ಲೈಫಿನ ಹೀರೋ ಅಪ್ಪನಿಂಗೆ ಸರ್ಪೈಸ್ ಆಗಿ ಮಾರುತಿ ಕಾರ್ ಗಿಫ್ಟ್ ಕೊಟ್ಟ ಜನಪ್ರಿಯ ನಟಿ
ಜನಪ್ರಿಯ ಸೋಶಿಯಲ್ ಮೀಡಿಯಾ ಸ್ಟಾರ್ ಮತ್ತು ನಟಿ ಅಂಜಲಿ ಅರೋರಾ (Anjali Arora) ಅವರು ತಮ್ಮ ತಂದೆಗೆ ಹೊಚ್ಚಹೊಸ ಕಾರು ಗಿಫ್ಟ್ ನೀಡಿದ್ದಾರೆ. ನಟಿಯ ನಿಜ ಜೀವನದ ಸೂಪರ್ ಹೀರೋಗ ತಂದೆಗೆ ಮಾರುತಿ ಸುಜುಕಿ ಬಲೆನೊ ಕಾರನ್ನು ಸರ್ಪೈಸ್ ಗಿಫ್ಟ್ ನೀಡಿದ್ದಾರೆ. ನಟಿ ತಂದೆಗೆ ಕಾರ್ ಗಿಫ್ಟ್ ನೀಡುವ ಚಿತ್ರಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಪಟ್ಟೆ ವೈರಲ್ ಆಗಿದೆ.
ನಟಿ ಅಂಜಲಿ ಅರೋರಾ ಅವರು Instagram ನಲ್ಲಿ ಗುರುಗ್ರಾಮ್‌ನಲ್ಲಿರುವ ಮಾರುತಿ ಸುಜುಕಿ NEXA ಶೋರೂಮ್‌ನಿಂದ ವಿತರಣೆ ಪಡೆಯುವ ಚಿತ್ರವನ್ನು ಶೇರ್ ಮಾಡಿದ್ದಾರೆ. ಈ ಚಿತ್ರಕ್ಕೆ ತಂದೆಗೆ ಮಗಳ ಉಡುಗೊರೆ", ಜೊತೆಗೆ "ಮನೆಗೆ ಸ್ವಾಗತ" ಎಂಬ ಹೃದಯಸ್ಪರ್ಶಿ ಶೀರ್ಷಕೆಯನ್ನು ನೀಡಿದ್ದಾರೆ. ಅಂಜಲಿ ಅರೋರಾ Instagram ನಲ್ಲಿ ಶೇರ್ ಮಾಡಿದ ವೀಡಿಯೊದಲ್ಲಿ ಅವರ ತಂದೆ ಇಬ್ಬರೂ ಉತ್ಸಾಹದಿಂದ ತುಂಬಿ, ಸ್ಯಾಟಿನ್ ಹೊದಿಕೆಯನ್ನು ತೆಗೆದು ಕಾರನ್ನು ಅನಾವರಣಗೊಳಿಸಿರುವ ದೃಶ್ಯವನ್ನು ನೊಡಬಹುದು.

ಅಂಜಲಿ ಅರೋರಾ ಅವರು ತಂದೆಗಾಗಿ ಮಾರುತಿ ಬಲೆನೊ (Maruti Baleno) ಗ್ರ್ಯಾಂಡ್ಯೂರ್ ಗ್ರೇ ಶೇಡ್ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವರ ಈ ಕಾರು ಮಾರುತಿ ಬಲೆನೊ ಟಾಫ್ ವೆರಿಯೆಂಟ್ ಆಲ್ಫಾ ಮಾದರಿಯಾಗಿದೆ. ಸೆಲೆಬ್ರಿಟಿಗಳು ಸಾಮಾನ್ಯವಾಗಿ ತಮ್ಮ ಸಂಗ್ರಹಣೆಯನ್ನು ಹೆಚ್ಚಿಸಲು ಐಷಾರಾಮಿ ಕಾರುಗಳನ್ನು ಆರಿಸಿಕೊಳ್ಳುತ್ತಾರೆ. ಆದರೆ ಇವರು ಮಾರುತಿ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಮಾರುತಿಯ ಪ್ರೀಮಿಯಂ ಕಾರ್ ಮಾದರಿಯಾಗಿದೆ.
ನಟಿ ಗಿಫ್ಟ್ ಕೊಟ್ಟ ಮಾರುತಿ ಸುಜುಕಿ ಬಲೆನೊ ಕಾರಿನ ಬಗ್ಗೆ ಹೇಳುವುದಾದರೆ, ಗಮನಾರ್ಹವಾಗಿ, ಬಲೆನೊದಲ್ಲಿ ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ ನಾಲ್ಕು ರೂಪಾಂತರಗಳಲ್ಲಿಲಭ್ಯವಿದೆ. ಈ ಮಾರುತಿ ಸುಜುಕಿ ಹ್ಯಾಚ್‌ಬ್ಯಾಕ್ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 89 bhp ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು AMT ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಬಲೆನೊ ಸಿಎನ್‌ಜಿ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದೆ. ಸಿಎನ್‌ಜಿ ವರ್ಷನ್ ನಲ್ಲಿ 76 bhp ಮತ್ತು 98.5 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬಲೆನೊ ಸಿಎನ್‌ಜಿ ಬೂಟ್‌ನಲ್ಲಿ 55-ಲೀಟರ್ ಸಿಎನ್‌ಜಿ ಟ್ಯಾಂಕ್ ಅನ್ನು ಪಡೆಯುತ್ತದೆ.
ಇದರರ್ಥ ಅದರ ಪೆಟ್ರೋಲ್-ಕೌಂಟರ್‌ಪಾರ್ಟ್‌ಗೆ ಹೋಲಿಸಿದರೆ ಬೂಟ್ ಸಾಮರ್ಥ್ಯವು ಕಡಿಮೆಯಾಗಿದ ಬಲೆನೊ ಸಿಎನ್‌ಜಿಯು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದ. ಈ ಮಾರುತಿ ಸುಜುಕಿ ಬಲೆನೊ ಕಾರಿನ ಮುಂಭಾಗ ನೆಕ್ಸಾವೆವ್ ಹನಿಕೊಂಬ್ ಗ್ರಿಲ್, ಫ್ಲಾಟರ್ ಕ್ಲಾಮ್‌ಶೆಲ್ ಬಾನೆಟ್ ಮತ್ತು ಪರಿಷ್ಕೃತ ಮುಂಭಾಗದ ಬಂಪರ್ ಜೊತೆಗೆ ದೊಡ್ಡ ಫಾಗ್ ಲ್ಯಾಂಪ್ ಹೌಸಿಂಗ್‌ಗಳನ್ನು ಹೊಂದಿದೆ.
ಈ ಕಾರಿನಲ್ಲಿ ಸೈಡ್ ಪ್ರೊಫೈಲ್ ಹಿಂದಿನ ಮಾದರಿಯಂತೆಯೇ ಕಂಡರೂ ಕ್ರೋಮ್ ಸ್ಟ್ರಿಪ್ ಅನ್ನು ಹೊರತುಪಡಿಸಿ ಈಗ ಕೆಳಗಿನ ವಿಂಡೋ ಲೈನ್‌ನಿಂದ ಹಿಂದಿನ ಕ್ವಾರ್ಟರ್ ಗ್ಲಾಸ್‌ಗೆ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಬಲೆನೊ ಕಾರಿನ ಹಿಂಭಾಗದಲ್ಲಿ ಟೈಲ್‌ಗೇಟ್ ವಿನ್ಯಾಸ, ಹೊಸ ಸಿ-ಆಕಾರದ ಎಲ್‌ಇಡಿ ಟೈಲ್-ಲೈಟ್‌ಗಳು ಮತ್ತು ರಿಪ್ರೊಫೈಲ್ಡ್ ರಿಯರ್ ಬಂಪರ್ ಅನ್ನು ಹೊಂದಿದೆ. ಇ
ಇನ್ನು ಸ್ಟ್ಯಾಂಡರ್ಡ್ ಬಲೆನೊ ಕಾರು ಪರ್ಲ್ ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಗ್ರಾಂಡ್ಯೂರ್ ಗ್ರೇ, ಸೆಲೆಸ್ಟಿಯಲ್ ಬ್ಲೂ, ಓಪ್ಯುಲೆಂಟ್ ರೆಡ್ ಮತ್ತು ಲಕ್ಸ್ ಬೀಜ್ ಎನ್ನುವ ಆರು ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯು ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಹೆಚ್ಚಿನ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ.
ಸುರಕ್ಷತೆಗಾಗಿ ಏರ್‌ಬ್ಯಾಗ್ ಸೌಲಭ್ಯದ ಜೊತೆಗೆ ಹೊಸ ಬಲೆನೊದಲ್ಲಿ ಹೊಸ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಹಿಲ್ ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಎಬಿಎಸ್, ಕೀ ಲೆಸ್ ಎಂಟ್ರಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಇಎಸ್‌ಪಿ ಮತ್ತು ಇಬಿಡಿ ಸಹ ಸೇರ್ಪಡೆಯಾಗಲಿದ್ದು, ಸುಜುಕಿ ಕಾರ್ ಕನೆಕ್ಟ್ ತಂತ್ರಜ್ಞಾನದಲ್ಲೂ ಸಹ ಸುಧಾರಿತ ಫೀಚರ್ಸ್ ಗಳನ್ನು ಹೊಂದಿವೆ. ಇದರ ಜೊತೆಗೆ ತುರ್ತುಸೇವೆಗಳಿಗಾಗಿ ಸುಧಾರಿತ ಟೆಲಿಮ್ಯಾಟಿಕ್ಸ್ ಪರಿಹಾರಗಳನ್ನು ಒಳಗೊಂಡಿದೆ.


Click it and Unblock the Notifications








