ಫ್ಲೈಯಿಂಗ್ ಕಾರ್ಸ್‌ ಅಭಿವೃದ್ಧಿಗೆ ಸುಜುಕಿ-ಸ್ಕೈಡ್ರೈವ್ ಒಪ್ಪಂದ: ಭಾರತವೇ ಪ್ರಮುಖ ಮಾರುಕಟ್ಟೆಯಾಗಿ ಆಯ್ಕೆ

ಫ್ಲೈಯಿಂಗ್ ಕಾರ್ ಎಂಬುದು ವಿಶ್ವದಾದ್ಯಂತದ ಕೆಲವು ಆಟೋಮೊಬೈಲ್ ಕಂಪನಿಗಳು ಕೇಂದ್ರೀಕರಿಸಿದ ಮುಂದಿನ ಹಂತದ ಪ್ರಯಾಣ ವಿಭಾಗವಾಗಿದೆ. ಅಂದರೆ ಶೀಘ್ರದಲ್ಲೇ ರಸ್ತೆಗಳಲ್ಲಿ ಚಲಿಸುವ ಕಾರುಗಳೊಂದಿಗೆ ಹಾರುವ ಕಾರುಗಳನ್ನು ನೋಡಬಹುದಾಗಿದೆ. ಭಾರತದಲ್ಲೂ ಇದೇ ರೀತಿಯ ಕಾರುಗಳನ್ನು ನಾವು ನೋಡುವ ಸಾಧ್ಯತೆಯಿದೆ.

ಫ್ಲೈಯಿಂಗ್ ಕಾರ್ಸ್‌ ಅಭಿವೃದ್ಧಿಗೆ ಸುಜುಕಿ-ಸ್ಕೈಡ್ರೈವ್ ಒಪ್ಪಂದ: ಭಾರತವೇ ಪ್ರಮುಖ ಮಾರುಕಟ್ಟೆಯಾಗಿ ಆಯ್ಕೆ

ಜಪಾನ್‌ನ ಪ್ರಮುಖ ವಾಹನ ತಯಾರಕ ಸುಜುಕಿ ಮೋಟಾರ್ ಫ್ಲೈಯಿಂಗ್ ಕಾರ್ ತಯಾರಕ ಸ್ಕೈಡ್ರೈವ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಸುಜುಕಿ ಮತ್ತು ಸ್ಕೈಡ್ರೈವ್ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರನ್ನು ಅಭಿವೃದ್ಧಿಪಡಿಸಲು ಒಪ್ಪಂದಕ್ಕೆ ಸಹಿ ಹಾಕಿವೆ. ಈ ಪಾಲುದಾರಿಕೆಯ ಅಡಿಯಲ್ಲಿ, ಎರಡೂ ಕಂಪನಿಗಳು ಹಾರುವ ಕಾರುಗಳ ಸಂಶೋಧನೆ, ಅಭಿವೃದ್ಧಿ, ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ಕೈಗೊಳ್ಳಲಿವೆ.

ಫ್ಲೈಯಿಂಗ್ ಕಾರ್ಸ್‌ ಅಭಿವೃದ್ಧಿಗೆ ಸುಜುಕಿ-ಸ್ಕೈಡ್ರೈವ್ ಒಪ್ಪಂದ: ಭಾರತವೇ ಪ್ರಮುಖ ಮಾರುಕಟ್ಟೆಯಾಗಿ ಆಯ್ಕೆ

ಈ ಒಪ್ಪಂದದ ಭಾಗವಾಗಿ ಸುಜುಕಿ ಮತ್ತು ಸ್ಕೈಡ್ರೈವ್ ಭಾರತವನ್ನು ತಮ್ಮ ಪ್ರಮುಖ ಮಾರುಕಟ್ಟೆಯನ್ನಾಗಿ ಆಯ್ಕೆ ಮಾಡಿಕೊಂಡಿವೆ. ಜಪಾನ್‌ನ ಸುಜುಕಿ ಮೋಟಾರ್ ಬಗ್ಗೆ ಪ್ರತ್ಯೇಕವಾಗಿ ತಿಳಿದುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಇದು ನಮ್ಮ ದೇಶದ ಮಾರುತಿ ಸುಜುಕಿಯ ಮಾತೃಸಂಸ್ಥೆಯಾಗಿದೆ. ಫ್ಲೈಯಿಂಗ್ ಕಾರ್ ಕಂಪನಿ ಸ್ಕೈಡ್ರೈವ್‌ಗೆ ಸಂಬಂಧಿಸಿದಂತೆ, ಕಂಪನಿಯು ಪ್ರಸ್ತುತ ಬ್ಯಾಟರಿ ಚಾಲಿತ ಕಾಂಪ್ಯಾಕ್ಟ್ ಎರಡು-ಸಿಟರ್ ಫ್ಲೈಯಿಂಗ್ ಕಾರನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ.

