ಸಾಮಾನ್ಯ ಕಾರುಗಳಿಗಿಂತಲೂ ದುಬಾರಿ ಈ ಕಾರುಗಳ ನಂಬರ್ ಪ್ಲೇಟ್‍‍

ಭಾರತೀಯರು ವಾಹನಗಳ ಬೆಲೆಯ ಬಗ್ಗೆ ತಲೆ ಕೆಡಿಸಿಕೊಳ್ಳದೇ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಈ ಕಾರಣಕ್ಕೆ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದಾರೆ.

ಕಾರುಗಳಿಗಿಂತ ದುಬಾರಿ ಈ ಕಾರುಗಳ ನಂಬರ್

ಹೀಗೆ ಖರೀದಿಸುವ ಕಾರಿಗೆ ತಮ್ಮ ಇಷ್ಟದ ಅಥವಾ ಅದೃಷ್ಟದ ನಂಬರ್‍‍ಗಳನ್ನು ಅಳವಡಿಸಿಕೊಳ್ಳಲು ಬಯಸುತ್ತಾರೆ. ಕೆಲವರಂತೂ ತಾವು ಬಯಸಿದ ನಂಬರ್ ಪಡೆಯಲು ಕಾರಿಗಿಂತ ಹೆಚ್ಚಿನ ಬೆಲೆಯನ್ನು ಖರ್ಚು ಮಾಡುತ್ತಿದ್ದಾರೆ.

ಕಾರುಗಳಿಗಿಂತ ದುಬಾರಿ ಈ ಕಾರುಗಳ ನಂಬರ್

ಕೆ‍ಎಸ್ ಬಾಲಗೋಪಾಲ್ ಎಂಬುವವರು ಕೇರಳದ ನಿವಾಸಿಯಾಗಿದ್ದಾರೆ. ಇವರು ಭಾರತದಲ್ಲಿಯೇ ದುಬಾರಿ ಬೆಲೆಯ ನಂಬರ್ ಪ್ಲೇಟ್ ಖರೀದಿಸಿರುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಅವರು ತಮ್ಮ ಬಳಿಯಿರುವ ಪೋರ್ಷೆ ಕಾರಿನ ನಂಬರ್ ಪಡೆಯಲು ರೂ.31 ಲಕ್ಷ ಖರ್ಚು ಮಾಡಿದ್ದಾರೆ.

ಕಾರುಗಳಿಗಿಂತ ದುಬಾರಿ ಈ ಕಾರುಗಳ ನಂಬರ್

ಅಂದ ಹಾಗೆ ಅವರ ಬಳಿಯಿರುವ ಪೋರ್ಷೆ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.90 ಲಕ್ಷಗಳಾಗುತ್ತದೆ. ಈ ಕಾರಿಗೆ ಕೆ‍ಎಲ್ 01 ಸಿಕೆ 0001 ನಂಬರ್ ಪಡೆಯಲು ಬಾಲಗೋಪಾಲ್‍‍ರವರು ರೂ.31 ಲಕ್ಷ ನೀಡಿದ್ದಾರೆ.

ಕಾರುಗಳಿಗಿಂತ ದುಬಾರಿ ಈ ಕಾರುಗಳ ನಂಬರ್

ಇದರ ಜೊತೆಗೆ ಬಾಲಗೋಪಾಲ್‍‍ರವರು ತಮ್ಮ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರಿನ ನಂಬರ್ ಪಡೆಯಲು ರೂ.18 ಲಕ್ಷ ನೀಡಿದ್ದಾರೆ. ತಮ್ಮ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರಿಗೆ ಕೆ‍ಎಲ್ 01 ಸಿಬಿ 1 ನಂಬರ್ ಪಡೆಯಲು ಬಾಲಗೋಪಾಲ್‍‍ರವರು ಇಷ್ಟು ಮೊತ್ತವನ್ನು ನೀಡಿದ್ದಾರೆ.

