ನಟ ದರ್ಶನ್ ಮೆಚ್ಚುಗೆಗೆ ಪಾತ್ರವಾದ ಆರ್‌ಇ ಹೊಸ ಬೈಕ್ ವಿಶೇಷತೆ ಏನು?
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ನಟನಾ ಕೌಶಲ್ಯದಿಂದಾಗಿ ಡಿ ಬಾಸ್ ಎಂದೇ ಖ್ಯಾತಿಯಾಗಿರುವ ನಟ ದರ್ಶನ್ ಅವರಿಗೆ ನಟನೆ ಅಷ್ಟೇ ಅಲ್ಲದೇ ಆಟೋ ಮೊಬೈಲ್ ಬಗ್ಗೆಯೂ ಎಲ್ಲಿಲ್ಲದ ಕ್ರೇಜ್.
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ನಟನಾ ಕೌಶಲ್ಯದಿಂದಾಗಿ ಡಿ ಬಾಸ್ ಎಂದೇ ಖ್ಯಾತಿಯಾಗಿರುವ ನಟ ದರ್ಶನ್ ಅವರಿಗೆ ನಟನೆ ಅಷ್ಟೇ ಅಲ್ಲದೇ ಆಟೋ ಮೊಬೈಲ್ ಬಗ್ಗೆಯೂ ಎಲ್ಲಿಲ್ಲದ ಕ್ರೇಜ್. ಹೀಗಾಗಿಯೇ ಅವರ ಅಭಿನಯದ ಜೊತೆಗೆ ಜೊತೆಗೆ ಕೆಲ ಸಂದರ್ಭಗಳಲ್ಲಿ ಅವರು ಓಡಾಡುವ ಐಷಾರಾಮಿ ಕಾರುಗಳು ಮತ್ತು ಬೈಕ್‌ಗಳು ಸಹ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತವೆ.

ಮೊನ್ನೆಯಷ್ಟೇ ಕೂಡಾ ತಮ್ಮ ನೆಚ್ಚಿನ ಗೆಳೆಯನಾದ ನಟ ಧರ್ಮ ಕೀರ್ತಿರಾಜ್ ಖರೀದಿ ಮಾಡಿರುವ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 500ಎಕ್ಸ್ ಬೈಕಿನಲ್ಲಿ ನೈಟ್ ರೌಂಡ್ ಸುತ್ತಿದ ದರ್ಶನ್ ಅವರು ಹೊಸ ಬೈಕಿನ ಪರ್ಫಾಮೆನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೈಟ್ ಡ್ರೈಸ್‌ನಲ್ಲೇ ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 500ಎಕ್ಸ್ ರೈಡ್ ಮಾಡಿದ ನಟ ದರ್ಶನ್ ಅವರು ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಖುಷಿ ವ್ಯಕ್ತಪಡಿಸಿದ್ದು, ಅತ್ತ ನಟ ಧರ್ಮ ಕೀರ್ತೀರಾಜ್ ಕೂಡಾ ತಮ್ಮ ಆಫಿಸಿಯಲ್ ಪೇಜ್ ಸದ್ಯದಲ್ಲೇ ಥಂಡರ್‌ಬರ್ಡ್ 500ಎಕ್ಸ್ ಬೈಕಿನಲ್ಲಿ ಮೊತ್ತೊಮ್ಮೆ ಲಾಂಗ್ ರೈಡ್ ಹೋಗುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನು ನಟ ಧರ್ಮ ಕೀರ್ತಿರಾಜ್ ಖರೀದಿಸಿರುವ ರಾಯಲ್ ಎನ್‌ಫೀಲ್ಡ್ ವಿನೂತ ಥಂಡರ್‌ಬರ್ಡ್ 500ಎಕ್ಸ್ ಬೈಕ್ ಮಾದರಿಯು ಕಳೆದ ಫೆಬ್ರುವರಿ 28ರಂದು ಬಿಡುಗಡೆಯಾಗಿದ್ದು, ಎಕ್ಸ್‌ಶೋರಂ ಪ್ರಕಾರ 1.98 ಲಕ್ಷ ಬೆಲೆ ಹೊಂದಿದೆ. ಇದರ ಜೊತೆಗೆ ಥಂಡರ್‌ಬರ್ಡ್ 350ಎಕ್ಸ್ ಕೂಡಾ ಬಿಡುಗಡೆಯಾಗಿದ್ದು, ಎಕ್ಸ್‌ಶೋರಂ ಪ್ರಕಾರ ರೂ. 1.56 ಲಕ್ಷ ಬೆಲೆ ಹೊಂದಿವೆ.

ಸಾಮಾನ್ಯ ಥಂಡರ್‌ಬರ್ಡ್ ಬೈಕ್ ಆವೃತ್ತಿಗಳಿಂತಲೂ ವಿಭಿನ್ನವಾಗಿರುವ ಹೊಸ ಥಂಡರ್‌ಬರ್ಡ್ 350ಎಕ್ಸ್ ಮತ್ತು 500ಎಕ್ಸ್ ಬೈಕ್‌ಗಳು ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವುದಲ್ಲದೇ ವಿಶೇಷ ಚಾಲನಾ ಅನುಭೂತಿ ನೀಡುವಲ್ಲಿ ಸಫಲವಾಗಿವೆ.

