ಭಾರತದ ಕಾರುಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಸೇಫ್ಟೀ ರೇಟಿಂಗ್‌

ಭಾರತದಲ್ಲಿ ಶೀಘ್ರವೇ ಕಾರುಗಳಲ್ಲಿನ ಸುರಕ್ಷತೆಯ ಕುರಿತಾದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಭಾರತ ಸರ್ಕಾರವು ಆದೇಶವನ್ನು ಹೊರಡಿಸಲಿದೆ. ಈಗಾಗಲೇ ಸರ್ಕಾರವೂ ಕಾರ್‌ನ ಸುರಕ್ಷತೆಯ ಫೀಚರ್‌ಗೆ ಅನುಗುಣವಾಗಿ ಮತ್ತು ಅವುಗಳ ಕಾರ್ಯಕ್ಷಮತೆಗಳನ್ನು ಮಾನದಂಡವನ್ನಾಗಿರಿಸಿಕೊಂಡು ಸ್ಟಾರ್‌ ರೇಟಿಂಗನ್ನು ನೀಡುವ ನಿರ್ಧಾರವನ್ನು ಕೈಗೊಂಡಿದೆ.

ಭಾರತದ ಕಾರುಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಸೇಫ್ಟೀ ರೇಟಿಂಗ್‌ ಸಂಚಾರಿ ನಿಯಮ

ಕಾರಿನ ಬಗೆಗಿನ ಸುರಕ್ಷತೆಯ ಕುರಿತಾದ ನಿಯಮಗಳು ಭಾರತ್‌ ಎನ್‌ಸಿಪಿಎ ಅಥವಾ ಭಾರತ್‌ ನ್ಯೂ ಕಾರ್‌ ಅಸೆಸ್ಮೆಂಟ್ ಪ್ರೋಗ್ರಾಂ ನಿಯಮದಡಿಯಲ್ಲಿ ಜಾರಿಗೆ ತರಲಿದೆ. ಮೊದಲಿಗೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಯೋಜನೆ ಇರಲಿಲ್ಲ. ಆದರೆ ಈಗ ಇದು ಅವಶ್ಯ ಎಂದು ಸರಕಾರಕ್ಕೆ ಮನದಟ್ಟಾಗಿದೆ. ಯಾಕೆಂದರೆ ಸೇಫ್ಟೀ ಫೀಚರ್‌ಗಳು ಕಾರಿನ ಒಂದು ಅತ್ಯಾವಶ್ಯಕ ಘಟಕವಾಗಿದೆ.

ಭಾರತದ ಕಾರುಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಸೇಫ್ಟೀ ರೇಟಿಂಗ್‌ ಸಂಚಾರಿ ನಿಯಮ

ಕೆಲವೊಮ್ಮೆ ಸಾಕಷ್ಟು ಖರ್ಚು ಮಾಡಿ ದುಬಾರಿ ಕಾರುಗಳನ್ನು ತಂದರೂ ಸಹ ಅದರಲ್ಲಿ ಸುರಕ್ಷತೆಯ ಅಂಶಗಳು ಕಾಣ ಸಿಗುವುದಿಲ್ಲ. ಹೀಗಾದಾಗ ಯಾವುದಾದರೂ ಸಂಧರ್ಭದಲ್ಲಿ ಅಪಘಾತವೇನಾದರೂ ಸಂಭವಿಸಿದರೆ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳುವುದು ತುಂಬಾನೆ ವಿರಳ.

ಭಾರತದ ಕಾರುಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಸೇಫ್ಟೀ ರೇಟಿಂಗ್‌ ಸಂಚಾರಿ ನಿಯಮ

ಬಹುತೇಕ ಎಲ್ಲಾ ದೇಶಗಳಲ್ಲೂ ಕಾರ್‌ನ ಸುರಕ್ಷತೆಯ ಫೀಚರ್‌ ಮತ್ತು ಕ್ರ್ಯಾಶ್‌ ಟೆಸ್ಟ್‌ಗೆ ಅನುಸಾರವಾಗಿ ಸ್ಟಾರ್‌ ರೆಟಿಂಗ್‌ಗಳನ್ನು ನೀಡಲಾಗುತ್ತದೆ. ಗ್ರಾಹಕರು ಕಾರ್‌ ಕೊಳ್ಳುವಾಗ ಈ ರೇಟಿಂಗ್ ಅನ್ನು ಗಮನದಲಿಟ್ಟುಕೊಂಡು ತಮಗೆ ಯಾವ ಕಾರು ಸೂಕ್ತ ಎಂದು ಆಲೋಚಿಸಿ ತಮ್ಮ ಕಾರನ್ನು ಕೊಳ್ಳುತ್ತಾರೆ. ಇದರಿಂದ ಕಾರಿನ ಸುರಕ್ಷತೆಯ ಕುರಿತಾಗಿ ಗ್ರಾಹಕರೂ ಸಹ ಜಾಗರೂಕರಾಗಿ ತಮಗೆ ಹೊಂದಿಕೊಳ್ಳುವಂತಹ ಕಾರನ್ನು ಕೊಳ್ಳಬಹುದು.