ಕಾರುಗಳಿಗಿಂತ ದುಬಾರಿ ಈ ಕಾರುಗಳ ನಂಬರ್

ಬಾಲಗೋಪಾಲ್‍‍ರವರ ಬಳಿ ಬೆಲೆ ಬಾಳುವ ಹಲವು ಕಾರುಗಳಿವೆ. ಈ ಕಾರುಗಳಿಗೆಲ್ಲಾ ಫ್ಯಾನ್ಸಿ ನಂಬರ್ ಪ್ಲೇಟ್ ಹೊಂದಿರುವುದು ವಿಶೇಷ. ಕೇರಳದ ಉದ್ಯಮಿಗಳನ್ನು ಹೊರತುಪಡಿಸಿ, ಚಂಡೀಗಢದ ರೈತರೊಬ್ಬರು ರೂ.17 ಲಕ್ಷ ಪಾವತಿಸಿ ತಾವು ಬಯಸಿದ ನಂಬರ್ ಪಡೆದಿದ್ದಾರೆ.

ಕಾರುಗಳಿಗಿಂತ ದುಬಾರಿ ಈ ಕಾರುಗಳ ನಂಬರ್

ತಮ್ಮ ಲ್ಯಾಂಡ್ ಕ್ರೂಸರ್ ಕಾರಿಗೆ ಸಿ‍‍ಹೆಚ್ 01 ಎ‍ಎನ್ 0001 ನಂಬರ್ ಪಡೆಯಲು ಮೊಹಾಲಿ ಮೂಲದ ಜಗ್‍‍ಜಿತ್‍‍ಸಿಂಗ್‍ ಚಾಹಲ್‍‍ರವರು ಇಷ್ಟು ಮೊತ್ತವನ್ನು ನೀಡಿದ್ದಾರೆ. ಅವರ ಬಳಿಯಿರುವ ಐಷಾರಾಮಿ ಕಾರುಗಳೆಲ್ಲವೂ 0001 ರಿಜಿಸ್ಟ್ರೇಶನ್ ನಂಬರ್ ಹೊಂದಿವೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಕಾರುಗಳಿಗಿಂತ ದುಬಾರಿ ಈ ಕಾರುಗಳ ನಂಬರ್

ರಾಜಸ್ಥಾನದ ಜೈಪುರದ ನಿವಾಸಿ ರಾಹುಲ್ ತನೇಜಾರವರ ಕಥೆಯು ಬಹಳ ರೋಚಕವಾಗಿದೆ. ಹಿಂದೆ ಆಟೋರಿಕ್ಷಾ ಚಾಲಕನಾಗಿದ್ದ ಅವರು ತಾವು ಬಯಸಿದ ನಂಬರ್ ಪ್ಲೇಟ್‌ಗಳನ್ನು ಪಡೆಯಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದ ನಂತರ ಜನಪ್ರಿಯರಾದರು.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಕಾರುಗಳಿಗಿಂತ ದುಬಾರಿ ಈ ಕಾರುಗಳ ನಂಬರ್

ತಮ್ಮ ಜಾಗ್ವಾರ್ ಎಕ್ಸ್‌ಜೆ ಐಷಾರಾಮಿ ಸೆಡಾನ್ ಕಾರಿಗಾಗಿ ಆರ್‍‍ಜೆ 45 ಸಿಜಿ 0001 ನಂಬರ್ ಪಡೆಯಲು ರೂ.16 ಲಕ್ಷ ಪಾವತಿಸಿದ್ದಾರೆ. ರಾಜಸ್ತಾನದ ಆರ್‍‍ಟಿ‍ಒ ಅಧಿಕಾರಿಗಳ ಪ್ರಕಾರ ರಾಜಸ್ತಾನದಲ್ಲಿ ಈ ಮೊದಲು ಫ್ಯಾನ್ಸಿ ನಂಬರ್ ಪಡೆಯಲು ಯಾರೂ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಿರಲಿಲ್ಲ.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಕಾರುಗಳಿಗಿಂತ ದುಬಾರಿ ಈ ಕಾರುಗಳ ನಂಬರ್

