ವಾಹನ ಸವಾರರಿಗೆ ಬಂಪರ್ ಆಫರ್: ದಂಡ ಮರುಪಾವತಿಗೂ ಸಿಗಲಿದೆ ರಿಯಾಯಿತಿ!

ದೇಶಾದ್ಯಂತ ವಾಹನ ಸಂಖ್ಯೆಯಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ಕೂಡಾ ಸಾಕಷ್ಟು ಹೆಚ್ಚಳವಾಗುತ್ತಿದ್ದು, ಟ್ರಾಫಿಕ್ ನಿಯಮ ಉಲ್ಲಂಘನೆಯನ್ನು ತಗ್ಗಿಸಲು ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.

ವಾಹನ ಸವಾರರಿಗೆ ಬಂಪರ್ ಆಫರ್: ದಂಡ ಮರುಪಾವತಿಗೂ ಸಿಗಲಿದೆ ರಿಯಾಯಿತಿ!

ಕಠಿಣ ಕಾನೂನು ಕ್ರಮಗಳ ಹೊರತಾಗಿಯೂ ವಾಹನ ಮಾಲೀಕರಲ್ಲಿ ಸರಿಯಾದ ದಾಖಲಾತಿಗಳ ಕೊರತೆ ಅಥವಾ ಡ್ರಂಕ್ ಅಂಡ್ ಡ್ರೈವ್‌ನಂತಹ ಪ್ರಕರಣಗಳಲ್ಲಿ ಭಾರೀ ದಂಡವನ್ನು ಕಟ್ಟಬೇಕಾಗುತ್ತದೆ. ಪ್ರಸ್ತುತ ಅಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೆಲವು ಸಂದರ್ಭಗಳಲ್ಲಿ ವಾಹನದ ಮೇಲೆ ದೊಡ್ಡ ಮೊತ್ತದ ದಂಡವನ್ನು ಹಾಕಲಾಗುತ್ತದೆ.

ವಾಹನ ಸವಾರರಿಗೆ ಬಂಪರ್ ಆಫರ್: ದಂಡ ಮರುಪಾವತಿಗೂ ಸಿಗಲಿದೆ ರಿಯಾಯಿತಿ!

ದಂಡದ ಹೆಚ್ಚಳವಾಗಿರುವುದರಿಂದ ಎಲ್ಲರೂ ಒಂದೇ ಬಾರಿಗೆ ಅದನ್ನು ಕಟ್ಟುವುದು ಅಸಾಧ್ಯವೆಂದೇ ಹೇಳಬಹುದು. ಹೀಗಾಗಿ ದಂಡದ ಬಾಕಿ ಮೊತ್ತವನ್ನು ಸಕಾಲದಲ್ಲಿ ವಸೂಲಿ ಮಾಡಲು ಮುಂದಾಗಿರುವ ಟ್ರಾಫಿಕ್ ಪೊಲೀಸರು ದಂಡ ವಸೂಲಿಗಾಗಿ ವಿನಾಯ್ತಿ ನೀಡಿದ್ದಾರೆ.

ವಾಹನ ಸವಾರರಿಗೆ ಬಂಪರ್ ಆಫರ್: ದಂಡ ಮರುಪಾವತಿಗೂ ಸಿಗಲಿದೆ ರಿಯಾಯಿತಿ!

ಹೌದು, ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್‌ನಲ್ಲಿ ಟ್ರಾಫಿಕ್ ಪೊಲೀಸರು ವಾಹನ ಮಾಲೀಕರಿಂದ ಬಾಕಿ ಇರುವ ದಂಡವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಬಂಪರ್ ಆಫರ್ ನೀಡಿದ್ದಾರೆ.

ವಾಹನ ಸವಾರರಿಗೆ ಬಂಪರ್ ಆಫರ್: ದಂಡ ಮರುಪಾವತಿಗೂ ಸಿಗಲಿದೆ ರಿಯಾಯಿತಿ!

ಹೈದರಾಬಾದ್ ಪೊಲೀಸರು ನೀಡಿರುವ ಪ್ರಕಟಣೆಯ ಪ್ರಕಾರ ಮುಂದಿನ ತಿಂಗಳು ಮಾರ್ಚ್ 1 ರಿಂದ ಮಾರ್ಚ್ 31ರ ವರೆಗೆ ಸ್ಪೆಷಲ್ ಡ್ರೈವ್ ನಿರ್ವಹಿಸುತ್ತಿದ್ದಾರೆ. ಹೈದರಾಬಾದ್ ನ ರಾಚಕೊಂಡ, ಸೈಬರಾಬಾದ್ ಪೋಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸುಮಾರು ರೂ. 600 ಕೋಟಿಗೂ ಹೆಚ್ಚು ಬಾಕಿ ಇರುವ ಚಲನ್ ‌ಗಳಿಂದ ದಂಡ ವಸೂಲಿಗೆ ಪೊಲೀಸ್ ಇಲಾಖೆಯು ಹೊಸ ಕಾರ್ಯತಂತ್ರ ರೂಪಿಸಿದೆ.

ವಾಹನ ಸವಾರರಿಗೆ ಬಂಪರ್ ಆಫರ್: ದಂಡ ಮರುಪಾವತಿಗೂ ಸಿಗಲಿದೆ ರಿಯಾಯಿತಿ!

ಮಾರ್ಚ್ 1 ರಿಂದ 31ರ ನಡುವೆ ಬಾಕಿ ಇರುವ ದಂಡವನ್ನು ಪಾವತಿಸಿದವರಿಗೆ ರಿಯಾಯಿತಿಯನ್ನು ಘೋಷಿಸಲಾಗಿದ್ದು, ವಾಹನ ಮಾದರಿಗಳಿಗೆ ಅನುಗುಣವಾಗಿ ದಂಡದಲ್ಲಿ ವಿನಾಯ್ತಿ ನೀಡಲು ನಿರ್ಧರಿಸಲಾಗಿದೆ.

ವಾಹನ ಸವಾರರಿಗೆ ಬಂಪರ್ ಆಫರ್: ದಂಡ ಮರುಪಾವತಿಗೂ ಸಿಗಲಿದೆ ರಿಯಾಯಿತಿ!

ದ್ವಿಚಕ್ರ ವಾಹನ ಬಳಕೆದಾರರು ಬಾಕಿ ಉಳಿದಿರುವ ದಂಡದ ಮೊತ್ತದಲ್ಲಿ ಶೇ.25 ರಷ್ಟು ಮಾತ್ರ ಪಾವತಿಸಲು ತಿಳಿಸಿದ್ದು, ಉಳಿದ ಮೊತ್ತವನ್ನು ಪೊಲೀಸ್ ಇಲಾಖೆ ಮನ್ನಾ ಮಾಡಲಿದೆ. ಅದೇ ರೀತಿ ಕಾರು ಬಳಕೆದಾರರು ಶೇ.50 ರಷ್ಟು ಮತ್ತು ಆರ್.ಟಿ.ಸಿ ಬಸ್ಸುಗಳು ಶೇ.30 ಪಾವತಿಸಿದರೆ ಸಾಕು ಈ ಹಿಂದಿನ ಎಲ್ಲಾ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥ‌ ಗೊಳಿಸುವುದಾಗಿ ಪ್ರಕಟಣೆ ಹೊರಡಿಸಲಾಗಿದೆ.

ವಾಹನ ಸವಾರರಿಗೆ ಬಂಪರ್ ಆಫರ್: ದಂಡ ಮರುಪಾವತಿಗೂ ಸಿಗಲಿದೆ ರಿಯಾಯಿತಿ!

ವಾಹನ ಮಾಲೀಕರು ಬಾಕಿ ದಂಡದ ಮೊತ್ತವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು ಎಂದು ಪೊಲೀಸ್ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದ್ದು, ಹೈದರಾಬಾದ್ ನಲ್ಲಿ ಪ್ರಸ್ತುತ ರೂ. 600 ಕೋಟಿಯವರೆಗೂ ದಂಡ ಬಾಕಿಯಿದೆ.

ವಾಹನ ಸವಾರರಿಗೆ ಬಂಪರ್ ಆಫರ್: ದಂಡ ಮರುಪಾವತಿಗೂ ಸಿಗಲಿದೆ ರಿಯಾಯಿತಿ!

