ಬಿಎಂಡಬ್ಲ್ಯು ಬೇಡ, ಲ್ಯಾಪ್‌ಟಾಪ್ ಸಾಕು; ಅಂಗಲಾಚಿದ ಐಐಟಿ ಟಾಪರ್

Written By:

ಪ್ರಸಕ್ತ ಸಾಲಿನಲ್ಲಿ ಐಐಟಿಗೆ ನಡೆದ ದೇಶದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 11ನೇ ಶ್ರೇಯಾಂಕ ಗಿಟ್ಟಿಸಿಕೊಳ್ಳುವ ಮೂಲಕ ಹೆಮ್ಮೆಯಾಗಿದ್ದ ವಿದ್ಯಾರ್ಥಿ ತನ್ಮಯ ಶೇಖಾವತ್ ಅವರಿಗೆ ಬಿಎಂಡಬ್ಲ್ಯು ಕಾರು ನೀಡುವ ಮೂಲಕ ಸನ್ಮಾನಿಸಲಾಗಿತ್ತು. ಆದರೆಯೀಗ ನಿರ್ವಹಣಾ ವೆಚ್ಚವನ್ನು ನೋಡಿಕೊಳ್ಳುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಬಿಎಂಡಬ್ಲ್ಯು ಬೇಡ, ಲ್ಯಾಪ್‌ಟಾಪ್ ಸಾಕು; ಅಂಗಲಾಚಿದ ಐಐಟಿ ಟಾಪರ್

ದೇಶದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿರುವ ಐಐಟಿ ಪ್ರವೇಶಾತಿಗಾಗಿ ತನ್ಮಯ ಅವರಿಗೆ ತರಬೇತಿ ನೀಡಿದ ಸಂಸ್ಥೆಯು ಆತನ ಸಾಧನೆಯನ್ನು ಮೆಚ್ಚಿಕೊಂಡು ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿತ್ತು.

ಬಿಎಂಡಬ್ಲ್ಯು ಬೇಡ, ಲ್ಯಾಪ್‌ಟಾಪ್ ಸಾಕು; ಅಂಗಲಾಚಿದ ಐಐಟಿ ಟಾಪರ್

ಆರು ತಿಂಗಳ ಬಳಿಕ ಬಿಎಂಡಬ್ಲ್ಯು ಕಾರನ್ನು ಸಾಕುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇದರಿಂದಾಗಿ ಐಷಾರಾಮಿ ಕಾರಿನ ಬದಲಾಗಿ ಕನಿಷ್ಠ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಕೊಡಿಸಿ ಎಂದು ಅಂಗಲಾಚಿದ್ದಾರೆ.

ಬಿಎಂಡಬ್ಲ್ಯು ಬೇಡ, ಲ್ಯಾಪ್‌ಟಾಪ್ ಸಾಕು; ಅಂಗಲಾಚಿದ ಐಐಟಿ ಟಾಪರ್

ಈ ಸಂಬಂಧ ಹೇಳಿಕೆ ಕೊಟ್ಟಿರುವ ತನ್ಮಯ ತಂದೆ ಹಾಗೂ ಶಾಲಾ ಶಿಕ್ಷಕರೂ ಆಗಿರುವ ರಾಜೇಶ್ವರ್ ಸಿಂಗ್ ಶೇಖಾವತ್, 'ಸಂಸ್ಥೆಯ ನಿರ್ದೇಶಕರಿಗೆ ಕಾರನ್ನು ಮಾರಿ ಲಭಿಸುವ ಹಣವನ್ನು ನೀಡುವಂತೆ ಬೇಡಿಕೊಳ್ಳಲಾಗಿದೆ. ಹಾಗಾಗದಿದ್ದಲ್ಲಿ ಕಾರನ್ನು ತಮ್ಮ ಬಳಿಯೇ ಇಟ್ಟುಕೊಂಡು ತಮ್ಮ ಮಗನಿಗೆ ಲ್ಯಾಪ್ ಟಾಪ್ ಕೊಡಿಸಿ' ಎಂದಿದ್ದಾರೆ.

ಬಿಎಂಡಬ್ಲ್ಯು ಬೇಡ, ಲ್ಯಾಪ್‌ಟಾಪ್ ಸಾಕು; ಅಂಗಲಾಚಿದ ಐಐಟಿ ಟಾಪರ್

ಪ್ರತಿಷ್ಠಿತ ಕಾರು ಆಗಿರುವ ಬಿಎಂಡಬ್ಲ್ಯು ನಿರ್ವಹಣಾ ವೆಚ್ಚವನ್ನು ಭರಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. 28 ಲಕ್ಷ ರು.ಗಳನ್ನು ಉಡುಗೊರೆಯಾಗಿ ಪಡೆದರೂ ಶೇಕಡಾ 33ರಷ್ಟು ಮೊತ್ತವನ್ನು ತೆರಿಗೆಯಾಗಿ ಪಾವತಿಸಬೇಕು. ಉಳಿದ ಒಂಬತ್ತು ಲಕ್ಷವನ್ನು ಎಲ್ಲಿಂದ ತರಲಿ ಎಂದು ಮರು ಪ್ರಶ್ನಿಸುತ್ತಾರೆ.