ರಾಹುಲ್ ತನೇಜಾ ಜಾಗ್ವಾರ್ ಎಕ್ಸ್‌ಜೆ ಎಲ್ ಮಾತ್ರವಲ್ಲದೆ ಬಿಎಂಡಬ್ಲ್ಯು 5 ಸೀರಿಸ್ ಕಾರ್ ಅನ್ನು ಸಹ ಬಳಸುತ್ತಿದ್ದಾರೆ. ಈ ಕಾರು ಸಹ 0001 ರಿಜಿಸ್ಟ್ರೇಷನ್ ನಂಬರ್ ಅನ್ನು ಹೊಂದಿದೆ. ಈ ನಂಬರ್ ಪಡೆಯಲು ರಾಹುಲ್ ತನೇಜಾರವರು ರೂ.10.31 ಲಕ್ಷ ಪಾವತಿಸಿದ್ದರು. ನಂಬರ್ 1 ಅವರ ಅದೃಷ್ಟದ ಸಂಖ್ಯೆ ಎಂದು ಹೇಳಿದ್ದಾರೆ.

ಬಣ್ಣದ ಬಣ್ಣದ ನಂಬರ್ ಪ್ಲೇಟ್‌ಗಳ ಹಿಂದಿನ ಅಸಲಿಯತ್ತು ಏನು?

ಬಣ್ಣದ ಬಣ್ಣದ ನಂಬರ್ ಪ್ಲೇಟ್‌ಗಳ ಹಿಂದಿನ ಅಸಲಿಯತ್ತು ಏನು?

ಭಾರತೀಯ ಮೋಟಾರು ವಾಹನ ಕಾಯ್ದೆಯ ಪ್ರಕಾರ ನಿರ್ದಿಷ್ಟ ವಾಹನಗಳು ಇಂತಹುದೇ ಬಣ್ಣಗಳ ನಂಬರ್ ಪ್ಲೇಟ್‌ಗಳನ್ನು ಹೊಂದಿರಬೇಕೆಂಬ ನಿಯಮಗಳಿವೆ. ಇವುಗಳನ್ನು ಉಲ್ಲಂಘಿಸಿದ್ದಲ್ಲಿ ಕಾನೂನಿನ ಪ್ರಕಾರ ಭಾರೀ ಪ್ರಮಾಣದ ದಂಡ ಕೂಡಾ ತೆರಬೇಕಾಗುತ್ತೆ.

ಬಣ್ಣದ ಬಣ್ಣದ ನಂಬರ್ ಪ್ಲೇಟ್‌ಗಳ ಹಿಂದಿನ ಅಸಲಿಯತ್ತು ಏನು?

ದೈನಂದಿನ ಸಂಚಾರದ ವೇಳೆ ವಿವಿಧ ಬಣ್ಣಗಳ ನಂಬರ್ ಪ್ಲೇಟ್‌ಗಳು ನಮ್ಮ ಕಣ್ಣ ಮುಂದೆ ದರ್ಶನವಾಗುತ್ತದೆ. ಆದ್ರೆ ಯಾವ ಬಣ್ಣದ ನಂಬರ್ ಪ್ಲೇಟ್ ಏನನ್ನು ಸೂಚಿಸುತ್ತೆ ಎಂಬ ಬಗ್ಗೆ ಬಹುತೇಕ ಜನತೆಗೆ ಸರಿಯಾದ ಮಾಹಿತಿ ಇಲ್ಲ.

ಬಣ್ಣದ ಬಣ್ಣದ ನಂಬರ್ ಪ್ಲೇಟ್‌ಗಳ ಹಿಂದಿನ ಅಸಲಿಯತ್ತು ಏನು?

ಹಾಗಿದ್ದರೆ ವಿವಿಧ ಬಣ್ಣಗಳ ನಂಬರ್ ಪ್ಲೇಟ್‌ಗಳು ಏನನ್ನು ಸೂಚಿಸುತ್ತದೆ? ಯಾವುದರ ಸಂಕೇತವಿದು ಎಂಬ ಎಲ್ಲ ರೀತಿಯ ಗೊಂದಲಗಳಿಗೆ ಇಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ.

ಬಣ್ಣದ ಬಣ್ಣದ ನಂಬರ್ ಪ್ಲೇಟ್‌ಗಳ ಹಿಂದಿನ ಅಸಲಿಯತ್ತು ಏನು?

