ವಿಶ್ವದಲ್ಲೇ ಭಾರತ ನಂ.1 ಆದ್ರೆ ಇದರಲ್ಲಿ ನಂ.8: ನಗರಗಳಲ್ಲಿ ದೆಹಲಿ ನಂ.1, ಬೆಂಗಳೂರು ನಂ.2

ಭಾರತದಲ್ಲಿ ಪ್ರತಿ ಕುಟುಂಬಕ್ಕೊಂದು ದ್ವಿಚಕ್ರ ವಾಹನ ಅನಿವಾರ್ಯವಾಗಿಬಿಟ್ಟಿದೆ. ಯಾವಮಟ್ಟಿಗೆ ಅಂದ್ರೆ ಇತ್ತೀಚಿನ ರಸ್ತೆ ಸಾರಿಗೆ ವರ್ಷದ ಪುಸ್ತಕದ ಪ್ರಕಾರ ಭಾರತವು ಗರಿಷ್ಠ ನೋಂದಾಯಿತ ದ್ವಿಚಕ್ರ ವಾಹನಗಳನ್ನು ಹೊಂದಿರುವುದಾಗಿ ವರದಿಯಾಗಿದೆ. ಇದು ಭಾರತವನ್ನು ಆಟೋ ವಲಯದಲ್ಲಿ ಅತಿದೊಡ್ಡ ಮಾರುಕಟ್ಟೆಯಾಗಿ ಬೆಳೆದು ನಿಲ್ಲುವಂತೆ ಮಾಡಿದೆ.

ವರದಿಯು ಅಂತರರಾಷ್ಟ್ರೀಯ ರಸ್ತೆ ಒಕ್ಕೂಟದ 2020 ರ ಡೇಟಾವನ್ನು ಉಲ್ಲೇಖಿಸಿದೆ, ಇದನ್ನೇ ದೇಶಗಳಾದ್ಯಂತ ಉಲ್ಲೇಖವಾಗಿ ಬಳಸಲಾಗುತ್ತದೆ. ಇದೇ ವರದಿಯ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಹೊಂದುವ ಮೂಲಕ ಭಾರತ ಮೊದಲ ಸ್ಥಾನದಲ್ಲಿದ್ದರೇ, ಎರಡನೇ ಸ್ಥಾನದಲ್ಲಿ ಇಂಡೋನೇಷ್ಯಾ ಇದೆ ಎಂದು ವರದಿ ತಿಳಿಸಿದೆ.

highest-number-two-wheeler-registrations-india-no-1

ಹಾಗೆಯೇ ವಿಶ್ವದಲ್ಲೇ ಅತಿ ಹೆಚ್ಚು ಕಾರುಗಳನ್ನು ಹೊಂದಿರುವ ದೇಶಗಳನ್ನು ನೋಡಿಕೊಂಡರೆ, ಪ್ರಯಾಣಿಕ ಕಾರು ಸಂಖ್ಯೆಯಲ್ಲಿ ಚೀನಾ, ಅಮೆರಿಕಾ ಹಾಗೂ ಜಪಾನ್ ಮೊದಲ ಮೂರು ಸ್ಥಾನಗಳಲ್ಲಿದ್ದರೇ ಭಾರತ ಎಂಟನೆ ಸ್ಥಾನದಲ್ಲಿದೆ. ಒಟ್ಟಾರೆ ಭಾರತವು 2020 ರಲ್ಲಿ 32.63 ಕೋಟಿ ವಾಹನಗಳನ್ನು ಹೊಂದಿತ್ತು ಎಂದು ವರದಿಯ ಮೂಲಕ ತಿಳಿದುಬಂದಿದೆ.

ಈ ನಿರ್ದಿಷ್ಟ ಅಂಕಿಅಂಶಗಳನ್ನು ಪಡೆಯಲು ದೇಶದ ಎಲ್ಲಾ ರಾಜ್ಯಗಳಿಂದ ಡೇಟಾವನ್ನು ಸಂಗ್ರಹಿಸಲಾಗಿದೆ. ಈ ಡೇಟಾ ಪ್ರಕಾರ 2020 ರಲ್ಲಿದ್ದ 32.63 ಕೋಟಿ ವಾಹನಗಳ ಪೈಕಿ ಶೇ 75 ರಷ್ಟು ದ್ವಿಚಕ್ರ ವಾಹನಗಳೇ ಇವೆ ಎಂಬುದು ತಿಳಿದುಬಂದಿದೆ. ಅಲ್ಲದೇ ಕಳೆದ 3 ವರ್ಷಗಳಲ್ಲಿ ದೇಶದಲ್ಲಿ ಬರೋಬ್ಬರಿ ಎರಡು ಕೋಟಿಗಿಂತ ಹೆಚ್ಚು ವಾಹನಗಳು ನೋಂದಾಯಿಸಲ್ಪಟ್ಟಿವೆ.

