಚಲಿಸುತ್ತಿರುವ ಬೊಲೆರೊದಿಂದ ಟಾಟಾ ಇಂಡಿಗೊದೊಳಗೆ ಜಿಗಿದ ಸಿ‍ಐ‍ಎಸ್‍ಎಫ್ ಯೋಧ

ಕಾರಿನ ನಿಜವಾದ ಆಕ್ಷನ್ ಪ್ರಾರಂಭವಾಗುವುದು ಇದಾದ ನಂತರ. ಭಯೋತ್ಪಾದಕರಿರುವ ಟಾಟಾ ಇಂಡಿಗೊ ಕಾರ್ ಅನ್ನು ಮಹೀಂದ್ರಾ ಬೊಲೆರೊ ತಡೆಯುವುದನ್ನು ಕಾಣಬಹುದು. ಬೊಲೆರೊ ಟಾಟಾ ಇಂಡಿಗೊವನ್ನು ಸಾಕಷ್ಟು ದೂರ ತಳ್ಳುತ್ತದೆ.

ಚಲಿಸುತ್ತಿರುವ ಬೊಲೆರೊದಿಂದ ಟಾಟಾ ಇಂಡಿಗೊದೊಳಗೆ ಜಿಗಿದ ಸಿ‍ಐ‍ಎಸ್‍ಎಫ್ ಯೋಧ

ಇದಾದ ನಂತರ ಸಿಐಎಸ್ಎಫ್ ಸಿಬ್ಬಂದಿ ಬೊಲೆರೊದಿಂದ ಹೊರಬಂದು, ಇಂಡಿಗೊ ಕಾರಿನ ಮುಂಭಾಗ ವಿಂಡ್‌ಶೀಲ್ಡ್ ಮೂಲಕ ಅದರೊಳಕ್ಕೆ ಹೋಗುತ್ತಾರೆ. ನಂತರ ಸಿಐಎಸ್ಎಫ್ ಸಿಬ್ಬಂದಿ ಟಾಟಾ ಇಂಡಿಗೊವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ಮತ್ತೊಂದು ಸಿಐಎಸ್ಎಫ್ ತಂಡವು ಮುಂಭಾಗದ ವಿಂಡ್ ಷೀಲ್ಡ್ ಅನ್ನು ಮುರಿದು ನಂತರ ಇಂಡಿಗೊ ಕಾರಿನ ಒಳಕ್ಕೆ ಪ್ರವೇಶಿಸಿದೆ.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಚಲಿಸುತ್ತಿರುವ ಬೊಲೆರೊದಿಂದ ಟಾಟಾ ಇಂಡಿಗೊದೊಳಗೆ ಜಿಗಿದ ಸಿ‍ಐ‍ಎಸ್‍ಎಫ್ ಯೋಧ

ಮತ್ತೊಂದು ಟಾಟಾ ಇಂಡಿಗೊವನ್ನು ಮುಂಭಾಗ ಹಾಗೂ ಹಿಂಭಾಗದಿಂದ ಎರಡು ಮಹೀಂದ್ರಾ ಬೊಲೆರೋಗಳು ಸುತ್ತುವರೆದಿವೆ. ಸಿಐಎಸ್ಎಫ್ ಯೋಧರು ಮುಂಭಾಗ ಹಾಗೂ ಹಿಂಭಾಗದ ವಿಂಡ್ ಷೀಲ್ಡ್ ಮೂಲಕ ಮೇಲೆ ಹಾರಿ ವಾಹನದೊಳಗೆ ಪ್ರವೇಶಿಸಿದರು.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಚಲಿಸುತ್ತಿರುವ ಬೊಲೆರೊದಿಂದ ಟಾಟಾ ಇಂಡಿಗೊದೊಳಗೆ ಜಿಗಿದ ಸಿ‍ಐ‍ಎಸ್‍ಎಫ್ ಯೋಧ

