ಭೀಕರ ರಸ್ತೆ ಅಪಘಾತ; ಜಾಗ್ವಾರ್ ಗೆ ಶರಣಾದ ಟಿಪ್ಪರ್

By Nagaraja

ಸಾಮಾನ್ಯವಾಗಿ ಘನ ವಾಹನಗಳು ತನ್ನೆದುರಿಗೆ ಬರುವ ಸಣ್ಣ ಪುಟ್ಟ ವಾಹನಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಹಲವಾರು ಪ್ರಕರಣದಲ್ಲಿ ನಾವಿದನ್ನು ಕಂಡಿರುತ್ತೇವೆ. ಅಷ್ಟೇ ಯಾಕೆ ಇಂತಹ ಸಣ್ಣ ವಾಹನಗಳು ನಜ್ಜುಗುಜ್ಜಾಗುವ ಪ್ರಸಂಗಗಳೇ ಜಾಸ್ತಿಯಾಗಿದೆ.

ಆದರೆ ಅತಿ ವಿರಳ ಪ್ರಕರಣವೆಂಬಂತೆ ಜಾಗ್ವಾರ್ ಎಕ್ಸ್ ಎಫ್ ಕಾರೊಂದಕ್ಕೆ ಟಿಪ್ಪರ್ ಶರಣಾಗಿರುವ ಘಟನೆ ಕೇರಳದಿಂದ ವರದಿಯಾಗಿದೆ. ಅಪಘಾತದ ಸಂಪೂರ್ಣ ಮಾಹಿತಿಗಾಗಿ ಹಾಗೂ ರೋಚಕ ಚಿತ್ರಗಳಿಗಾಗಿ ಫೋಟೊ ಫೀಚರ್ ನತ್ತ ಮುಂದುವರಿಯಿರಿ...

ಭೀಕರ ರಸ್ತೆ ಅಪಘಾತ; ಜಾಗ್ವಾರ್ ಗೆ ಶರಣಾದ ಟಿಪ್ಪರ್

ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾದ ರಾಷ್ಟ್ರೀಯ ಹೆದ್ದಾರಿಯ ಸಮೀಪ ಘಟನೆ ವರದಿಯಾಗಿದೆ. ಟಿಪ್ಪರ್ ಹಾಗೂ ಜಾಗ್ವಾರ್ ಕಾರು ಪರಸ್ಪರ ಮುಖಾಮುಖಿಯಾಗಿದೆ.

ಭೀಕರ ರಸ್ತೆ ಅಪಘಾತ; ಜಾಗ್ವಾರ್ ಗೆ ಶರಣಾದ ಟಿಪ್ಪರ್

ಅಪಘಾತ ಹಿಂದಿರುವ ಕಾರಣಗಳೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಕೊಟ್ಟಾಯಂನ ಸ್ಥಳೀಯ ಪೊಲೀಸ್ ತನಿಖೆಯನ್ನು ಕೈಗೆತ್ತಿಕೊಂಡಿದೆ.

ಭೀಕರ ರಸ್ತೆ ಅಪಘಾತ; ಜಾಗ್ವಾರ್ ಗೆ ಶರಣಾದ ಟಿಪ್ಪರ್

ಬಲ್ಲ ಮೂಲಗಳ ಪ್ರಕಾರ ಟಿಪ್ಪರ್ ಹಾಗೂ ಐಷಾರಾಮಿ ಜಾಗ್ವಾರ್ ಕಾರು ಅಮಿತ ವೇಗದಲ್ಲಿ ಸಂಚರಿಸುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಭೀಕರ ರಸ್ತೆ ಅಪಘಾತ; ಜಾಗ್ವಾರ್ ಗೆ ಶರಣಾದ ಟಿಪ್ಪರ್

ಟಿಪ್ಪರ್ ಚಾಲಕ ಸಾಧ್ಯವಾದಷ್ಟು ಅಪಘಾತವನ್ನು ತಪ್ಪಿಸಲು ಪರಿಶ್ರಮಿಸಿರುವುದರಿಂದ ಜಾಗ್ವಾರ್ ಕಾರು ಬಚಾವಾಗಿದೆ. ಹಾಗಿದ್ದರೂ ಜಾಗ್ವಾರ್ ಮುಂಭಾಗದ ಬಲಭಾಗದಲ್ಲಿ ಸಂಪೂರ್ಣ ನಜ್ಜುಗುಜ್ಜಾಗಿದೆ.

