ಚೀನಾ ಚಂಡಮಾರುತ: ನದಿಯಲ್ಲಿ ಮುಳುಗಿದ ಹಡಗು; 400 ಪ್ರಯಾಣಿಕರು ನಾಪತ್ತೆ?

Written By:

ಬೆಚ್ಚಿ ಬೀಳಿಸುವ ಸುದ್ದಿಯೊಂದರಲ್ಲಿ 458 ಪ್ರಯಾಣಿಕರನ್ನು ಸಾಗಿಸುತ್ತಿದ್ದ ಹಡಗೊಂದು ಮುಳುಗಿರುವ ಘಟನೆ ಪೂರ್ವ ಚೀನಾದಿಂದ ವರದಿಯಾಗಿದೆ. ಚೀನಾದ ಅತಿ ಉದ್ದವಾದ ನದಿ ಯಾಂಗ್‌ಝಿ (yangtze river) ನದಿಯಲ್ಲಿ ಈ ಅವಘಡ ಸಂಭವಿಸಿದೆ.

ಪ್ರಾಥಮಿಕ ವರದಿಗಳ ಪ್ರಕಾರ ಸೋಮವಾರ ರಾತ್ರಿ ಬೀಸಿದ ಪ್ರಬಲ ಚಂಡಮಾರುತಕ್ಕೆ ಸಿಕ್ಕಿ ಹಾಕಿಕೊಂಡ ಹಡಗು ಕ್ಷಣಾರ್ಧದಲ್ಲೇ ನೀರಿನೊಳಗೆ ಮುಳುಗಿತ್ತು. ಈಗ ಪ್ರತಿಕೂಲ ಹಮಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆಗೂ ಹಿನ್ನೆಡೆಯಾಗಿದೆ.

ಚೀನಾ ಚಂಡಮಾರುತ: ನದಿಯಲ್ಲಿ ಮುಳುಗಿದ ಹಡಗು; 400 ಪ್ರಯಾಣಿಕರು ನಾಪತ್ತೆ?

ಇದುವರೆಗೆ ಕ್ಯಾಪ್ಟನ್ ಹಾಗೂ ಮುಖ್ಯ ಎಂಜಿನಿಯರ್ ಸೇರಿದಂತೆ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಸುರಕ್ಷಿತವಾಗಿ ದಡ ಸೇರಿಸಲಾಗಿದೆ.

ಚೀನಾ ಚಂಡಮಾರುತ: ನದಿಯಲ್ಲಿ ಮುಳುಗಿದ ಹಡಗು; 400 ಪ್ರಯಾಣಿಕರು ನಾಪತ್ತೆ?

ಬಳಿಕ ಪ್ರತ್ಯಕ್ಷದರ್ಶಿ ಹಡಗಿನ ಕ್ಯಾಪ್ಟನ್ ನೀಡಿರುವ ಮಾಹಿತಿಯಂತೆ, ಪ್ರಭಾವಿ ಚಂಡಮಾರುತ ಬೀಸಿದ ಒಂದೆರಡು ನಿಮಿಷದಲ್ಲೇ ಹಡಗು ಮುಳುಗಿತ್ತು. ಇದರಿಂದಾಗಿ ಯಾತ್ರಿಕರಿಗೆ ಲೈಫ್ ಜಾಕೆಟ್ ಧರಿಸುವಷ್ಟು ಸಮಯ ಲಭಿಸದಂತಾಗಿದೆ.

ಚೀನಾ ಚಂಡಮಾರುತ: ನದಿಯಲ್ಲಿ ಮುಳುಗಿದ ಹಡಗು; 400 ಪ್ರಯಾಣಿಕರು ನಾಪತ್ತೆ?

ಪ್ರಾಥಮಿಕ ವರದಿಯ ಪ್ರಕಾರ ಹಡಗಿನಲ್ಲಿ ಯಾವುದೇ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿಲ್ಲ. ಹಾಗೆಯೇ ಹಡಗು ಅತಿಯಾದ ಭಾರವನ್ನಾಗಲಿ ಅಥವಾ ಅಗತ್ಯ ಜೀವ ರಕ್ಷಣೆಗೆ ಅಗತ್ಯ ಲೈಫ್ ಜಾಕೆಟ್ ಕೂಡಾ ಹೊಂದಿತ್ತು ಎಂಬುದು ತಿಳಿದು ಬಂದಿದೆ.

ಚೀನಾ ಚಂಡಮಾರುತ: ನದಿಯಲ್ಲಿ ಮುಳುಗಿದ ಹಡಗು; 400 ಪ್ರಯಾಣಿಕರು ನಾಪತ್ತೆ?

ಅಷ್ಟೇ ಯಾಕೆ ರಕ್ಷಣೆಗೊಳಗಾದವರೆಲ್ಲ ಲೈಫ್ ಜಾಕೆಟ್ ಧರಿಸಿರುವುದು ಕಂಡುಬಂದಿದ್ದು, ಪ್ರಕೃತಿ ವಿಕೋಪದಿಂದಾಗಿಯೇ ಇಷ್ಟು ದೊಡ್ಡ ವಿಪತ್ತು ಸಂಭವಿಸಿರುವುದು ಸ್ಪಷ್ಟವಾಗಿದೆ.