ಬೈಕ್ ವಿನ್ಯಾಸಗಳನ್ನು ಹೊರತುಪಡಿಸಿ ಈ ಹಿಂದಿನ ಥಂಡರ್‌ಬರ್ಡ್ ಬೈಕ್‌ಗಳ ತಾಂತ್ರಿಕ ಅಂಶಗಳನ್ನೇ ಹೊಸ ಬೈಕಿನಲ್ಲೂ ಮುಂದುವರಿಸಲಾಗಿದ್ದು, ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ಫ್ಯೂಲ್ ಟ್ಯಾಂಕ್ ಡಿಸೈನ್ ಹೊಸ ಲುಕ್ ನೀಡಲಿವೆ.

ಈ ಹಿಂದಿನಂತೆಯೇ ರೌಂಡ್ ಹೆಡ್‌ಲ್ಯಾಂಪ್, ಪ್ರೋಜೆಕ್ಟರ್ ಲೈಟ್ ಮತ್ತು ಎಲ್ಇಡಿ ಡಿಆರ್‌ಎಲ್ ನೀಡಲಾಗಿದ್ದು, ಎಲ್ಇಡಿ ಟೈಲ್ ಲ್ಯಾಂಪ್, ಅಲಾಯ್ ವೀಲ್ಹ್ ಜೊತೆಗೆ ರಿಮ್ ಸ್ಟಿಕರ್ ಡಿಸೈನ್ ಕೂಡಾ ಬೈಕಿನ ಅಂದವನ್ನು ಹೆಚ್ಚಿಸಿವೆ.

ಎಂಜಿನ್ ಸಾಮರ್ಥ್ಯ
ಥಂಡರ್‌ಬರ್ಡ್ 350ಎಕ್ಸ್ ಮಾದರಿಯು 346 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 19 ಬಿಎಚ್‌ಪಿ ಮತ್ತು 28 ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ, ಥಂಡರ್‌ಬರ್ಡ್ 500ಎಕ್ಸ್ ಬೈಕ್‌ಗಳು 499 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್‌ನೊಂದಿಗೆ 27 ಬಿಎಚ್‌ಪಿ ಮತ್ತು 41.3 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಜೊತೆಗೆ ಹೊಸ ಬೈಕುಗಳಲ್ಲಿ ಕಪ್ಪು ಬಣ್ಣದೊಂದಿಗೆ ವಿನ್ಯಾಸ ಹೊಂದಿರುವ ಎಂಜಿನ್ ವಿಭಾಗ, ಫ್ರಂಟ್ ಮಡ್‌ಗಾರ್ಡ್, ಸೈಡ್ ಪ್ಯಾನೆಲ್, ರಿರ್ ಫೆಂಡರ್, ಫ್ರಂಟ್ ಫೋಕ್ಸ್, ಸಸ್ಪೆಷನ್ ಅಳವಡಿಸಲಾಗಿದ್ದು, ಎಕ್ಸಾಸ್ಟ್ ವಿನ್ಯಾಸವು ಕೂಡಾ ವಿಶೇಷವಾಗಿದೆ.

ಇದಲ್ಲದೇ ಹೊಸ ಬೈಕುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್, 9-ಸ್ಪೋಕ್ ಅಲಾಯ್ ಚಕ್ರಗಳು, ಅನುಕೂಲಕರ ಹ್ಯಾಂಡಲ್ ಬಾರ್, ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ಎಂಆರ್‌ಎಫ್ ಟ್ಯೂಬ್‌ಲೇಸ್ ಟೈರ್, 5-ಸ್ಪೀಡ್ ಗೇರ್‌ಬಾಕ್ಸ್ ಒದಗಿಸಲಾಗಿದೆ.

ಲಭ್ಯವಿರುವ ಬಣ್ಣಗಳು
ಡ್ರಿಫ್ಟರ್ ಬ್ಲೂ, ಗೇಟ್ ವೇ ಆರೇಂಜ್, ರೊವಿಂಗ್ ರೆಡ್ ಮತ್ತು ವಿಸ್ಕಿಮಲ್ ವೈಟ್ ಬಣ್ಣಗಳಲ್ಲಿ ಥಂಡರ್‌ಬರ್ಡ್ 350ಎಕ್ಸ್ ಮತ್ತು 500ಎಕ್ಸ್ ಬೈಕ್‌ಗಳು ಖರೀದಿಗೆ ಲಭ್ಯವಿರಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?
ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು
ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....
ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ? ಇದು ನೀಜವೇ?
ಮಗು ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕಾರಿನಲ್ಲಿದ್ದ 7 ಮಂದಿ ದುರ್ಮರಣ....


Click it and Unblock the Notifications