ಬಿಎಂಡಬ್ಲ್ಯು ಬೇಡ, ಲ್ಯಾಪ್‌ಟಾಪ್ ಸಾಕು; ಅಂಗಲಾಚಿದ ಐಐಟಿ ಟಾಪರ್

ಬಿಎಂಡಬ್ಲ್ಯು ಕಾರು ಕಡಿಮೆ ಮೈಲೇಜ್ ನೀಡುತ್ತಿದ್ದು ಮತ್ತು ಒಮ್ಮೆ ಸರ್ವಿಸ್ ಮಾಡಿಸಿದಾಗ 85,000 ರು.ಗಳಷ್ಟು ಖರ್ಚು ತಗಲುತ್ತದೆ ಎಂದು ರಾಜೇಶ್ವರ್ ವಿವರಿಸುತ್ತಾರೆ.

ಬಿಎಂಡಬ್ಲ್ಯು ಬೇಡ, ಲ್ಯಾಪ್‌ಟಾಪ್ ಸಾಕು; ಅಂಗಲಾಚಿದ ಐಐಟಿ ಟಾಪರ್

ಒಟ್ಟಿನಲ್ಲಿ ದುಬಾರಿ ಬಿಎಂಡಬ್ಲ್ಯು ಕಾರನ್ನು ಮಾರಾಟ ಮಾಡುವುದು ಅನಿವಾರ್ಯವೆನಿಸಿದೆ. ಈ ಸಂಬಂಧ ಸೂಕ್ತ ಖರೀದಿಗಾರರ ಹುಡುಕಾಟದಲ್ಲಿದ್ದಾರೆ.

ಬಿಎಂಡಬ್ಲ್ಯು ಬೇಡ, ಲ್ಯಾಪ್‌ಟಾಪ್ ಸಾಕು; ಅಂಗಲಾಚಿದ ಐಐಟಿ ಟಾಪರ್

ಇದರಿಂದ ಸಂಗ್ರಹವಾಗುವ ಮೊತ್ತವನ್ನು ಕಿಡ್ನಿ ಅನಾರೋಗ್ಯದಿಂದ ಬಳಲುತ್ತಿರುವ ತನ್ಮಯ ಅವರ ತಾಯಿಯ ಚಿಕಿತ್ಸೆಗೆ ಬಳಕೆ ಮಾಡಲಾಗುವುದು ಎನ್ನಲಾಗುತ್ತಿದೆ.

ಬಿಎಂಡಬ್ಲ್ಯು ಬೇಡ, ಲ್ಯಾಪ್‌ಟಾಪ್ ಸಾಕು; ಅಂಗಲಾಚಿದ ಐಐಟಿ ಟಾಪರ್

ಇದಕ್ಕೂ ಮುನ್ನ ಬ್ರೆಜಿಲ್ ನಲ್ಲಿ ನಡೆದ 2016 ರಿಯೊ ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್ಸ್ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಭಾರತದ ದೀಪಾ ಕರ್ಮಾರಕ್ ಅವರಿಗೆ ಬಿಎಂಡಬ್ಲ್ಯು ಸಂಸ್ಥೆಯ ಮುಖ್ಯ ರಾಯಭಾರಿ ಕೂಡಾ ಆಗಿರುವ ಸಚಿನ್ ತೆಂಡೂಲ್ಕರ್ ಸಾನಿಧ್ಯದಲ್ಲಿ ಹೊಚ್ಚ ಹೊಸ ಬಿಎಂಡಬ್ಲ್ಯು ಕಾರನ್ನು ನೀಡಲಾಗಿತ್ತು.

ಬಿಎಂಡಬ್ಲ್ಯು ಬೇಡ, ಲ್ಯಾಪ್‌ಟಾಪ್ ಸಾಕು; ಅಂಗಲಾಚಿದ ಐಐಟಿ ಟಾಪರ್

ಆದರೆ ಬಿಎಂಡಬ್ಲ್ಯು ಕಾರಿನ ನಿರ್ವಹಣೆ ದುಬಾರಿಯಾಗಿರುವ ಹಿನ್ನಲೆಯಲ್ಲಿ ಕಾರನ್ನು ಮರಳಿಸಲು ದೀಪಾ ನಿರ್ಧರಿಸಿದ್ದರು.

English summary
IIT Topper Rejects BMW, Wants Laptop Instead — Find Out Why
Story first published: Tuesday, December 13, 2016, 15:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark