ಶಕ್ತಿಶಾಲಿ, ವೇಗವಾಗಿ ಚಲಿಸುವ ಬೈಕ್ ಹಿಂದುಗಡೆ ಗಿನ್ನೆಸ್ ದಾಖಲೆ ಕಸರತ್ತು

By Nagaraja

ನಾವು ಹಲವು ವಿಧದ ಗಿನ್ನೆಸ್ ದಾಖಲೆಗಳನ್ನ ನೋಡಿರುತ್ತೇವೆ. ಬೈಕ್ ನಲ್ಲಿ ಕುಳಿತುಕೊಂಡು ಸರ್ರನೆ ಗಾಡಿ ಓಡಿಸುವ ಕೆಲಸವನ್ನು ಎಲ್ಲ ವೃತ್ತಿ ಪರ ಚಾಲಕರು ಮಾಡುತ್ತಾರೆ. ಇದು ಅಂಥಹ ಮಹಾ ದಾಖಲೆಯೇನು ಅಲ್ಲ ಬಿಡಿ!

Also Read: 360 ಡಿಗ್ರಿಯಲ್ಲಿ ಸುತ್ತುವ ಕಾರು

ಯಾಕೆ ಗೊತ್ತಾ? ನಾವಿಂದು ಪರಿಚಯಿಸಲಿರುವ ಚಾಲಕ ಶರವೇಗದಲ್ಲಿ ಚಲಿಸುವ ಬೈಕ್ ಹಿಂಬದಿಯಲ್ಲಿ ನಿಂತುಕೊಂಡು ವೇಗವಾಗಿ ಚಲಿಸುತ್ತಾನೆ. ಒಂದೆಡೆ ವೇಗವಾಗಿ ಚಲಿಸುವ ಬೈಕ್ ಸಮತೋಲನ ಕಾಪಾಡಿಕೊಳ್ಳುವುದು, ಇನ್ನೊಂದೆಡೆ ಕಾಡ್ಗಿಚ್ಚಿನಂತೆ ಎದ್ದೇಳುವ ಬೆಂಕಿಯ ಕಿಡಿಗಳು ಇವೆಲ್ಲದರ ನಡುವೆ ತನ್ನ ಜೀವವನ್ನೇ ಪಣತೊಟ್ಟಿರುವ ಈ ಧೈರ್ಯವಂತ ಚಾಲಕ ಮಹಾ ದಾಖಲೆ ಸಾಧಿಸಿಯೇ ತೋರಿಸಿದ್ದಾರೆ.

ಶಕ್ತಿಶಾಲಿ, ವೇಗವಾಗಿ ಚಲಿಸುವ ಬೈಕ್ ಹಿಂದುಗಡೆ ಗಿನ್ನೆಸ್ ದಾಖಲೆ ಕಸರತ್ತು

ಈ ಮೊದಲೇ ತಿಳಿಸಿರುವಂತೆಯೇ ನುರಿತ ತರಬೇತಿ ಪಡೆದ ವೃತ್ತಿಪರ ಚಾಲಕರಿಂದ ಮಾತ್ರ ಇಂತಹದೊಂದು ದಾಖಲೆ ಮಾಡಲು ಸಾಧ್ಯ. ಬ್ರಿಟನ್ ಲಿವರ್ ಪೂಲ್ ಮೂಲದ ಗ್ಯಾರಿ ರೊತ್ ವೆಲ್ (Gary Rothwell) ಸಾಧ್ಯವಾಗದ ಈ ದಾಖಲೆ ಮಾಡಿ ತೋರಿಸಿದ್ದಾರೆ.

ಶಕ್ತಿಶಾಲಿ, ವೇಗವಾಗಿ ಚಲಿಸುವ ಬೈಕ್ ಹಿಂದುಗಡೆ ಗಿನ್ನೆಸ್ ದಾಖಲೆ ಕಸರತ್ತು

ವಿಶ್ವದ ಅತ್ಯಂತ ಶಶ್ತಿಶಾಲಿ ನಿರ್ಮಾಣ ಬೈಕ್ ಸುಜುಕಿ ಹಯಾಬುಸ ಜಿಎಕ್ಸ್ 1300ನಲ್ಲಿ ಗಿನ್ನೆಸ್ ದಾಖಲೆ ಬರೆದಿರುವುದು ಗ್ಯಾರಿ ಅವರ ಮಗದೊಂದು ಸಾಧನೆಯಾಗಿದೆ.

