ಇತರರಿಗೆ ಮಾದರಿಯಾದ ನವೀನ್ ಪಟ್ನಾಯಕ್ ನಿರ್ಧಾರ..!

ಚೀನಾದ ವುಹಾನ್‌ನಿಂದ ಹರಡಿದ ಕರೋನಾ ವೈರಸ್ ಮಾನವಕುಲಕ್ಕೆ ದೊಡ್ಡ ಅಪಾಯವನ್ನು ತಂದಿಟ್ಟಿದೆ. ಪ್ರಪಂಚದ ದೊಡ್ಡ ದೇಶಗಳಿಗೂ ಸಹ ಈ ಕರೋನಾ ವೈರಸ್ ಹಾವಳಿಯನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ.

ಇತರರಿಗೆ ಮಾದರಿಯಾದ ನವೀನ್ ಪಟ್ನಾಯಕ್ ನಿರ್ಧಾರ..!

ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರೆದಿರುವ ದೇಶಗಳಲ್ಲಿಯೂ ಸಹ ವೈದ್ಯಕೀಯ ಸಲಕರಣೆಗಳ ಕೊರತೆ ಎದುರಾಗಿದೆ. ಅದರಲ್ಲೂ ವೆಂಟಿಲೇಟರ್‌ಗಳು ಹಾಗೂ ಎನ್ 95 ಮಾಸ್ಕ್‌ಗಳ ಕೊರತೆ ಎದುರಾಗಿದೆ. ಭಾರತದಲ್ಲಿ ತೀವ್ರವಾಗಿ ಹರಡುತ್ತಿರುವ ಕರೋನಾವನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ.

ಇತರರಿಗೆ ಮಾದರಿಯಾದ ನವೀನ್ ಪಟ್ನಾಯಕ್ ನಿರ್ಧಾರ..!

ಇದರ ಅಂಗವಾಗಿ ಭಾರತದಲ್ಲಿ 21 ದಿನಗಳ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಏಪ್ರಿಲ್ 14ರವರೆಗೆ ಜಾರಿಯಲ್ಲಿರುವ ಈ ಲಾಕ್‌ಡೌನ್ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆಗಳಿವೆ. ಶೀಘ್ರದಲ್ಲೇ ಇದರ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆಗಳಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಇತರರಿಗೆ ಮಾದರಿಯಾದ ನವೀನ್ ಪಟ್ನಾಯಕ್ ನಿರ್ಧಾರ..!

ಆದರೆ ಒಡಿಶಾ ರಾಜ್ಯ ಸರ್ಕಾರವು ಈ ಲಾಕ್‌ಡೌನ್ ಅನ್ನು ಏಪ್ರಿಲ್ 30ರವರೆಗೆ ವಿಸ್ತರಿಸಿದೆ. ಇದರೊಂದಿಗೆ, ಒಡಿಶಾ ಲಾಕ್‌ಡೌನ್ ವಿಸ್ತರಿಸಿದ ಭಾರತದ ಮೊದಲ ರಾಜ್ಯವಾಗಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರವು ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಇತರರಿಗೆ ಮಾದರಿಯಾದ ನವೀನ್ ಪಟ್ನಾಯಕ್ ನಿರ್ಧಾರ..!

ಒಡಿಶಾದಲ್ಲಿ ಇದುವರೆಗೂ 48 ಜನರಿಗೆ ಕರೋನಾ ಸೋಂಕು ತಗುಲಿದೆ. ಒಬ್ಬರು ಸಾವನ್ನಪ್ಪಿದ್ದರೆ, ಇಬ್ಬರು ಚೇತರಿಸಿಕೊಂಡಿದ್ದಾರೆ. ಕರೋನಾ ವೈರಸ್ ಬರದಂತೆ ಇರುವ ಉತ್ತಮ ಮಾರ್ಗವೆಂದರೆ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವುದು. ಈ ರೋಗಕ್ಕೆ ಯಾವುದೇ ಅಧಿಕೃತ ಚಿಕಿತ್ಸೆ ಇಲ್ಲ.

MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಇತರರಿಗೆ ಮಾದರಿಯಾದ ನವೀನ್ ಪಟ್ನಾಯಕ್ ನಿರ್ಧಾರ..!

14 ದಿನಗಳ ಕಾಲ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವವರಿಗೆ ಒಡಿಶಾ ರಾಜ್ಯ ಸರ್ಕಾರವು 15ನೇ ದಿನದಂದು 15 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದೆ. ಇದರ ಜೊತೆಗೆ ಒಡಿಶಾ ಸರ್ಕಾರವು 4 ತಿಂಗಳ ಪಡಿತರ, ಅಕ್ಕಿ ನೀಡಿದೆ. ಜೊತೆಗೆ ಪಿಂಚಣಿದಾರರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ಧನ ಸಹಾಯ ಮಾಡಿದೆ.

ಇತರರಿಗೆ ಮಾದರಿಯಾದ ನವೀನ್ ಪಟ್ನಾಯಕ್ ನಿರ್ಧಾರ..!

ಅಗತ್ಯ ಕೆಲಸಗಳಿಗಾಗಿ ಮನೆಯಿಂದ ಹೊರಬೇಕಾದರೆ ಸಾರ್ವಜನಿಕರು ಮಾಸ್ಕ್ ಧರಿಸುವುದನ್ನು ಒಡಿಶಾ ರಾಜ್ಯ ಸರ್ಕಾರವು ಕಡ್ಡಾಯಗೊಳಿಸಿದೆ. ಈ ನಿಯಮವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ.

MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಇತರರಿಗೆ ಮಾದರಿಯಾದ ನವೀನ್ ಪಟ್ನಾಯಕ್ ನಿರ್ಧಾರ..!

ಮೊದಲ ಮೂರು ಬಾರಿ ಈ ನಿಯಮ ಉಲ್ಲಂಘಿಸಿದರೆ ತಲಾ ರೂ.200, ಮತ್ತೆ ಉಲ್ಲಂಘಿಸಿದರೆ ಪ್ರತಿ ಬಾರಿ ರೂ.500 ದಂಡ ವಿಧಿಸಲಾಗುತ್ತದೆ. ಎಲ್ಲರೂ ಈ ನಿಯಮವನ್ನು ಪಾಲಿಸಬೇಕು ಎಂದು ಒಡಿಶಾ ಸರ್ಕಾರ ಘೋಷಿಸಿದೆ.

ಇತರರಿಗೆ ಮಾದರಿಯಾದ ನವೀನ್ ಪಟ್ನಾಯಕ್ ನಿರ್ಧಾರ..!

ಇದರ ಜೊತೆಗೆ ಒಡಿಶಾ ರಾಜ್ಯದ ಪೆಟ್ರೋಲಿಯಂ ಬಂಕ್‌ಗಳು ಹೊಸ ಪ್ರಕಟಣೆ ಹೊರಡಿಸಿವೆ. ಅದರಂತೆ, ಮಾಸ್ಕ್ ಧರಿಸದ ವಾಹನ ಚಾಲಕರ ವಾಹನಗಳಿಗೆ ಇನ್ನು ಮುಂದೆ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ಮಾಡುವುದಿಲ್ಲ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಇತರರಿಗೆ ಮಾದರಿಯಾದ ನವೀನ್ ಪಟ್ನಾಯಕ್ ನಿರ್ಧಾರ..!

ಒಡಿಶಾದಲ್ಲಿರುವ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಕ್ರಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಒಡಿಶಾ ರಾಜ್ಯದಾದ್ಯಂತ ಸುಮಾರು 1,600 ಪೆಟ್ರೋಲ್ ಬಂಕ್‌ಗಳಿವೆ. ಈ ಯೋಜನೆಯನ್ನು ಎಲ್ಲಾ ಬಂಕ್‌ಗಳಲ್ಲಿ ಜಾರಿಗೆ ತರಲಾಗಿದೆ.

ಇತರರಿಗೆ ಮಾದರಿಯಾದ ನವೀನ್ ಪಟ್ನಾಯಕ್ ನಿರ್ಧಾರ..!

ಅಲ್ಲಿನ ಜನರು ಈ ನಿಯಮಗಳನ್ನು ಅನುಸರಿಸುವಂತೆ ಪೆಟ್ರೋಲ್ ಬಂಕ್‌ಗಳು ಹೇಳಿವೆ. ಲಾಕ್‌ಡೌನ್ ಜಾರಿಯಲ್ಲಿದ್ದರೂ, ಪೆಟ್ರೋಲ್ ಮಾರಾಟ ಮಾಡುವುದು ಅಗತ್ಯ. ಪೆಟ್ರೋಲ್ ಬಂಕ್‌ಗಳ ನೌಕರರು ಸಹ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.

ಇತರರಿಗೆ ಮಾದರಿಯಾದ ನವೀನ್ ಪಟ್ನಾಯಕ್ ನಿರ್ಧಾರ..!

ಪೆಟ್ರೋಲ್ ಮಾತ್ರವಲ್ಲದೇ ದಿನಸಿ ಹಾಗೂ ತರಕಾರಿ ಅಂಗಡಿಗಳ ಮಾಲೀಕರು ಸಹ ಮಾಸ್ಕ್‌ಗಳನ್ನು ಧರಿಸುವಂತೆ ಗ್ರಾಹಕರಿಗೆ ಸಲಹೆ ನೀಡಿದ್ದಾರೆ. ಇಲ್ಲದಿದ್ದರೆ ಅವುಗಳನ್ನು ಮಾರಾಟ ಮಾಡುವುದಿಲ್ಲವೆಂದು ತಿಳಿಸಿದ್ದಾರೆ.

ಇತರರಿಗೆ ಮಾದರಿಯಾದ ನವೀನ್ ಪಟ್ನಾಯಕ್ ನಿರ್ಧಾರ..!

ಒಡಿಶಾ ರಾಜ್ಯವು ಮಳೆ ಹಾಗೂ ಪ್ರವಾಹದಿಂದಾಗಿ ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತದೆ. ಹೀಗಾಗಿ, ವಿಪತ್ತುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಒಡಿಶಾ ಹೆಚ್ಚು ಅನುಭವ ಹೊಂದಿದೆ. ಈ ಅನುಭವವು ಕರೋನಾ ವೈರಸ್ ಹಾವಳಿಯನ್ನು ಎದುರಿಸಲು ಒಡಿಶಾಗೆ ನೆರವಾಗಲಿದೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.

Most Read Articles

Kannada
English summary
Coronavirus pandemic No mask No Petrol Diesel rule in Odisha. Read in Kannada.
Story first published: Saturday, April 11, 2020, 16:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X