ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಟೋಲ್‍ಗಳಲ್ಲಿ ವಾಹನ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್‌ಟ್ಯಾಗ್‌ ಕಡ್ಡಾಯಗೊಳಿಸಿದ್ದು, ವಾಹನ ಸವಾರರಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರೆಯದ ಕಾರಣ ಮತ್ತು ಹಲವಾರು ಗೊಂದಲಗಳಿಂದಾಗಿ ಫಾಸ್ಟ್‌ಟ್ಯಾಗ್‌ ಅಳವಡಿಕೆಗೆ ನೀಡಿರುವ ಗಡುವನ್ನು ಜನವರಿ 15ಕ್ಕೆ ವಿಸ್ತರಿಸಿದೆ.

ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಫಾಸ್ಟ್‌ಟ್ಯಾಗ್‌ ಅಳವಡಿಕೆಗೆ ನೀಡಿರುವ ಗಡುವು ಸಮೀಪಿಸುತ್ತಿದ್ದರೂ ರಾಜ್ಯ ವ್ಯಾಪ್ತಿಯ ಹೆದ್ದಾರಿಗಳಲ್ಲಿಸಂಚರಿಸುವ ಒಟ್ಟು ವಾಹನಗಳ ಪೈಕಿ ಅರ್ಧದಷ್ಟು ವಾಹನಗಳು ಫಾಸ್ಟ್‌ಟ್ಯಾಗ್‌ ಅಳವಡಿಸಿಕೊಂಡಿಲ್ಲ. ಹಾಗೆಯೇ, ಕೆಲವು ಟೋಲ್‌ ಪ್ಲಾಜಾಗಳು ಇನ್ನೂ ಹೊಸ ವ್ಯವಸ್ಥೆಗೆ ಸಿದ್ಧವಾಗಿಲ್ಲ. ಹಾಗಾಗಿ, ಇನ್ನೂ ಟೋಲ್‌ಗಳಲ್ಲಿ ಸಾಲುಗಟ್ಟಿದ ವಾಹನಗಳನ್ನು ಕಾಣಬಹುದಾಗಿದೆ.

ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ನಿಯಮಿತ ಟೋಲ್ ಪಾವತಿಗಳಿಗಿಂತ ಫಾಸ್ಟ್‌ಟ್ಯಾಗ್‌‍ನ ನೈಜ ಅನುಕೂಲಗಳ ಬಗ್ಗೆ ಜನರಿಗೆ ಹೆಚ್ಚಿನ ಅರಿವಿಲ್ಲ. ಆದರೆ ಫಾಸ್ಟ್‌ಟ್ಯಾಗ್‌‍ನಿಂದ ಕಳ್ಳತನವಾದ ವಾಹನ ಒಂದು ಕೆಲವೇ ಗಂಟೆಗಳಲ್ಲಿ ಮರಳಿ ಸಿಕ್ಕಿದೆ. ಪುಣೆ ಪೊಲೀಸರು ಕದ್ದ ಕಾರ್ ಒಂದನ್ನು ಕೆಲವೇ ಗಂಟೆಗಳಲ್ಲಿ ಫಾಸ್ಟ್‌ಟ್ಯಾಗ್‌ ಡೇಟಾವನ್ನು ಬಳಸಿ ಪತ್ತೆಹಚ್ಚಿದ್ದಾರೆ.

ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಹೊಚ್ಚ ಹೊಸ ಮಹೀಂದ್ರಾ ಸ್ಕಾರ್ಪಿಯೋವನ್ನು ರಾಜೇಂದ್ರ ಜಗ್ತಾಪ್ ಅವರು ಖರೀದಿಸಿದ್ದಾರೆ. ಇವರು ಕಾರ್ವೆ ನಗರ ಮೂಲದ ಬಿಲ್ಡರ್ ಆಗಿದ್ದಾರೆ. ಇವರ ಬಳಿ ಇದ್ದ ಸ್ಕಾರ್ಪಿಯೋ ಎಸ್‍‍ಯುವಿಯನ್ನು ಖದೀಮರು ಕಳ್ಳತನ ಮಾಡಿದ್ದಾರೆ.

ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಡಿಸೆಂಬರ್ 23ರ ಮುಂಜಾನೆ ಇವರು ಮಲಗಿರುವ ವೇಳೆ ತಮ್ಮ ಕಾರು ಟೋಲ್ ಮೂಲಕ ಸಾಗಿದ್ದಾಗ ಅದ್ದರಿಂದ ಸುಂಕ ಕಡಿತವಾಗಿರುವ ಮೆಸೇಜ್ ಮೊಬೈಲ್‍ಗೆ ಬಂದಿತ್ತು. ಬೆಳಗೆ ಸಮಯ 4:38ಕ್ಕೆ ತಲೇಗಾಂವ್ ಟೋಲ್ ಬೂತ್‍ನಿಂದ ಮೊದಲ ಮೆಸೇಜ್ ಬಂದಿತ್ತು.

ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಇದಾದ ನಂತರ ಬೆಳಗೆ 5:50ಕ್ಕೆ ಪನ್ವೆಲ್ (ಪುಣೆ-ಮುಂಬೈ ಹೆದ್ದಾರಿ) ಟೋಲ್‍‍ನಿಂದ ಮತ್ತೊಂದು ಮೆಸೇಜ್ ಬಂದಿತ್ತು. ಮುಂಚಾನೆ ಜಗ್ತಾಪ್ ಅವರು ನಿದ್ದೆಯಲ್ಲಿದ್ದ ಕಾರಣ ಮೊಬೈಲ್‍‍ಗೆ ಮೊದಲ ಮೆಸೇಜ್ ಬಂದಾಗ ಅವರಿಗೆ ಎಚ್ಚರವಾಗಿಲ್ಲ, ಎರಡನೇ ಮೆಸೇಜ್ ಬಂದಾಗ ಎಚ್ಚರವಾಗಿ ಮೊಬೈಲ್‍ಗೆ ಬಂದಿರುವ ಮೆಸೇಜ್ ಅನ್ನು ನೋಡಿದ್ದಾರೆ.

ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಮೆಸೇಜ್ ನೋಡುತ್ತಿದ್ದ ಹಾಗೇ ಜಗ್ತಾಪ್ ಅವರಿಗೆ ಶಾಕ್ ಕಾದಿದ್ದು. ಆರಂಭದಲ್ಲಿ ಸ್ಬಲ್ಪ ಗೊಂದಲ ಇದ್ದರೂ ನಂತರ ಅವರು ತಮ್ಮ ನಿವಾಸದ ಹೊರಗೆ ಧಾವಿಸಿ ಕಾರ್ ಅನ್ನು ಹುಡುಕಿದ್ದಾರೆ. ಅಷ್ಟರಲ್ಲಿ ಆಗಲೇ ಸ್ಕಾರ್ಪಿಯೋ ಕಾರ್ ನಾಪತ್ತೆಯಾಗಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಕಾಣಿಯಾಗಿರುವುದು ಖಚಿತವೆಂದು ಸಮಯ ವ್ಯರ್ಥ ಮಾಡದೆ ಜಗ್ತಾಪ್ ಮತ್ತು ಅವರ ಮಗ ವಾರ್ಜೆ ಮಾಲ್ವಾಡಿ ಪೊಲೀಸ್ ಠಾಣಿಗೆ ತೆರಳುತ್ತಾರೆ. ಕಾರ್ವೆನಗರದ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಗೋವಿಂದ್ ಪಂಧಾರೆ ಅವರು ಫಾಸ್ಟ್‌ಟ್ಯಾಗ್‌ ಜಿಪಿಎಸ್ ಮೂಲಕ ಪತ್ತೆಹಚ್ಚಲು ಪ್ರಾರಂಭಿಸಿದ್ದಾಗ ಸ್ಕಾರ್ಪಿಯೋ ಥಾನೆಯ ಭಾಗದಲ್ಲಿ ಎಲ್ಲೋ ಇದೆ ಎಂಬುವುದು ತಿಳಿದು ಬರುತ್ತದೆ.

