ಅಪಘಾತ ರಭಸಕ್ಕೆ ಲಂಬೋರ್ಗಿನಿ ಇಬ್ಭಾಗ; ಬುದ್ಧ ಮಹಿಮೆ ಚಾಲಕ ಪಾರು!

Written By:

ಥಾಯ್ಲೆಂಡ್‌‌ನ ರಸ್ತೆಯೊಂದರಲ್ಲಿ ಗಂಟೆಗೆ 150ಕ್ಕೂ ಹೆಚ್ಚು ಕೀ.ಮೀ.ಗಿಂತಲೂ ವೇಗದಲ್ಲಿ ಸಂಚರಿಸುತ್ತಿದ್ದ ಲಂಬೋರ್ಗಿನಿ ಸೂಪರ್ ಕಾರೊಂದು ಅಪಘಾತಕ್ಕೀಡಾದ ಘಟನೆ ವರದಿಯಾಗಿದ್ದು, ಬುದ್ಧ ಮಹಿಮೆಯಿಂದ ಚಾಲಕ ಅದೃಷ್ಟವಶಾತ್ ಪಾರಾಗಿದ್ದಾರೆ.

ಕೆಳಗೆ ಕೊಡಲಾಗಿರುವ ಚಿತ್ರಗಳನ್ನು ಗಮನಿಸಿದರೆ ಪಿಟ್‌ಸ್ಯಾನ್‌ಲಾಕ್‌ನಿಂದ ನಾಖೋನ್‌ಸವನ್‌ನತ್ತ ಶರವೇಗದಲ್ಲಿ ಸಂಚರಿಸುತ್ತಿರುವ ಲಂಬೋರ್ಗಿನಿ ಗಲರ್ಡೊ ಸೂಪರ್ ಕಾರು, ಮರವೊಂದಕ್ಕೆ ಢಿಕ್ಕಿಯಾದ ಪರಿಣಾಮ ಇಬ್ಭಾಗಗೊಂಡಿತ್ತು. ಢಿಕ್ಕಿಯಾದ ರಭಸಕ್ಕೆ ಕಾರಿನ ಒಂದು ಭಾಗ ರಸ್ತೆಯಲ್ಲೂ ಇನ್ನೊಂದು ಭಾಗ ರಸ್ತೆಯ ಕೆಳಕ್ಕೆ ಸರಿಸಲ್ಪಟ್ಟಿತ್ತು.

To Follow DriveSpark On Facebook, Click The Like Button
ಅಪಘಾತ ರಭಸಕ್ಕೆ ಲಂಬೋರ್ಗಿನಿ ಇಬ್ಭಾಗ; ಬುದ್ಧ ಮಹಿಮೆ ಚಾಲಕ ಪಾರು!

ಇಷ್ಟೊಂದು ಭಯಾನಕ ಅಪಘಾತ ಸಂಭವಿಸಿದರೂ ಚಾಲಕ ಯಾವುದೇ ಪ್ರಾಣಪಾಯವಿಲ್ಲದೆ ಪಾರಾಗಿರುವುದು ಆಶ್ಚರ್ಯ ಮೂಡಿಸಿದೆ. ಇದನ್ನು ದೈವ ಕೃಪೆ ಎಂದು ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸಬಹುದಾಗಿದೆ.

ಚಿತ್ರ ಕೃಪೆ: ಬ್ಯಾಂಕಾಕ್ ಪೋಸ್ಟ್

ಅಪಘಾತ ರಭಸಕ್ಕೆ ಲಂಬೋರ್ಗಿನಿ ಇಬ್ಭಾಗ; ಬುದ್ಧ ಮಹಿಮೆ ಚಾಲಕ ಪಾರು!

ಇದಕ್ಕೆ ಸ್ವಯಂ ಕಾರಿನ ಮಾಲಿಕ ಪಿಟಾಕ್ ರೈಯನ್‌ಸಿಮಾ ಹೇಳುವ ಪ್ರಕಾರ ಅಪಘಾತ ಸಂಭವಿಸುವುದಕ್ಕೂ ಸ್ವಲ್ಪ ಮೊದಲು ತಾವು ನಾಕೋನ್‌ಸವನ್ ಪ್ರಾಂತ್ಯದ ಬುದ್ಧ ದೇವಾಲಯಕ್ಕೆ ಭೇಟಿ ಕೊಟ್ಟಿರುವುದಾಗಿ ತಿಳಿಸಿದ್ದಾರೆ.

ಚಿತ್ರ ಕೃಪೆ: ಬ್ಯಾಂಕಾಕ್ ಪೋಸ್ಟ್

ಅಪಘಾತ ರಭಸಕ್ಕೆ ಲಂಬೋರ್ಗಿನಿ ಇಬ್ಭಾಗ; ಬುದ್ಧ ಮಹಿಮೆ ಚಾಲಕ ಪಾರು!

ಈ ಸಂದರ್ಭದಲ್ಲಿ ದೀರ್ಘ ಪಯಣದ ವೇಳೆ ಬುದ್ಧ ರಕ್ಷಾ ಧರಿಸುವಂತೆಯೇ ಸ್ನೇಹಿತ ಎಚ್ಚರಿಸಿರುವುದಾಗಿಯೂ ಇದರಂತೆ ಬುದ್ಧ ತಾಯತ ಧರಿಸುವುವುದೇ ಅಪಘಾತದಿಂದಲು ಪಾರಾಗಲು ಸಾಧ್ಯವಾಗಿದೆ ಎಂದು 40ರ ಹರೆಯದ ಪಿಟಾಕ್ ತಿಳಿಸಿದ್ದಾರೆ.

ಚಿತ್ರ ಕೃಪೆ: ಬ್ಯಾಂಕಾಕ್ ಪೋಸ್ಟ್

ಅಪಘಾತ ರಭಸಕ್ಕೆ ಲಂಬೋರ್ಗಿನಿ ಇಬ್ಭಾಗ; ಬುದ್ಧ ಮಹಿಮೆ ಚಾಲಕ ಪಾರು!

ಪೊಲೀಸರ ಪ್ರಕಾರ ಧಾರಾಕಾರ ಮಳೆ ಸುರಿಯುತ್ತಿದ್ದರೂ ಗಂಟೆಗೆ 150 ಕೀ.ಮೀ. ವೇಗದಲ್ಲಿ ಸಂಚರಿಸಿರುವುದು ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಚಿತ್ರ ಕೃಪೆ: ಬ್ಯಾಂಕಾಕ್ ಪೋಸ್ಟ್

ಅಪಘಾತ ರಭಸಕ್ಕೆ ಲಂಬೋರ್ಗಿನಿ ಇಬ್ಭಾಗ; ಬುದ್ಧ ಮಹಿಮೆ ಚಾಲಕ ಪಾರು!

ಒಟ್ಟಿನಲ್ಲಿ ಅಮೆರಿಕ ತಲಹದಿಯ ಉದ್ಯಮಿಯಾಗಿರುವ ಪಿಯಾಕ್ ಅವರಿಗೆ ಬುದ್ಧನ ಕೃಪೆ ಒಲಿದಿರುವುದಂತೂ ನಿಜ.

ಚಿತ್ರ ಕೃಪೆ: ಬ್ಯಾಂಕಾಕ್ ಪೋಸ್ಟ್

English summary
In a shocking news, a Lamborghini Gallardo supercar has split in half after what can only be presumed as a high-speed crash in Thailand.
Story first published: Monday, June 30, 2014, 13:59 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark