ಬಾಡಿಗೆ ಸೈಕಲ್ ರಿಕ್ಷಾನೇ ಈ ದಂಪತಿಗಳ ಪಾಲಿನ ಆಂಬ್ಯುಲೆನ್ಸ್

ಲಾಕ್ ಡೌನ್ ಅವಧಿಯಲ್ಲಿ ಸಾರ್ವಜನಿಕ ಸಾರಿಗೆ ವಾಹನಗಳಾದ ಬಸ್, ಆಟೋ ಹಾಗೂ ಟ್ಯಾಕ್ಸಿಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಈ ಕಾರಣಕ್ಕೆ ಹಲವಾರು ಜನರು ಸೈಕಲ್ ಹಾಗೂ ದ್ವಿಚಕ್ರ ವಾಹನಗಳ ಮೂಲಕ ಸಾವಿರಾರು ಕಿ.ಮೀ ಸಂಚರಿಸಿದರು.

ಬಾಡಿಗೆ ಸೈಕಲ್ ರಿಕ್ಷಾನೇ ಈ ದಂಪತಿಗಳ ಪಾಲಿನ ಆಂಬ್ಯುಲೆನ್ಸ್

ಸೈಕಲ್ ಹಾಗೂ ದ್ವಿಚಕ್ರ ವಾಹನಗಳಿಲ್ಲದವರು ಕಾಲ್ನಡಿಗೆಯ ಮೂಲಕವೇ ತಮ್ಮ ಊರುಗಳನ್ನು ಸೇರಿಕೊಂಡರು. ಈಗ ಲಾಕ್ ಡೌನ್ ತೆಗೆದು ಹಾಕಲಾಗಿದ್ದರೂ ಪರಿಸ್ಥಿತಿಯು ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ತನ್ನ ಅನಾರೋಗ್ಯ ಪೀಡಿತ ಪತ್ನಿಯನ್ನು ಪತಿಯೊಬ್ಬ 90 ಕಿ.ಮೀ ದೂರ ಸೈಕಲ್ ರಿಕ್ಷಾದಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ವರದಿಯಾಗಿದೆ.

ಬಾಡಿಗೆ ಸೈಕಲ್ ರಿಕ್ಷಾನೇ ಈ ದಂಪತಿಗಳ ಪಾಲಿನ ಆಂಬ್ಯುಲೆನ್ಸ್

ಒಡಿಶಾದ ಪುರಿ ಜಿಲ್ಲೆಯ ಸಾಹಿಗೋಪಾಲ್ ಮೂಲದ ಕಬೀರ್ ಬೂಯಿನ್ ಎಂಬುವವರೇ ತಮ್ಮ ಪತ್ನಿಯನ್ನು ಸೈಕಲ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದವರು. ಅವರ ಪತ್ನಿ ಸುಕಂತಿ ಯವರ ಆರೋಗ್ಯವು ಎರಡು ವಾರಗಳ ಹಿಂದೆ ಹದಗೆಟ್ಟಿತ್ತು. ಅವರನ್ನು ಜಿಲ್ಲಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ದಿನದಿಂದ ದಿನಕ್ಕೆ ಅವರ ಆರೋಗ್ಯ ಹದಗೆಡುತ್ತಿತ್ತು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬಾಡಿಗೆ ಸೈಕಲ್ ರಿಕ್ಷಾನೇ ಈ ದಂಪತಿಗಳ ಪಾಲಿನ ಆಂಬ್ಯುಲೆನ್ಸ್

ಈ ಕಾರಣಕ್ಕೆ ಸುಕಂತಿಯವರನ್ನು ಕಟಕ್‌ನ ಎಸ್‌ಸಿಬಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಸುಕಂತಿಯವರನ್ನು ಆ ಆಸ್ಪತ್ರೆಗೆ ಕರೆದೊಯ್ಯುವಷ್ಟು ಹಣ ಕಬೀರ್ ಬೂಯಿನ್ ರವರ ಬಳಿಯಿರಲಿಲ್ಲ. ಆದ್ದರಿಂದ ತಮ್ಮ ಪತ್ನಿಯನ್ನು ಮನೆಗೆ ಕರೆತಂದಿದ್ದಾರೆ.

ಬಾಡಿಗೆ ಸೈಕಲ್ ರಿಕ್ಷಾನೇ ಈ ದಂಪತಿಗಳ ಪಾಲಿನ ಆಂಬ್ಯುಲೆನ್ಸ್

ಮನೆಗೆ ಬಂದ ನಂತರ ಸುಕಂತಿಯ ಆರೋಗ್ಯವು ಮತ್ತಷ್ಟು ಹದಗೆಟ್ಟಿತು. ಕಬೀರ್ ಬೂಯಿನ್ ದಿನಕ್ಕೆ 50 ರೂಪಾಯಿಗಳ ಲೆಕ್ಕದಲ್ಲಿ ಸೈಕಲ್ ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಾರೆ. ಆ ಸೈಕಲ್ ರಿಕ್ಷಾದಲ್ಲಿ ತಮ್ಮ ಹೆಂಡತಿಯೊಂದಿಗೆ ಕಟಕ್‌ಗೆ ಬಂದಿದ್ದಾರೆ. ಕಟಕ್ ಕಬೀರ್ ರವರ ಊರಿನಿಂದ ಸುಮಾರು 90 ಕಿ.ಮೀ ದೂರದಲ್ಲಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬಾಡಿಗೆ ಸೈಕಲ್ ರಿಕ್ಷಾನೇ ಈ ದಂಪತಿಗಳ ಪಾಲಿನ ಆಂಬ್ಯುಲೆನ್ಸ್

ಅವರು ಕಟಕ್‌ಗೆ ಬಂದ ನಂತರ ಅಲ್ಲಿದ್ದ ಕೆಲವು ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತರು ಅವರ ನೆರವಿಗೆ ಧಾವಿಸಿದ್ದಾರೆ. ಅವರ ಸ್ಥಿತಿ ಕೇಳಿ ಸುಕಂತಿಯವರನ್ನು ಎಸ್‌ಸಿಬಿ ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕಬೀರ್ ಬೂಯಿನ್, ನಾನು ನನ್ನ ಹೆಂಡತಿಯನ್ನು ಕಟಕ್ ಗೆ ಕರೆತರಲು ಆಟೋ ರಿಕ್ಷಾ ಬಾಡಿಗೆಗೆ ಪಡೆಯಲು ನೋಡಿದೆ. ಅವರು ಕಟಕ್‌ಗೆ ಬರಲು ರೂ.1,200 ರೂಪಾಯಿ ಕೇಳಿದರು. ಅಷ್ಟೊಂದು ಹಣ ನನ್ನ ಬಳಿ ಇಲ್ಲದ ಕಾರಣ ಸೈಕಲ್ ರಿಕ್ಷಾ ಬಾಡಿಗೆಗೆ ಪಡೆದು ನನ್ನ ಹೆಂಡತಿಯನ್ನು ಆಸ್ಪತ್ರೆಗೆ ಕರೆತಂದೆ ಎಂದು ಹೇಳಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬಾಡಿಗೆ ಸೈಕಲ್ ರಿಕ್ಷಾನೇ ಈ ದಂಪತಿಗಳ ಪಾಲಿನ ಆಂಬ್ಯುಲೆನ್ಸ್

ಸುಕಂತಿ ಒಂದು ವರ್ಷದಿಂದ ಅನಾರೋಗ್ಯ ಪೀಡಿತಳಾಗಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಕರೆ ತರುವಾಗ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. ಆಕೆಗೆ ಎಸ್‌ಸಿಪಿ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ದೊರೆಯುವ ಭರವಸೆ ಇದೆ ಎಂದು ಹೇಳಿದ್ದಾರೆ. ಈ ಘಟನೆಯ ಬಗ್ಗೆ ಒಡಿಶಾ ಟಿವಿ ವರದಿ ಮಾಡಿದೆ.

Most Read Articles
 

Kannada
English summary
Husband carries ailing wife for 90 kms on rented bicycle rickshaw. Read in Kannada.
Story first published: Tuesday, October 13, 2020, 13:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X