ಕೂಲ್ ಕಪ್ತಾನ ಧೋನಿಯ ಪವರ್ ಫುಲ್ ಕಾರು ಕಲೆಕ್ಷನ್
ಬ್ಯಾಟ್ ಹಿಡಿದುಕೊಂಡು ಧೋನಿ ಮೈದಾನಕ್ಕಿಳಿದರೆ ಎಲ್ಲರೂ 'ಹೆಲಿಕಾಪ್ಟರ್ ಶಾಟ್' ನಿರೀಕ್ಷೆ ಮಾಡುತ್ತಾರೆ. ಅಂತಹ ಧೋನಿ ಮೈದಾನದ ಒಳಗೂ ಹೊರಗೂ ತಮ್ಮ ಅತ್ಯುತ್ತಮ ನಡವಳಿಕೆಯಿಂದಾಗಿಯೇ ಹೆಸರು ಮಾಡಿದ್ದಾರೆ. ಇದೇ ಕಾರಣಕ್ಕಾಗಿ ವಿರುದ್ಧ ತಂಡದ ಆಟಗಾರರು ಕೂಲ್ ಕಪ್ತಾನರನ್ನು ಮೆಚ್ಚಿಕೊಳ್ಳುತ್ತಾರೆ.
ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯ ನಡುವೆಯು ಸಮಯ ಕಂಡುಕೊಳ್ಳುವ ನಾಯಕ ಧೋನಿ ತಮ್ಮ ಅಚ್ಚುಮೆಚ್ಚಿನ ಬೈಕ್ ಹಾಗೂ ಕಾರುಗಳೊಂದಿಗೆ ಸುತ್ತಾಟದಲ್ಲಿ ತೊಡಗುತ್ತಾರೆ. ಇತ್ತೀಚೆಗಷ್ಟೇ ನಂಬರ್ ಪ್ಲೇಟ್ ಇಲ್ಲದೆ ವಿಂಟೇಜ್ ಬೈಕ್ ವೊಂದರಲ್ಲಿ ಸವಾರಿ ಮಾಡಿರುವುದಕ್ಕೆ ಧೋನಿ ದಂಡನೆಗೆ ಒಳಗಾಗಿದ್ದರು. ಅಷ್ಟಕ್ಕೂ ಧೋನಿ ಬಳಿಯಿರುವ ಶಕ್ತಿಶಾಲಿ ಕಾರುಗಳು ಯಾವುವು? ಉತ್ತರಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

10. ಜಿಎಂಸಿ ಸಿಯೆರಾ
ಜಿಎಂಸಿ ಸಿಯೆರಾ 3500 ಎಚ್ ಡಿ ಪಿಕಪ್ ಟ್ರಕ್ ಅನ್ನು ಅಮೆರಿಕದ ಐಕಾನಿಕ್ ಸಂಸ್ಥೆಯು ಉತ್ಪಾದಿಸುತ್ತದೆ. ಅಮೆರಿಕದ ಜನರಲ್ ಮೋಟಾರ್ಸ್ ಉಪವಿಭಾಗವಾಗಿರುವ ಜಿಎಂಸಿ ಪ್ರಮುಖವಾಗಿಯೂ ಪಿಕಪ್, ವಾಣಿಜ್ಯ ಟ್ರಕ್, ಬಸ್, ವ್ಯಾನ್, ಮಿಲಿಟರಿ ವಾಹನ ಹಾಗೂ ಕ್ರೀಡಾ ಬಳಕೆಯ ವಾಹನಗಳ ಮಾರಾಟದಲ್ಲಿ ಗಮನ ಕೇಂದ್ರಿಕರಿಸಿದೆ. ಈ ಆಮದು ವಾಹನವನ್ನು ಧೋನಿ ಕೂಡಾ ತಮ್ಮದಾಗಿಸಿದ್ದಾರೆ. ಇದರಲ್ಲಿರುವ 6.6 ಲೀಟರ್ ವಿ8 ಟರ್ಬೊ ಎಂಜಿನ್ 397 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

09. ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2
ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2 ಕ್ರೀಡಾ ಬಳಕೆಯ ವಾಹನವು ಆಫ್ ರೋಡ್ ಸಾಮರ್ಥ್ಯವನ್ನು ಹೊಂದಿದೆ. ಇದು ಭಾರತದಲ್ಲಿ ಡಿಸ್ಕವರಿ ಸ್ಪೋರ್ಟ್ ಮಾದರಿಯನ್ನು ಬದಲಾಯಿಸುವ ಸಾಧ್ಯತೆಯಿದೆ. ಅಲ್ಲದೆ ಭಾರತದಲ್ಲಿ ಜೋಡಣೆಯಾಗಲಿರುವ ಮೊದಲ ಲ್ಯಾಂಡ್ ರೋವರ್ ಎಸ್ ಯುವಿ ಎಂದೆನಿಸಿಕೊಳ್ಳಲಿದೆ. ಇದರಲ್ಲಿರುವ 2.2 ಲೀಟರ್ 4 ಸಿಲಿಂಡರ್ ಎಸ್ ಡಿ4 ಟರ್ಬೊ ಎಂಜಿನ್ 148 ಹಾಗೂ 187 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

08. ಫೆರಾರಿ 599 ಜಿಟಿಒ
ಪ್ರತಿಯೊಬ್ಬ ವಾಹನ ಪ್ರೇಮಿಗೂ ಫೆರಾರಿ ಕಾರನ್ನು ಹೊಂದುವುದು ಕನಸಾಗಿರುತ್ತದೆ. ವಿಶ್ವದ ಶ್ರೀಮಂತ ಕ್ರಿಕೆಟಿಗ ಇದನ್ನು ನನಸಾಗಿದ್ದಾರೆ. ವಿಶೇಷವೆಂದರೆ ಫೆರಾರಿ 599 ಜಿಟಿಒ ಇಂಡಿಯಾ ಎಡಿಷನ್ ಸೂಪರ್ ಕಾರಿನ ಹುಡ್ ನಲ್ಲಿ ತ್ರಿವರ್ಣ ಧ್ವಜದ ಬಣ್ಣವನ್ನು ಬಳಿಯಲಾಗಿದೆ. ಇದು ಅಪ್ಪಟ ದೇಶ ಪ್ರೇಮವನ್ನು ತೋರಿಸುತ್ತದೆ. ಇದರಲ್ಲಿ 6 ಲೀಟರ್ ವಿ12 ನೈಸರ್ಗಿಕ ಚೋಷಿತ ಎಂಜಿನ್ ಆಳವಡಿಸಲಾಗಿದ್ದು, ಬರೋಬ್ಬರಿ 661 ಅಶ್ವಶಕ್ತಿ ಉತ್ಪಾದಿಸುತ್ತದೆ. ಹಾಗೆಯೇ ಕೇವಲ 3.35 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಹಾಗೂ ಗಂಟೆಗೆ ಗರಿಷ್ಠ 335 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

07. ಆಡಿ ಕ್ಯೂ7
ಆಡಿ ಕ್ಯೂ7 ಐಷಾರಾಮಿ ಕ್ರಾಸೋವರ್ ಕಾರು ಭಾರತೀಯ ಕ್ಯಾಪ್ಟನ್ ಗೆ ಹೆಚ್ಚು ಯೋಗ್ಯವೆನಿಸಲಿದೆ. ಅತ್ಯಂತ ಶಕ್ತಿಶಾಲಿ ವಿ12 ಟರ್ಬೊ ಡೀಸೆಲ್ ಎಂಜಿನ್ ಇದರಲ್ಲಿದ್ದು, ರೋಚಕ ಆಫ್ ರೋಡ್ ಅನುಭವ ಕಾಯ್ದುಕೊಂಡಿದೆ. ಇನ್ನು ಸುರಕ್ಷತೆಗೂ ಹೆಚ್ಚಿನ ಮಹತ್ವ ಕೊಡಲಾಗಿದ್ದು, ಮೊನೊಕಾಕ್ ಚಾಸೀ ಸಮತೋಲನ ಕಾಪಾಡಲು ನೆರವಾಗಲಿದೆ.

06. ಮಿಟ್ಸುಬಿಸಿ ಪಜೆರೊ ಎಸ್ ಎಫ್ ಎಕ್ಸ್
ಭಾರತದಲ್ಲಿ ಮಿಟ್ಸುಬಿಸಿ ವಾಹನಗಳು ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿಲ್ಲ. ಆದರೂ ಲೆಜೆಂಡರಿ ಮಿಟ್ಸುಬಿಸಿ ಪಜೆರೂ ಎಸ್ ಎಫ್ ಎಕ್ಸ್ ಕಾರನ್ನು ತಮ್ಮದಾಗಿಸಲು ಧೋನಿ ಹಿಂದು ಮುಂದು ನೋಡಿಲ್ಲ. ಇದರ 2.8 ಲೀಟರ್ ಟರ್ಬೊ ಡೀಸೆಲ್ ಎಂಜಿನ್ 108 ಅಶ್ವಶಕ್ತಿ ಉತ್ಪಾದಿಸುತ್ತದೆ.

05. ಮಿಟ್ಸುಬಿಸಿ ಔಟ್ಲೆಂಡರ್
ಜಪಾನ್ ಮೂಲದ ಮಿಟ್ಸುಬಿಸಿ ಔಟ್ಲೆಂಡರ್ ಕಾರು ಸಹ ಧೋನಿ ಬಳಿಯಿದೆ. ಇದು ಭಾರತ ಮಾರುಕಟ್ಟೆಯಲ್ಲಿರುವ ಕೆಲವೇ ಕೆಲವು ಪೆಟ್ರೋಲ್ ಎಸ್ ಯುವಿಗಳಲ್ಲಿ ಒಂದಾಗಿದೆ. ಕ್ರೀಡಾತ್ಮಕ ನಿರ್ವಹಣೆ ಹಾಗೂ ಗರಿಷ್ಠ ಗ್ರೌಂಡ್ ಕ್ಲಿಯರನ್ಸ್ ಗಾಗಿ ಹೆಸರು ಮಾಡಿರುವ ಔಟ್ಲೆಂಡರ್ ಕಾರಿನಲ್ಲಿ 2.4 ಲೀಟರ್ (170 ಅಶ್ವಶಕ್ತಿ) ಎಂಐವಿಇಸಿ ನೈಸರ್ಗಿಕವಾಗಿ ಚೋಷಿತ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ.

