ಅಡ್ವೆಂಚರ್ ಬೈಕಿನಲ್ಲಿ ಹೊಸ ರ್‍ಯಾಲಿ ಶುರು ಮಾಡಿದ್ರು ಸದ್ಗುರು

ಸದ್ಗುರು ಜಗ್ಗಿ ವಾಸುದೇವ್ ತಮ್ಮ ಸ್ಟೈಲ್ ಹಾಗೂ ವರ್ತನೆಗೆ ಹೆಸರಾಗಿದ್ದಾರೆ. ಕಾವೇರಿ ನದಿಯನ್ನು ಪುನರುಜ್ಜೀವನಗೊಳಿಸಲು ಇತ್ತೀಚೆಗೆ ಅವರು 3,500 ಕಿ.ಮೀ ಮೋಟಾರ್ಸೈಕಲ್ ರ್‍ಯಾಲಿಯನ್ನು ಆರಂಭಿಸಿದ್ದಾರೆ.

ಅಡ್ವೆಂಚರ್ ಬೈಕಿನಲ್ಲಿ ಹೊಸ ರ್‍ಯಾಲಿ ಶುರು ಮಾಡಿದ್ರು ಸದ್ಗುರು

ಇಶಾ ಫೌಂಡೇಶನ್‌ನ ಸಂಸ್ಥಾಪಕರಾಗಿರುವ ಸದ್ಗುರುರವರು, ಸುಮಾರು 8 ಕೋಟಿಗೂ ಹೆಚ್ಚು ಜನರ ಜೀವನವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಕಾವೇರಿ ಕಾಲಿಂಗ್ ಅಭಿಯಾನವನ್ನು ಶುರುಮಾಡಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿಗೂ ಹೆಚ್ಚು ಸಸಿಗಳನ್ನು ನೆಡುವ ಗುರಿಯನ್ನು ಈ ರ್‍ಯಾಲಿಯು ಹೊಂದಿದೆ.

ಬೈಕ್ ರ್‍ಯಾಲಿಯನ್ನು ಈಗ ಕರ್ನಾಟಕದಲ್ಲಿ ಆರಂಭಿಸಲಾಗಿದೆ. ಮಾಡಿಫೈ ಮಾಡಲಾಗಿರುವ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಬೈಕಿನಲ್ಲಿ ನೂರಾರು ಬೈಕ್‌ ಸವಾರರ ಗುಂಪನ್ನು ಮುನ್ನಡೆಸಲಿರುವ ಸದ್ಗುರು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಅಡ್ವೆಂಚರ್ ಬೈಕಿನಲ್ಲಿ ಹೊಸ ರ್‍ಯಾಲಿ ಶುರು ಮಾಡಿದ್ರು ಸದ್ಗುರು

ಕೊಡಗು, ಮೈಸೂರು, ಮಂಡ್ಯ, ಬೆಂಗಳೂರು, ತಿರುಚಿ, ತಂಜಾವೂರು, ಚೆನ್ನೈ ಹಾಗೂ ತಿರುವರೂರುಗಳಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ರ್‍ಯಾಲಿಯು ಕೊಯಮತ್ತೂರಿನಲ್ಲಿ ಅಂತ್ಯವಾಗಲಿದೆ. ಸದ್ಗುರುರವರು ಈ ರ್‍ಯಾಲಿಯನ್ನು ಮುನ್ನಡೆಸಲು ಅಡ್ವೆಂಚರ್ ಬೈಕ್ ಅನ್ನು ಬಳಸಲಿದ್ದಾರೆ.