ಭಾರತದ ಕಾರುಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಸೇಫ್ಟೀ ರೇಟಿಂಗ್‌ ಸಂಚಾರಿ ನಿಯಮ

ಹಲವಾರು ದೇಶಗಳಲ್ಲೂ ಕಾರೇನಾದರೂ ಕ್ರ್ಯಾಶ್‌ ಟೆಸ್ಟ್‌ ಅಥವಾ ಆಯಾ ದೇಶಗಳು ಅಳವಡಿಸಿರುವ ಸುರಕ್ಷತೆಯ ಕುರಿತಾದ ಮಾನದಂಡಗಳನ್ನು ಸರಿಯಾಗಿ ಪಾಲಿಸದೇ ಇದ್ದಲ್ಲಿ, ಅಂತಹ ಕಾರ್‌ ನಿರ್ಮಾಣ ಕಂಪನಿಗಳ ಮೇಲೆ ಕಾನೂನು ಕ್ರಮಗಳನ್ನು ಸಹ ಜರುಗಿಸುತ್ತದೆ. ಈ ಕುರಿತಾದ ಹಲವಾರು ಉದಾಹರಣೆಗಳು ಈಗಾಗಲೇ ನಮ್ಮ ಮುಂದಿದೆ.

ಭಾರತದ ಕಾರುಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಸೇಫ್ಟೀ ರೇಟಿಂಗ್‌ ಸಂಚಾರಿ ನಿಯಮ

ಇನ್ನು ಮೂಲಗಳ ಪ್ರಕಾರ ಪ್ರತಿಯೊಂದು ಕಾರು ಸಹ, 4 ರಿಂದ 5 ರೇಟಿಂಗ್‌ಗಳನ್ನು ಪಡೆಯಬೇಕಾಗಿರುವುದು ಕಡ್ಡಾಯವಾಗಿದೆ. ಬಿ-ಎನ್‌ಸಿಎಪಿ ರೇಟಿಂಗ್ಸ್‌ನಲ್ಲಿ ಕಾರಿನ ಫೀಚರ್‌, ಎಫಿಶಿಯೆನ್ಸಿ ಹೀಗೆ ಹಲವಾರು ಮಾನದಂಡಗಳನ್ನು ಇಟ್ಟುಕೊಂಡು ರೇಟಿಂಗನ್ನು ಕೊಡಲಾಗುತ್ತದೆ. ಗ್ರಾಹಕರೂ ಸಹ ಅದಕ್ಕನುಗುಣವಾಗಿ ತಮ್ಮ ಕಾರನ್ನು ಕೊಳ್ಳಬಹುದು.

ಭಾರತದ ಕಾರುಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಸೇಫ್ಟೀ ರೇಟಿಂಗ್‌ ಸಂಚಾರಿ ನಿಯಮ

ಜಾಗತಿಕವಾಗಿ ರಸ್ತೆ ಅಪಘಾತಗಳಿಗೆ ಸಂಭಂಧಿಸಿದ ಪಟ್ಟಿಯಲ್ಲಿ ಭಾರತವು ಟಾಪ್‌ನಲ್ಲಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಅಪಘಾತಗಳು ಭಾರತದಲ್ಲಿ ಪ್ರತಿ ವರ್ಷ ವರದಿಯಾಗುತ್ತಿದೆ. ಅದರಲ್ಲಿ 1.50 ಲಕ್ಷ ಅಧಿಕ ಅಪಘಾತಗಳು ಸಾವಿನಲ್ಲಿ ಕೊನೆಗೊಳ್ಳುತ್ತಿದೆ. ಈ ಅಪಘಾತಗಳಲ್ಲಿ ಮೃತರಾಗುವ ಸುಮಾರು 70% ಜನ 18 ರಿಂದ 45 ವರ್ಷ ವಯಸ್ಸಿನವರಾಗಿದ್ದಾರೆ ಎಂಬುದು ಚಿಂತಾಜನಕವಾಗಿದೆ.

ಭಾರತದ ಕಾರುಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಸೇಫ್ಟೀ ರೇಟಿಂಗ್‌ ಸಂಚಾರಿ ನಿಯಮ

ಸರಕಾರವು ಈ ಸುರಕ್ಷತೆಯನ್ನು ಕಡ್ಡಾಯಗೊಳಿಸುವುದಕ್ಕಾಗಿ ಹಲವಾರು ಮಾನದಂಡಗಳನ್ನು ತರುವ ಯೋಜನೆಯಲ್ಲಿದೆ. ಅದರಲ್ಲಿ ಕಾರಿನ ಬಲಿಷ್ಟತೆಯನ್ನು ಹೆಚ್ಚುಗೊಳಿಸುವುದು, ಕಾರುನಲ್ಲಿ ಅತ್ಯಾಧುನಿಕ ಟ್ರಾಫಿಕ್‌ ಮಾನಿಟರಿಂಗ್‌ ಸಿಸ್ಟಂಗಳನ್ನು ಅಳವಡಿಸುವುದು ಮತ್ತು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ಗಳ ಬಳಕೆಯನ್ನು ಹೆಚ್ಚುಮಾಡುವುದು ಹೀಗೆ ಹಲವಾರು ಸಂಗತಿಗಳನ್ನು ಅಳವಡಿಸುವ ಯೋಜನೆಯಲ್ಲಿದೆ.