ಚೀನಾ ಚಂಡಮಾರುತ: ನದಿಯಲ್ಲಿ ಮುಳುಗಿದ ಹಡಗು; 400 ಪ್ರಯಾಣಿಕರು ನಾಪತ್ತೆ?

ಈಸ್ಟರ್ನ್ ಸ್ಟಾರ್ ಎಂಬ ಹಡಗು ಅಘಡಕ್ಕೀಡಾಗಿದೆ. ಇದು ಪೂರ್ವ ಚೀನಾದ ನಾಂಜಿಂಗ್‌ನಿಂದ (Nanjing) ನೈಋತ್ಯ ಚೀನಾದ ಚಾಂಗ್‌ಕಿಂಗ್‌ನತ್ತ (Chongqing) ಸಂಚರಿಸುತ್ತಿತ್ತು. ಇದರಲ್ಲಿ 406 ಪ್ರಯಾಣಿಕರು, 5 ಟ್ರಾವೆಲ್ ಸಲಹೆಗಾರರು ಹಾಗೂ 47 ಸಿಬ್ಬಂದಿಗಳಿದ್ದರು.

ಚೀನಾ ಚಂಡಮಾರುತ: ನದಿಯಲ್ಲಿ ಮುಳುಗಿದ ಹಡಗು; 400 ಪ್ರಯಾಣಿಕರು ನಾಪತ್ತೆ?

ಬಹುತೇಕರು ಪ್ರಯಾಣಿಕರು ಹಿರಿಯ ನಾಗರಿಕರಾಗಿದ್ದು, 50ರಿಂದ 80 ವರ್ಷ ಪ್ರಾಯವುಳ್ಳವರಾಗಿದ್ದಾರೆ. ಇವರೆಲ್ಲರೂ ಶಾಂಘೈ ಟ್ರಾವೆಲ್ ಏಜೆನ್ಸಿ ಏರ್ಪಡಿಸಿದ್ದ ಪ್ರವಾಸದಲ್ಲಿ ಭಾಗಿಯಾಗಿದ್ದರು ಎಂಬುದು ತಿಳಿದು ಬಂದಿದೆ. ಇದರಿಂದಾಗಿ ಸ್ವಯಂ ರಕ್ಷಣಾ ಕೂಡಾ ವಿಫಲವಾಗಿದೆ.

ಚೀನಾ ಚಂಡಮಾರುತ: ನದಿಯಲ್ಲಿ ಮುಳುಗಿದ ಹಡಗು; 400 ಪ್ರಯಾಣಿಕರು ನಾಪತ್ತೆ?

ಈಗಾಗಲೇ 50ರಷ್ಟು ರಕ್ಷಣಾ ಹಡಗುಗಳು, 1,000 ಮಿಲಿಟರಿ ಸಿಬ್ಬಂದಿಗಳು, 140 ವೈದ್ಯಕೀಯ ಸೇವೆ ಹಾಗೂ 30 ಅಂಬುಲೆನ್ಸ್ ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ.

ಚೀನಾ ಚಂಡಮಾರುತ: ನದಿಯಲ್ಲಿ ಮುಳುಗಿದ ಹಡಗು; 400 ಪ್ರಯಾಣಿಕರು ನಾಪತ್ತೆ?

ಧಾರಾಕಾರ ಮಳೆ ಸುರಿಯುತ್ತಿರುವುದು, ಪ್ರಬಲವಾಗಿ ಗಾಳಿ ಬೀಸುವುದು ಹಾಗೂ ಮಂಜಿನಿಂದ ಆವೃತ್ತವಾದ ವಾತಾವರಣದಿಂದಾಗಿ ಪರಿಹಾರ ಕಾರ್ಯಾಚರಣೆ ಅಡಚಣೆಯುಂಟಾಗಿದೆ.

ಚೀನಾ ಚಂಡಮಾರುತ: ನದಿಯಲ್ಲಿ ಮುಳುಗಿದ ಹಡಗು; 400 ಪ್ರಯಾಣಿಕರು ನಾಪತ್ತೆ?

ಅವಘಡ ಸಂಭವಿಸಿ ಆಗಲೇ ಒಂದು ವರೆ ದಿನಗಳು ಕಳೆದಿದ್ದು, ಈಗಲೂ 400ರಷ್ಟು ಮಂದಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಂಬಂಧಿಕರಲ್ಲಿ ಭಾರಿ ಆತಂಕ ಮನೆ ಮಾಡಿದೆ.

ಚೀನಾ ಚಂಡಮಾರುತ: ನದಿಯಲ್ಲಿ ಮುಳುಗಿದ ಹಡಗು; 400 ಪ್ರಯಾಣಿಕರು ನಾಪತ್ತೆ?

ಚೀನಾದ ಹವಾಮಾನ ಇಲಾಖೆ ಕೂಡಾ ಚಂಡಮಾರುತ ಅಪ್ಪಳಿಸಿರುವುದನ್ನು ಖಚತಪಡಿಸಿದ್ದು, ಹಡಗು ಸಂಚರಿಸಿದ ಪ್ರದೇಶದಲ್ಲಿ ಅಂದಾಜು 12ರಷ್ಟು ಚಂಡಮಾರುತಗಳು ಬೀಸಿವೆ ಎಂದಿದೆ.

Read more on ಚೀನಾ china
English summary
Hundreds missing after China ship carrying 458 people sinks in River
Story first published: Wednesday, June 3, 2015, 17:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark