ಕಿಡ್ನಿ ಸಾಗಿಸಲು ಸೂಪರ್ ಕಾರು ಬಳಸಿದ ಪೊಲೀಸರು

ಜಗತ್ತಿನ ಕೆಲವು ದೇಶಗಳಲ್ಲಿ ಪೊಲೀಸರಿಗೆ ಸೂಪರ್ ಕಾರುಗಳನ್ನು ನೀಡಲಾಗಿದೆ. ಅಂತಹ ದೇಶಗಳಲ್ಲಿ ಇಟಲಿ ಸಹ ಒಂದು. ಇಟಲಿಯಲ್ಲಿ ಪೊಲೀಸರಿಗೆ ಗಸ್ತು ತಿರುಗಲು ಲ್ಯಾಂಬೊರ್ಗಿನಿಯಂತಹ ಸೂಪರ್ ಕಾರುಗಳನ್ನು ನೀಡಲಾಗಿದೆ.

ಕಿಡ್ನಿ ಸಾಗಿಸಲು ಸೂಪರ್ ಕಾರು ಬಳಸಿದ ಪೊಲೀಸರು

ಇತ್ತೀಚಿಗೆ ಇಟಲಿ ಪೊಲೀಸರು ವ್ಯಕ್ತಿಯೊಬ್ಬರಿಗೆ ಅಗತ್ಯವಿದ್ದ ಕಿಡ್ನಿಯನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಿದ್ದಾರೆ. ಇದಕ್ಕಾಗಿ ಇಟಲಿ ಪೊಲೀಸರುಲ್ಯಾಂಬೊರ್ಗಿನಿ ಸೂಪರ್-ಫಾಸ್ಟ್ ಕಾರನ್ನು ಬಳಸಿದ್ದಾರೆ. ಪೊಲೀಸರು ಈ ಕಿಡ್ನಿ ತಲುಪಿಸಲು 310 ಮೈಲಿ ದೂರ ಅಂದರೆ 500 ಕಿ.ಮೀ ದೂರ ಸಾಗಿದ್ದಾರೆ.

ಕಿಡ್ನಿ ಸಾಗಿಸಲು ಸೂಪರ್ ಕಾರು ಬಳಸಿದ ಪೊಲೀಸರು

ಪೊಲೀಸರು ಈ ದೂರವನ್ನು 143 ಮೈಲಿ ವೇಗದಲ್ಲಿ ಅಂದರೆ ಪ್ರತಿ ಗಂಟೆಗೆ 230 ಕಿ.ಮೀ ವೇಗದಲ್ಲಿ ಕ್ರಮಿಸಿದ್ದಾರೆ. ಈ ಕಿಡ್ನಿ ತಲುಪಿಸಲು ಪೊಲೀಸರು ನೀಲಿ ಹಾಗೂ ಬಿಳಿ ಬಣ್ಣದ ಲ್ಯಾಂಬೊರ್ಗಿನಿ ಹುರಾಕನ್ ಎಲ್ ಪಿ 610-4ಕಾರನ್ನು ಬಳಸಿದ್ದರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಿಡ್ನಿ ಸಾಗಿಸಲು ಸೂಪರ್ ಕಾರು ಬಳಸಿದ ಪೊಲೀಸರು

ಈ ಘಟನೆಯ ವೀಡಿಯೊವನ್ನು ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದ್ದು, ವೀಡಿಯೊ ವೈರಲ್ ಆಗಿದೆ. ಮಾಹಿತಿಗಳ ಪ್ರಕಾರ, ಪೊಲೀಸ್ ಅಧಿಕಾರಿಗಳು 500 ಕಿ.ಮೀ ದೂರದಲ್ಲಿದ್ದ ಆಸ್ಪತ್ರೆಯನ್ನು ಸುಮಾರು ಎರಡು ಗಂಟೆಗಳಲ್ಲಿ ತಲುಪಿದ್ದಾರೆ.

