ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಆಫ್-ರೋಡ್ ರೈಡ್ ಮಾಡಿ ಎಂಜಾಯ್ ಮಾಡಿದ ಕ್ರಿಕೆಟಿಗ

ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಗೆದ್ದಾಗ ಟೀಂ ಇಂಡಿಯಾದ ಯುವ ಆಟಗಾರರನ್ನು ಇಡೀ ಜಗತ್ತು ಪ್ರಶಂಸಿಸಿತು. ಅದೇ ಸಂದರ್ಭದಲ್ಲಿ ಆನಂದ್ ಮಹೀಂದ್ರಾ ಅವರು ಮಹೀಂದ್ರಾ ಥಾರ್ ಎಸ್‌ಯುವಿ ಮಾದರಿಯನ್ನು ಆರು ಯುವ ಆಟಗಾರರಿಗೆ ಉಡುಗೊರೆಯಾಗಿ ಘೋಷಿಸಿದರು.

ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಆಫ್-ರೋಡ್ ರೈಡ್ ಮಾಡಿ ಎಂಜಾಯ್ ಮಾಡಿದ ಕ್ರಿಕಿಟಿಗ

ಮೊಹಮ್ಮದ್ ಸಿರಾಜ್, ಟಿ ನಟರಾಜನ್, ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಶುಬ್ಮನ್ ಗಿಲ್ ಮತ್ತು ನವದೀಪ್ ಸೈನಿ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು ಮತ್ತು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನಂತರ ಈ ಆರು ಯುವ ಆಟಗಾರರಿಗೆ ನಂತರ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ನೀಡಿದ್ದರು. ಐತಿಹಾಸಿಕ ಸರಣಿಯಲ್ಲಿ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ಸಂಕಲ್ಪಕ್ಕೆ ಪೂರಕವಾಗಿ ಈ ಗಿಫ್ಟ್ ನೀಡಿರುವುದಾಗಿ ಟ್ವೀಟರ್ ಮೂಲಕ ಆನಂದ್ ಮಹೀಂದ್ರಾ ತಿಳಿಸಿದ್ದರು.

ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಆಫ್-ರೋಡ್ ರೈಡ್ ಮಾಡಿ ಎಂಜಾಯ್ ಮಾಡಿದ ಕ್ರಿಕಿಟಿಗ

ಇದರಲ್ಲಿ ಇತ್ತೀಚೆಗೆ ನವದೀಪ್ ಸೈನಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಗಿಫ್ಟ್ ಪಡೆದ ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಆಫ್-ರೋಡ್ ರೈಡ್ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬಂಡೆಯಾದರೂ ಡೋಂಟ್ ಕೇರ್, ಗುಂಡಿಯಾದ್ರೂ ಭಯವಿಲ್ಲದಂತೆ ಮೈನವಿರೇಳಿಸುವಂತೆ ಕ್ರಿಕಿಟಿಗ ನವದೀಪ್ ಸೈನಿ ಅವರು ಆಪ್-ರೋಡ್ ರೈಡ್ ಮಾಡಿದ್ದಾರೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಆಫ್-ರೋಡ್ ರೈಡ್ ಮಾಡಿ ಎಂಜಾಯ್ ಮಾಡಿದ ಕ್ರಿಕಿಟಿಗ

4x4 ಸಿಸ್ಟಂ ಒಳಗೊಂಡ ಥಾರ್ ಎಸ್‍ಯುವಿಯಲ್ಲಿ ನವದೀಪ್ ಅವರ ಫನ್ ರೈಡ್ ಎದೆ ಝಲ್ ಎನಿಸುವಂತಿದೆ. ನವದೀಪ್ ಕಳೆದ ತಿಂಗಳು ಥಾರ್ ಎಸ್‍ಯುವಿಯನ್ನು ಪಡೆದುಕೊಂಡರು. ಅವರ ಥಾರ್ ಎಸ್‍ಯುವಿಯು ಬ್ಲ್ಯಾಕ್ ಬಣ್ಣದಲ್ಲಿದೆ. ಅವರ ಕುಟುಂಬದ ಸದಸ್ಯರು ತೆರಳಿ ಎಸ್‍ಯುವಿಯ ವಿತರಣೆಯನ್ನು ಪಡೆದುಕೊಂಡಿದ್ದರು.

ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಆಫ್-ರೋಡ್ ರೈಡ್ ಮಾಡಿ ಎಂಜಾಯ್ ಮಾಡಿದ ಕ್ರಿಕಿಟಿಗ

ನವದೀಪ್ ಸೈನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದರು. ಅದರೆ ಕರೋನಾ ವೈರಸ್ ನಿಂದಾಗಿ ಐಪಿಎಲ್ ಅನ್ನು ತಾತ್ಕಲಿಕವಾಗಿ ರದ್ದುಗೊಳಿಸಿದ್ದರು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಆಫ್-ರೋಡ್ ರೈಡ್ ಮಾಡಿ ಎಂಜಾಯ್ ಮಾಡಿದ ಕ್ರಿಕಿಟಿಗ

ಇನ್ನು ಥಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಭಾರತದಲ್ಲಿ ಆಫ್-ರೋಡ್ ವಾಹನಗಳು ಎಂದಾಗ ಮೊದಲು ನೆನಪಿಗೆ ಬರುವುದು ಥಾರ್ ಎಸ್‍ಯುವಿಯಾಗಿದೆ. ಈ ಥಾರ್ ಎಸ್‍ಯುವಿಯ ಅಸಾಧಾರಣ ಆಫ್-ರೋಡ್ ಸಾಮರ್ಥ್ಯದಿಂದಾಗಿ ಹೆಚ್ಚಿನ ವಾಹನ ಪ್ರಿಯರು ಥಾರ್ ಎಸ್‍ಯುವಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಆಫ್-ರೋಡ್ ರೈಡ್ ಮಾಡಿ ಎಂಜಾಯ್ ಮಾಡಿದ ಕ್ರಿಕಿಟಿಗ

ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು 2020ರ ಅಕ್ಟೋಬರ್ 2ರಂದು ಬಿಡುಗಡೆಗೊಳಿಸಲಾಯಿತು. ಈ ಎಸ್‌ಯುವಿಯ ವಿತರಣೆಯನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಆರಂಭಿಸಲಾಯಿತು.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಆಫ್-ರೋಡ್ ರೈಡ್ ಮಾಡಿ ಎಂಜಾಯ್ ಮಾಡಿದ ಕ್ರಿಕಿಟಿಗ

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಥಾರ್ ಎಸ್‍ಯುವಿಯು ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಥಾರ್‌ನ ಬೇಡಿಕೆಯು ಉತ್ಪಾದಕರ ನಿರೀಕ್ಷೆಗಳನ್ನು ಮೀರಿದೆ, ಇದರಿಂದಾಗಿ ದೀರ್ಘ ಕಾಲದ ವೈಟಿಂಗ್ ಪಿರೇಡ್ ಗಳಿವೆ.

ಈ ಹಿನ್ನೆಲೆಯಲ್ಲಿ ಮಹೀಂದ್ರಾ ಕಂಪನಿಯು ಥಾರ್ ಎಸ್‌ಯುವಿಯ ಉತ್ಪಾದನೆಯನ್ನು ಹೆಚ್ಚಿಸಿದೆ. ಮಹೀಂದ್ರಾ ಥಾರ್ ಎಸ್‌ಯುವಿಯನ್ನು 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಆಫ್-ರೋಡ್ ರೈಡ್ ಮಾಡಿ ಎಂಜಾಯ್ ಮಾಡಿದ ಕ್ರಿಕಿಟಿಗ

ಪೆಟ್ರೋಲ್ ಎಂಜಿನ್ 150 ಬಿಹೆಚ್‌ಪಿ ಪವರ್ ಹಾಗೂ 320 ಎನ್‌ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 130 ಬಿಹೆಚ್‌ಪಿ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಮಹೀಂದ್ರಾ ಕಂಪನಿಯು ನೂತನ ಎಂಜಿನ್ ಆಯ್ಕೆಯೊಂದಿಗೆ ಥಾರ್‌ನ ಬೇಸ್ ಮಾಡೆಲ್ ಅನ್ನು ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿದೆ.

Most Read Articles

Kannada
English summary
What Cricketer Navdeep Saini Is Doing With His New Mahindra Thar. Read In Kannada.
Story first published: Monday, May 24, 2021, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X