ಮಗದೊಂದು 'ಡಕಾರ್' ಅಗ್ನಿಪರೀಕ್ಷೆಗೆ ನಮ್ಮೂರಿನ ಹುಡುಗ ಸಂತೋಷ್ ರೆಡಿ

By Nagaraja

ನಮ್ಮೂರಿನ ಹುಡುಗ ಸಿಎಸ್ ಸಂತೋಷ್ ಮಗದೊಂದು ಅಗ್ನಿಪರೀಕ್ಷೆಗೆ ಸಿದ್ಧಗೊಂಡಿದ್ದಾರೆ. ಅದುವೇ ಮೋಟಾರ್ ಸೈಕಲ್ ಸವಾರರ ಪಾಲಿಗೆ ಅತ್ಯಂತ ಕಠಿಣವಾದ ಡಕಾರ್ ರಾಲಿ ರೇಸ್ ನಲ್ಲಿ ಭಾಗವಹಿಸುತ್ತಿದ್ದಾರೆ.

Also Read: ಅವನು ಯಾವ ಧೋನಿ, ಕೊಹ್ಲಿಯೂ ಅಲ್ಲ; ಆದರೂ ದೌಡಾಯಿಸಿತು ಅಭಿಮಾನಿಗಳ ದಂಡು! ಮುಂದಕ್ಕೆ ಓದಿ

ಬೆಂಗಳೂರು ಮೂಲದ ಸಂತೋಷ್ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ. ಇದು ಎರಡನೇ ಬಾರಿ ಸಂತೋಷ್ ಡಕಾರ್ ರಾಲಿಯಲ್ಲಿ ಭಾಗವಹಿಸಿದ್ದು, ಕಳೆದ ಬಾರಿ ಅವರು 36ನೇ ಸ್ಥಾನ ಗೆಲ್ಲುವ ಮೂಲಕ ಅತ್ಯಂತ ಪ್ರಭಾವಿ ರೇಸರ್ ಗಳಲ್ಲಿ ಓರ್ವರೆನಿಸಿಕೊಂಡಿದ್ದರು.

ಮಗದೊಂದು 'ಡಕಾರ್' ಅಗ್ನಿಪರೀಕ್ಷೆಗೆ ನಮ್ಮೂರಿನ ಹುಡುಗ ಸಂತೋಷ್ ರೆಡಿ

ಕಳೆದ ವರ್ಷ ಡಕಾರ್ ರಾಲಿಯಲ್ಲಿ ಭಾಗವಹಿಸಿದ ಚುಂಚನಗುಪ್ಪೆ ಶಿವಶಂಕರ್ ಸಂತೋಷ್, ವಿಶ್ವದ ಅತ್ಯಂತ ಕಠಿಣ ಕ್ರಾಸ್ ಕಂಟ್ರಿ ಡಕಾರ್ ರಾಲಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರಪ್ರಥಮ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇದಕ್ಕೂ ಮೊದಲು ಇದೇ ಸಾಹಸಮಯ ರಾಲಿಯಲ್ಲಿ ಭಾಗವಹಿಸಿದ ಚೊಚ್ಚಲ ಭಾರತೀಯನೆಂಬ ಗೌರವಕ್ಕೂ ಪಾತ್ರವಾಗಿದ್ದರು.

ಮಗದೊಂದು 'ಡಕಾರ್' ಅಗ್ನಿಪರೀಕ್ಷೆಗೆ ನಮ್ಮೂರಿನ ಹುಡುಗ ಸಂತೋಷ್ ರೆಡಿ

ಈ ಬಾರಿ ಅಂದರೆ 2016ನೇ ವರ್ಷಾರಂಭದಲ್ಲಿ ನಡೆಯಲಿರುವ ಡಕಾರ್ ರಾಲಿಯಲ್ಲಿ ಸಂತೋಷ್ ಸುಜುಕಿ 450 ರಾಲಿ ಮೋಟಾರ್ ಸೈಕಲ್ ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರ ಈ ಸಾಹಸ ಸ್ಪರ್ಧೆಗೆ ರೆಡ್ ಬುಲ್ ಇಂಡಿಯಾ ಹಾಗೂ ಸಿಯೆಟ್ ಟೈರ್ ಪ್ರಾಯೋಜಕತ್ವ ವಹಿಸಲಿದೆ.

ಮಗದೊಂದು 'ಡಕಾರ್' ಅಗ್ನಿಪರೀಕ್ಷೆಗೆ ನಮ್ಮೂರಿನ ಹುಡುಗ ಸಂತೋಷ್ ರೆಡಿ

ಕಳೆದ ಬಾರಿ 165ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಬಾರಿಯೂ ಸಂತೋಷ್ 52 ಎಂಬ ಸ್ಪರ್ಧಾ ಸಂಖ್ಯೆಯೊಂದಿಗೊ ರಾಲಿಗಿಳಿಯಲಿದ್ದಾರೆ. ಅವರು ಕಳೆದ ಬಾರಿ ಕೆಟಿಎಂ 450 ಬೈಕ್ ಬಳಕೆ ಮಾಡಿದ್ದರು.

ಮಗದೊಂದು 'ಡಕಾರ್' ಅಗ್ನಿಪರೀಕ್ಷೆಗೆ ನಮ್ಮೂರಿನ ಹುಡುಗ ಸಂತೋಷ್ ರೆಡಿ

ವಿಶ್ವ ವಿಖ್ಯಾತ ಕ್ರಾಸ್ ಕಂಟ್ರಿ ಡಕಾರ್ ರಾಲಿ ಅರ್ಜೇಂಟೀನಾ, ಚಿಲಿ ಹಾಗೂ ಬೊಲಿವಿಯಾದ ಅತ್ಯಂತ ಕಠಿಣ ಪ್ರದೇಶಗಳಲ್ಲಿ ಆಯೋಜನೆಯಾಗುತ್ತಿದೆ. ಇದರಂತೆ ಅಮೋಘ ದೈಹಿಕ ಜೊತೆಗೆ ಮಾನಸಿಕ ಬಲ ತೋರ್ಪಡಿಸಿರುವ ಸಂತೋಷ್ ಅಂತಿಮವಾಗಿ ರೇಸ್ ಪೂರ್ಣಗೊಳಿಸಿರುವ 79 ಸ್ಪರ್ಧಿಗಳಲ್ಲಿ ಓರ್ವರೆನಿಸಿಕೊಂಡಿದ್ದರು.

ಮಗದೊಂದು 'ಡಕಾರ್' ಅಗ್ನಿಪರೀಕ್ಷೆಗೆ ನಮ್ಮೂರಿನ ಹುಡುಗ ಸಂತೋಷ್ ರೆಡಿ

ಕಳೆದ ಬಾರಿ ಜನವರಿ 5ರಿಂದ 17ರ ವೆರೆಗೆ ಸಾಗಿದ ಡಕಾರ್ ರಾಲಿಯಲ್ಲಿ ಸಂತೋಷ್ ಬರೋಬ್ಬರಿ 9,295 ಕೀ.ಮೀ. ಹಾದಿಯನ್ನು ಕ್ರಮಿಸಿದ್ದರು. ಅಲ್ಲದೆ 36ನೇಯವರಾಗಿ ಗುರಿ ಮುಟ್ಟಿದ್ದ ಸಂತೋಷ್ ಈ ದೂರವನ್ನು 60 ತಾಸು, 39 ನಿಮಿಷ ಹಾಗೂ 20 ಸೆಕೆಂಡುಗಳಲ್ಲಿ ತಲುಪಿದ್ದರು.

2015 ಡಕಾರ್ ರಾಲಿಯಲ್ಲಿ ಸಂತೋಷ್ ಸಾಧನೆ:

2015 ಡಕಾರ್ ರಾಲಿಯಲ್ಲಿ ಸಂತೋಷ್ ಸಾಧನೆ:

1ನೇ ಹಂತ: 85

ಒಟ್ಟಾರೆ ರಾಂಕಿಂಗ್: 85

2ನೇ ಹಂತ: 49

ಒಟ್ಟಾರೆ ರಾಂಕಿಂಗ್: 49

3ನೇ ಹಂತ: 68

ಒಟ್ಟಾರೆ ರಾಂಕಿಂಗ್: 53

4ನೇ ಹಂತ: 58

ಒಟ್ಟಾರೆ ರಾಂಕಿಂಗ್: 50

5ನೇ ಹಂತ:

55 ಒಟ್ಟಾರೆ ರಾಂಕಿಂಗ್: 51

6ನೇ ಹಂತ: 64

ಒಟ್ಟಾರೆ ರಾಂಕಿಂಗ್: 52

7ನೇ ಹಂತ: 65

ಒಟ್ಟಾರೆ ರಾಂಕಿಂಗ್: 49

8ನೇ ಹಂತ: 32

ಒಟ್ಟಾರೆ ರಾಂಕಿಂಗ್: 42

9ನೇ ಹಂತ: 55

ಒಟ್ಟಾರೆ ರಾಂಕಿಂಗ್: 42

10ನೇ ಹಂತ: 36

ಒಟ್ಟಾರೆ ರಾಂಕಿಂಗ್: 38

11ನೇ ಹಂತ: 32

ಒಟ್ಟಾರೆ ರಾಂಕಿಂಗ್: 36

12ನೇ ಹಂತ: 30

ಒಟ್ಟಾರೆ ರಾಂಕಿಂಗ್: 36

13ನೇ ಹಂತ: 51

ಒಟ್ಟಾರೆ ರಾಂಕಿಂಗ್: 36

ಇವನ್ನೂ ಓದಿ

2015 ಡಕಾರ್ ರಾಲಿ: ಇತಿಹಾಸ ಬರೆದ ಸಂತೋಷ್

Article Published On: Wednesday, December 9, 2015, 15:39 [IST]
English summary
CS Santosh Confirms 2016 Dakar Rally With Suzuki 450 Rally
Read more on ರೇಸ್ race
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+