MOST READ: ಕಲ್ಯಾಣ್ ಜ್ಯುವೆಲ್ಲರ್ಸ್ ಮಾಲೀಕನ ಬಳಿಯಿರುವ ಐಷಾರಾಮಿ ಕಾರು ಕಲೆಕ್ಷನ್ ಹೇಗಿದೆ ಗೊತ್ತಾ?

ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ತಕ್ಷಣ ಎಚ್ಚೆತ್ತ ಪೊಲೀಸ್ ಅಧಿಕಾರಿ ತನ್ನ ಸ್ನೇಹಿತನನ್ನು ಸಂಪರ್ಕಿಸಿ ವಾಹನ ಇರುವ ಸ್ಥಳದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿ ಕಾರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ನಿಜಕ್ಕೂ ಫಾಸ್ಟ್‌ಟ್ಯಾಗ್‌‍ನ ದೊಡ್ಡ ಪ್ರಯೋಜನೆಯಾಗಿದೆ.

MOST READ: ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ದೇಶದ್ಯಾಂತ ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಕಾಯುವಿಕೆ ಕೊನೆಗೊಳಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಪರಿಚಯಿಸಿದ್ದು, ವಾಹನ ಸವಾರರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಬಹುತೇಕ ವಾಹನ ಮಾಲೀಕರು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿಲ್ಲ.

ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಫಾಸ್ಟ್ ಟ್ಯಾಗ್ ಅಳವಡಿಕೆ ಹಾಗೂ ಸ್ಕ್ಯಾನಿಂಗ್ ನಲ್ಲಿ ಹಲವು ಲೋಪಗಳಿದ್ದು, ಇದರಿಂದಾಗಿ ಫಾಸ್ಟ್ ಟ್ಯಾಗ್ ಅಳವಡಿಸಿದ್ದರು ಟೋಲ್ ಗಳಲ್ಲಿ ಕಾಯುವಿಕೆ ಮುಂದುವರಿದಿದೆ. ಇದಕ್ಕೆ ಫಾಸ್ಟ್ ಟ್ಯಾಗ್ ವಿತರಿಸುತ್ತಿರುವ ಏಜೆನ್ಸಿಗಳು ಗುಣಮಟ್ಟದ ಟ್ಯಾಗ್ ವಿತರಣೆ ಮಾಡದ ಕಾರಣ ಹಾಗೂ ವಾಹನಗಳಲ್ಲಿ ಸರಿಯಾದ ಸ್ಥಳದಲ್ಲಿ ಟ್ಯಾಗ್ ಅಳವಡಿಸಿದ ಕಾರಣ ಟೋಲ್ ಗೇಟ್ ಗಳಲ್ಲಿ ಸ್ಕ್ಯಾನಿಂಗ್ ನಿಧಾನ ಗತಿಯಲ್ಲಿ ಸಂಭವಿಸುತ್ತಿದೆ ಎಂದು ಹೇಳಬಹುದು.

ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಫಾಸ್ಟ್‌ಟ್ಯಾಗ್‌ ಎನ್ನುವುದು ಪ್ರೀಪೇಯ್ಡ್‌ ಟ್ಯಾಗ್‌ ಆಗಿದ್ದು, ಹೆದ್ದಾರಿಯಲ್ಲಿ ಹಾದುಹೋಗುವ ವಾಹನಗಳ ಸುಂಕವು ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ. ವಾಹನ ಮಾಲೀಕರು ಫಾಸ್ಟ್‌ಟ್ಯಾಗ್‌ಗಳನ್ನು ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ, ಪೇಟಿಎಂ ಪೇಮೆಂಟ್‌ ಬ್ಯಾಂಕ್‌ಗಳು, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ಗಳಿಂದ ಖರೀದಿಸಬಹುದಾಗಿದೆ.

ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಅಷ್ಟು ಮಾತ್ರವಲ್ಲಇ-ಕಾಮರ್ಸ್‌ ತಾಣವಾದ ಅಮೆಜಾನ್‌ನಲ್ಲೂ ಫಾಸ್ಟ್‌ಟ್ಯಾಗ್‌ ಪಡೆಯಲು ಅವಕಾಶವಿದೆ. ವಾಹನದ ಮಾಲೀಕರು ಯಾವುದೇ ಟೋಲ್‌ಫ್ಲಾಜಾಗಳು ಇಲ್ಲವೇ, ಬ್ಯಾಂಕ್‌ ಶಾಖೆಗಳಿಗೆ ಖುದ್ದಾಗಿ ತೆರಳಿ ಫಾಸ್ಟ್‌ಟ್ಯಾಗ್‌ ಸಂಗ್ರಹಿಸಬಹುದು.

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

ವಿರಾಟ್ ಕೊಹ್ಲಿ ಮೊದಲೇ ಆಡಿ ಇಂಡಿಯಾ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿರುವುದರಿಂದ ಅವರ ಬಳಿ ಆಡಿ ಉತ್ಪಾದನೆಯ ಬಹುತೇಕ ಕಾರುಗಳ ಸಂಗ್ರಹವೇ ಇದ್ದು, 2015ರಲ್ಲಿ ಬರೋಬ್ಬರಿ ರೂ. 3 ಕೋಟಿ ಮೌಲ್ಯದ ಆರ್8 ವಿ10 ಮಾದರಿಯನ್ನು ತಮ್ಮ ಕಾರ್ ಕಲೆಕ್ಷನ್‌ನಲ್ಲಿ ಸೇರ್ಪಡೆಗೊಳಿಸಿದ್ದರು.

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

ಆದ್ರೆ ನಕಲಿ ಕಾರ್ ಸೆಂಟರ್ ಮೂಲಕ ಬಹುಕೋಟಿ ವಂಚನೆ ಮಾಡುತ್ತಿದ್ದ ಸಾಗರ್ ಥಕ್ಕರ್ ಎಂಬಾತ ಕೊಹ್ಲಿ ಯಾಮಾರಿಸಿ ರೂ.3 ಕೋಟಿ ಕಾರನ್ನು ಕೇವಲ ರೂ.60 ಲಕ್ಷಕ್ಕೆ ಖರೀದಿಸಿದ್ದ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

ಮುಂಬೈ ಮೂಲದ ಉದ್ಯಮಿಯಾಗಿರುವ ಸಾಗರ್ ಥಕ್ಕರ್ ಕೊಹ್ಲಿಗೆ ಯಾಮಾರಿಸಿದ್ದಲ್ಲದೇ ದುಬಾರಿ ಕಾರನ್ನು ತನ್ನ ಪ್ರೇಯಿಸಿಗೆ ಗಿಫ್ಟ್ ಆಗಿ ನೀಡಿದ್ದ. ಆದ್ರೆ ಸಾಗರ್ ನಡೆಸುತ್ತಿದ್ದ ನಕಲಿ ಕಾಲ್ ಸೆಂಟರ್ ಕಳ್ಳಾಟ ಬಯಲಿಗೆ ಬರುತ್ತಿದ್ದಂತೆ ನಾಪತ್ತೆಯಾದವನು ಇದುವರೆಗೂ ಪತ್ತೆಯಾಗಿಲ್ಲ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

ಹೀಗಾಗಿ ಥಾಣೆ ಪೊಲೀಸರು ಸದ್ಯಕ್ಕೆ ಸಾಗರ್ ಥಕ್ಕರ್‌ಗೆ ಸಂಬಂಧಿಸಿದ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಸಾಗರ್ ಪ್ರೇಯಿಸಿಗೆ ಕೊಹ್ಲಿಯಿಂದ ದುಬಾರಿ ಕಾರನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದು ಪತ್ತೆಯಾಗಿತ್ತು.

