ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 'ಟೈಗರ್ ಎಕ್ಸ್‌ಪ್ರೆಸ್'

By Nagaraja

ವನ್ಯಜೀವಿ ಉತ್ಸಾಹಿಗಳಿಗಾಗಿ ಭಾರತೀಯ ರೈಲ್ವೆ ಅತಿ ನೂತನ 'ಟೈಗರ್ ಎಕ್ಸ್ ಪ್ರೆಸ್' ರೈಲು ಸೇವೆಯನ್ನು ಬಿಡುಗಡೆಗೊಳಿಸಿದೆ. ಪ್ರಸ್ತುತ ರೈಲು ಮಧ್ಯಪ್ರದೇಶದ ವನ್ಯಜೀವಿ ಸಂರಕ್ಷಣಾ ಕೇಂದ್ರಗಳಾಗಿರುವ ಬಾಂಧವಗಡ ಮತ್ತು ಕಾನ್ಹಾ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸುತ್ತಾಡಲಿದೆ.

2016 ಜೂನ್ 05 ವಿಶ್ವ ಪರಿಸರ ದಿನದಂದು ಟೈಗರ್ ಎಕ್ಸ್ ಪ್ರೆಸ್ ಲೋಕಾರ್ಪಣೆ ಮಾಡಲಾಗಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಹಸಿರು ನಿಶಾನೆ ತೋರಿದ್ದರು. ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ವಿಶೇಷವಾಗಿಯೂ ಹುಲಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವುದು ಇದರ ಹಿಂದಿರುವ ಪ್ರಮುಖ ಗುರಿಯಾಗಿದೆ.

ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 'ಟೈಗರ್ ಎಕ್ಸ್‌ಪ್ರೆಸ್'

ಮಾನ್ಸೂನ್ ಕಾಲಘಟ್ಟದಲ್ಲಿ ವನ್ಯಜೀವಿ ಸಂರಕ್ಷಣಾ ಕೇಂದ್ರವನ್ನು ಮುಚ್ಚಿಡಲಾಗುತ್ತದೆ. ಇದರಿಂದಾಗಿ ಟೈಗರ್ ಎಕ್ಸ್ ಪ್ರೆಸ್ ಮುಂಬರುವ ಅಕ್ಟೋಬರ್ ತಿಂಗಳಿಂದ ದೆಹಲಿಯಿಂದ ಸೇವೆಯನ್ನು ಆರಂಭಿಸಲಿದೆ.

ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 'ಟೈಗರ್ ಎಕ್ಸ್‌ಪ್ರೆಸ್'

ಸೆಮಿ ಲಗ್ಷುರಿ ರೈಲು ಆಗಿರುವ ಟೈಗರ್ ಎಕ್ಸ್ ಪ್ರೆಸ್ ವಿನೋದ ಸಂಚಾರಿಗಳನ್ನು ಹೆಚ್ಚೆಚ್ಚು ಆಕರ್ಷಿಸಲಿದ್ದು, ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಾಡಲಿದೆ.

ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 'ಟೈಗರ್ ಎಕ್ಸ್‌ಪ್ರೆಸ್'

ಯಾತ್ರಿಕರ ಸೌಲಭ್ಯಗಳಿಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಇದರಲ್ಲಿ ಭೋಜನಾಲಯ, ಸ್ನಾನಗೃಹ ಮತ್ತು ಸಣ್ಣ ಲೈಬ್ರರಿ ಸೇವೆಯನ್ನು ಒದಗಿಸಲಾಗುತ್ತದೆ.

ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 'ಟೈಗರ್ ಎಕ್ಸ್‌ಪ್ರೆಸ್'

ಆರು ರಾತ್ರಿಗಳು ಸೇರಿದಂತೆ ಐದು ದಿನಗಳ ಈ ಯಾತ್ರೆಯಲ್ಲಿ ಮೂರು ಟೈಗರ್ ಸಫಾರಿಗಳನ್ನು ಕೈಗೊಳ್ಳುವ ಅವಕಾಶ ಮಾಡಿಕೊಡಲಾಗಿದೆ.

ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 'ಟೈಗರ್ ಎಕ್ಸ್‌ಪ್ರೆಸ್'

ಫಸ್ಟ್ ಕ್ಲಾಸ್ ಎಸಿ ಕೋಚ್ ಗಳ ಶುಲ್ಕವು 39,500 ರು.ಗಳಿಂದ 49,500 ರು.ಗಳಿಗೆ ನಿಗದಿಪಡಿಸಲಾಗಿದೆ. ಅದೇ ರೀತಿ ಎಸಿ 2 ಟೈರ್ ಶುಲ್ಕವು 33,500 ರು.ಗಳಿಂದ 43,500 ರು.ಗಳಷ್ಟು ದುಬಾರಿಯೆನಿಸಲಿದೆ.

ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 'ಟೈಗರ್ ಎಕ್ಸ್‌ಪ್ರೆಸ್'

ಇದರ ಹೊರತಾಗಿ ವಿದೇಶಿಯರಿಂದ ಸಫಾರಿ ಬುಕ್ಕಿಂಗ್ ಗಾಗಿ ಹೆಚ್ಚುವರಿಯಾಗಿ 4,000 ರು.ಗಳನ್ನು ಈಡು ಮಾಡಲಾಗುತ್ತದೆ.

ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 'ಟೈಗರ್ ಎಕ್ಸ್‌ಪ್ರೆಸ್'

ಟೈಗರ್ ಸಫಾರಿ ಹೊರತಾಗಿ ಬೇಡಾಘರ್ ನಲ್ಲಿರುವ ಜನಪ್ರಿಯ ದುವಾಂಧಾರ್ ಹಾಗೂ ಜಬಲ್ ಪುರ್ ಜಲಪಾತಗಳಿಗೂ ಸಂದರ್ಶನ ಹಮ್ಮಿಕೊಳ್ಳಲಾಗುವುದು. ಬಳಿಕ ಕೈಲು ದೆಹಲಿಗೆ ಹಿಂತಿರುಗಲಿದೆ.

ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 'ಟೈಗರ್ ಎಕ್ಸ್‌ಪ್ರೆಸ್'

ತಮ್ಮ ಚೊಚ್ಚಲ ಪ್ರಯಾಣದ ಬಗ್ಗೆ ಅನುಭವ ಹಂಚಿಕೊಂಡಿರುವ ಯಾತ್ರಿಕರು, ಫ್ಲ್ಯಾಟ್ ಫಾರ್ಮ್ ನಿಂದ ಫ್ಲ್ಯಾಟ್ ಫಾರ್ಮ್ ಗೆ ಪ್ರಯಾಣವನ್ನು ಆನಂದಿಸಿದ್ದು, ವನ್ಯಜೀವಿ ಪ್ರೀತಿಯ ಬಗ್ಗೆ ರೈಲುಗಳು ಸಂಸ್ಕೃತಿಯ ಹೆಜ್ಜೆಯನ್ನಿಡಬೇಕಿದೆ ಎಂದಿದ್ದಾರೆ.

ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 'ಟೈಗರ್ ಎಕ್ಸ್‌ಪ್ರೆಸ್'

ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಡುತ್ತಿರುವ ಅಮೆರಿಕ ಮೂಲದ ಸ್ಟೀವನ್ ಪಿಪ್ಸ್ ಸಹ ತಮ್ಮ ಅನುಭವವನ್ನು ಮಾತುಗಳಲ್ಲಿ ವರ್ಣಿಸಲು ಅಸಾಧ್ಯ ಎಂದಿದ್ದಾರೆ.

ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 'ಟೈಗರ್ ಎಕ್ಸ್‌ಪ್ರೆಸ್'

ಪರಸರ ಸಂರಕ್ಷಣೆಯತ್ತ ಹೆಚ್ಚು ಸೂಕ್ಷ್ಮ ಗ್ರಹಣಾ ಅಗತ್ಯ ಎಂದಿರುವ ಅವರು ರೈಲು ಉತ್ತಮ ಕಾರಣಕ್ಕಾಗಿ ಓಡುತ್ತಿರುವುದನ್ನು ಶ್ಲಾಘಿಸಿದ್ದಾರೆ.

Most Read Articles

Kannada
Read more on ಭಾರತ india
English summary
Tiger Express By Indian Railways: Interesting Things To Know
Story first published: Monday, June 20, 2016, 9:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X