ಕಿಡ್ನಿ ಸಾಗಿಸಲು ಸೂಪರ್ ಕಾರು ಬಳಸಿದ ಪೊಲೀಸರು

ಸಾಮಾನ್ಯವಾಗಿ ಇಷ್ಟು ದೂರ ಸಾಗಲು ಆರು ಗಂಟೆ ಬೇಕಾಗುತ್ತದೆ. ಇಟಲಿಯ ಪೊಲೀಸರ ಬಳಿಯಿರುವ ಲ್ಯಾಂಬೊರ್ಗಿನಿ ಕಾರಿನಲ್ಲಿ ಪ್ಲಾಸ್ಮಾ, ಲಸಿಕೆ ಸೇರಿದಂತೆ ಅವಶ್ಯಕ ವಸ್ತುಗಳನ್ನು ಸಾಗಿಸಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಿಡ್ನಿ ಸಾಗಿಸಲು ಸೂಪರ್ ಕಾರು ಬಳಸಿದ ಪೊಲೀಸರು

ಲ್ಯಾಂಬೊರ್ಗಿನಿ ಕಂಪನಿಯು ಅಂಗಾಂಗಳನ್ನು ಸಾಗಿಸಲು ಅನುಕೂಲವಾಗುವಂತೆ ಈ ಕಾರಿನಲ್ಲಿ ವಿಶೇಷ ಕೂಲ್ಡ್ ಬಾಕ್ಸ್ ಅಳವಡಿಸಿದೆ. ಕಂಪನಿಯು 2015ರಲ್ಲಿ ಇಟಲಿ ಪೊಲೀಸರಿಗೆ ಎಲ್ ಪಿ 610-4 ಕಾರನ್ನು ಉಡುಗೊರೆಯಾಗಿ ನೀಡಿತ್ತು.

ಕಿಡ್ನಿ ಸಾಗಿಸಲು ಸೂಪರ್ ಕಾರು ಬಳಸಿದ ಪೊಲೀಸರು

ಅದಕ್ಕೂ ಮುನ್ನ 2008ರಲ್ಲಿ ಗಲ್ಲಾರ್ಡೊ ಎಲ್ ಪಿ 560-4 ಕಾರನ್ನು ಉಡುಗೊರೆಯಾಗಿ ನೀಡಿತ್ತು. ಎಲ್ ಪಿ 610-4 ಕಾರಿನಲ್ಲಿ 5204 ಸಿಸಿ 10 ಸಿಲಿಂಡರ್ ವಿ ಶೇಪಿನ, 4-ವಾಲ್ವ್ / ಸಿಲಿಂಡರ್, ಡಿಒಹೆಚ್ ಸಿ ಎಂಜಿನ್ ಅಳವಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಎಂಜಿನ್ 8,250 ಆರ್‌ಪಿಎಂನಲ್ಲಿ 602 ಬಿಹೆಚ್‌ಪಿ ಪವರ್ ಹಾಗೂ 6,500 ಆರ್‌ಪಿಎಂನಲ್ಲಿ 560 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಕಿಡ್ನಿ ಸಾಗಿಸಲು ಸೂಪರ್ ಕಾರು ಬಳಸಿದ ಪೊಲೀಸರು

ಲ್ಯಾಂಬೊರ್ಗಿನಿ ಕಂಪನಿಯು ಭಾರತದಲ್ಲಿ ಹುರಾಕನ್ ಆರ್ ಡಬ್ಲ್ಯೂಡಿ ಸ್ಪೈಡರ್, ಸಿಯಾನ್ ರೋಡ್ ಸ್ಟರ್ ಹಾಗೂ ಅಸೆನ್ಜಾ ಎಸ್ ಸಿವಿ 12 ಎಂಬ ಮೂರು ಹೊಸ ಕಾರುಗಳನ್ನು ಬಿಡುಗಡೆಗೊಳಿಸಿದೆ. ಇದರ ಜೊತೆಗೆ 10,000 ಯೂನಿಟ್ ಉರುಸ್ ಹಾಗೂ ಅವೆಂಟಡಾರ್ ಕಾರುಗಳನ್ನು ಉತ್ಪಾದಿಸಿದೆ.

Most Read Articles

Kannada
English summary
Italy police used Lamborghini super car to transport kidney. Read in Kannada.
Story first published: Tuesday, November 10, 2020, 14:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X