ಫ್ಲೈಯಿಂಗ್ ಕಾರ್ಸ್‌ ಅಭಿವೃದ್ಧಿಗೆ ಸುಜುಕಿ-ಸ್ಕೈಡ್ರೈವ್ ಒಪ್ಪಂದ: ಭಾರತವೇ ಪ್ರಮುಖ ಮಾರುಕಟ್ಟೆಯಾಗಿ ಆಯ್ಕೆ

ಈ ಹಾರುವ ಕಾರಿನ ಅಂತಿಮ ವಿನ್ಯಾಸವನ್ನು ಸಿದ್ಧಪಡಿಸಿದ ನಂತರ, ಕಂಪನಿಯು ಅದನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಯೋಜಿಸಿದೆ. ಸ್ಕೈಡ್ರೈವ್ 2025 ರಲ್ಲಿ ಜಪಾನ್‌ನ ಒಸಾಕಾದಲ್ಲಿ ನಡೆಯಲಿರುವ ವರ್ಲ್ಡ್ ಎಕ್ಸ್ಪೋದಲ್ಲಿ ತನ್ನ ಮೊದಲ ಹಾರುವ ಕಾರನ್ನು ಬಿಡುಗಡೆ ಮಾಡಲು ಯೋಜಿಸಿದೆ. ಸುಜುಕಿ ಮತ್ತು ಸ್ಕೈ ಡ್ರೈವ್ ಅಭಿವೃದ್ಧಿಪಡಿಸಿರುವ ಫ್ಲೈಯಿಂಗ್ ಕಾರ್ ಸಂಪೂರ್ಣವಾಗಿ ವಿದ್ಯುತ್ ಶಕ್ತಿಯಿಂದ ಚಾಲಿತವಾಗಿದೆ ಎಂದು ಹೇಳಲಾಗಿದೆ.

ಫ್ಲೈಯಿಂಗ್ ಕಾರ್ಸ್‌ ಅಭಿವೃದ್ಧಿಗೆ ಸುಜುಕಿ-ಸ್ಕೈಡ್ರೈವ್ ಒಪ್ಪಂದ: ಭಾರತವೇ ಪ್ರಮುಖ ಮಾರುಕಟ್ಟೆಯಾಗಿ ಆಯ್ಕೆ

ಇದಲ್ಲದೆ ಈ ಎಲೆಕ್ಟ್ರಿಕ್ ಹಾರುವ ಕಾರು, ಅದು ಇರುವ ಸ್ಥಳದಿಂದ ಗಾಳಿಯಲ್ಲಿ ಹಾರಬಹುದು ಮತ್ತು ಕಡಿದಾದ ಭೂಸ್ಪರ್ಶ ಮಾಡಬಹುದು (ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್). ಸುಜುಕಿ ಮೋಟಾರ್ ಮತ್ತು ಸ್ಕೈಡ್ರೈವ್ ಈ ಹಗುರವಾದ ವಿಮಾನಗಳ ಸಂಶೋಧನೆ, ಅಭಿವೃದ್ಧಿ ಮತ್ತು ಮಾರುಕಟ್ಟೆಗಾಗಿ ಈಗಾಗಲೇ ತಂಡವನ್ನು ರಚಿಸಿರುವುದಾಗಿ ತಿಳಿಸಿವೆ.

ಫ್ಲೈಯಿಂಗ್ ಕಾರ್ಸ್‌ ಅಭಿವೃದ್ಧಿಗೆ ಸುಜುಕಿ-ಸ್ಕೈಡ್ರೈವ್ ಒಪ್ಪಂದ: ಭಾರತವೇ ಪ್ರಮುಖ ಮಾರುಕಟ್ಟೆಯಾಗಿ ಆಯ್ಕೆ

ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರುಗಳಿಗಾಗಿ ಹೊಸ ಮಾರುಕಟ್ಟೆಗಳನ್ನು ತೆರೆಯಲು ಸಹ ಕೆಲಸ ಮಾಡುತ್ತಿರುವುದಾಗಿ ಎರಡು ಕಂಪನಿಗಳು ತಿಳಿಸಿವೆ. ಸುಜುಕಿ ಮೋಟಾರ್ ಇತ್ತೀಚೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮತ್ತು ಬ್ಯಾಟರಿ ಉತ್ಪಾದನಾ ಘಟಕವನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು. ಈ ಸ್ಥಾವರವನ್ನು ಸ್ಥಾಪಿಸಲು ಸುಮಾರು $ 1.37 ಬಿಲಿಯನ್ ಹೂಡಿಕೆ ಮಾಡುವುದಾಗಿ ಕಂಪನಿ ಹೇಳಿದೆ.