ಅಡ್ವೆಂಚರ್ ಬೈಕಿನಲ್ಲಿ ಹೊಸ ರ್‍ಯಾಲಿ ಶುರು ಮಾಡಿದ್ರು ಸದ್ಗುರು

ಸದ್ಗುರುರವರ ಜೊತೆಯಲ್ಲಿ ಈ ರ್‍ಯಾಲಿಯಲ್ಲಿ ಭಾಗವಹಿಸುತ್ತಿರುವವರು ಕವಾಸಕಿ ನಿಂಜಾ 1000, ಡುಕಾಟಿ ಡಯಾವೆಲ್, ಹೋಂಡಾ ಆಫ್ರಿಕನ್ ಟ್ವಿನ್, ಡುಕಾಟಿ ಮಲ್ಟಿಸ್ಟ್ರಾಡಾ, ಸುಜುಕಿ ವಿ ಸ್ಟಾರ್ಮ್ ಹಾಗೂ ಟ್ರಯಂಫ್ ರಾಕೆಟ್ 3ನಂತಹ ಸೂಪರ್ ಬೈಕ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಎರಡೂ ವೀಡಿಯೊಗಳು ರ್‍ಯಾಲಿಯ ಒಂದು ಭಾಗವನ್ನು ಮಾತ್ರ ತೋರಿಸುತ್ತಿವೆ. ಇನ್ನೂ ಹಲವಾರು ಸೂಪರ್‌ಬೈಕ್‌ಗಳು ಈ ರ್‍ಯಾಲಿಯಲ್ಲಿ ಭಾಗವಹಿಸಲಿವೆ. ಸದ್ಗುರುರವರು ಮಾಡಿಫೈ ಮಾಡಲಾಗಿರುವ ಹೋಂಡಾ ವಿಎಫ್ಆರ್ ಎಕ್ಸ್ ಬೈಕಿನಲ್ಲಿ ಸವಾರಿ ಮಾಡುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಅಡ್ವೆಂಚರ್ ಬೈಕಿನಲ್ಲಿ ಹೊಸ ರ್‍ಯಾಲಿ ಶುರು ಮಾಡಿದ್ರು ಸದ್ಗುರು

ಈ ಬೈಕ್ ಅನ್ನು ದೂರ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಬೈಕುಗಳಲ್ಲಿ ಸದ್ಗುರುರವರ ಜೊತೆಯಲ್ಲಿ ಬರುತ್ತಿರುವವರು ಅವರ ಕಡೆಯವರೇ ಅಥವಾ ಅವರ ಹಿಂಬಾಲಕರೇ ಎಂಬುದು ತಿಳಿದು ಬಂದಿಲ್ಲ. ಅದೇನೇ ಇರಲಿ, ಈ ಬೈಕ್ ಚೈನ್ ಬದಲು ಆಟೋಮ್ಯಾಟಿಕ್ ಟ್ರಾನ್ಸ್ ಮಿಷ್ನ್, ಸ್ಪೋಕ್ಡ್ ರಿಮ್ಸ್ ಹಾಗೂ ಡ್ರೈವ್‌ಶಾಫ್ಟ್ ಗಳನ್ನು ಹೊಂದಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಅಡ್ವೆಂಚರ್ ಬೈಕಿನಲ್ಲಿ ಹೊಸ ರ್‍ಯಾಲಿ ಶುರು ಮಾಡಿದ್ರು ಸದ್ಗುರು

ಈ ಬೈಕ್ ರ್‍ಯಾಲಿಯು ರೈತನ ಸಂಪತ್ತನ್ನು ಹೆಚ್ಚಿಸುವುದರ ಮೇಲೆ ಗಮನಹರಿಸುವುದರ ಜೊತೆಗೆ, ನದಿಯ ಹರಿವು ಹಾಗೂ ನದಿ ಪರಿಸರ ವ್ಯವಸ್ಥೆಗಳ ಮೇಲೆ ಗಮನಹರಿಸಲಿದೆ. ಸಸಿಗಳನ್ನು ನೆಟ್ಟು, ಅರಣ್ಯೀಕರಣ ಮಾಡಲು, ಇಶಾ ಫೌಂಡೇಶನ್ ಲಕ್ಷಾಂತರ ಸಸಿಗಳನ್ನು ಆಯ್ಕೆ ಮಾಡಿ ಕೊಂಡಿದೆ.

MOST READ: ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ಅಡ್ವೆಂಚರ್ ಬೈಕಿನಲ್ಲಿ ಹೊಸ ರ್‍ಯಾಲಿ ಶುರು ಮಾಡಿದ್ರು ಸದ್ಗುರು

ಈ ಎಲ್ಲಾ ಸಸಿಗಳನ್ನು ಸ್ಥಳೀಯ ನೀರು, ಮಣ್ಣು ಹಾಗೂ ನೀರಿನ ಸ್ಥಿತಿಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಈ ಸಸಿಗಳು ಕೆಲವೇ ವರ್ಷಗಳಲ್ಲಿ ಮರಗಳಾಗಲಿವೆ. ಈ ಸಸಿಗಳನ್ನು ರೈತರು ತಮ್ಮ ಕೃಷಿಭೂಮಿಯಲ್ಲಿ ಬೆಳೆಸಿ, ತಮ್ಮ ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳಬಹುದಾಗಿದೆ.

