ಭಾರತದ ರಸ್ತೆಗಳಲ್ಲಿ ಇವೆಲ್ಲಾ ಕಾಮನ್..!

ಭಾರತದಲ್ಲಿರುವ ರಸ್ತೆಗಳು ಪ್ರಪಂಚದಲ್ಲಿರುವ ಬಹು ಅಪಾಯಕಾರಿ ರಸ್ತೆಗಳ ಪೈಕಿ ಒಂದಾಗಿವೆ. ಭಾರತದಲ್ಲಿ ನಡೆಯುವ ರಸ್ತೆ ಅಪಘಾತಗಳೇ ಇವುಗಳನ್ನು ಖಚಿತಪಡಿಸುತ್ತವೆ. ಅಂಕಿ ಅಂಶಗಳ ಪ್ರಕಾರ, ಪ್ರತಿ ವರ್ಷ ಲಕ್ಷಾಂತರ ಭಾರತೀಯರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಭಾರತದ ರಸ್ತೆಗಳಲ್ಲಿ ಇವೆಲ್ಲಾ ಕಾಮನ್..!

ಭಾರತದ ರಸ್ತೆಗಳಲ್ಲಿ ಯಾವೆಲ್ಲಾ ಸಂಗತಿಗಳಿಂದ ಪ್ರಾಣ ಹೋಗುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡೋಣ. ಇದರಿಂದಾಗಿ ಮುಂದಿನ ಬಾರಿ ರಸ್ತೆಯಲ್ಲಿ ಸವಾರಿ ಮಾಡುವಾಗ ಈ ಸಂಗತಿಗಳ ಮೇಲೆ ಗಮನ ಹರಿಸಲು ಸಹಾಯವಾಗಲಿದೆ.

ಭಾರತದ ರಸ್ತೆಗಳಲ್ಲಿ ಇವೆಲ್ಲಾ ಕಾಮನ್..!

ರಾಂಗ್ ಸೈಡ್ ಸವಾರಿ

ಭಾರತದ ರಸ್ತೆಗಳಲ್ಲಿ ಸಂಚರಿಸುವಾಗ ಕಂಡು ಬರುವ ಸಾಮಾನ್ಯ ಸಂಗತಿಯೆಂದರೆ ರಾಂಗ್ ಸೈಡ್ ರೈಡಿಂಗ್. ಭಾರತದಲ್ಲಿರುವ ವಾಹನ ಸವಾರರು, ದೂರವನ್ನು ಕಡಿಮೆಗೊಳಿಸುವ ಕಾರಣಕ್ಕೆ ರಾಂಗ್ ಸೈಡಿನಲ್ಲಿ ಸವಾರಿ ಮಾಡುತ್ತಾರೆ. ರಾಂಗ್ ಸೈಡಿನಲ್ಲಿ ಸವಾರಿ ಮಾಡುವುದರಿಂದ ಟ್ರಾಫಿಕ್ ಜಾಮ್ ಉಂಟಾಗುವುದು ಮಾತ್ರವಲ್ಲದೇ, ಅಪಘಾತಗಳೂ ಸಂಭವಿಸುತ್ತವೆ.

ಭಾರತದ ರಸ್ತೆಗಳಲ್ಲಿ ಇವೆಲ್ಲಾ ಕಾಮನ್..!

ದನಗಳು

ರಸ್ತೆಗಳಲ್ಲಿ ಹೇಗೆಂದರೆ ಹಾಗೇ ನುಗ್ಗಿ ಅಡ್ಡ ಬರುವ ದನಗಳೂ ಸಹ ಭಾರತದಲ್ಲಿನ ವಾಹನ ಸವಾರರ ಪಾಲಿಗೆ ಬಹು ದೊಡ್ಡ ಅಪಾಯಕಾರಿಯಾಗಿವೆ. ಹೀಗೆ ಅಡ್ಡ ಬರುವ ದನಗಳಿಂದಲೇ ಪ್ರತಿ ವರ್ಷ ಅನೇಕ ಅಪಘಾತಗಳು ಸಂಭವಿಸಿವೆ.

ಭಾರತದ ರಸ್ತೆಗಳಲ್ಲಿ ಇವೆಲ್ಲಾ ಕಾಮನ್..!

ಗಮನಿಸಬೇಕಾದ ಸಂಗತಿಯೆಂದರೆ ಬೆಳಕಿಲ್ಲದ ಕಾರಣಕ್ಕೆ ಹಾಗೂ ಹೆಚ್ಚು ಮಂಜು ಬೀಳುವ ಕಾರಣಕ್ಕೆ ದನಗಳಿಂದ ಉಂಟಾಗುವ ಅಪಘಾತಗಳು ರಾತ್ರಿ ವೇಳೆಯಲ್ಲಿ ಅಥವಾ ಚಳಿಗಾಲದಲ್ಲಿ ಹೆಚ್ಚು ಸಂಭವಿಸುತ್ತವೆ.