ಶಕ್ತಿಶಾಲಿ, ವೇಗವಾಗಿ ಚಲಿಸುವ ಬೈಕ್ ಹಿಂದುಗಡೆ ಗಿನ್ನೆಸ್ ದಾಖಲೆ ಕಸರತ್ತು

ಅಂದ ಹಾಗೆ 1999ನೇ ಇಸವಿಯಲ್ಲೇ ಗ್ಯಾರಿ ಇಂತಹದೊಂದು ದಾಖಲೆಗೆ ಅರ್ಹವಾಗಿದ್ದಾರೆ. ಇದಕ್ಕಾಗಿ ಬ್ರಿಟನ್‌ನ ಲೀಸೆಸ್ಟರ್ ನಲ್ಲಿರುವ ಬ್ರಂಟಿನ್‌ಥಾರ್ಪೆ ಪ್ರೊವಿಂಗ್ ಮೈದಾನವನ್ನು (Bruntingthorpe proving ground) ಆಯ್ಕೆ ಮಾಡಲಾಗಿತ್ತು.

ಶಕ್ತಿಶಾಲಿ, ವೇಗವಾಗಿ ಚಲಿಸುವ ಬೈಕ್ ಹಿಂದುಗಡೆ ಗಿನ್ನೆಸ್ ದಾಖಲೆ ಕಸರತ್ತು

ಜಗತ್ತಿನ ಅತ್ಯಂತ ಪವರ್ ಫುಲ್ ಬೈಕ್ ಸುಜುಕಿ ಹಯಾಬುಸ ಜಿಎಕ್ಸ್ 1300 ಗಂಟೆಗೆ 250 ಕೀ.ಮೀ.ಗಳಿಗೂ ಹೆಚ್ಚು ವೇಗದಲ್ಲಿ ಸಾಗುವಾಗ ಅದನ್ನು ಹಿಂಬದಿಯಿಂದ ಹಿಡಿದುಕೊಂಡು ಸಮತೋಲನ ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲೆನಿಸಿತ್ತು.

ಶಕ್ತಿಶಾಲಿ, ವೇಗವಾಗಿ ಚಲಿಸುವ ಬೈಕ್ ಹಿಂದುಗಡೆ ಗಿನ್ನೆಸ್ ದಾಖಲೆ ಕಸರತ್ತು

ಇದಕ್ಕಾಗಿ ಬೈಕ್ ನಲ್ಲಿ ವಿಶೇಷ ಮಾರ್ಪಾಡುಗಳನ್ನು ಗ್ಯಾರಿ ಮಾಡಿದ್ದರು. ಜೀವನವನ್ನು ಸರಳವಾಗಿ ಸ್ವೀಕರಿಸುವ ಗ್ಯಾರಿ ಅವರು ಸೀಟು ಹಿಂದುಗಡೆ ಗ್ರಾಬ್ ರೈಲ್ ಹಿಡಿದುಕೊಂಡೇ ಆಕ್ಸಿಲೇಟರ್ ಏರಿಸಿದ್ದರು.

ಶಕ್ತಿಶಾಲಿ, ವೇಗವಾಗಿ ಚಲಿಸುವ ಬೈಕ್ ಹಿಂದುಗಡೆ ಗಿನ್ನೆಸ್ ದಾಖಲೆ ಕಸರತ್ತು

ಅಭ್ಯಾಸ ಪ್ರಯತ್ನದಲ್ಲೇ 148 ಮೈಲು ವೇಗವನ್ನು ದಾಟಿರುವ ಗ್ಯಾರಿ, ಬಳಿಕ ನಡೆದ ನೈಜ ಚಾಲನೆಯಲ್ಲಿ ಗಂಟೆಗೆ 156.3 ಮೈಲು ವೇಗವನ್ನು (251.54 ಕೀ.ಮೀ.) ದಾಖಲಿಸಿದ್ದರು.

ಶಕ್ತಿಶಾಲಿ, ವೇಗವಾಗಿ ಚಲಿಸುವ ಬೈಕ್ ಹಿಂದುಗಡೆ ಗಿನ್ನೆಸ್ ದಾಖಲೆ ಕಸರತ್ತು

ಚಲಿಸುತ್ತಿರುವ ಬೈಕ್ ನಿಂದಲೇ ಹಿಂದಕ್ಕೆ ಹಾರಿ ಸಮತೋಲನ ಕಾಪಾಡಿಕೊಂಡ ಗ್ಯಾರಿ ನೆಲಕ್ಕೆ ಕಾಲನ್ನು ಸ್ಪರ್ಶಿಸುತ್ತಾರೆ. ಇಲ್ಲಿ ನೂರು ಡಿಗ್ರಿಗಿಂತಲೂ ಹೆಚ್ಚಿನ ಉಷ್ಣತೆಯನ್ನು ಎದುರಿಸಲು ವಿಶೇಷ ಬೂಟ್ ಗಳನ್ನು ಧರಿಸುತ್ತಾರೆ. ಈ ವೇಳೆಯಲ್ಲಿ ಎದ್ದೇಳುವ ಬೆಂಕಿಯ ಕಿಡಿಗಳು ನೋಡುವ ಜನರಿಗೆ ರೋಚಕ ಕ್ಷಣವನ್ನು ಸೃಷ್ಟಿ ಮಾಡುತ್ತದೆ.