ಫ್ಲೈಯಿಂಗ್ ಕಾರ್ಸ್‌ ಅಭಿವೃದ್ಧಿಗೆ ಸುಜುಕಿ-ಸ್ಕೈಡ್ರೈವ್ ಒಪ್ಪಂದ: ಭಾರತವೇ ಪ್ರಮುಖ ಮಾರುಕಟ್ಟೆಯಾಗಿ ಆಯ್ಕೆ

ಕೆಲವು ಮಾಧ್ಯಮ ವರದಿಗಳ ಪ್ರಕಾರ, ಸುಜುಕಿ ಮೋಟಾರ್ ಭಾರತವನ್ನು ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ ಎಂದು ಹೇಳಲಾಗಿದೆ. ಭವಿಷ್ಯದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ಭಾರತದಲ್ಲೂ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಕಂಪನಿ ಮೂಂಚಿತವಾಗಿಯೇ ಪರಿಗಣಿಸಿದೆ.

ಫ್ಲೈಯಿಂಗ್ ಕಾರ್ಸ್‌ ಅಭಿವೃದ್ಧಿಗೆ ಸುಜುಕಿ-ಸ್ಕೈಡ್ರೈವ್ ಒಪ್ಪಂದ: ಭಾರತವೇ ಪ್ರಮುಖ ಮಾರುಕಟ್ಟೆಯಾಗಿ ಆಯ್ಕೆ

ವರದಿಯ ಪ್ರಕಾರ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ 2021 ರಲ್ಲಿ ಮೂರು ಪಟ್ಟು ಹೆಚ್ಚಾಗಲಿದೆ. ಮುಂಬರುವ ವರ್ಷಗಳಲ್ಲಿ ಇದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುವ ಸಾಧ್ಯತೆ ಇದೆ. ಅಲ್ಲದೇ ಭಾರತದಲ್ಲಿ ಶೂನ್ಯ ಕಾರ್ಬನ್‌ ಡೈಆಕ್ಸೈಡ್‌ ಹೊರಸೂಸುವಿಕೆಯನ್ನು ಸಾಧಿಸಲು ಸರ್ಕಾರವು 2070ರ ವೇಳೆಗೆ ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿಯನ್ನು ಹೊಂದಿದೆ.

ಫ್ಲೈಯಿಂಗ್ ಕಾರ್ಸ್‌ ಅಭಿವೃದ್ಧಿಗೆ ಸುಜುಕಿ-ಸ್ಕೈಡ್ರೈವ್ ಒಪ್ಪಂದ: ಭಾರತವೇ ಪ್ರಮುಖ ಮಾರುಕಟ್ಟೆಯಾಗಿ ಆಯ್ಕೆ

ಮಾಲಿನ್ಯವನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಗುರಿಯೊಂದಿಗೆ, ಭಾರತ ಸರ್ಕಾರವು ಶೂನ್ಯ ಹೊರಸೂಸುವಿಕೆಯ ಮೂಲಗಳಾದ ಶುದ್ಧ ಶಕ್ತಿ ತಂತ್ರಜ್ಞಾನ (ಪ್ಯೂರ್‌ ಎನರ್ಜಿ ಟೆಕ್ನಾಲಜಿ), ಬ್ಯಾಟರಿ ಸಂಗ್ರಹಣೆ (ಬ್ಯಾಟರಿ ಸ್ಟೋರೇಜ್) ಮತ್ತು ಹೈಡ್ರೋಜನ್ ಇಂಧನ (ಹೈಡ್ರೋಜನ್ ಫ್ಯೂಯೆಲ್) ಬಳಕೆಯನ್ನು ಉತ್ತೇಜಿಸುತ್ತಿದೆ.