ಸಿಐಎಸ್ಎಫ್ ಯೋಧರು ಭಯೋತ್ಪಾದಕರನ್ನು ಹಿಡಿದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದನ್ನು ಕಾಣಬಹುದು. ಮಹೀಂದ್ರಾ ಕಂಪನಿಯ ಮಾರ್ಕ್ಸ್‌ಮೆನ್ ಶಸ್ತ್ರಸಜ್ಜಿತ ವಾಹನಗಳು ಗಾರ್ಡ್ ಸ್ಥಾನದಲ್ಲಿ ನಿಂತಿರುವುದನ್ನು ಕಾಣಬಹುದು.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಅಂದ ಹಾಗೆ ಸಿಐಎಸ್ಎಫ್ ಯೋಧರು ತಮ್ಮ ಶಕ್ತಿ ಸಾಮರ್ಥ್ಯವನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಇದೇ ವರ್ಷದ ಮಾರ್ಚ್‍‍ನಲ್ಲಿ, ಸಿಐಎಸ್ಎಫ್ ಯೋಧರು ಭಯೋತ್ಪಾದಕ ದಾಳಿಯಿಂದ ವಿಐಪಿಗಳನ್ನು ಸುರಕ್ಷಿತವಾಗಿ ಹೇಗೆ ಪಾರು ಮಾಡಲಾಗುವುದೆಂಬುದನ್ನು ಪ್ರದರ್ಶಿಸಿದ್ದರು.

ಚಲಿಸುತ್ತಿರುವ ಬೊಲೆರೊದಿಂದ ಟಾಟಾ ಇಂಡಿಗೊದೊಳಗೆ ಜಿಗಿದ ಸಿ‍ಐ‍ಎಸ್‍ಎಫ್ ಯೋಧ

ವೀಡಿಯೊದ ಕೊನೆಯಲ್ಲಿ, ಹಿಂದೂಸ್ತಾನ್ ಅಂಬಾಸಿಡರ್ ಸೆಡಾನ್ ಕಾರುಗಳನ್ನು ಕಾಣಬಹುದು. ಸಿಐಎಸ್ಎಫ್ ಭಾರತದ ವಿಮಾನ ನಿಲ್ದಾಣ ಹಾಗೂ ಮೆಟ್ರೋ ನಿಲ್ದಾಣಗಳಂತಹ ಪ್ರಮುಖ ಸ್ಥಳಗಳಿಗೆ ಭದ್ರತೆಯನ್ನು ಒದಗಿಸುತ್ತದೆ.

ಚಲಿಸುತ್ತಿರುವ ಬೊಲೆರೊದಿಂದ ಟಾಟಾ ಇಂಡಿಗೊದೊಳಗೆ ಜಿಗಿದ ಸಿ‍ಐ‍ಎಸ್‍ಎಫ್ ಯೋಧ

ಇದರ ಜೊತೆಗೆ ದೇಶದಲ್ಲಿರುವ ಪರಮಾಣು ಸ್ಥಾವರಗಳಿಗೂ ಈ ಪಡೆ ಭದ್ರತೆಯನ್ನು ಒದಗಿಸುತ್ತದೆ. ಖಾಸಗಿ ವ್ಯಕ್ತಿಗಳಿಗೂ ಸಹ ಭದ್ರತೆಯನ್ನು ನೀಡುತ್ತದೆ. ರಿಲಯನ್ಸ್‌ನಂತಹ ಕಂಪನಿಗಳು ಅಂಬಾನಿ ಕುಟುಂಬಕ್ಕೆ ವೈಯಕ್ತಿಕ ಭದ್ರತೆ ನೀಡಲು ಸಿಐಎಸ್‌ಎಫ್ ಅನ್ನು ನೇಮಿಸಿಕೊಂಡಿವೆ.

ಚಲಿಸುತ್ತಿರುವ ಬೊಲೆರೊದಿಂದ ಟಾಟಾ ಇಂಡಿಗೊದೊಳಗೆ ಜಿಗಿದ ಸಿ‍ಐ‍ಎಸ್‍ಎಫ್ ಯೋಧ

ಅಂಬಾನಿಯವರ ಕುಟುಂಬವು ಎಲ್ಲಿಗೆ ಹೋದರೂ ಸಿಐಎಸ್ಎಫ್ ಸಿಬ್ಬಂದಿ ಅವರಿಗೆ ರಕ್ಷಣೆಯನ್ನು ನೀಡುತ್ತದೆ. ಬೆಂಗಳೂರು ಹಾಗೂ ಪುಣೆಯಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ಗಳಿಗೂ ಸಿಐಎಸ್ಎಫ್ ಭದ್ರತೆಯನ್ನು ನೀಡಲಾಗಿದೆ.

Article Published On: Friday, November 8, 2019, 17:55 [IST]
English summary
CISF guard jumps from mahindra bolero to tata indigo in security drill video - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+