ರ‍್ಯಾಷ್ ಡ್ರೈವ್ ಮಾಡಿದವನ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಮಾಡಿದ ಆರ್‌ಟಿಒ

ಇಂದು ಯುವಜನತೆ ಸೋಶಿಯಲ್ ಮೀಡಿಯಾ ಆ್ಯಪ್‍ಗಳಲ್ಲಿ ಬ್ಯುಸಿಯಾಗಿದ್ದರೆ. ಅದರಲ್ಲಿಯು ಟಿಕ್ ಟಾಕ್ ಬ್ಯಾನ್ ಬಳಿಕ ಬಂದ ಇನ್​​​ಸ್ಟಾಗ್ರಾಂ ರೀಲ್ಸ್ ನಲ್ಲಿ ವಿಡಿಯೋ ಮಾಡಿ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ ಪಡೆದುಕೊಳ್ಳಬೇಕೆಂಬ ಆಸೆಗೆ ಬಿದ್ದು ಹಲವು ಅಪಾಯಕಾರಿ ವಿಡಿಯೋಗಳನ್ನು ಮಾಡುತ್ತಿದ್ದಾರೆ.

ರ‍್ಯಾಶ್ ಡ್ರೈವ್ ಮಾಡಿದವನ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಮಾಡಿದ ಆರ್‌ಟಿಒ

ಇನ್ನು ವಿಡಿಯೋ ವೈರಲ್ ಆಗಲು ಸಾವರ್ಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡುವವರು ತಿಳಿದಿರಬೇಕು, ಇಂದು ಟೆಕ್ನಾಲಜಿಯು ತುಂಬಾ ಮುಂದುವರೆದಿದೆ. ದೇಶಾದ್ಯಂತ ಸಾರ್ವಜನಿಕ ರಸ್ತೆಗಳಲ್ಲಿ ಸಾಹಸದಲ್ಲಿ ತೊಡಗಿದ್ದ ಹಲವಾರು ಜನರನ್ನು ಪೊಲೀಸರು ಬಂಧಿಸುತ್ತಲೇ ಇದ್ದಾರೆ. ರಸ್ತೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಪೊಲೀಸರು ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚುತ್ತಿದ್ದಾರೆ.

ರ‍್ಯಾಶ್ ಡ್ರೈವ್ ಮಾಡಿದವನ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಮಾಡಿದ ಆರ್‌ಟಿಒ

ಸಂಚಾರಿ ಪೊಲೀಸರು ಸಿಸಿಟಿವಿಗಳ ಸಹಾಯದಿಂದ ಸ್ಟಂಟ್ ಮಾಡುವವರನ್ನು ಮಾತ್ರವಲ್ಲದೇ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಾಲನೆ ಮಾಡುವವರನ್ನು ಸಹ ಪತ್ತೆ ಹಚ್ಚಿ ದಂಡ ವಿಧಿಸುವುದು ಅಥವಾ ಇತರ ಕ್ರಮಗಳನ್ನು ಕೈಗೊಳುತ್ತಾರೆ.

ರ‍್ಯಾಶ್ ಡ್ರೈವ್ ಮಾಡಿದವನ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಮಾಡಿದ ಆರ್‌ಟಿಒ

ಇತ್ತೀಚೆಗೆ ಇದೇ ರೀತಿ ​​​ಕೆಟಿಎಂ ಬೈಕಿನಲ್ಲಿ ಯುವಕನೊಬ್ಬ ರ‍್ಯಾಶ್ ಡ್ರೈವ್ ಮಾಡುವ ವಿಡಿಯೋ ವೈರಲ್ ಆಗಿದೆ. ಇದನ್ನು ಗಮನಿಸಿದ ಪೊಲೀಸರು ಯುವಕನ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಿದ ಘಟನೆ ಇತ್ತೀಚೆಗೆ ಕೇರಳದಲ್ಲಿ ನಡೆದಿದೆ.

ರ‍್ಯಾಶ್ ಡ್ರೈವ್ ಮಾಡಿದವನ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಮಾಡಿದ ಆರ್‌ಟಿಒ

ಈ ವೀಡಿಯೊವನ್ನು ಇನ್​​​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಯುವಕರ ತಂಡ ಮೂರು, ನಾಲ್ಕು ಬೈಕ್‌ಗಳಲ್ಲಿ ರೈಡಿಂಗ್ ಹೋಗುತ್ತಿದ್ದಾರೆ. ಎಲ್ಲಾ ಬೈಕರ್‌ಗಳು ತಮ್ಮ ಲೇನ್‌ನ ಬದಿಯಲ್ಲಿಯೇ ಇದ್ದರೆ, ಅದರಲ್ಲಿ ಕೆಟಿಎಂ ರೈಡರ್ ಒಬ್ಬ ಅಪಾಯಕಾರಿಯಾಗಿ ಮುನ್ನುಗ್ಗುತ್ತಾನೆ.

