ಡಕಾರ್‌ನಲ್ಲಿ ಸಂತೋಷ್‌ಗೆ ಆಘಾತ; ಕನ್ನಡಿಗರಿಗೆ ನಿರಾಸೆ
ಅತ್ಯಂತ ಕಠಿಣ ಕ್ರಾಸ್ ಕಂಟ್ರಿ ಡಕಾರ್ ರಾಲಿಯಲ್ಲಿ ಭಾಗವಹಿಸುತ್ತಿರುವ ಏಕಮಾತ್ರ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿಎಸ್ ಸಂತೋಷ್ ಅವರಿಗೆ ನಾಲ್ಕನೇ ಹಂತದಲ್ಲಿ ಎದರಾಗಿರುವ ಅನಿರೀಕ್ಷಿತ ಹಿನ್ನಡೆಯಿಂದಾಗಿ ಇಡೀ ರೇಸಿಂಗ್ ಟೂರ್ನಮೆಂಟ್‌ನಿಂದಲೇ ಹೊರ ಬಿದ್ದಿದ್ದಾರೆ.
ಈ ಘಟನೆಯು ಭಾರತ ಸೇರಿದಂತೆ ಸಮಸ್ತ ಕನ್ನಡಿಗರಲ್ಲಿ ಭಾರಿ ಆಘಾತ ಹಾಗೂ ನಿರಾಸೆಯನ್ನು ತಂದಿತ್ತಿದೆ. ಕಳೆದ ವರ್ಷ ಪರಿಣಾಮಕಾರಿ 36ನೇ ಸ್ಥಾನವನ್ನು ಗೆದ್ದುಕೊಂಡಿದ್ದ ಸಂತೋಷ್ ಈ ಬಾರಿ ಟಾಪ್ 20ರ ಪಟ್ಟಿಯೊಳಗೆ ಲಗ್ಗೆಯಿಡುವ ಬಗ್ಗೆ ಅತೀವ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದರು. ಆದರೆ ದುರದೃಷ್ಟವಶಾತ್ ಸಂತೋಷ್ ಅವರ ಕನಸು ನೂಚ್ಚು ನೂರಾಗಿದೆ.

ಮೊದಲ ಮೂರು ಹಂತದ ಬಳಿಕ ಒಟ್ಟಾರೆಯಾಗಿ ಪರಿಣಾಮಕಾರಿ 79ನೇ ಸ್ಥಾನವನ್ನು ಆಲಂಕರಿಸಿಕೊಂಡಿದ್ದ ಸಂತೋಷ್ ನಾಲ್ಕನೇ ಹಂತದಲ್ಲಿ ಭಾರಿ ಹಿನ್ನಡೆಗೊಳಗಾದರು. ಪರಿಣಾಮ ಸುಜುಕಿ 450 ಆರ್‌ಎಂಝಡ್ ಬೈಕ್ ನಲ್ಲಿ ಸವಾರಿ ಮುಂದುವರಿಸಿದ ಸಂತೋಷ್ 127ನೇ ಸ್ಥಾನಕ್ಕೆ ಕುಸಿದರು. ಇದರೊಂದಿಗೆ ಒಟ್ಟಾರೆ ರಾಕಿಂಗ್ 116ಕ್ಕೆ ಇಳಿಕೆಯಾಯಿತು.

ರೇಸ್ ಆರಂಭದಿಂದಲೂ ಬೈಕ್ ನಿರ್ವಹಣೆ ಸಮಸ್ಯೆ ಎದುರಿಸುತ್ತಿದ್ದ ಸಂತೋಷ್ ಅವರಿಗೆ ನಾಲ್ಕನೇ ಹಂತದಲ್ಲೂ ಮತ್ತೆ ಸುಜುಕಿ ಬೈಕ್ ಕೈಕೊಟ್ಟಿತ್ತು. ನೇವಿಗೇಷನ್ ಟವರ್ ತುಂಡರಿಸಲ್ಪಟ್ಟಿರುವುದು ಹಾಗೂ ಎಲೆಕ್ಟ್ರಿಕಲ್ ಸಮಸ್ಯೆಯಿಂದಾಗಿ ಹಾದಿ ತಪ್ಪಿದರು.

ಆದರೂ ಛಲ ಬಿಡದ ಈ ಬೆಂಗಳೂರು ಚಾಲಕ ಯಾವುದೇ ನೇವಿಗೇಷನ್ ನೆರವಿಲ್ಲದೆ 300 ಕೀ.ಮೀ. ಗಳಷ್ಟು ದೂರ ಸಂಚರಿಸುವ ಮೂಲಕ ಗಮನಾರ್ಹ ಸಾಧನೆ ಮೆರಿದಿದ್ದಾರೆ. ಅಷ್ಟರ ವೇಳೆಯಾಗುವಾಗ ಮೂರು ತಾಸುಗಳಷ್ಟು ವಿಳಂಬವಾಗಿತ್ತು.

ಆರಂಭದಿಂದಲೇ ಸುಜುಕಿ 450 ಆರ್‌ಎಂಝಡ್ ಗಾಡಿಯು ಯಾಂತ್ರಿಕ ಹಾಗೂ ಸ್ಥಿರತೆಯ ಸಮಸ್ಯೆಯನ್ನು ಎದುರಿಸುತ್ತಿತ್ತು. ನಾಲ್ಕನೇ ಹಂತದಲ್ಲಿ ಎಲೆಕ್ಟ್ರಿಕ್ ಸಮಸ್ಯೆಯೂ ಸೇರಿದಾಗ ತಮ್ಮ ಹೋರಾಟಕ್ಕೆ ಪೂರ್ಣ ವಿರಾಮ ಹಾಡಬೇಕಾಯಿತು.

ನಿಮ್ಮ ಮಾಹಿತಿಗಾಗಿ, ಡಕಾರ್ ರಾಲಿ ದಕ್ಷಿಣ ಅಮೆರಿಕ ರಾಷ್ಟ್ರಗಳಾದ ಅರ್ಜೇಂಟೀನಾ, ಚಿಲಿ ಹಾಗೂ ಬೊಲಿವಿಯಾದಲ್ಲಿ ವರ್ಷಂಪ್ರತಿ ಆಯೋಜನೆಯಾಗುತ್ತಿರುವ ವಿಶ್ವದ ಅತ್ಯಂತ ಕಠಿಣ ಮೋಟಾರು ರೇಸ್ ಗಳಲ್ಲಿ ಒಂದಾಗಿದೆ. ಇಲ್ಲಿ ಬೈಕ್ ಮಾತ್ರವಲ್ಲದೆ ಕಾರು, ಕ್ವಾಡ್, ಟ್ರಕ್ ರೇಸ್ ಗಳು ನಡೆಯುತ್ತದೆ. ಅಲ್ಲದೆ ಸ್ಪರ್ಧಿಗಳು 15ರಷ್ಟು ಹಂತಗಳಲ್ಲಾಗಿ ಮ್ಯಾರಥನ್ 9,000 ಕೀ.ಮೀ. ದೂರವನ್ನು ಕ್ರಮಿಸಬೇಕಾಗಿದೆ.


Click it and Unblock the Notifications








