ದರ್ಶನ್ ಭಾಗ್ಯರೇಖೆ ಬದಲಾಯಿಸಿದ ಬುಲ್ ಬುಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಬುಲ್ ಬುಲ್ ' ಚಿತ್ರ ರಾಜ್ಯದೆಲ್ಲೆಡೆಯ ಚಿತ್ರಮಂದಿರಗಳಲ್ಲಿ ಭಾರಿ ಯಶಸ್ಸು ಕಂಡಿದ್ದು, ತನ್ನ ಜೈತ್ರಯಾತ್ರೆಯನ್ನು ಮುಂದುವರಿಸಿದೆ. ದರ್ಶನ್ ಜತೆ ಕಾಣಿಸಿಕೊಂಡಿದ್ದ ಹಿರಿಯ ನಟ ಹಾಗೂ ಸಚಿವ ಅಂಬರೀಶ್ ಕೂಡಾ ಮಹತ್ವದ ಪಾತ್ರವನ್ನು ನಿಭಾಯಿಸಿದ್ದರು.
ಈ ನಡುವೆ ಚಿತ್ರದಲ್ಲಿ ಅಧ್ಬುತ ನಟನಾ ಕೌಶಲ್ಯ ಪ್ರದರ್ಶಿಸಿರುವ ದರ್ಶನ್‌ಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಚಿತ್ರದ ಯಶಸ್ಸಿನ ಸಂದರ್ಭದಲ್ಲಿ ನಾಯಕ ನಟನಿಗೆ ಉಡುಗೊರೆ ನೀಡುವ ಸಂಪ್ರದಾಯ ಹೆಚ್ಚಾಗಿ ಕಂಡುಬರುತ್ತಿದೆ.
ವಿಶೇಷವಾಗಿಯೂ ನಾಯಕ ದರ್ಶನ್‌ಗೆ ಬುಲ್ ಬುಲ್ ಚಿತ್ರತಂಡ ದುಬಾರಿ ಹರ್ಲಿ ಡೇವಿಡ್ಸನ್ ಬೈಕ್ ಉಡುಗೊರೆಯಾಗಿ ನೀಡಲಿದೆ. ಹರ್ಲಿ ಡೇವಿಡ್ಸನ್‌ನ ಈ ಹೆರಿಟೇಜ್ ಸಾಫ್ಟೈಲ್ ಬೈಕ್ 20 ಲಕ್ಷಗಳಷ್ಟು ದುಬಾರಿಯಾಗಿದೆ. ಅಷ್ಟಕ್ಕೂ ದರ್ಶನ್‌ಗೆ ಯಾಕೆ ಬೈಕ್ ಉಡುಗೊರೆಯಾಗಿ ನೀಡಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್ ತಿರುವಿರಿ...
ಇವನ್ನೂ ಓದಿ: ಅರೆ ಬುಲ್ ಬುಲ್ ಮಾತಾಡಾಕಿಲ್ವ..?

ದುಬಾರಿ ಬೈಕ್ ತಮ್ಮದಾಗಿಸಿಕೊಳ್ಳುವುದು ದರ್ಶನ್ ಕನಸಾಗಿತ್ತು. ಇದೇ ಕಾರಣಕ್ಕಾಗಿ ಹರ್ಲಿ ಡೇವಿಡ್ಸನ್ ಬೈಕ್ ಉಡುಗೊರೆಯಾಗಿ ನೀಡಲಾಗುತ್ತಿದೆ ಎಂದು ದಿನಾಕರ್ ತಿಳಿಸಿದ್ದಾರೆ.

ಸ್ವಿಜರ್ಲೆಂಡ್‌ನಲ್ಲಿ ಬುಲ್ ಬುಲ್ ಚಿತ್ರದ ಶೂಟಿಂಗ್ ವೇಳೆಯೂ ದರ್ಶನ್ ಗಮನ ಪೂರ್ತಿ ಬೈಕ್ ಮೇಲಿತ್ತು. ಅಷ್ಟೇ ಅಲ್ಲದೆ ಹಾಡುಗಾರ ಕವಿರಾಜ್ ಜತೆಸೇರಿ ಗಂಟೆಗಟ್ಟಲೆ ಬೈಕ್ ನೋಡುವುದರಲ್ಲೇ ಕಾಲ ಕಳೆದಿದ್ದರು.

ಅಂದ ಹಾಗೆ ದರ್ಶನ್ ಜನ್ಮದಿನವಾದ ಫೆಬ್ರವರಿ 16ಕ್ಕೆ ಬೈಕ್ ಉಡುಗೊರೆ ನೀಡುವುದು ಚಿತ್ರ ತಂಡದ ಉದ್ದೇಶವಾಗಿತ್ತು. ಆದರೆ ದುಡ್ಡನ್ನೆಲ್ಲ ಚಿತ್ರದಲ್ಲಿ ಹೂಡಿಕೆ ಮಾಡಿದ್ದರಿಂದ ಅಂದು ಸಾಧ್ಯವಾಗಿರಲಿಲ್ಲ. ಇದೀಗ ಬುಲ್ ಬುಲ್ ಚಿತ್ರ ಯಶಸ್ವಿ 50 ದಿನಗಳನ್ನು ಕಾಲಿರಿಸಿದ ಬಳಿಕ ಜುಲೈ 12ರಂದು ನೂತನ ಬೈಕ್ ಹಸ್ತಾಂತರಿಸಲಾಗುತ್ತಿದೆ.

ಹರ್ಲಿ ಡೇವಿಡ್ಸನ್ ಹೆರಿಟೇಜ್ ಸಾಫ್ಟೈಲ್ ಬೈಕ್ ಏರ್ ಕೂಲ್ಡ್ ಟ್ವಿನ್ ಕ್ಯಾಮ್ 103ಬಿ ಎಂಜಿನ್ ಹೊಂದಿದೆ. ಅಲ್ಲದೆ ಇದರಲ್ಲಿ ಕಸ್ಟಮೈಸ್ಡ್ ಮಾಡುವ ಆಯ್ಕೆಗಳಿವೆ.

ಕೆಲವು ತಿಂಗಳುಗಳ ಹಿಂದೆಯಷ್ಟೇ ಸ್ಯಾಂಡಲ್‌ವುಡ್ ನಟ ಸುದೀಪ್ ಕೂಡಾ ಹರ್ಲಿ ಡೇವಿಡ್ಸನ್ ಬೈಕ್ ತಮ್ಮದಾಗಿಸಿಕೊಂಡಿದ್ದರು.

ಇವನ್ನೂ ಓದಿ: ಒಲವಿನ ದೊರೆಗೆ ಪ್ರೇಮದ ಉಡುಗೊರೆ

ಇವನ್ನೂ ಓದಿ: ಆವೇಶದ ಹಮ್ಮರ್ ಹಮ್ಮೀರ ದರ್ಶನ್ ತೂಗುದೀಪ

ಇವನ್ನೂ ಓದಿ: ಆಭರಣ ಅಂಗಡಿಗೆ ಫಾರ್ಚ್ಯುನರ್‌ನಲ್ಲಿ ಬಂದ ದರ್ಶನ್






Click it and Unblock the Notifications