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

ಪ್ರಕರಣದ ವಿಚಾರಣೆ ಸಂಬಂಧ ಆಡಿ ಆರ್8 ವಿ10 ಐಷಾರಾಮಿ ಕಾರನ್ನು ವಶಕ್ಕೆ ಪಡೆದಿರುವ ಥಾಣೆ ಪೊಲೀಸರು ನಕಲಿ ಕಾರ್ ಸೆಂಟರ್ ವಂಚನೆ ಕುರಿತು ಪಿನ್ ಟು ಪಿನ್ ಮಾಹಿತಿ ಕಲೆಹಾಕುತ್ತಿದ್ದಾರೆ. ಆದ್ರೆ ಇಲ್ಲಿ ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಕೊಹ್ಲಿಯವರು ಕಾರು ಮಾರಾಟ ಮಾಡಿದ್ದರು ಕೂಡಾ ಕಾರಿನ ನೋಂದಣಿಯನ್ನು ಸಾಗರ್ ಹೆಸರಿಗೆ ವರ್ಗಾವಣೆ ಮಾಡಿರಲಿಲ್ಲ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

ಇದರಿಂದ ಆಡಿ ಕಾರು ಇದುವರೆಗೂ ಕೊಹ್ಲಿ ಹೆಸರಿನಲ್ಲೇ ಇದ್ದು, ಸಾಗರ್ ಮಾಡಿರುವ ಮೋಸದ ವ್ಯವಹಾರದಲ್ಲಿ ಕೊಹ್ಲಿ ಕೂಡಾ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಹೀಗಾಗಿ ರೂ. 3 ಕೋಟಿ ಮೌಲ್ಯದ ಕಾರು ಅನಾಥವಾಗಿ ಥಾಣೆ ಪೊಲೀಸ್ ಠಾಣೆಯ ಎದರು ತುಕ್ಕುಹಿಡಿಯುತ್ತಿದೆ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

ಕಳೆದ 2 ವರ್ಷಗಳ ಹಿಂದಷ್ಟೇ ಇದೇ ಕಾರಿನ ಮೂಲಕ ಸಾಕಷ್ಟು ಸುದ್ದಿಯಾಗಿದ್ದ ಕೊಹ್ಲಿ ಮುಂಬೈ, ದೆಹಲಿ ಸೇರಿದಂತೆ ಹೋದ ಕಡೆಗೆಲ್ಲಾ ಇದೇ ಕಾರಿನಲ್ಲಿ ಜಾಲಿ ರೈಡ್ ಮಾಡಿ ಕಾರು ಪ್ರಿಯರಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿದ್ದರು. ಆದ್ರೆ ಅದೇ ಕಾರು ಇದೀಗ ಗುಜುರಿಗೆ ಸೇರುವ ಪರಿಸ್ಥಿತಿ ಬಂದಿದೆ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

ಇನ್ನು ಆಡಿ ಆರ್8 ಭಾರತದಲ್ಲಿ ವಿ8 ಹಾಗೂ ವಿ10 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಪೈಕಿ ವಿ10 ಅತ್ಯಂತ ಶಕ್ತಿಶಾಲಿಯಾದ 5.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 602-ಬಿಎಚ್‌ಪಿ ಮತ್ತು 560ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

ಆಡಿ ಆರ್8 ವಿ10 ಸೂಪರ್ ಕಾರು ಕೇವಲ 3.5 ಸೆಕೆಂಡುಗಳಲ್ಲಿ 100 ಕೀ.ಮೀ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ ಗರಿಷ್ಠ 317 ಕೀ.ಮೀ. ವೇಗದಲ್ಲಿ ಚಲಿಸಬಲ್ಲದು.

