ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಜಗತ್ತಿನಲ್ಲಿನ ಪ್ರಮುಖ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯವರು ತಮ್ಮ ಮಗಳ ಮದುವೆಯ ಸಮಾರಂಭಕ್ಕಾಗಿ ಅದ್ದೂರಿ ತಯಾರಿ ನಡೆಸಿದ್ದು, ಅದಕ್ಕೂ ಮುನ್ನ ನಡೆಯಲಿರುವ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಭಾಗಿಯಾಗುವ ಗಣ್ಯಾತಿಗಣ್ಯರನ್ನು ಬರಮಾಡಿಕೊಳ್ಳಲು ನೂರಾರು ಕೋಟಿ ವೆಚ್ಚದಲ್ಲಿ ಭರ್ಜರಿ ಸಿದ್ದತೆ ನಡೆದಿದೆ.

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯನ್ನು ಸಹ ಒಂದು ಹಬ್ಬದಂತೆಯೆ ಸಂಭ್ರಮಿಸುತ್ತಾರೆ. ಇನ್ನು ಸಮಾಜದಲ್ಲಿ ಮಧ್ಯವರ್ಗದವರೆ ಸಾಲ ಮಾಡಿಯಾದರೂ ಬಂದ ಅಥಿತಿಗಳಿಗೆ ಯಾವುದೇ ಕೊರತೆ ಇಲ್ಲದಿರುವ ಹಾಗೆ ಅದ್ದೂರಿಯಾಗಿ ಮದುವೆ ಮಾಡಲು ಮುಂದಾಗುತ್ತಾರೆ. ಇನ್ನು ಜಗತ್ತಿನಲ್ಲಿನ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ತನ್ನ ಮಗಳ ಮದುವೆಯನ್ನು ಎಷ್ಟು ಅದ್ಧೂರಿಯಾಗಿ ಮಾಡಬಲ್ಲರೆಂದು ಲೆಕ್ಕ ಹಾಕಲು ಸಾಧ್ಯವೇ.?

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಮುಖೇಶ್ ಅಂಬಾನಿಯವರ ಮುದ್ದುಮಗಳಾದ ಇಶಾ ಅಂಬಾನಿ ಮತ್ತು ದೇಶದ ಮತ್ತೊಬ್ಬ ಶ್ರೀಮಂತ ಉದ್ಯಮಿಯ ಮಗನಾದ ಆನಂದ್ ಪಿರಾಮಾಲ್ ಅವರ ನಡುವಿನ ಪ್ರೇಮದ ವಿಚಾರ ಹಲವರಿಗೆ ತಿಳಿದೆಯೆ ಇದೆ.

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಆನಂದ್ ಪಿರಾಮಾಲ್ ಕೂಡಾ ಸಾಮಾನ್ಯರೇನಲ್ಲ ಆತ ಭಾರತೀಯ ಬಿಲಿಯನೇರ್ ಉದ್ಯಮಿ ಅಜಯ್ ಪಿರಾಮಾಲ್ ಅವರ ಸುಪುತ್ರ. ಇಶಾ ಅಂಬಾನಿ ಮತ್ತು ಆನಂದ್ ಪಿರಾಮಾಲ್ ಅವರ ಪ್ರೇಮದ ವಿಚಾರವನ್ನ ತಮ್ಮ ತಂದೆ ತಾಯಿಗೆ ಹೇಳಿಕೊಂಡು ಎಲ್ಲರ ಒಪ್ಪಿಗೆಯ ನಂತರವೆ ಮದುವೆಗೆ ಸಿದ್ಧರಾಗಿದ್ದಾರೆ.

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಮನೆಯವರೆಲ್ಲರು ನೀಡಿದ ಗ್ರೀನ್ ಸಿಗ್ನಲ್‍ನ ನಂತರ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಇಟಲಿಯಲ್ಲಿನ ಐಷಾರಾಮಿ ಸ್ಟೆಲಾ ಹೋಟೆಲ್‍ನಲ್ಲಿ ನಿಶ್ಚಿತಾರ್ಥ ಕೂಡ ನಡೆದಿತ್ತು, 50 ಬಗೆಯ ವಿವಿಧ ತಿನ್ನಿಸುಗಳು ಮತ್ತು ಸತತ ಮೂರು ದಿನದ ಆಚರಣೆಯ ನಂತರ ಇಶಾ ಮತ್ತು ಆನಂದ್ ಅವರ ಮದುವೆಯನ್ನು ಇದೇ ಡಿಸೆಂಬರ್ 12ರಂದು ನಿಶ್ಚಿಯಿಸಲಾಗಿದೆ.