ಶಕ್ತಿಶಾಲಿ, ವೇಗವಾಗಿ ಚಲಿಸುವ ಬೈಕ್ ಹಿಂದುಗಡೆ ಗಿನ್ನೆಸ್ ದಾಖಲೆ ಕಸರತ್ತು

ಅತಿ ವೇಗವಾಗಿ ಚಲಿಸುತ್ತಿರುವ ಬೈಕ್ ಅನ್ನು ಹಿಂಬದಿಯಿಂದ ನಿಯಂತ್ರಿಸುವುದು. ಎಡಕ್ಕೆ ಹಾಗೂ ಬಲಕ್ಕೆ ತಿರುಗಿಸುವುದು ಬಳಿಕ ಆಕ್ಸಿಲೇಟರ್ ನೀಡುವುದು ಇವೆಲ್ಲಕ್ಕೂ ಅದ್ಭುತ ಕೌಶಲ್ಯ ಬೇಕಾಗುತ್ತದೆ. ಅಂತಿಮವಾಗಿ ಇವೆಲ್ಲವೂ ಸಾಧ್ಯ ಎಂಬುದನ್ನು ಗ್ಯಾರಿ ತೋರಿಸಿಕೊಟ್ಟಿದ್ದಾರೆ.

ಶಕ್ತಿಶಾಲಿ, ವೇಗವಾಗಿ ಚಲಿಸುವ ಬೈಕ್ ಹಿಂದುಗಡೆ ಗಿನ್ನೆಸ್ ದಾಖಲೆ ಕಸರತ್ತು

ಎಲ್ಲ ಆದ ಬಳಿಕ ಬೈಕ್‌ಗೆ ಮತ್ತೆ ಜಂಪ್ ಮಾಡುವ ಗ್ಯಾರಿ ರೊತ್‌ವೆಲ್‌ಗೆ ಕೊನೆಯ ವರೆಗೂ ತಾವು ನೂತನ ದಾಖಲೆ ಸ್ಥಾಪನೆ ಮಾಡಿದ್ದಾರೆ ಎಂಬುದರ ಬಗ್ಗೆ ಅರಿವಿರುವುದಿಲ್ಲ. ಆದರೆ ಇದನ್ನು ಗಿನ್ನೆಸ್ ಅಧಿಕೃತರು ಖಚಿತಪಡಿಸಿದಾಗ ಅವರ ಹರ್ಷಕ್ಕೆ ಪಾರವೇ ಇರುವುದಿಲ್ಲ.

ಶಕ್ತಿಶಾಲಿ, ವೇಗವಾಗಿ ಚಲಿಸುವ ಬೈಕ್ ಹಿಂದುಗಡೆ ಗಿನ್ನೆಸ್ ದಾಖಲೆ ಕಸರತ್ತು

ಗ್ಯಾರಿ ಅವರ ಮಾತುಗಳಿಂದಲೇ ಇದು ವ್ಯಕ್ತವಾಗುತ್ತಿದ್ದು, "ಇದೊಂದು ತುಂಬಾನೇ ಅಪಾಯಕಾರಿ ಪ್ರಯತ್ನವಾಗಿದ್ದು, ನನ್ನ ಹೆತ್ತವರಿಗಂತೂ ತುಂಬಾನೇ ಭಯ ಕಾಡಿತ್ತು" ಎಂದಿದ್ದಾರೆ.

ಶಕ್ತಿಶಾಲಿ, ವೇಗವಾಗಿ ಚಲಿಸುವ ಬೈಕ್ ಹಿಂದುಗಡೆ ಗಿನ್ನೆಸ್ ದಾಖಲೆ ಕಸರತ್ತು

ಒಟ್ಟಿನಲ್ಲಿ ಸಾಧನೆ ಮಾಡುವ ಛಲವಿದ್ದಲ್ಲಿ ಏನೇ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಂದೊಂದು ನೈಜ ಉದಾಹರಣೆಯಾಗಿದೆ. ಯಾಕೆಂದರೆ ಈ ಲೋಕದಲ್ಲಿ ಸಾಧನೆ ಮಾಡುವವರಿಗೆ ಬರವಿಲ್ಲ. ಇಂದಿನ ದಾಖಲೆ ನಾಳೆ ಅಥವಾ ನಾಳಿದ್ದು ಇನ್ನೊಬ್ಬರ ನಾಮದ ಭಾಗವಾಗಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಅವಿಶ್ವಸನೀಯ ವಿಡಿಯೋ ವೀಕ್ಷಿಸಿ

More from DriveSpark

Article Published On: Friday, November 20, 2015, 11:45 [IST]
English summary
Fastest Speed Dragged Behind A Motorcycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+