ಬಿಳಿ ಬಣ್ಣದ ಬೋರ್ಡ್

ಬಿಳಿ ಬೋರ್ಡ್‌ನಲ್ಲಿ ಕಪ್ಪು ಅಕ್ಷರಗಳನ್ನು ಹೊಂದಿರುವ ಕಾರುಗಳು ಖಾಸಗಿ ವಿಭಾಗಕ್ಕೆ ಸೇರಿದ ವಾಹನಗಳಾಗಿವೆ. ಇವೆಲ್ಲವೂ ಖಾಸಗಿ ಬಳಕೆಗಷ್ಟೇ ಸೀಮಿತವಾಗಿದ್ದು, ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುವಂತಿಲ್ಲ.

ಬಣ್ಣದ ಬಣ್ಣದ ನಂಬರ್ ಪ್ಲೇಟ್‌ಗಳ ಹಿಂದಿನ ಅಸಲಿಯತ್ತು ಏನು?

ಹಳದಿ ಬಣ್ಣದ ಬೋರ್ಡ್

ಹಳದಿ ಬೋರ್ಡ್ ನಲ್ಲಿ ಕಪ್ಪು ಅಕ್ಷರಗಳನ್ನು ಹೊಂದಿರುವ ವಾಹನಗಳು ಟ್ಯಾಕ್ಸಿ ಮತ್ತು ಟ್ರಕ್ ವಿಭಾಗಕ್ಕೆ ಸೇರಿದ ವಾಣಿಜ್ಯ ವಾಹನಗಳಾಗಿವೆ. ಇವುಗಳನ್ನು ವಾಣಿಜ್ಯ ಬಳಕೆಗಾಗಿ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ಚಾಲಕನಿಗೆ ವಾಣಿಜ್ಯ ಪರವಾನಿಗೆ ಅಗತ್ಯವಿರುತ್ತದೆ.

ಬಣ್ಣದ ಬಣ್ಣದ ನಂಬರ್ ಪ್ಲೇಟ್‌ಗಳ ಹಿಂದಿನ ಅಸಲಿಯತ್ತು ಏನು?

ಕಪ್ಪು ಬಣ್ಣದ ಬೋರ್ಡ್

ಕಪ್ಪು ಬೋರ್ಡ್ ಮೇಲೆ ಹಳದಿ ಅಕ್ಷರಗಳನ್ನು ಹೊಂದಿರುವ ವಾಹನಗಳು ಬಾಡಿಗೆಗೆ ಲಭ್ಯವಿರುವ ಸೆಲ್ಪ್ ಡ್ರೈವ್ ವಾಹನಗಳಾಗಿವೆ. ಇವುಗಳನ್ನು ವಾಣಿಜ್ಯ ಬಳಕೆಗಾಗಿ ಬಳಕೆ ಮಾಡಬಹುದಾಗಿದ್ದರೂ ವಾಣಿಜ್ಯ ಪರವಾನಗಿಯ ಅಗತ್ಯವಿರುವುದಿಲ್ಲ.

ಬಣ್ಣದ ಬಣ್ಣದ ನಂಬರ್ ಪ್ಲೇಟ್‌ಗಳ ಹಿಂದಿನ ಅಸಲಿಯತ್ತು ಏನು?

ತಿಳಿ ನಿಲಿ ಬಣ್ಣದ ಬೋರ್ಡ್

ತಿಳಿ ನೀಲಿ ಬೋರ್ಡ್ ಮೇಲೆ ಬಿಳಿ ಅಕ್ಷರಗಳನ್ನು ಹೊಂದಿರುವ ವಾಹನಗಳು ವಿದೇಶಿ ದೂತವಾಸಗಳ ವಾಹನಗಳಾಗಿರುತ್ತವೆ. ಇಂತಹ ನಂಬರ್ ಪ್ಲೇಟ್ ಗಳು ಯುಎನ್, ಸಿಡಿ ಅಥವಾ ಸಿಸಿ ಗಳೆಂಬ ವಿಶೇಷ ಸಂಕೇತಗಳನ್ನು ಹೊಂದಿರುತ್ತದೆ.

ಬಣ್ಣದ ಬಣ್ಣದ ನಂಬರ್ ಪ್ಲೇಟ್‌ಗಳ ಹಿಂದಿನ ಅಸಲಿಯತ್ತು ಏನು?