04. ಮಾರುತಿ ಸುಜುಕಿ ಎಸ್ ಎಕ್ಸ್4
ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಮೇಲೂ ಧೋನಿ ತಮ್ಮ ಪ್ರೀತಿ ತೋರಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಎಸ್ ಎಕ್ಸ್4 ಸ್ಥಾನವನ್ನು ಸಿಯಾಝ್ ಸೆಡಾನ್ ಬದಲಾಯಿಸಿಕೊಂಡಿದೆ. ಹಾಗಿದ್ದರೂ ಧೋನಿ ನೆಚ್ಚಿನ ಕಾರುಗಳಲ್ಲಿ ಇದು ಒಂದಾಗಿದೆ.

03. ಟೊಯೊಟಾ ಕರೊಲ್ಲಾ
ದೈನಂದಿನ ಬಳಕೆಗಾಗಿ ಟೊಯೊಟಾ ಕರೊಲ್ಲಾ ಕಾರು ನಾಯಕ ಧೋನಿಗೆ ಹೆಚ್ಚು ಸೂಕ್ತವೆನಿಸಲಿದೆ. ಪ್ರಸ್ತುತ ಕರೊಲ್ಲಾ ಕಾರು ಪೆಟ್ರೋಲ್ ಹಾಗೂ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

02. ಮಹೀಂದ್ರ ಸ್ಕಾರ್ಪಿಯೊ
ದೇಶದ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಮಹೀಂದ್ರ ಸ್ಕಾರ್ಪಿಯೊ ದೇಶದ ಅತ್ಯಂತ ಜನಪ್ರಿಯ ಕ್ರೀಡಾ ಬಳಕೆಯ ವಾಹನಗಳಲ್ಲಿ ಒಂದಾಗಿದೆ. ಭಾರತ ಪ್ರಧಾನ ಮಂದ್ರಿ ನರೇಂದ್ರ ಮೋದಿ ಸಹ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇದನ್ನೇ ಬಳಕೆ ಮಾಡುತ್ತಿದ್ದರು. ಇನ್ನು ಕೆಲವು ಆಫ್ ರೋಡ್ ಪ್ರೇಮಿಗಳು ಸ್ಕಾರ್ಪಿಯೊವನ್ನು ತಮಗೆ ತಕ್ಕಂತೆ ಮಾರ್ಪಾಡುಗೊಳಿಸುತ್ತಾರೆ.

01. ಹಮ್ಮರ್ ಎಚ್2
ಸದೃಢ ದೇಹಕಾಯವನ್ನು ಹೊಂದರುವ ಮಹಿಗೆ ಎಲ್ಲ ಅರ್ಥದಲ್ಲೂ ಅಮೆರಿಕದ ಐಕಾನಿಕ್ ಹಮ್ಮರ್ ಎಚ್2 ಮಸಲ್ ಕಾರು ಯೋಗ್ಯವೆನಿಸಲಿದೆ. ಮೂಲತ: ಮಿಲಿಟರಿ ಅಗತ್ಯಗಳಿಗಾಗಿ ಬಳಕೆಯಾಗುತ್ತಿದ್ದ ಹಮ್ಮರ್ ದೈತ್ಯ ಗಾಡಿಯನ್ನು ಭಾರತೀಯ ಭೂಸೇನೆಯ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಕೂಡಾ ಆಗಿರುವ ಧೋನಿ ಸಹ ಮೆಚ್ಚಿಕೊಂಡಿದ್ದಾರೆ. ಇದರಲ್ಲಿರುವ ಶಕ್ತಿಶಾಲಿ 6.2 ಲೀಟರ್ ವಿ8 ಪೆಟ್ರೋಲ್ ಎಂಜಿನ್ 393 ಅಶ್ವಶಕ್ತಿ ಉತ್ಪಾದಿಸುತ್ತಿದ್ದು, ಕೇವಲ 10 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.

ಧೋನಿ ಕಾರು ಸಂಗ್ರಹ ಪಟ್ಟಿಯಲ್ಲಿ ಯಾವುದಾದರೂ ಬಿಟ್ಟು ಹೋಗಿದೆಯೇ? ನಿಮ್ಮ ಅಮೂಲ್ಯ ಕಾಮೆಂಟ್ಸ್ ಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


Click it and Unblock the Notifications








