ರಾಯಲ್ ಎನ್‌ಫೀಲ್ಡ್‌ನಲ್ಲಿ ಒಂದೇ ಬಾರಿಗೆ 58 ಮಂದಿ ಪಯಣ- ಭಾರತೀಯ ಯೋಧರಿಂದ ಹೊಸ ದಾಖಲೆ
ಸೇನಾ ತಂಡವೊಂದು ರಾಯಲ್ ಎನ್‌ಫೀಲ್ಡ್ ಬೈಕ್‍ನಲ್ಲಿ ಒಂದೇ ಬಾರಿಗೆ 58 ಮಂದಿ ಪ್ರಯಾಣಿಸುವ ಮೂಲಕ ನೂತನ ವಿಶ್ವದಾಖಲೆಯನ್ನು ಸೃಷ್ಟಿಸಿದ್ದು, ಯೋಧರ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಭಾರತೀಯ ಸೇನಾ ತಂಡವೊಂದು ರಾಯಲ್ ಎನ್‌ಫೀಲ್ಡ್ ಬೈಕ್‍ನಲ್ಲಿ ಒಂದೇ ಬಾರಿಗೆ 58 ಮಂದಿ ಪ್ರಯಾಣಿಸುವ ಮೂಲಕ ನೂತನ ವಿಶ್ವದಾಖಲೆಯನ್ನು ಸೃಷ್ಟಿಸಿದ್ದು, ಯೋಧರ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಭಾರತೀಯ ಯೋಧರು ಹೊಸ ವಿಶ್ವದಾಖಲೆ ಒಂದನ್ನು ನಿರ್ಮಾಣ ಮಾಡಿದ್ದು, 58 ಯೋಧರು ಒಂದೇ ಬೈಕ್ ನಲ್ಲಿ ಪ್ರಯಾಣಿಸುವ ಮೂಲಕ ಸಾಹಸ ಮೆರೆದಿದ್ದಾರೆ. ಆರ್ಮಿ ಸರ್ವೀಸ್ ಕೋರ್ ಟಾರ್ನಡೋಸ್ ತಂಡವು ಈ ದಾಖಲೆ ಮಾಡಿದೆ.

ಆರ್ಮಿ ಸರ್ವಿಸ್ ಕಾಪ್ರ್ಸ್ (ಎಎಸ್‍ಸಿ) ಟೋರ್ನೆಡೊ ಹೆಸರಿನ ಬೈಕ್ ತಂಡವೊಂದು 500 ಸಿಸಿ ರಾಯಲ್ ಎನ್‍ಫೀಲ್ಡ್ ಮೋಟಾರ್ ಬೈಕ್‍ನಲ್ಲಿ 58 ಯೋಧರು ಯಲಹಂಕದ ವಾಯು ಪಡೆ ನಿಲ್ದಾಣದಲ್ಲಿ ಸುಮಾರು 1.2 ಕಿ.ಮೀ ದೂರವನ್ನು ಪ್ರಯಾಣಿಸಿದ್ದಾರೆ.

ಯೋಧರ ತಂಡವು ಬೈಕ್‍ನಲ್ಲಿ ಪ್ರಯಾಣಿಸುವಾಗ ತ್ರಿವರ್ಣ ಧ್ವಜದ ಬಟ್ಟೆಗಳನ್ನು ಧರಿಸಿದ್ದರು. ಈ ತಂಡದ ಚಾಲಕ ಸುಬೇದರ್ ರಾಮ್‍ಪಾಲ್ ಯಾದವ್ ಅವರು ತುಂಬಾ ಸಾಹಸಿಯಾಗಿ ಬೈಕ್ ಚಲಾಯಿಸಿದ್ದಾರೆ ಎಂದು ರಕ್ಷಣಾ ಇಲಾಖೆಯು ತಿಳಿಸಿದೆ.

ಕ್ಯಾಪ್ಟನ್ ಬಿನ್ನಿ ಶರ್ಮಾ ನೇತೃತ್ವದ ತಂದವು ಸುಬೇದಾರ್ ರಾಮ್‌ಪಾಲ್ ತಯಾರಿಸಿದ್ದ ಬೈಕಿನಲ್ಲಿ ಪ್ರಯಾಣ ಮಾಡಿದ್ದರು. ಈ ಹಿಂದೆ ಒಂದೇ ಬೈಕ್ ನಲ್ಲಿ 54 ಮಂದಿ ಪ್ರಯಾಣಿಸಿರುವುದು ವಿಶ್ವ ದಾಖಲೆ ಎನಿಸಿತ್ತು. ಇದೀಗ ಭಾರತೀಯ ಯೋಧರು 58 ಮಂದಿ ಪ್ರಯಾಣಿಸುವ ಮೂಲಕ ಹಳೆ ದಾಖಲೆಯನ್ನು ಮುರಿದು ನೂತನ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.

ಮೇಜರ್ ಬನ್ನಿಶರ್ಮಾ ನೇತೃತ್ವದಲ್ಲಿ 150 ಜನರ ತಂಡ ಸತತವಾಗಿ 10 ತಿಂಗಳುಗಳ ಕಾಲ ತರಬೇತಿ ನಡೆಸಿತ್ತು. ಈ ಬೈಕ್ ಸುಮಾರು 3.5 ಟನ್ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ತಪ್ಪದೇ ಓದಿ-ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!
ಗಸ್ತು ನಿರ್ವಹಣೆಗಾಗಿ ಹಾರುವ ಬೈಕ್‌ಗಳನ್ನು ಅಳವಡಿಸಿಕೊಂಡ ದುಬೈ ಪೊಲೀಸರು..!!

ಇನ್ನು ಗಿನ್ನಿಸ್ ರೆಕಾರ್ಡ್‌ಗೂ ಮುನ್ನ 60 ಜನ ರಾಯಲ್ ಎನ್‍ಫೀಲ್ಡ್ 500ಸಿಸಿ ಬೈಕ್ ಏರಿ ಟ್ರಯಲ್ ಮಾಡಿದ್ದರು. ಆದರೆ ರೆಕಾರ್ಡ್ ಸೃಷ್ಟಿಸಲು ಮುಂದಾದಾಗ ಎರಡು ಬಾರಿ ಆಯತಪ್ಪಿ ಬಿದ್ದಿದ್ದರು. ಈ ವೇಳೆ ಕೆಲ ಯೋಧರು ಗಾಯಗೊಂಡಿದ್ದಾರೆ. ಆದರೂ ಯೋಧರು ಇದಕ್ಕೆ ಅಂಜದೆ, 58 ಮಂದಿ ಒಟ್ಟಾಗಿ ಸಂಚರಿಸಿ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಮೂರು ದಶಕಗಳಲ್ಲಿ ವಿಶ್ವದಾದ್ಯಂತ 1000 ಪ್ರದರ್ಶನಗಳನ್ನು ನೀಡಿರುವ ಎಎಸ್‍ಸಿ ತಂಡವು 19 ವಿಶ್ವದಾಖಲೆಯನ್ನು ಹೊಂದಿದೆ. ಮೊದಲು 1990 ರಲ್ಲಿ 26 ಯೋಧರು ಸಂಚರಿಸಿ ಮೊದಲ ದಾಖಲೆಯನ್ನು ಮಾಡಿದ್ದರು. ನಂತರ 2010 ರಲ್ಲಿ 56 ಯೋಧರು ಒಂದೇ ಬೈಕ್ ನಲ್ಲಿ ಸಂಚರಿಸಿ ವಿಶ್ವದಾಖಲೆ ಸೃಷ್ಟಿಸಿದ್ದರು. ಈಗ 58 ಯೋಧರು ಪ್ರಯಾಣಿಸಿ ನೂತನ ದಾಖಲೆ ಮಾಡಿದ್ದಾರೆ.
Trending Kannada DriveSpark Stories:
ರಸ್ತೆ ನಿಯಮ ಉಲ್ಲಂಘಿಸುವರಿಗೆ ಕಾದಿದೆ ಮಾರಿಹಬ್ಬ- ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಗೊತ್ತಾ?
ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!


Click it and Unblock the Notifications