ತಿಳಿ ನಿಲಿ ಬೋರ್ಡ್‌ನಲ್ಲಿ ಯುಎನ್ ಎಂಬುದು ವಿಶ್ವಸಂಸ್ಥೆ, ಸಿಡಿ ಎಂಬುದು ಡಿಪ್ಲೋಮ್ಯಾಟಿಕ್ ಕಾರ್ಪ್ ಮತ್ತು ಸಿಸಿ ಎಂಬುದು ಕನ್ಸೂಲರ್ ಕಾರ್ಪ್ಸ್ ಎಂಬುದನ್ನು ಸೂಚಿಸುತ್ತದೆ.

ಬಣ್ಣದ ಬಣ್ಣದ ನಂಬರ್ ಪ್ಲೇಟ್‌ಗಳ ಹಿಂದಿನ ಅಸಲಿಯತ್ತು ಏನು?

ವಿವಿಐಪಿ ಕಾರು

ಭಾರತದ ರಾಷ್ಟ್ರಪತಿ ಮತ್ತು ರಾಜ್ಯವನ್ನು ಪ್ರತಿನಿಧಿಸುತ್ತಿರುವ ರಾಜ್ಯಪಾಲರಿಗೆ ಮಾತ್ರ ಲೈಸನ್ಸ್ ಪ್ಲೇಟ್ ಗಳಿಲ್ಲದ ತ್ರಿವರ್ಣ ಪತಾಕೆ ಹೊಂದಿರುವ ಅಧಿಕೃತ ಕೆಂಪು ವರ್ಣದ ನಂಬರ್ ಪ್ಲೇಟ್ ಕಾರುಗಳಲ್ಲಿ ಸಂಚರಿಸುವ ಹಕ್ಕಿರುತ್ತದೆ.

ಬಣ್ಣದ ಬಣ್ಣದ ನಂಬರ್ ಪ್ಲೇಟ್‌ಗಳ ಹಿಂದಿನ ಅಸಲಿಯತ್ತು ಏನು?

ಮಿಲಟರಿ ವಾಹನಗಳು

ಇತರೆ ನಂಬರ್ ಪ್ಲೇಟ್ ವಾಹನಗಳನ್ನು ಹೋಲಿಸಿದಾಗ ಮಿಲಿಟರಿ ವಾಹನಗಳು ವಿಶಿಷ್ಟ ಶೈಲಿಯ ನಂಬರ್ ಪ್ಲೇಟ್ ಹೊಂದಿರುತ್ತವೆ. ಮೊದಲಿಗೆ ಮೇಲ್ಖುಖವಾದ ಬಾಣ ಬಳಕೆಯಿದ್ದು, ಮೊದಲ ಎರಡು ಅಕ್ಷರಗಳು ಈ ವಾಹನ ಮಿಲಿಟರಿಗೆ ಯಾವ ಇಸವಿಯಲ್ಲಿ ಸೇರ್ಪಡೆಯಾಯಿತು ಎಂಬುದನ್ನು ತಿಳಿಸುತ್ತದೆ.

ಬಣ್ಣದ ಬಣ್ಣದ ನಂಬರ್ ಪ್ಲೇಟ್‌ಗಳ ಹಿಂದಿನ ಅಸಲಿಯತ್ತು ಏನು?

ನಿಯಮ ತಪ್ಪಿದ್ರೆ ಭಾರೀ ದಂಡ

ಇನ್ನು ಭಾರತೀಯ ಮೋಟಾರು ವಾಹನ ಕಾಯ್ದೆಯ ಪ್ರಕಾರ ನಿರ್ದಿಷ್ಟ ವಾಹನಗಳು ಇಂತಹುದೇ ಬಣ್ಣದ ನಂಬರ್ ಪ್ಲೇಟ್ ಹೊಂದಿರಬೇಕೆಂಬ ನಿಯಮವಿದ್ದು, ನಿಯಯ ಉಲ್ಲಂಘನೆ ಮಾಡಿದ್ರೆ ಭಾರೀ ಪ್ರಮಾಣದ ದಂಡ ಹಾಕಲಾಗುತ್ತೆ.

More from DriveSpark

Article Published On: Friday, December 13, 2019, 15:20 [IST]
English summary
Number plates more expensive than the car - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+