50 ಕಿ.ಮೀ ದೂರವನ್ನು ಕಡಿಮೆಗೊಳಿಸಲಿದೆ ಈ ಸುರಂಗ ಮಾರ್ಗ
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ, ಕಾಶ್ಮೀರಕ್ಕೆ ಭಾರತದ ಇತರ ನಗರಗಳ ಜೊತೆಗೆ ಸಂಪರ್ಕ ನೀಡುವ ಏಕೈಕ ರಸ್ತೆಯಾಗಿದೆ. ಈ ಹೆದ್ದಾರಿಯನ್ನು ಎಲ್ಲಾ ರೀತಿಯ ಹವಾಮಾನದಲ್ಲೂ ಬಾಳಿಕೆ ಬರುವ ರೀತಿಯಲ್ಲಿ ನಿರ್ಮಿಸಲಾಗಿದೆ. ಸದ್ಯಕ್ಕೆ ಈ ಹೆದ್ದಾರಿಯನ್ನು ಅಗಲಗೊಳಿಸುವ ಕಾರ್ಯಗಳು ನಡೆಯುತ್ತಿವೆ.

ಈ ಹೆದ್ದಾರಿಯನ್ನು ನಾಲ್ಕು ಪಥಗಳ ಹೆದ್ದಾರಿಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಹೆದ್ದಾರಿಯಲ್ಲಿರುವ ಬನಿಹಾಲ್- ಖಾಜಿಗಂಡ್ ನಡುವೆ 8.5 ಕಿ.ಮೀ ಉದ್ದದ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಈ ಸುರಂಗ ಮಾರ್ಗದ ನಿರ್ಮಾಣದಿಂದ ಜಮ್ಮು-ಕಾಶ್ಮೀರ ನಡುವಿನ ಅಂತರವು 50 ಕಿ.ಮೀಗಳಷ್ಟು ಕಡಿಮೆಯಾಗಲಿದೆ.

ಅಂತರವು ಕಡಿಮೆಯಾದ ನಂತರ ತಲುಪುವ ಸಮಯವು ಸಹ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ. ಈ ರಾಷ್ಟ್ರೀಯ ಹೆದ್ದಾರಿಯನ್ನು ಅಗಲಗೊಳಿಸುವ ಕಾರ್ಯವು 2011ರಿಂದ ನಡೆಯುತ್ತಿದೆ. ಕಾಮಗಾರಿ ಆರಂಭವಾದಾಗ ಈ ಮೊದಲು 5 ವರ್ಷಗಳ ಗಡುವನ್ನು ವಿಧಿಸಲಾಗಿತ್ತು.
MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬನಿಹಾಲ್-ಖಾಜಿಗಂಡ್ ನಡುವೆ ಅನೇಕ ಅಂಕುಡೊಂಕಾದ ಮಾರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣಕ್ಕೆ ಈ ರಸ್ತೆಯಲ್ಲಿ ಸಾಗಲು ಹೆಚ್ಚಿನ ಸಮಯ ಬೇಕಾಗುತ್ತದೆ. ಇದರಿಂದ ವಾಹನ ಸವಾರರು ಹೈರಾಣಾಗುತ್ತಿದ್ದರು.

ಈ ಸಮಸ್ಯೆಯನ್ನು ಕೊನೆಗಾಣಿಸಲು ಈ ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸಿ, ಜಮ್ಮು-ಶ್ರೀನಗರಕ್ಕೆ ಸಾಗುವ ಸಮಯವನ್ನು ಕಡಿಮೆಗೊಳಿಸಲು ಈ ಹೆದ್ದಾರಿಯನ್ನು ಅಗಲಗೊಳಿಸಲಾಗುತ್ತಿದೆ. ಕಾಮಗಾರಿಗೆ ಅಡ್ಡವಾಗಿರುವ ಎಲ್ಲಾ ಅಡಚಣೆಗಳನ್ನು ನಿವಾರಿಸುವಂತೆ ಆದೇಶಿಸಲಾಗಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹೆದ್ದಾರಿ ಅಗಲೀಕರಣಕ್ಕಾಗಿ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಅದರ ವರದಿಯನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಹೆಚ್‌ಎಐ) ಸಲ್ಲಿಸಲಾಗಿದೆ. 1.5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಎನ್‌ಹೆಚ್‌ಎಐ ಹೇಳಿದೆ.

ಸದ್ಯಕ್ಕೆ ಬನಿಹಾಲ್-ಖಾಜಿಗಂಡ್ ಸುರಂಗ ಮಾರ್ಗ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟಿಸಲಾಗುವುದು. ರಂಬನ್ ಹಾಗೂ ಬನಿಹಾಲ್‌ನ ಗುಡ್ಡಗಾಡು ಪ್ರದೇಶಗಳಲ್ಲಿ 16 ಕಿ.ಮೀ ರಸ್ತೆ ನಿರ್ಮಾಣಕ್ಕಾಗಿ ರೂ.2000 ಕೋಟಿಗಳ ಬಜೆಟ್ ನಿಗದಿಪಡಿಸಲಾಗಿದೆ. ಇನ್ನೂ ಹಲವಾರು ಮುಖ್ಯ ರಸ್ತೆಗಳು ಹಾಗೂ ಸುರಂಗ ಮಾರ್ಗಗಳನ್ನು ನಿರ್ಮಿಸುವ ಯೋಜನೆಗಳಿವೆ.
MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಹೊಸ ಹೆದ್ದಾರಿ ಹಾಗೂ ಸುರಂಗಗಳ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ಈ ಪ್ರದೇಶಗಳಲ್ಲಿ ಎದುರಾಗಿರುವ ಎಲ್ಲಾ ಅಡಚನೆಗಳನ್ನು ನಿವಾರಿಸಿ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.


Click it and Unblock the Notifications