ಭಾರತದ ರಸ್ತೆಗಳಲ್ಲಿ ಇವೆಲ್ಲಾ ಕಾಮನ್..!

ಕೆಟ್ಟು ನಿಲ್ಲುವ ವಾಹನಗಳು

ಸಡನ್ನಾಗಿ ಕೆಟ್ಟು ಹೋಗುವ ವಾಹನಗಳನ್ನು ರಸ್ತೆಬದಿಯಲ್ಲಿ ಸುರಕ್ಷಿತವಾಗಿ ನಿಲ್ಲಿಸಬೇಕು. ಇದು ಇತರ ವಾಹನ ಚಾಲಕರಿಗೆ ಪಾಠವಾಗಬೇಕು. ಆದರೆ ಯಾರೂ ಇದನ್ನು ಪಾಲಿಸುವುದಿಲ್ಲ. ಕೆಟ್ಟು ಹೋದ ವಾಹನಗಳನ್ನು ರಸ್ತೆ ಮಧ್ಯದಲ್ಲಿಯೇ ನಿಲ್ಲಿಸುತ್ತಿರುವುದರಿಂದ ಉಳಿದ ವಾಹನ ಚಾಲಕರಿಗೂ ಕಿರಿಕಿರಿ.

ಭಾರತದ ರಸ್ತೆಗಳಲ್ಲಿ ಇವೆಲ್ಲಾ ಕಾಮನ್..!

ವೇಗವಾಗಿ ಹೋಗುವಾಗ ರಸ್ತೆಮಾರ್ಗದಲ್ಲಿ ಕೆಟ್ಟು ಹೋಗಿರುವ ವಾಹನಗಳು ತಕ್ಷಣಕ್ಕೆ ಕಾಣಿಸುವುದಿಲ್ಲ. ನಿಂತಿರುವ ವಾಹನಗಳನ್ನು ನೋಡಿದ ತಕ್ಷಣ ವೇಗದಲ್ಲಿರುವ ವಾಹನವನ್ನು ತಕ್ಷಣಕ್ಕೆ ನಿಯಂತ್ರಿಸಲು ಆಗುವುದಿಲ್ಲ. ಇದರಿಂದಾಗಿ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳು ಸಂಭವಿಸುತ್ತವೆ.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಭಾರತದ ರಸ್ತೆಗಳಲ್ಲಿ ಇವೆಲ್ಲಾ ಕಾಮನ್..!

ಅನಗತ್ಯ ವಸ್ತುಗಳು

ಉರುಳಿ ಬಿದ್ದಿರುವ ಮರ, ಕಲ್ಲು ಹಾಗೂ ಕಸದಂತಹ ಅನಗತ್ಯ ವಸ್ತುಗಳನ್ನು ಭಾರತದ ರಸ್ತೆಗಳಲ್ಲಿ ಕಾಣಬಹುದು. ಇವುಗಳೂ ಸಹ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತವೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಭಾರತದ ರಸ್ತೆಗಳಲ್ಲಿ ಇವೆಲ್ಲಾ ಕಾಮನ್..!

ರಸ್ತೆ ಗುಂಡಿಗಳು

ಭಾರತದ ಹೆಚ್ಚಿನ ರಸ್ತೆಗಳು ಗುಂಡಿ ಬಿದ್ದು ಹಳ್ಳಗಳಂತಾಗಿವೆ. ಮಳೆಗಾಲದಲ್ಲಂತೂ ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ಕಾಣುವುದಿಲ್ಲ. ಭಾರತದ ರಸ್ತೆಗಳಲ್ಲಿ ರಸ್ತೆ ಗುಂಡಿಗಳು ದೊಡ್ಡ ಸಮಸ್ಯೆಯನ್ನು ತಂದೊಡ್ಡುತ್ತಿವೆ. ಮಳೆಯಿಂದಾಗಿ ಹಾಗೂ ಟ್ರಕ್‌ಗಳಂತಹ ಭಾರೀ ವಾಹನಗಳ ನಿರಂತರ ಓಡಾಟದಿಂದಾಗಿ ರಸ್ತೆಗಳು ಹಾಳಾಗುತ್ತಿವೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಭಾರತದ ರಸ್ತೆಗಳಲ್ಲಿ ಇವೆಲ್ಲಾ ಕಾಮನ್..!

ಅದರಲ್ಲೂ ಕಚ್ಚಾ ರಸ್ತೆಗಳಲ್ಲಿ ಪ್ರಯಾಣಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಸಾಧ್ಯವಾದಷ್ಟು ಆ ರಸ್ತೆಗಳಲ್ಲಿ ಸಂಚರಿಸುವುದನ್ನು ಕಡಿಮೆ ಮಾಡಿ. ಅಂತಹ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳು ಜೀವಕ್ಕೆ ಮಾರಕವಾಗಬಲ್ಲವು.

Most Read Articles

Kannada
English summary
Dangers faced while driving on Indian roads - Read in Kannada
Story first published: Wednesday, November 13, 2019, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X