ಭಾರತದ ಕಾರುಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಸೇಫ್ಟೀ ರೇಟಿಂಗ್‌ ಸಂಚಾರಿ ನಿಯಮ

ಇನ್ನು ಈ ಕ್ರ್ಯಾಶ್‌ ಟೆಸ್ಟ್‌ ರೆಗ್ಯೂಲೇಶನ್‌ಗಳನ್ನು ಅಳವಡಿಸಿಕೊಳ್ಳುವಲ್ಲಿ ಇತರ ಆಟೋಮೊಬೈಲ್‌ ಮಾರುಕಟ್ಟೆಗಳಿಗಿಂತ ಭಾರತವು 5 ರಿಂದ 7 ವರ್ಷ ಹಿಂದಿದೆ. ಬಹುತೇಕ ಎಲ್ಲಾ ದೇಶಗಳಲ್ಲೂ ಇದು ಕಡ್ಡಾಯವಾಗಿದೆ. ಇದರಿಂದಾಗಿಯೇ ಹಲವಾರು ಕಾರು ತಯಾರಿಕಾ ಕಂಪೆನಿಗಳು ಭಾರತದಲ್ಲಿ ಒಂದು ರೀತಿಯ ಸೇಫ್ಟೀ ಸ್ಟ್ಯಾಂಡರ್ಡ್‌ ಹಾಗೂ ಬೇರೆ ದೇಶದಲ್ಲಿ ಇನ್ನೊಂದು ರೀತಿಯ ಸೇಫ್ಟೀ ಸ್ಟ್ಯಾಂಡರ್ಡನ್ನು ಅವಲಂಬಿಸುತ್ತಿದೆ.

ಭಾರತದ ಕಾರುಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಸೇಫ್ಟೀ ರೇಟಿಂಗ್‌ ಸಂಚಾರಿ ನಿಯಮ

ಹೀಗೆ ಮಾಡುವುದರಿಂದ ಕಾರು ಕಂಪೆನಿಗಳು ಅಧಿಕ ಲಾಭವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳಬಹದು. ಇದರಲ್ಲಿಯೇ ತಿಳಿಯುತ್ತದೆ ಭಾರತದಲ್ಲಿ ಸುರಕ್ಷತೆಯ ಕುರಿತಾದಂತಹ ವಿಷಯಗಳಿಗೆ ಹೆಚ್ಚು ಒತ್ತು ನೀಡುತ್ತಿಲ್ಲ ಎಂದು.

ಭಾರತದ ಕಾರುಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಸೇಫ್ಟೀ ರೇಟಿಂಗ್‌ ಸಂಚಾರಿ ನಿಯಮ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಾರಿನಲ್ಲಿ ಸೇಫ್ಟೀ ಫೀಚರ್ಸ್‌ ಹಾಗೂ ಕ್ರ್ಯಾಶ್‌ ಟೆಸ್ಟ್‌ನಂತ ಇತರ ಸುರಕ್ಷತಾ ಮಾನದಂಡಗಳು ತುಂಬಾ ಅವಶ್ಯಕ. ಇದನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂಬ ಸರಕಾರದ ನಿರ್ಧಾರ ಸ್ವಾಗತಾರ್ಹ. ಒಬ್ಬ ವ್ಯಕ್ತಿ ಕಾರನ್ನು ಖರೀದಿಸುವಾಗ ಆತನ ಬಜೆಟ್‌ಗೆ ಅನುಸಾರವಾಗಿ ಈ ಸೇಫ್ಟಿ ಫೀಚರ್‌ಗಳಿರುವುದನ್ನು ನೋಡಿ ತೆಗೆದುಕೊಳ್ಳುವುದರಿಂದ ಆತನ ಜೊತೆಗೆ ಆತನ ಕುಟುಂಬವೂ ಸಹ ಅಷ್ಟೇ ಸುರಕ್ಷಿತವಾಗಿ ಪ್ರಯಾಣ ಮಾಡಿದರೆ ಅದಕ್ಕಿಂತ ಬೇರೇನೂ ಬೇಕಿಲ್ಲ.

Most Read Articles

Kannada
English summary
India could soon make safety ratings compulsory in passenger cars
Story first published: Friday, July 8, 2022, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X