MOST READ: ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ಅಡ್ವೆಂಚರ್ ಬೈಕಿನಲ್ಲಿ ಹೊಸ ರ್‍ಯಾಲಿ ಶುರು ಮಾಡಿದ್ರು ಸದ್ಗುರು

ಈ ರ್‍ಯಾಲಿಗೆ ಹಲವಾರು ಪ್ರಭಾವಿ ರಾಜಕಾರಣಿಗಳು, ಕ್ರೀಡಾಪಟುಗಳು, ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ರೈತರಿಗೆ ಸಹಾಯಧನ ನೀಡಲು ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರ ಸಮ್ಮತಿ ಸೂಚಿಸಿವೆ. ಅಲ್ಲದೆ, ಸರ್ಕಾರಗಳು, ರೈತರು ತಮ್ಮ ಜಮೀನುಗಳಲ್ಲಿ ಮರಗಳನ್ನು ಬೆಳೆಸಿ ವ್ಯವಸಾಯ ಮಾಡಲು ಸಹಾಯ ಮಾಡಲಿವೆ.

ಅಡ್ವೆಂಚರ್ ಬೈಕಿನಲ್ಲಿ ಹೊಸ ರ್‍ಯಾಲಿ ಶುರು ಮಾಡಿದ್ರು ಸದ್ಗುರು

ವಿಶ್ವದಾದ್ಯಂತ ಯುವಕರು ಸೇರಿದಂತೆ, ಸದ್ಗುರುರವರನ್ನು ಅನುಸರಿಸುವ ಲಕ್ಷಾಂತರ ಬೆಂಬಲಿಗರಿದ್ದಾರೆ. ಬೈಕುಗಳನ್ನು ಬಳಸಿ, ರ್‍ಯಾಲಿಯನ್ನು ಮಾಡುವುದರಿಂದ ಜನರ ಗಮನವನ್ನು ತಮ್ಮತ್ತ ಸೆಳೆಯಬಹುದು. ಆದ ಕಾರಣ ಈ ರೀತಿಯ ಬೈಕ್ ರ್‍ಯಾಲಿಗಳು ಜನಪ್ರಿಯವಾಗಿ, ಯುವಕರನ್ನು ಸೇರಿದಂತೆ, ಸಾಕಷ್ಟು ಜನರನ್ನು ಆಕರ್ಷಿಸುತ್ತಿವೆ.

ಅಡ್ವೆಂಚರ್ ಬೈಕಿನಲ್ಲಿ ಹೊಸ ರ್‍ಯಾಲಿ ಶುರು ಮಾಡಿದ್ರು ಸದ್ಗುರು

ಸದ್ಗುರುರವರು ಸಾರ್ವಜನಿಕ ರಸ್ತೆಗಳಲ್ಲಿ ಬೈಕುಗಳನ್ನು ಓಡಿಸುತ್ತಿರುವುದು ಇದೇ ಮೊದಲಲ್ಲ. ಬೈಕ್ ಪ್ರಿಯರಾಗಿರುವ ಅವರು ಈ ಹಿಂದೆ ಡುಕಾಟಿ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್ ಹಾಗೂ ಬಿಎಂಡಬ್ಲ್ಯು ಆರ್ಜಿ 1200 ಎಸ್ ನಂತಹ ಬೈಕುಗಳಲ್ಲಿ ಸವಾರಿ ಮಾಡಿದ್ದಾರೆ.

ಅಡ್ವೆಂಚರ್ ಬೈಕಿನಲ್ಲಿ ಹೊಸ ರ್‍ಯಾಲಿ ಶುರು ಮಾಡಿದ್ರು ಸದ್ಗುರು

ಸದ್ಗುರು ಈ ಹಿಂದೆ ಕೆಲವು ಬೈಕುಗಳನ್ನು ಸಹ ಹೊಂದಿದ್ದರು. ಸದ್ಗುರುರವರು, ಬಾಬಾ ರಾಮದೇವ್‍‍ರವರನ್ನು ಬೈಕಿನಲ್ಲಿ ಜಾಲಿರೈಡ್‌ಗೆ ಕರೆದೊಯ್ಯುತ್ತಿರುವ ವೀಡಿಯೊ ಕಳೆದ ವರ್ಷ ಇಂಟರ್‌ನೆಟ್‌ನಲ್ಲಿ ಬಹಳಷ್ಟು ಸದ್ದು ಮಾಡಿತ್ತು. ಇದರ ಜೊತೆಗೆ ರ್‍ಯಾಲಿ ಫಾರ್ ರಿವರ್ಸ್ ಅಭಿಯಾನಕ್ಕಾಗಿ ಮರ್ಸಿಡಿಸ್ ಬೆಂಜ್ ಜಿ 63 ಎಎಂಜಿ ಕಾರಿನಲ್ಲಿ ಓಡಾಡಿದ್ದರು.

Most Read Articles

Kannada
English summary
Sadhguru chooses a Honda VFR superbike for Save Cauvery River mission - Read in kannada
Story first published: Saturday, September 7, 2019, 15:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X