ಭೀಕರ ರಸ್ತೆ ಅಪಘಾತ; ಜಾಗ್ವಾರ್ ಗೆ ಶರಣಾದ ಟಿಪ್ಪರ್

ಇನ್ನು ಕಾರಿಗೆ ಢಿಕ್ಕಿ ಹೊಡೆದ ಬಳಿಕ ಗೋಡೆಗೆ ಢಿಕ್ಕಿ ಹೊಡೆದ ಟಿಪ್ಪರ್ ಮುಂದಿನ ಚಕ್ರಗಳು ನೆಲಕ್ಕುರುಳಿದೆ. ಇದರಿಂದ ಸಮೀಪದ ಖಾಸಗಿ ಮನೆಯ ಗೋಡೆಗೂ ಹಾನಿಯುಂಟಾಗಿದೆ.

ಭೀಕರ ರಸ್ತೆ ಅಪಘಾತ; ಜಾಗ್ವಾರ್ ಗೆ ಶರಣಾದ ಟಿಪ್ಪರ್

ಘಟನೆಯಲ್ಲಿ ಸಾವು-ನೋವುಗಳ ಬಗ್ಗೆ ಯಾವುದೇ ವರದಿ ಇದುವರೆಗೆ ಲಭ್ಯವಾಗಿಲ್ಲ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು.

ಭೀಕರ ರಸ್ತೆ ಅಪಘಾತ; ಜಾಗ್ವಾರ್ ಗೆ ಶರಣಾದ ಟಿಪ್ಪರ್

ಷಾರಾಮಿ ಕಾರು ಆಗಿರುವ ಜಾಗ್ವರ್ ಒಡೆತನವನ್ನು ಟಾಟಾ ಮೋಟಾರ್ಸ್ ಹೊಂದಿದೆ. ಅಲ್ಲದೆ ಸುರಕ್ಷತೆಗೂ ಹೆಚ್ಚಿನ ಆದ್ಯತೆಯನ್ನು ಕೊಡಲಾಗಿದ್ದು, ಏರ್ ಬ್ಯಾಗ್, ಎಬಿಎಸ್ ಹಾಗೂ ಇಬಿಡಿಗಳಂತಹ ಸೇವೆಗಳಿದೆ.

ಭೀಕರ ರಸ್ತೆ ಅಪಘಾತ; ಜಾಗ್ವಾರ್ ಗೆ ಶರಣಾದ ಟಿಪ್ಪರ್

ವರದಿಯೊಂದರ ಪ್ರಕಾರ ಕೇರಳ ಕೊಟ್ಟಾಯಂನಲ್ಲಿ ಅತಿ ಹೆಚ್ಚು ಲಗ್ಷುರಿ ಕಾರುಗಳು ಕಂಡುಬರುತ್ತದೆ. ಇಲ್ಲಿ ಅತಿ ಹೆಚ್ಚು ರಬ್ಬರ್ ಉದ್ಯಮಿಗಳಿದ್ದು, ತಮ್ಮ ಬಳಿಕ ಐಷಾರಾಮಿ ಕಾರುಗಳನ್ನು ಇಟ್ಟುಕೊಂಡಿರುತ್ತಾರೆ.

ಭೀಕರ ರಸ್ತೆ ಅಪಘಾತ; ಜಾಗ್ವಾರ್ ಗೆ ಶರಣಾದ ಟಿಪ್ಪರ್

ಒಟ್ಟಾರೆಯಾಗಿ ಟಿಪ್ಪರ್ ಹಾಗೂ ಜಾಗ್ವಾರ್ ಕಾರಿನ ಅಪಘಾತ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಹರಿದಾಡುತ್ತಿದೆ.

More from DriveSpark

Article Published On: Thursday, April 30, 2015, 16:28 [IST]
English summary
Jaguar XF and Tipper Accident In Kerala
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+