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

ಆಡಿ ಆರ್8 ವಿ10 ಆವೃತ್ತಿಯ ಬೆಂಗಳೂರು ಆನ್ ರೋಡ್ ಬೆಲೆಯು ಬರೋಬ್ಬರಿ ರೂ.3.33 ಕೋಟಿ ರುಪಾಯಿಗಳಾಗಿದ್ದು, ಮುಂಭಾಗದಲ್ಲಿ ಪರಿಷ್ಕೃತ ಆಕ್ರಮಣಕಾರಿ ಗ್ರಿಲ್, ಎಲ್ ಇಡಿ ಬೆಳಕಿನ ಸೇವೆ ಹಾಗೂ ಸಂಸ್ಥೆಯ ವಿಶಿಷ್ಟ ಲೇಸರ್ ಲೈಟ್ ತಂತ್ರಜ್ಞಾನಗಳು ಈ ಕಾರಿನ ಪ್ರಮುಖ ಆಕರ್ಷಣೆಯಾಗಲಿದೆ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

ಇದಲ್ಲದೇ ಕ್ವಾಟ್ರೊ ಆಲ್ ವೀಲ್ ಚಾಲನಾ ವ್ಯವಸ್ಥೆಯ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೂ ಶಕ್ತಿ ರವಾನೆಯಾಗುವುದಲ್ಲದೇ 7 ಸ್ಪೀಡ್ ಎಸ್ ಟ್ರಾನಿಕ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಜೋಡಣೆಯೊಂದಿಗೆ ಹಿಂಭಾಗದ ವಿನ್ಯಾಸದಲ್ಲೂ ಕ್ರೀಡಾ ಕಾರಿಗೆ ಸ್ಪೂರ್ತಿಯಾಗುವ ರೀತಿಯಲ್ಲಿ ಏರೋಡೈನಾಮಿಕ್ ವಿನ್ಯಾಸ, ಎಲ್‌ಇಡಿ ಟೈಲ್ ಲೈಟ್ ಪಡೆದುಕೊಂಡಿದೆ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

ಈ ಮೂಲಕ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿಎಸ್, ಪೋರ್ಷೆ 911 ಟರ್ಬೊ ಹಾಗೂ ನಿಸ್ಸಾನ್ ಜಿಟಿಆರ್ ಮಾದರಿಗಳಿಗೆ ತೀವ್ರ ಪೈಪೋಟಿ ನೀಡುವ ಸೂಪರ್ ಕಾರು ಮಾದರಿಯಾಗಿದ್ದು, ರೇಸ್ ಟ್ರ್ಯಾಕ್‌ನಲ್ಲಿ ಈ ಕಾರಿಗೆ ತನ್ನದೇ ಆದ ಬೇಡಿಕೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

ವಿರಾಟ್ ಕೊಹ್ಲಿ ಬಳಿ ಆಡಿ ಆರ್8 ಹೊರತಾಗಿ ಎ8ಎಲ್ ಡಬ್ಲ್ಯು12 ಕ್ವಾಟ್ರೊ, ಆರ್8 ಎಲ್‌ಎಂಎಕ್ಸ್ ಸೀಮಿತ ಆವತ್ತಿ, ಆಡಿ ಆರ್8 ವಿ10 ಹಾಗೂ ಆಡಿ ಕ್ಯೂ7 ಕಾರುಗಳ ಒಡೆಯರಾಗಿದ್ದು, ಈ ಪೈಕಿ ಆರ್8 ಎಲ್‌ಎಂಎಕ್ಸ್ ಸೀಮಿತ ಆವತ್ತಿಯು ಎಲ್ ಇಡಿ ಹಾಗೂ ಲೇಸರ್ ಹೈ ಬೀಮ್ ಲೈಟಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ಒಡೆತನದ ರೂ. 3 ಕೋಟಿ ಐಷಾರಾಮಿ ಕಾರು..!

5.2 ಲೀಟರ್ ವಿ10 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಆಡಿ ಆರ್ ಎಲ್ ಎಂಎಕ್ಸ್ ಮಾದರಿಯು ಬರೋಬ್ಬರಿ 570-ಬಿಎಚ್‌ಪಿ ಉತ್ಪಾದಿಸುತ್ತದೆ. 7 ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್ ಸಹ ಇದರಲ್ಲಿರಲಿದ್ದು, ಆಲ್ ವೀಲ್ ಡ್ರೈವಿಂಗ್ ವ್ಯವಸ್ಥೆಯನ್ನು ಹೊಂದಿದೆ.

Most Read Articles

Kannada
English summary
Stolen Mahindra Scorpio recovered in 5 hours - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X