ಲಾಕ್‌ಡೌನ್ ಎಫೆಕ್ಟ್: ಗಮನ ಸೆಳೆದ ವಿಶಿಷ್ಟ ರೀತಿಯ ಸಂತಾಪ ಸಭೆ

ಕರೋನಾ ವೈರಸ್ ಜನರ ಜೀವನಶೈಲಿಯನ್ನೇ ಬದಲಾಯಿಸಿದೆ. ಕರೋನಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಯಲು ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಎಲ್ಲಾ ಇದ್ದರೂ ಮನೆಯಲ್ಲಿಯೇ ಬಂಧಿಯಾಗುವಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

ಲಾಕ್‌ಡೌನ್ ಎಫೆಕ್ಟ್: ಗಮನ ಸೆಳೆದ ವಿಶಿಷ್ಟ ರೀತಿಯ ಸಂತಾಪ ಸಭೆ

ಆಪ್ತರ ಹಾಗೂ ಸಂಬಂಧಿಕರ ವಿವಾಹಗಳಲ್ಲಿ ಭಾಗವಹಿಸಲು ಸಾಧ್ಯವಾಗದಿರುವಂತಹ ಪರಿಸ್ಥಿತಿ ಎದುರಾಗಿದೆ. ಶವಸಂಸ್ಕಾರದಲ್ಲಿಯು ಭಾಗವಹಿಸಲು ಸಾಧ್ಯವಾಗದ ಸಂದರ್ಭ ಉಂಟಾಗಿದೆ. ಮದುವೆ ಮತ್ತು ಅಂತ್ಯಕ್ರಿಯೆಗಳಿಗೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ. ಸೀಮಿತ ಸಂಖ್ಯೆಯ ವ್ಯಕ್ತಿಗಳು ಮಾತ್ರ ಹಾಜರಿರುವಂತೆ ಸೂಚಿಸಲಾಗಿದೆ.

ಲಾಕ್‌ಡೌನ್ ಎಫೆಕ್ಟ್: ಗಮನ ಸೆಳೆದ ವಿಶಿಷ್ಟ ರೀತಿಯ ಸಂತಾಪ ಸಭೆ

ಈ ಲಾಕ್‌ಡೌನ್ ಅವಧಿಯಲ್ಲಿ ಸಂತಾಪ ಸಭೆಗಳು ಸಹ ವಿಭಿನ್ನ ಸ್ವರೂಪವನ್ನು ಪಡೆದಿವೆ. ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾರ್ ರಾಲಿಯ ಮೂಲಕ ಸಂತಾಪ ಸಭೆ ನಡೆಸಲಾಗಿದೆ. ಈ ಘಟನೆ ಎಲ್ಲರ ಗಮನ ಸೆಳೆದಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಎಫೆಕ್ಟ್: ಗಮನ ಸೆಳೆದ ವಿಶಿಷ್ಟ ರೀತಿಯ ಸಂತಾಪ ಸಭೆ

ಈ ಘಟನೆ ಪಶ್ಚಿಮ ದೆಹಲಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಅಲ್ಲಿ ನೆರೆದಿರುವವರು ಸತ್ತವರ ಮನೆಗೆ ಭೇಟಿ ನೀಡದೆ ಚಲಿಸುತ್ತಿರುವ ಕಾರುಗಳಲ್ಲಿ ಫಲಕಗಳನ್ನು ಹಿಡಿದು ನಿಧನರಾದ ತಮ್ಮ ಆತ್ಮೀಯರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ಸಂತಾಪ ಸೂಚಿಸುತ್ತಿರುವವರು ಮರ್ಸಿಡಿಸ್ ಬೆಂಝ್, ಮಹೀಂದ್ರಾ ಎಕ್ಸ್‌ಯುವಿ 500, ಮಾರುತಿ ಸುಜುಕಿ ಬಲೆನೊ ಕಾರುಗಳಲ್ಲಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಗಮನ ಸೆಳೆದ ವಿಶಿಷ್ಟ ರೀತಿಯ ಸಂತಾಪ ಸಭೆ

ಮೃತಪಟ್ಟ ವ್ಯಕ್ತಿಗೆ ಅವರು ನೀಡುತ್ತಿರುವ ಈ ಗೌರವವು ವಿಶಿಷ್ಟವಾಗಿದೆ. ಮಹಿಳೆಯೊಬ್ಬರು ತಮ್ಮ ಮರ್ಸಿಡಿಸ್ ಬೆಂಝ್ ಕಾರಿನ ಸನ್‌ರೂಫ್‌ನಿಂದ ಹೊರಬಂದು ಕೈಯಲ್ಲಿ ಫಲಕವನ್ನು ಹಿಡಿದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಎಫೆಕ್ಟ್: ಗಮನ ಸೆಳೆದ ವಿಶಿಷ್ಟ ರೀತಿಯ ಸಂತಾಪ ಸಭೆ

ಉಳಿದವರು ತಮ್ಮ ಕಾರಿನ ವಿಂಡೋಗಳ ಮೂಲಕ ಫಲಕಗಳನ್ನು ಹಿಡಿದಿದ್ದರೆ, ಇನ್ನೂ ಕೆಲವರು ಮೃತಪಟ್ಟವರ ಕುಟುಂಬದೊಂದಿಗೆ ಮಾತುಕತೆ ನಡೆಸಿದರು. ಗಮನಿಸಬೇಕಾದ ಸಂಗತಿಯೆಂದರೆ ಈ ಇಡೀ ಪ್ರಕ್ರಿಯೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು.

ಲಾಕ್‌ಡೌನ್ ಎಫೆಕ್ಟ್: ಗಮನ ಸೆಳೆದ ವಿಶಿಷ್ಟ ರೀತಿಯ ಸಂತಾಪ ಸಭೆ

ಆದರೆ ಈ ಕಾರು ರಾಲಿಯಲ್ಲಿ ಭಾಗವಹಿಸಿದ್ದ ಹೆಚ್ಚಿನ ಜನರು ಮಾಸ್ಕ್‌ಗಳನ್ನು ಧರಿಸಿರಲಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರಿಂದ ಮಾಸ್ಕ್‌ಗಳ ಅಗತ್ಯವಿರಲಿಲ್ಲ ಎಂಬುದು ರಾಲಿಯಲ್ಲಿದ್ದವರ ಅಭಿಪ್ರಾಯ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: ಗಮನ ಸೆಳೆದ ವಿಶಿಷ್ಟ ರೀತಿಯ ಸಂತಾಪ ಸಭೆ

ಕಾರ್ ರಾಲಿ ಮೂಲಕ ಸಂತಾಪ ಸಭೆ ನಡೆಸಲು ಪೊಲೀಸರಿಂದ ಅನುಮತಿ ಪಡೆಯಲಾಗಿತ್ತೇ ಎಂಬುದು ಸ್ಪಷ್ಟವಾಗಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದರೆ ಪೊಲೀಸರು ಕ್ರಮ ಕೈಗೊಳ್ಳುವುದು ಖಚಿತ.

Most Read Articles

Kannada
English summary
Car rally in Delhi. Read in Kannada.
Story first published: Monday, May 11, 2020, 10:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X