ದುಬೈನಲ್ಲಿ ಲಂಬೋ ಐಷಾರಾಮಿ ಕಾರಿಗೆ ಬೆಂಕಿ
ಲಂಬೋರ್ಗಿನಿ ಕಾರಿಗೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣ ಪದೇ ಪದೇ ಆಗುತ್ತಲೇ ಇದೆ. ಈಗ ಮಗದೊಂದು ಪ್ರಕರಣ ದುಬೈನಿಂದ ಬೆಳಕಿಗೆ ಬಂದಿದ್ದು, ಇಟಲಿ ಮೂಲದ ಈ ದುಬಾರಿ ಕಾರು ಸುಟ್ಟು ಕರಕಲಾಗಿದೆ.
ಈ ರೋಚಕ ದೃಶ್ಯಗಳು ಯೂಟ್ಯೂಬ್ ನಲ್ಲಿ ಬಿತ್ತರವಾಗಿದ್ದು, ಮಾಲಿಕ ಅಪಾಯದಿಂದ ಪಾರಾಗಿದ್ದಾರೆ. ಆದರೆ ಲಂಬೋ ಕಾರುಗಳ ಬೆಂಕಿ ಅವಘಡ ಪ್ರಕರಣಗಳು ಜಾಸ್ತಿಯಾಗುತ್ತಲೇ ಇದೆ.

ಘಟನೆ ಹಿನ್ನೆಲೆ
ದುಬೈನಲ್ಲಿ ಲಂಬೋ ಮಾಲಿಕ ಎಂದಿನಂತೆ ತಮ್ಮ ದುಬಾರಿ ಅವೆಂಟಡೊರ್ ಕಾರಿನಲ್ಲಿ ಸಂಚರಿಸುತ್ತಿದ್ದರು. ಆದರೆ ಹಿಂಬದಿಯಲ್ಲಿ ಕಾರಿಗೆ ಸಡನ್ ಆಗಿ ಬೆಂಕಿ ಹೊತ್ತಿಕೊಂಡಿತ್ತು.

ಈ ಎಲ್ಲ ದೃಶ್ಯಗಳು ಹಿಂಬದಿಯಲ್ಲಿ ಬರುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಅದೃಷ್ಟವಶಾತ್ ಚಾಲಕ ಅವಘಡದಿಂದ ಪಾರಾಗಿದ್ದಾರೆ. ಆದರೆ ಆತನ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಪದೇ ಪದೇ ಕೋಟಿ ಬೆಲೆ ಬಾಳುವ ಸೂಪರ್ ಕಾರಿನಲ್ಲಿ ಬೆಂಕಿ ಪ್ರಕರಣ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಎಂಜಿನ್ ನಲ್ಲಿ ಯಾವುದೇ ತಾಂತ್ರಿಕ ದೋಷವಿದೆಯೇ ಎಂಬುದು ಭೀತಿಯನ್ನುಂಟು ಮಾಡಿದೆ.

ಲಂಬೋ ಬೆಂಕಿ ಪ್ರಕರಣದಿಂದಾಗಿ ಟ್ರಾಫಿಕ್ ಸುಗಮ ಸಂಚಾರಕ್ಕೆ ಕೆಲವು ಹೊತ್ತು ಅಡಚಣೆಯುಂಟಾಗಿತ್ತು. ಬಳಿಕ ಅಗ್ನಿ ಶಾಮಕ ದಳ ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಈ ಸಂಬಂಧ ಲಂಬೋ ಅಧಿಕೃತರಿಂದ ಯಾವುದೇ ಸ್ಪಷ್ಟನೆಗಳು ಇದುವರೆಗೆ ಲಭ್ಯವಾಗಿಲ್ಲ.
ವಿಡಿಯೋ ವೀಕ್ಷಿಸಿ


Click it and Unblock the Notifications