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಮದುವೆ ಖರ್ಚು ಬಿಡಿ, ಮದುವೆಯ ಆಹ್ವಾನದ ಪತ್ರವನ್ನು ಸಹ ಬಂಗಾರದಿಂದ ತಯಾರಿಸಲಾಗಿದ್ದು, ಒಂದೊಂದು ಆಹ್ವಾನದ ಪತ್ರವು ಒಂದು ಲಕ್ಷ ರುಪಾಯಿ ಬೆಲೆಬಾಳುತ್ತಂತೆ. ಈ ಅಹ್ವಾನದ ಪತ್ರಗಳನ್ನು ದೇಶದಲ್ಲಿನ ಹಲವು ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಇರಿಸಿ ಅವುಗಳಿಗೆ ಅರ್ಚನೆ ಮಾಡಿಸಿ ಆಶಿರ್ವಾದವನ್ನ ಕೂಡಾ ಪಡೆದಿದ್ದಾರೆ.

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಮದುವೆಯ ಮುನ್ನ (ಪ್ರೀ ವೆಡ್ದಿಂಗ್) ನಡೆಯಲಿರುವ ಕೆಲವು ಸಂಪ್ರದಾಯಿಕ ಕಾರ್ಯಗಳನ್ನು ಮಾಡಲು ರಾಜಸ್ತಾನದ ಉದಯ್‍ಪುರ್ ಪ್ಯಾಲೇಸ್‍ ಅನ್ನು ಈಗಾಗಲೇ ಬುಕ್ಕಿಂಗ್ ಮಾಡಿಕೊಳ್ಳಲಾಗಿದ್ದು, ಡಿಸೆಂಬರ್ 8 ಮತ್ತು 9 ರಂದು ಉದಯ್‍ಪುರ್ ಪ್ಯಾಲೇಸ್‍ನಲ್ಲಿ ಹಲವು ವಿಶೇಷತೆಗಳಿಗೆ ಕಾರಣವಾಗಲಿದೆ.

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಹೌದು, ಡಿಸೆಂಬರ್ 8 ಮತ್ತು 9 ರಂದು ಉದಯ್‍ಪುರ್‍ ಪ್ಯಾಲೆಸ್ ಸಂಭ್ರಮಾಚರಣೆ ಇಂದ ತುಂಬಿರುತ್ತದೆ, ಏಕೆಂದರೆ ಆ ದಿನದಂದು ದೇಶವಿದೇಶಗಳಿಂದ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಇದಕ್ಕೆಂದೆ ಉದಯ್‍ಪುರ್‍‍ನಲ್ಲಿನ ಏರ್‍‍ಪೋರ್ಟ್ ಕೂಡಾ ವಿಮಾನಗಳಿಂದ ತುಂಬಿರುತ್ತದೆಯಂತೆ.

MOST READ: ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಏಕೆಂದರೆ ಸಾಧಾರಣ ದಿನಗಳಲ್ಲಿ ಉದಯ್‍ಪುರ್‍ ನಗರದಲ್ಲಿನ ಮಹಾರಾಣಾ ಪ್ರತಾಪ್ ವಿಮಾನ ನಿಲ್ದಾಣದಲ್ಲಿ ಕೇವೆಲ 19 ವಿಮಾನಗಳು ಬಂದು ಹೋಗುತ್ತಿದ್ದವೆ ಆದರೆ, ಮುಂದಿನ ಹತ್ತು ದಿನಗಳ ವರೆಗೆ ಸುಮಾರು 200 ವಿಮಾನಗಳು ಅಲ್ಲಿ ಪ್ರಯಾಣಿಸುತ್ತವೆ ಎನ್ನಲಾಗಿದೆ.

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಅಂಬಾನಿ ಮತ್ತು ಪಿರಾಮಾಲ್ ಕುಟುಂಬದವರ ಒಂದು ಮುಖ್ಯ ಸಮಾರಂಭದಲ್ಲಿ ಭಾಗವಹಿಸಲು ಮುಖೇಶ್ ಅಂಬಾನಿಯವರು ಹಲವರು ಗಣ್ಯರನ್ನು ಆಹ್ವಾನಿಸಿದ್ದು, ಅವರೆಲ್ಲರ ಸುಖಕರ ಪ್ರಯಾಣಕ್ಕಾಗಿ ಚಾರ್ಟರ್ಡ್ ವಿಮಾನಗಳನ್ನು ಬುಕ್ಕಿಂಗ್ ಮಾಡಲಾಗಿದೆ.

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಅಂಬಾನಿಯವರ ಆಹ್ವಾನವನ್ನು ಮನ್ನಿಸಿ ಸೆಲೆಬ್ರಿಟಿಗಳು, ಮತ್ತು ಇನ್ನಿತರೆ ಪ್ರಮುಖ ಗಣ್ಯರು ಅಂದು ಉದಯ್‍ಪುರ್‍‍ಗೆ ಬಂದು ಇಳಿಯಲಿದ್ದಾರೆ, ಇದಕ್ಕಾಗಿ 8 ಮತ್ತು 9ನೇ ತಾರೀಕಿನಂದು ವಿಮಾನ ನಿಲ್ದಾಣದಲ್ಲಿ ಸುಮಾರು 30 ರಿಂದ 50 ವಿಮಾನಗಳು ಪ್ರಯಾಣಿಸುತ್ತದೆ ಎನ್ನಲಾಗಿದೆ.

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಉದಯ್‍ಪುರ್‍ನಲ್ಲಿನ ವಿಮಾನ ನಿಲ್ದಾಣವು ಇನ್ನು ಕೆಲವು ದಿನಗಳ ವರೆಗು ನಿರಂತರವಾಗಿ ಸಾಗುತ್ತಿರಲು ಮತ್ತೊಂದು ಕಾರಣವೆಂದರೆ ಅದೇ ಸಮಯದಲ್ಲಿ ರಾಜಸ್ತಾನದ ವಿಧಾನಸಭೆ ಚುನಾವಣೆಯು ಸಹ ಒಂದು ಕಾರಣವಾಗಿದೆ.

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಇಷ್ಟೆ ಅಲ್ಲದೇ ಮುಖೇಶ್ ಅಂಬಾನಿ ಕುಟುಂಬದ ಈ ಒಂದು ಸಮಾರಂಭಕ್ಕೆ ಬರುವ ಗಣ್ಯರಿಗೆ ಉದಯ್‍ಪುರ್‍‍‍ನಲ್ಲಿನ ಎಲ್ಲಾ 5 ಸ್ಟಾರ್ ಹೋಟೆಲ್‍ಗಳಲ್ಲಿ ರೂಂಗಳನ್ನು ಬುಕ್ಕ್ ಮಾಡಲಾಗಿದೆ ಎಂದು ಸಹ ತಿಳಿದುಬಂದಿದೆ.

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ವಿಮಾನ ನಿಲ್ದಾಣಕ್ಕೆ ಬಂದು ಇಳಿದ ಗಣ್ಯರನ್ನು ಹೋಟೆಲ್‍ಗಳಿಗೆ ಮತ್ತೆ ಅವರುಗಳ ಪ್ರಯಾಣಕ್ಕಾಗಿ ಸುಮಾರು 1000ಕ್ಕು ಹೆಚ್ಚು ಐಷಾರಾಮಿ ಕಾರುಗಳನ್ನು ಸಹ ಬುಕ್ ಮಾಡಲಾಗಿದ್ದು, ಇದರಲ್ಲಿ ಜಾಗ್ವಾರ್, ಪೋರ್ಷೆ, ಮರ್ಸಿಡೀಸ್ ಬೆಂಝ್, ಆಡಿ ಮತ್ತು ಬಿಎಂಡಬ್ಲ್ಯೂ ಸಂಸ್ಥೆಯ ಕಾರುಗಳು ಭಾಗಿಯಾಗಲಿದೆ.

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಡಿಸೆಂಬರ್ 8 ಮತ್ತು 9 ರಂದು ಉದಯ್‍ಪುರ್‍‍ನಲ್ಲಿ ನಡೆಯಲಿರುವ ಕಾರ್ಯಕ್ರಮಗಳ ನಂತರ ಡಿಸೆಂಬರ್ 12ರಂದು ಮುಂಬೈ ನಗರದಲ್ಲಿ ನಡೆಯಲಿರುವ ಇಶಾ ಮತ್ತು ಆನಂದ್ ಅವರ ಮದುವೆಗಾಗಿ ಎಲ್ಲರು ಮುಂಬೈ ನಗರಕ್ಕೆ ಮತ್ತೆ ವಾಪಸ್ ಆಗಲಿದ್ದಾರೆ.

MOST READ: ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ ನಟ ಸಿಂಬು ಈಗ ಬೆಂಟ್ಲಿ ಒಡೆಯ

ಮಗಳ ಮದುವೆಗಾಗಿ ಮುಖೇಶ್ ಅಂಬಾನಿ ಮಾಡಿರುವ ಅದ್ದೂರಿ ತಯಾರಿ ಹೇಗಿದೆ ಗೊತ್ತಾ.?

ಒಟ್ಟಾರೆಯಾಗಿ ಮುಖೇಶ್ ಅಂಬಾನಿಯ ಮುದ್ದು ಕುವರಿ ಇಶಾ ಅಂಬಾನಿ ಮತ್ತು ಅಜಯ್ ಪಿರಾಮಲ್ ಅವರ ಸುಪುತ್ರ ಆನಂದ್ ಪಿರಾಮಾಲ್ ಅವರ ಪ್ರೀ ವೆಡ್ಡಿಂಗ್ ಸಮಾರಂಭಕ್ಕೆ ಸುಮಾರು 1000 ಕೋಟಿ ಖರ್ಚು ಮಾಡುತ್ತಿರುವ ಸುದ್ಧಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

More from DriveSpark

Article Published On: Wednesday, December 5, 2018, 17:05 [IST]
English summary
Isha Ambani Wedding: 200 Chartered Airport and Take Off From Udaipur Airport. Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+