ರ‍್ಯಾಶ್ ಡ್ರೈವ್ ಮಾಡಿದವನ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಮಾಡಿದ ಆರ್‌ಟಿಒ

ಈ ಕೆಟಿಎಂ ಬೈಕರ್ ಲೇನ್ ಕ್ರಾಸ್ ಮಾಡಿ ಮುಂದೆ ಸಾಗುತ್ತಿದ ಬೈಕನ್ನು ಓವರ್ ಟೇಕ್ ಮಾಡಿ ಎದುರು ಬದಿಯಿಂದ ಬರುತ್ತಿರುವ ಬೈಕ್ ಡಿಕ್ಕಿ ಹೊಡೆಯುವ ರೀತಿ ಮಾಡಿ ಮುಂದೆ ಸಾಗುತ್ತಾನೆ. ಕೆಲವೇ ಇಂಚುಗಳಷ್ಟು ಅಂತರದಲ್ಲಿ ಈ ಕೆಟಿಎಂ ರೈಡರ್ ಈ ರೀತಿ ಮಾಡುತ್ತಾನೆ.

ರ‍್ಯಾಶ್ ಡ್ರೈವ್ ಮಾಡಿದವನ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಮಾಡಿದ ಆರ್‌ಟಿಒ

ಈ ಪ್ರಕರಣದ್ದೂ ಬೈಕ್ ಸ್ವಲ್ಪ ಅಂತರದಲ್ಲೇ ಮಿಸ್ ಆಗಿದೆ. ಸ್ವಲ್ಪ ಕೂಡಾ ಟಚ್ ಆದರೂ ದೊಡ್ಡ ಅಪಘಾತದಲ್ಲಿ ಅಂತ್ಯವಾಗುತ್ತಿತ್ತು.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ರ‍್ಯಾಶ್ ಡ್ರೈವ್ ಮಾಡಿದವನ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಮಾಡಿದ ಆರ್‌ಟಿಒ

ಕೇರಳ ಎಂವಿಡಿ ಅಧಿಕಾರಿಗಳು ಈ ವಿಡಿಯೋವನ್ನು ಗಮನಿಸಿ ಬೈಕ್‌ಗೆ ಆನ್‌ಲೈನ್ ಚಲನ್ ನೀಡಿದ ನಂತರ, ಚಾಲನಾ ಪರವಾನಗಿಯನ್ನು ಆರು ತಿಂಗಳವರೆಗೆ ಅಮಾನತುಗೊಳಿಸಬೇಕು ಎಂದು ಅವರು ಆರ್‌ಟಿಒಗೆ ಶಿಫಾರಸು ಮಾಡುತ್ತಾರೆ.

ಆರ್‌ಟಿಒ ನಂತರ ಸವಾರನ ಪರವಾನಗಿಯನ್ನು ಆರು ತಿಂಗಳವರೆಗೆ ಅಮಾನತುಗೊಳಿಸಿತು. ಇನ್ನು ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಪೊಲೀಸ್ ಅಧಿಕಾರಿಗಳು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮೇಲೆ ನಿಗಾ ಇಡುತ್ತಾರೆ. ಈ ಹಿಂದೆ, ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿರುವ ವಿಡಿಯೋ ಪೊಲೀಸರು ಅನೇಕ ಚಲನ್‌ಗಳನ್ನು ನೀಡಿದ್ದಾರೆ.

ರ‍್ಯಾಶ್ ಡ್ರೈವ್ ಮಾಡಿದವನ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಮಾಡಿದ ಆರ್‌ಟಿಒ

ಇ ಚಲನ್ ಗಳನ್ನು ವಾಹನ ಮಾಲೀಕರಿಗೆ ಫೋಟೋ ಹಾಗೂ ವೀಡಿಯೊ ಸಾಕ್ಷ್ಯಗಳ ಸಮೇತ ಕಳುಹಿಸಲಾಗುತ್ತದೆ. ಈ ಕಾರಣಕ್ಕೆ ವಾಹನ ಸವಾರರು ರಸ್ತೆಯಲ್ಲಿ ಸಂಚಾರಿ ಪೊಲೀಸರು ಇಲ್ಲದಿದ್ದರೂ ಸಂಚಾರಿ ನಿಯಮಗಳನ್ನು ಪಾಲಿಸುವುದು ಸೂಕ್ತ. ಸಂಚಾರಿ ಪೊಲೀಸರು ಇಲ್ಲದಿದ್ದರೂ ಸಹ ಸಿಸಿಟಿವಿ ಕ್ಯಾಮೆರಾಗಳು ವಾಹನ ಸವಾರರನ್ನು ಮೇಲ್ವಿಚಾರಣೆ ಮಾಡುತ್ತಿರುತ್ತವೆ ಎಂಬುದನ್ನು ವಾಹನ ಸವಾರರು ಅರಿತುಕೊಂಡ ವಾಹನ ಚಾಲನೆ ಮಾಡುವುದು ಒಳಿತು.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

Most Read Articles

Kannada
English summary
Rto Suspended Ktm Duke Rider License After Rash Riding Video Goes Viral. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X