ಕುಮಾರಣ್ಣನಿಗೂ ಬಂತು ನೋಡಿ ಹೈಟೆಕ್ ಎಲೆಕ್ಷನ್ ಗಾಡಿ!

ವಿಧಾನಸಭಾ ಚುನಾವಣಾ ಹತ್ತಿರ ಬಂದಿರುವಂತೆಯೇ ಎಲ್ಲ ಪಕ್ಷಗಳು ತಮ್ಮದೇ ಆದ ಕಾರ್ಯ ತಂತ್ರಗಳೊಂದಿಗೆ ಪ್ರಚಾರ ಕಣಕ್ಕಿಳಿಯುತ್ತಿವೆ. ಇನ್ನು ತಮ್ಮ ಪ್ರಚಾರ ಕಾರ್ಯವನ್ನು ಇನ್ನಷ್ಟು ಬಿರುಸುಗೊಳಿಸಲು ಹೊರಟಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಅತ್ಯಾಧುನಿಕ ಸೌಲಭ್ಯಗಳಿರುವ ಟೊಯೊಟಾ ಕಮ್ಯೂಟರ್ ವಾಹನ ಖರೀದಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಪ್ರಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಬಿಎಸ್‌ಎರ್ ಪಕ್ಷದ ಶ್ರೀರಾಮುಲು ವಾಹನ ಖರೀದಿಸಿರುವುದು ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು. ಇದೀಗ ತಮ್ಮ ಪಕ್ಷವೇನೂ ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಜೆಡಿಎಸ್ ರಣಕಹಳೆ ಮೊಳಗಿಸಿದೆ.

ಭಾನುವಾರ ಗವಿಪುರಂನಲ್ಲಿರುವ ಶ್ರೀ ಗವಿಗಂಗಾಧರೇಶ್ವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕುಮಾರಸ್ವಾಮಿ ಅವರ ಹೈಟೆಕ್ ಗಾಡಿ ಸವಾರಿ ಆರಂಭಿಸಿದೆ. ವಿದೇಶದಲ್ಲಿ ವಿನ್ಯಾಸಗೊಳಿಸಿರುವ ಟೊಯೊಟಾ ಕಮ್ಯೂಟರ್ ವ್ಯಾನ್ ಚುನಾವಣಾ ಪ್ರಚಾರಕ್ಕೆ ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ.
ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿರಿ

Kumaraswamy poll campaign Toyota commuter van

ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಟೊಯೊಟಾ ಕಮ್ಯೂಟರ್ ವಾಹನವನ್ನು ಸಿದ್ಧಪಡಿಸಿ ಕೊಟ್ಟವರು ಬೆಂಗಳೂರು ವಿಲ್ಸನ್ ಗಾರ್ಡನ್ ಸೃಷ್ಟಿ ಟ್ರಾವೆಲ್ಸ್‌ನ ಮಾಲಿಕ ಆರ್. ರಾಜುಗೌಡ.

Kumaraswamy poll campaign Toyota commuter van

ಅತ್ಯಾಧುನಿಕ ಸೌಲಭ್ಯಗಳುಳ್ಳ ಈ ವಾಹನದಲ್ಲಿ ಹೆಡ್ರಾಲಿಕ್ ಲಿಫ್ಟ್ ವ್ಯವಸ್ಥೆ ಇದ್ದು, ವಾಹನದ ಮಧ್ಯದಿಂದ ಮೇಲೇರಿ ಭಾಷಣ ಮಾಡಬಹುದಾಗಿದೆ.

Kumaraswamy poll campaign Toyota commuter van

ಇನ್ನು ಸಾರ್ವಜನಿಕ ಜಮಾವಣೆಯ ಸ್ಥಳಕ್ಕೆ ತೆರಳಿ ಭಾಷಣ ಮಾಡಲು ನೆರವಾಗುವ ರೀತಿಯಲ್ಲಿ ನಾಲ್ಕು ಧ್ವನಿವರ್ಧಕಗಳನ್ನು ಆಳವಡಿಸಲಾಗಿದೆ.

Kumaraswamy poll campaign Toyota commuter van

ಇಷ್ಟೇ ಯಾಕೆ ಟೊಯೊಟಾ ವ್ಯಾನ್‌ನಲ್ಲಿ ಟಿ.ವಿ ಸೌಲಭ್ಯ ಕೂಡಾ ಇದ್ದು, ಕುಮಾರಣ್ಣನಿಗೂ ಕುಳಿತುಕೊಳ್ಳಲು ಮಹಾರಾಜ ಆಸನದ ವ್ಯವಸ್ಥೆ ಇದೆ. ಹಾಗೆಯೇ ಇಬ್ಬರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಸೀಟುಗಳಿವೆ.

Kumaraswamy poll campaign Toyota commuter van

ಇದರ ಹೈಡ್ರಾಲಿಕ್ ಲಿಫ್ಟನ್ನು ಕುಳಿತುಕೊಳ್ಳಲು ಅಥವಾ ಡೈನಿಂಗ್ ಟೇಬಲ್‌ನಂತ ಬಳಸಬಹುದಾಗಿದೆ.

Kumaraswamy poll campaign Toyota commuter van

ವಾಶ್ ಬೇಸಿನ್ ಹಾಗೂ ಪ್ರಿಡ್ಜ್ ಕೂಡಾ ಇದೆ. ಇನ್ನು ಬಾಯರಿಕೆಯಾದಗ ತಂಪಾದ ನೀರನ್ನು ಕುಡಿಯಬಹುದಾಗಿದೆ.

Kumaraswamy poll campaign Toyota commuter van

ಡ್ರೈವರ್ ಸೇರಿದಂತೆ ಏಳು ಮಂದಿ ಅನಾಯಾಸವಾಗಿ ಈ ವಾಹನದಲ್ಲಿ ಪ್ರಯಾಣಿಸಬಹುದಾಗಿದೆ. ಅಂದರೆ ಕುಮಾರಣ್ಣ ಆಪ್ತರಿಗೂ ಚುನಾವಣಾ ಪ್ರಚಾರದ ವೇಳೆ ನೆರವಾಗಲಿದೆ.

Kumaraswamy poll campaign Toyota commuter van

ಹಾಗೆಯೇ ಸುಂದರ ಒಳಾಂಗಣ ಹಾಗೂ ವಿಶೇಷ ಬೆಳಕು ಚೆಲ್ಲುವ ಬಲ್ಬ್‌ಗಳನ್ನು ಆಳವಡಿಸಲಾಗಿದೆ.

Kumaraswamy poll campaign Toyota commuter van

ಟೊಯಾಟಾದ ಕಸ್ಟಮೈಸ್ಡ್ ವ್ಯಾನ್‌ನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಇದರ ವಿಂಡೋ ಹೊರಂಗಣ ದೃಶ್ಯ ನೋಡಲು ನೆರವಾಗಲಿದೆ. ಕಾರ್ಡ್‌ಲೆಸ್ ಫೋನ್ ವ್ಯವಸ್ಥೆ ಕೂಡಾ ಇದೆ.

Kumaraswamy poll campaign Toyota commuter van

ಟೊಯೊಟಾ ಪ್ರಯಾಣಿಕ ವಾಹನದಲ್ಲಿ ಆಕರ್ಷಕ ಫ್ರಂಟ್ ಗ್ರಿಲ್ ಆಳವಡಿಸಲಾಗಿದೆ.

Kumaraswamy poll campaign Toyota commuter van

ಇಲ್ಲಿದೆ ನೋಡಿ ಕುಮಾರಸ್ವಾಮಿ ಹೈಟೆಕ್ ಗಾಡಿ. ಮುಂಬರುವ ಚುನಾವಣೆಯಲ್ಲಿ ಕುಮಾರಸ್ವಾಮಿ ಹೇಗೆ ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Kumaraswamy poll campaign Toyota commuter van

ಇದೀಗ ಈ ಹೈಟೆಕ್ ಗಾಡಿ ಬಗ್ಗೆ ನಿಮ್ಮ ವಿಚಾರಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.

ಇವನ್ನೂ ಓದಿ:

ಬಿಎಸ್‌ಆರ್ ಪಕ್ಷ; ರಾಮುಲು 'ಹಮ್ಮರ್' ಹಮ್ಮು ಬಿಮ್ಮು

ಪ್ರಾಡೊ ಕಾರಲ್ಲಿ ಬಿಎಸ್‌ವೈ ರೋಡ್ ಶೋ

ಇವನ್ನೂ ಓದಿ:

More from DriveSpark

Article Published On: Monday, March 11, 2013, 9:48 [IST]
English summary
Former chief minister and JD (S) State president H D Kumaraswamy buys Toyota commuter hi-tech van specially designed for campaign tours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+