ಹೀಗಾಗಿ ಟ್ರಾಫಿಕ್ ಪೊಲೀಸರು ಘೋಷಿಸಿರುವ ಈ ಆಫರ್ ನಿಂದ ಬಾಕಿ ಇರುವ ದಂಡ ಮೊತ್ತವು ಭಾರೀ ಪ್ರಮಾಣದಲ್ಲಿ ಸಂಗ್ರಹವಾಗುವ ಸಾಧ್ಯತೆಗಳ ಬಗೆಗೆ ಹೈದರಾಬಾದ್ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ದಂಡ ಪಾವತಿಸಿ ಹಿಂದಿನ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಇದೊಂದು ಸುವರ್ಣಾವಕಾಶ ಎಂದು ಹೇಳಬಹುದು.

ವಾಹನ ಸವಾರರಿಗೆ ಬಂಪರ್ ಆಫರ್: ದಂಡ ಮರುಪಾವತಿಗೂ ಸಿಗಲಿದೆ ರಿಯಾಯಿತಿ!

ಇನ್ನು ಹೈದರಾಬಾದ್‌ನಲ್ಲಿ ಇತ್ತೀಚೆಗೆ ರಾತ್ರಿ ವೇಳೆ ರಸ್ತೆ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ವಾಹನಗಳ ವೇಗವನ್ನು ನಿಯಂತ್ರಿಸಲು ಪೊಲೀಸರು ಸ್ಪೀಡ್ ಗನ್ ಬಳಸಲು ಸಿದ್ಧತೆ ನಡೆಸಿದ್ದಾರೆ. ಇದರಿಂದ ರಾತ್ರಿ ವೇಳೆಯ ರಸ್ತೆ ಅಪಘಾತಗಳನ್ನು ತಗ್ಗಿಸುವ ಗುರಿಹೊಂದಲಾಗಿದ್ದು, ನಗರದಲ್ಲಿ ಹೆಚ್ಚಾಗುತ್ತಿರುವ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.

ವಾಹನ ಸವಾರರಿಗೆ ಬಂಪರ್ ಆಫರ್: ದಂಡ ಮರುಪಾವತಿಗೂ ಸಿಗಲಿದೆ ರಿಯಾಯಿತಿ!

ಪೊಲೀಸರು ತಡ ರಾತ್ರಿಯ ವರೆಗೂ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳ ನಿಯಂತ್ರಣಕ್ಕಾಗಿ ವಿಶೇಷ ಡ್ರೈವ್ ಆಯೋಜಿಸಲಾಗುತ್ತಿದ್ದು, ಹೈದರಾಬಾದ್ ನಗರದಲ್ಲಿ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳ ತಡೆಗಾಗಿಯೇ ಪ್ರತಿದಿನ ಅಂದಾಜು 2,500 ಕಾನ್‌ಸ್ಟೆಬಲ್ ಗಳು ಕಾರ್ಯನಿರ್ವಹಿಸುತ್ತಿದ್ದರೂ ಪ್ರಕರಣಗಳನ್ನು ನಿಯಂತ್ರಣ ಮಾಡಲಾಗುತ್ತಿಲ್ಲ.

ವಾಹನ ಸವಾರರಿಗೆ ಬಂಪರ್ ಆಫರ್: ದಂಡ ಮರುಪಾವತಿಗೂ ಸಿಗಲಿದೆ ರಿಯಾಯಿತಿ!

ಹೀಗಾಗಿ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳ ತಡೆಗಾಗಿ ಮತ್ತಷ್ಟು ಹೊಸ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಇತರೆ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಿಂದ ಹೆಚ್ಚಿನ ಮಟ್ಟದ ದಂಡ ವಸೂಲಿಗೆ ಇಲಾಖೆಯು ನಿರ್ಧಾರ ಕೈಗೊಂಡಿದ್ದು, ಸ್ಪೆಷಲ್ ಡ್ರೈವ್ ಅನ್ನು ವಾಹನ ಸವಾರರು ಸದುಪಯೋಗ ಪಡಿಸಿಕೊಳ್ಳುವಂತೆ ಪೊಲೀಸ್ ಇಲಾಖೆ ಸಲಹೆ ನೀಡಿದೆ.

Most Read Articles

Kannada
English summary
Hyderabad police to offer discount on traffic challans details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X