ಲಂಬೋ ಹೋಲುವ ನಕಲಿ ಕಾರು ನಿರ್ಮಿಸಿದ ಅಪ್ಪಟ ವಾಹನ ಪ್ರೇಮಿ

ಇಟಲಿಯ ಅತಿ ಶ್ರೇಷ್ಠ ಸೂಪರ್ ಕಾರು ನಿರ್ಮಾಣ ಸಂಸ್ಥೆಗಳಲ್ಲಿ ಲಂಬೋರ್ಗಿನಿ ಒಂದಾಗಿದೆ. ಅಲ್ಲದೆ ಜಗತ್ತಿನಾದ್ಯಂತ ಭಾರಿ ವಾಹನ ಪ್ರೇಮಿಗಳನ್ನು ತನ್ನತ್ತ ಸೆಳೆದಿದೆ.

By Nagaraja

ಸೂಪರ್ ಕಾರುಗಳು ಕೋಟಿ ಗಟ್ಟಲೆ ರುಪಾಯಿಗಳಷ್ಟು ಬೆಲೆ ಬಾಳುವುದರಿಂದ ಜನ ಸಾಮಾನ್ಯರಿಗೆ ಕೈಗೆಟುಕುವುದು ಕಷ್ಟದ ಮಾತಾಗಿದೆ. ಇಂತಹ ಕಾರುಗಳನ್ನು ಖರೀದಿಸುವ ಯೋಚನೆಯನ್ನು ಬಿಟ್ಟು ಒಮ್ಮೆಯಾದರೂ ಚಾಲನೆ ಮಾಡುವ ಆಸೆ ಕೂಡಾ ಈಡೇರುವುದಿಲ್ಲ. ಹಾಗಿರುವಾಗ ಇಲ್ಲೊಬ್ಬ ವಾಹನ ಪ್ರೇಮಿ ನೈಜ ಸೂಪರ್ ಕಾರು ಗಿಟ್ಟಿಸಿಕೊಳ್ಳಲು ಸಾಧ್ಯವಾಗದಿದ್ದರೆ ಏನಂತೆ ? ಇದಕ್ಕೆ ಸಮಾನವಾದ ತದ್ರೂಪ ಕಾರನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ.

ಲಂಬೋ ಹೋಲುವ ನಕಲಿ ಕಾರು ನಿರ್ಮಿಸಿದ ಅಪ್ಪಟ ವಾಹನ ಪ್ರೇಮಿ

ದಕ್ಷಿಣ ಪೂರ್ವ ಯುರೋಪ್ ನಲ್ಲಿ ಸ್ಥಿತಗೊಂಡಿರುವ ರಿಪಬ್ಲಿಕ್ ಆಫ್ ಕೊಸೊವಾದ ಲಂಬೋರ್ಗಿನಿ ವಾಹನ ಪ್ರೇಮಿ ಡ್ರಿಟಾನ್ ಸೆಲ್ಮಾನಿ ಎಂಬವರೇ ನಕಲಿ ಕಾರನ್ನು ನಿರ್ಮಿಸಿ ಸುದ್ದಿಯಾಗಿದ್ದಾರೆ.

ಲಂಬೋ ಹೋಲುವ ನಕಲಿ ಕಾರು ನಿರ್ಮಿಸಿದ ಅಪ್ಪಟ ವಾಹನ ಪ್ರೇಮಿ

ಮೊದಲೇ ನೋಟಕ್ಕೆ ಥೇಟ್ ಲಂಬೋ ಕಾರಿನಂತೆ ಗೋಚರಿಸುತ್ತಿರುವ ಈ ಕಾರನ್ನು ವಾಹನ ತಜ್ಞರಿಂದ ಮಾತ್ರ ಕಂಡುಹಿಡಿಯಲು ಸಾಧ್ಯ.

ಲಂಬೋ ಹೋಲುವ ನಕಲಿ ಕಾರು ನಿರ್ಮಿಸಿದ ಅಪ್ಪಟ ವಾಹನ ಪ್ರೇಮಿ

ಕೌಶಲ್ಯ ಮತ್ತು ಬುದ್ಧಿವಂತಿಕೆಯಿದ್ದಲ್ಲಿ ದುಡ್ಡು ದೊಡ್ಡ ಸಮಸ್ಯೆಯೇ ಅಲ್ಲ ಎಂಬುದನ್ನಿಲ್ಲಿ ನಿರೂಪಿಸಿದ್ದಾರೆ. ಪರಿಣಾಮ ಲಂಬೋರ್ಗಿನಿ ಕಾರಿಗೆ ಹೋಲುವ ಆಕರ್ಷಕ ಕಾರು ಸಿದ್ಧಗೊಂಡಿದೆ.

