ಪ್ರೀತಿಯ ಅಮ್ಮನಿಗೆ 90 ಲಕ್ಷದ 'ಜೀಪ್ ಗ್ರ್ಯಾಂಡ್ ಚೆರೋಕೀ' ಕಾರನ್ನು ಗಿಫ್ಟ್ ನೀಡಿದ ಖ್ಯಾತ ಗಾಯಕ
ಖ್ಯಾತ ಪಂಜಾಬಿ ಗಾಯಕ (Punjabi Singer) ಪರ್ಮಿಶ್ ವರ್ಮಾ(Parmish Verma) ಅವರು, ಪ್ರೀತಿಯ ಅಮ್ಮನಿಗೆ ನಿವೃತ್ತಿಯ ದಿನ ಜೀಪ್ ಗ್ರ್ಯಾಂಡ್ ಚೆರೋಕೀ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಐಷಾರಾಮಿ ಎಸ್‌ಯುವಿ ರೂ.90 ಲಕ್ಷ ಆನ್ - ರೋಡ್ ಬೆಲೆಯನ್ನು ಹೊಂದಿದೆ.
ಕಳೆದ ವರ್ಷ ಜೀಪ್ ಕಂಪನಿ ಐದನೇ ತಲೆಮಾರಿನ ಗ್ರ್ಯಾಂಡ್ ಚೆರೋಕೀ (Jeep Grand Cherokee) ಕಾರನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಎಸ್‌ಯುವಿ ಲಿಮಿಟೆಡ್ (ಒ) ಎಂಬ ಒಂದೇ ರೂಪಾಂತರದ ಆಯ್ಕೆಯಲ್ಲಿ ಸಿಗುತ್ತದೆ. 5 - ಆಸನ ವ್ಯವಸ್ಥೆಯನ್ನು ಹೊಂದಿರುವ ಚೆರೋಕೀ, ಡೈಮಂಡ್ ಬ್ಲ್ಯಾಕ್ ಕ್ರಿಸ್ಟಲ್, ರಾಕಿ ಮೌಂಟೇನ್ ಸೇರಿದಂತೆ 4 ಮೊನೊಟೊನ್ ಬಣ್ಣಗಳೊಂದಿಗೆ ಲಭ್ಯವಿದೆ.

ಜೀಪ್ ಗ್ರ್ಯಾಂಡ್ ಚೆರೋಕೀ ಎಸ್‌ಯುವಿ ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಇದು 2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 272 PS ಗರಿಷ್ಠ ಪವರ್ ಹಾಗೂ 400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 8 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ.
ಹೊಸ ಕಾರು 4x4 (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. ಜೊತೆಗೆ ಸ್ಯಾಂಡ್/ ಮಡ್ (Sand/ Mud), ಸ್ನೋ (Snow), ಆಟೋ (Auto), ಸ್ಪೋರ್ಟ್ (Sport) ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಒಳಗೊಂಡಿದ್ದು, ಈ ಕಾರಿನ ಗ್ರೌಂಡ್ ಕ್ಲಿಯರೆನ್ಸ್ 215 ಎಂಎಂ ಇದೆ. ವಿನ್ಯಾಸದ ದೃಷ್ಟಿಯಿಂದ ಜೀಪ್ ಗ್ರ್ಯಾಂಡ್ ಚೆರೋಕೀ ಸಾಕಷ್ಟು ಪ್ರೀಮಿಯಂ ಲುಕ್ ಪಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತದೆ.

ಜೀಪ್ ಗ್ರ್ಯಾಂಡ್ ಚೆರೋಕೀ ಎಸ್‌ಯುವಿ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 10.1 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 30ಕ್ಕೂ ಹೆಚ್ಚಿನ ಕನೆಕ್ಟ್ದ್ ಕಾರ್ ಟೆಕ್ ಫೀಚರ್ಸ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 9 - ಸ್ಪೀಕರ್ ಸೌಂಡ್ ಸಿಸ್ಟಮ್, ಹೆಡ್ಸ್ - ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ.
ಸುರಕ್ಷತೆಯ ದೃಷ್ಟಿಯಿಂದಲ್ಲೂ ಜೀಪ್ ಗ್ರ್ಯಾಂಡ್ ಚೆರೋಕೀ ಅತ್ಯುತ್ತಮವಾಗಿದ್ದು, 8 ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಒಳಗೊಂಡಿದೆ. ಈ ಎಸ್‌ಯುವಿಗೆ, ಆಡಿ ಕ್ಯೂ7 (Audi Q7), ಬಿಎಂಡಬ್ಲ್ಯೂ ಎಕ್ಸ್5 (BMW X5) ಪ್ರಬಲ ಪ್ತತಿಸ್ಪರ್ಧಿಯಾಗಿವೆ.
ಇನ್ನು, ಗಾಯಕ ಪರ್ಮಿಶ್ ವರ್ಮಾ ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವರ ಗ್ಯಾರೇಜ್ ನಲ್ಲಿ ಮರ್ಸಿಡಿಸ್-ಬೆನ್ಜ್ ಜಿ - ವ್ಯಾಗನ್ (Mercedes-Benz G - Wagen), ಮರ್ಸಿಡಿಸ್ - ಮೇಬ್ಯಾಕ್ ಎಸ್650 (Mercedes - Maybach S650) ಮತ್ತು ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್600 (Mercedes - Maybach GLS600) ಕಾರುಗಳಿವೆ. ಇದರೊಟ್ಟಿಗೆ ಜೀಪ್ ರಾಂಗ್ಲರ್, ಟಾಟಾ ಸಫಾರಿಯೂ ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