highest-number-two-wheeler-registrations-india-no-1

ಈ ಲೆಕ್ಕಾಚಾರಗಳ ಮೂಲಕ ಕಳೆದ ಜುಲೈವರೆಗಿನ ಒಟ್ಟಾರೆ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಸುಮಾರು 34.8 ಕೋಟಿ ವಾಹನಗಳು ನೋಂದಾಯಿಸಲ್ಪಟ್ಟಿವೆ ಎಂದು ಸರ್ಕಾರದ ವಾಹನ್ ಪೋರ್ಟಲ್ ತೋರಿಸುತ್ತಿದೆ. ಇನ್ನು ದೇಶದಲ್ಲೇ 3.78 ಕೋಟಿ ಅತಿಹೆಚ್ಚು ವಾಹನಗಳನ್ನು ಹೊಂದಿರುವ ರಾಜ್ಯವಾಗಿ ಮಹಾರಾಷ್ಟ್ರ ಹೊರಹೊಮ್ಮಿದೆ.

ಎರಡನೇ ಸ್ಥಾನದಲ್ಲಿ 3.49 ಕೋಟಿ ವಾಹನಗಳೊಂದಿಗೆ ಉತ್ತರ ಪ್ರದೇಶವಿದ್ದರೇ, 3.21 ಕೋಟಿ ವಾಹನಗಳೊಂದಿಗೆ ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ಇನ್ನು ನಗರಗಳ ವಿಚಾರಕ್ಕೆ ಬಂದರೆ ದೆಹಲಿ ಹಾಗೂ ಬೆಂಗಳೂರು ಮೊದಲೆರಡು ಸ್ಥಾನಗಳನ್ನು ಆಕ್ರಮಿಸಿವೆ. ದೆಹಲಿಯಲ್ಲಿ ಸುಮಾರು 1.18 ಕೋಟಿ ನೋಂದಾಯಿತ ವಾಹನಗಳಿದ್ದರೆ, ಬೆಂಗಳೂರು 96.4 ಲಕ್ಷ ವಾಹನಗಳನ್ನು ಹೊಂದಿದೆ.

highest-number-two-wheeler-registrations-india-no-1

ಮೊದಲೇ ಹೇಳಿದಂತೆ ಒಟ್ಟಾರೆ ವಾಹಗಳಲ್ಲಿ ಶೇ75 ರಷ್ಟು ದ್ವಿಚಕ್ರ ವಾಹನಗಳೇ ಇವೆ. ನಮ್ಮ ನಗರಗಳು ಮತ್ತು ಸಣ್ಣ ಪಟ್ಟಣಗಳಾದ್ಯಂತ ನಾವು ಹೆಚ್ಚು ದ್ವಿಚಕ್ರ ವಾಹನಗಳನ್ನು ಸೇರಿಸುತ್ತಿದ್ದೇವೆ. ದ್ವಿಚಕ್ರ ವಾಹನಗಳ ಪಾಲು ಹೆಚ್ಚುತ್ತಿದ್ದಷ್ಟು ಹೆಚ್ಚಿನ ಸಂಖ್ಯೆಯ ಸಾವಿನ ಅಪಘಾತಗಳು ಕೂಡ ಹೆಚ್ಚಾಗಿವೆ. ಕಾರುಗಳು ಅಪಘಾತವಾದ್ರು ಸಾವಿನ ಪ್ರಮಾಣ ಕಡಿಮೆಯಿದೆ.

ಭಾರತದಲ್ಲಿ, 2021 ರಲ್ಲಿ ಸಾವನ್ನಪ್ಪಿರುವ ದ್ವಿಚಕ್ರ ವಾಹನ ಸವಾರರ ಸಂಖ್ಯೆಯು ಸತತವಾಗಿ 69,385 ಕ್ಕೆ ಏರಿದೆ. ಇದು ಎಲ್ಲಾ ರಸ್ತೆ ಅಪಘಾತಗಳ ಸಾವುಗಳಲ್ಲಿ ಶೇ45 ರಷ್ಟಾಗಿದೆ. ಶೇ50 ರಷ್ಟು ವಾಹನಗಳು ದ್ವಿಚಕ್ರ ವಾಹನಗಳಾಗಿರುವ ಮಲೇಷ್ಯಾದಂತಹ ಕೆಲವು ದೇಶಗಳು ಅಪಘಾತಗಳನ್ನು ತಡೆಯಲು ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಲೇನ್‌ಗಳನ್ನು ರಚಿಸಲು ಮುಂದಾಗಿವೆ. ಭಾರತ ಕೂಡ ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

Article Published On: Tuesday, July 25, 2023, 12:00 [IST]
English summary
Highest number two wheeler registrations india no 1
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+