ಫ್ಲೈಯಿಂಗ್ ಕಾರ್ಸ್‌ ಅಭಿವೃದ್ಧಿಗೆ ಸುಜುಕಿ-ಸ್ಕೈಡ್ರೈವ್ ಒಪ್ಪಂದ: ಭಾರತವೇ ಪ್ರಮುಖ ಮಾರುಕಟ್ಟೆಯಾಗಿ ಆಯ್ಕೆ

ಭಾರತವು ಹಾರುವ ಕಾರುಗಳು ಮತ್ತು ಟ್ಯಾಕ್ಸಿಗಳ ಕೇಂದ್ರವಾಗಿರುವುದರಿಂದ ಸುಜುಕಿ ಮೋಟಾರ್ ಭವಿಷ್ಯದಲ್ಲಿ ಅನೇಕ ವಿಭಾಗಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತರಲು ಪ್ರಯತ್ನಿಸಬಹುದು. ಸುಜುಕಿ ಮೋಟಾರ್ ಈಗಾಗಲೇ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದೆ.

ಫ್ಲೈಯಿಂಗ್ ಕಾರ್ಸ್‌ ಅಭಿವೃದ್ಧಿಗೆ ಸುಜುಕಿ-ಸ್ಕೈಡ್ರೈವ್ ಒಪ್ಪಂದ: ಭಾರತವೇ ಪ್ರಮುಖ ಮಾರುಕಟ್ಟೆಯಾಗಿ ಆಯ್ಕೆ

ಇದೇ ವೇಳೆ ಕಂಪನಿಯು ಈಗ ಫ್ಲೈಯಿಂಗ್ ಕಾರ್ ವಿಭಾಗಕ್ಕೆ ಪ್ರವೇಶಿಸುವ ಮೂಲಕ ತನ್ನ ಎಲೆಕ್ಟ್ರಿಕ್ ವಾಹನಗಳ ಶ್ರೇಣಿಯನ್ನು ವಿಸ್ತರಿಸಲು ಬಯಸಿದೆ. ಒಂದು ವರದಿಯ ಪ್ರಕಾರ, ಜಾಗತಿಕ ಏರ್ ಟ್ಯಾಕ್ಸಿ ಮಾರುಕಟ್ಟೆಯು 2040ರ ವೇಳೆಗೆ $ 1,700 ಟ್ರಿಲಿಯನ್ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಫ್ಲೈಯಿಂಗ್ ಕಾರ್ಸ್‌ ಅಭಿವೃದ್ಧಿಗೆ ಸುಜುಕಿ-ಸ್ಕೈಡ್ರೈವ್ ಒಪ್ಪಂದ: ಭಾರತವೇ ಪ್ರಮುಖ ಮಾರುಕಟ್ಟೆಯಾಗಿ ಆಯ್ಕೆ

ರಸ್ತೆಗಳಲ್ಲಿನ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ದಕ್ಷಿಣ ಕೊರಿಯಾದ ಸರ್ಕಾರವು ಅನುಸರಿಸುತ್ತಿರುವ ಅರ್ಬನ್ ಏರ್ ಮೊಬಿಲಿಟಿ ಇನ್ಫ್ರಾಸ್ಟ್ರಕ್ಚರ್ (ಅರ್ಬನ್ ಏರ್ ಮೊಬಿಲಿಟಿ ಇಕೋಸಿಸ್ಟಮ್) ಅನ್ನು ಈಗ ಮುಂದಿನ ಪೀಳಿಗೆಯ ತಂತ್ರಜ್ಞಾನದ ಉದಾಹರಣೆಯಾಗಿ ವಿಶ್ವದಾದ್ಯಂತ ಪ್ರದರ್ಶಿಸಲಾಗುತ್ತಿದೆ.

ಫ್ಲೈಯಿಂಗ್ ಕಾರ್ಸ್‌ ಅಭಿವೃದ್ಧಿಗೆ ಸುಜುಕಿ-ಸ್ಕೈಡ್ರೈವ್ ಒಪ್ಪಂದ: ಭಾರತವೇ ಪ್ರಮುಖ ಮಾರುಕಟ್ಟೆಯಾಗಿ ಆಯ್ಕೆ

ಈ ಏರ್ ಮೊಬಿಲಿಟಿ ವ್ಯವಸ್ಥೆಯು ಇತ್ತೀಚಿನ ಪೀಳಿಗೆಯ ಸುಧಾರಿತ ತಂತ್ರಜ್ಞಾನವನ್ನು ಆಧರಿಸಿದೆ. ಇದು ಭವಿಷ್ಯದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಮತ್ತು ರಸ್ತೆ ಅಪಘಾತಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

(ಗಮನಿಸಿ: ಈ ಲೇಖನದಲ್ಲಿನ ಚಿತ್ರಗಳನ್ನು ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ.)

Article Published On: Thursday, March 24, 2022, 16:10 [IST]
English summary
India might get flying cars soon suzuki motor signs a deal with flying taxi firm skydrive
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+