ಲಂಬೋ ಹೋಲುವ ನಕಲಿ ಕಾರು ನಿರ್ಮಿಸಿದ ಅಪ್ಪಟ ವಾಹನ ಪ್ರೇಮಿ

ಇದರ ನಿರ್ಮಾದಲ್ಲಿ ಸಕೆಂಡ್ ಹ್ಯಾಂಡ್ ಮಿಟ್ಸುಬಿಸಿ ಎಕ್ಲಿಪ್ಸ್ ಸೇರಿದಂತೆ ಇತರೆ ಕಾರುಗಳ ಬಿಡಿಭಾಗಗಳನ್ನು ಬಳಕೆ ಮಾಡಲಾಗಿದೆ. ಹಾಗೆಯೇ ಮಿಟ್ಸುಬಿಸಿ ಗ್ಯಾಲೆಂಟ್ ಕಾರಿನ 3.0 ಲೀಟರ್ ಎಂಜಿನ್ ಜೋಡಿಸಲಾಗಿದೆ.

ಲಂಬೋ ಹೋಲುವ ನಕಲಿ ಕಾರು ನಿರ್ಮಿಸಿದ ಅಪ್ಪಟ ವಾಹನ ಪ್ರೇಮಿ

ವಿವಿಧ ಆಕಾರದ ಲೋಹವನ್ನು ಬೆಸೆದು ಲಂಬೋರ್ಗಿನಿ ಕಾರಿಗೆ ಹೋಲುವಂತಹ ವಿನ್ಯಾಸ ರಚಿಸಲಾಗಿದೆ. ಇದಕ್ಕಾಗಿ ಭರ್ತಿ ಒಂದು ವರ್ಷ ಸಮಯ ತಗುಲಿದೆ.

ಲಂಬೋ ಹೋಲುವ ನಕಲಿ ಕಾರು ನಿರ್ಮಿಸಿದ ಅಪ್ಪಟ ವಾಹನ ಪ್ರೇಮಿ

ಇವೆಲ್ಲದರ ಫಲಶ್ರುತಿಯಾಗಿ ಶ್ವೇತ ವರ್ಣ ಲಂಬೋರ್ಗಿನಿ ರೆವೆಂಟನ್ ಕಾರಿಗೆ ಹೋಲುವಂತಹ ನಕಲಿ ಕಾರನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಂಬೋ ಹೋಲುವ ನಕಲಿ ಕಾರು ನಿರ್ಮಿಸಿದ ಅಪ್ಪಟ ವಾಹನ ಪ್ರೇಮಿ

ಹಾಗೆಯೇ ಅಲ್ಬೇನಿಯಂ ರಾಷ್ಟ್ರೀಯ ಧ್ವಜಕ್ಕೆ ಹೋಲುವಂತಹ ಬಣ್ಣವನ್ನು ಇದಕ್ಕೆ ಬಳಿಯಲಾಗಿದೆ. ಪ್ರಸ್ತುತ ಕಾರಿಗೀಗ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.

Most Read Articles

Kannada
English summary
ಸೂಪರ್ ಕಾರುಗಳು ಕೋಟಿ ಗಟ್ಟಲೆ ರುಪಾಯಿಗಳಷ್ಟು ಬೆಲೆ ಬಾಳುವುದರಿಂದ ಜನ ಸಾಮಾನ್ಯರಿಗೆ ಕೈಗೆಟುಕುವುದು ಕಷ್ಟದ ಮಾತಾಗಿದೆ. ಇಂತಹ ಕಾರುಗಳನ್ನು ಖರೀದಿಸುವ ಯೋಚನೆಯನ್ನು ಬಿಟ್ಟು ಒಮ್ಮೆಯಾದರೂ ಚಾಲನೆ ಮಾಡುವ ಆಸೆ ಕೂಡಾ ಈಡೇರುವುದಿಲ್ಲ. ಹಾಗಿರುವಾಗ ಇಲ್ಲೊಬ್ಬ ವಾಹನ ಪ್ರೇಮಿ ನೈಜ ಸೂಪರ್ ಕಾರು ಗಿಟ್ಟಿಸಿಕೊಳ್ಳಲು ಸಾಧ್ಯವಾಗದಿದ್ದರೆ ಏನಂತೆ ? ಇದಕ್ಕೆ ಸಮಾನವಾದ ತದ್ರೂಪ ಕಾರನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ.
Story first published: Monday, November 14, 2016, 15:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X