Just In
Don't Miss!
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- News
ಕೊರೊನಾ ಬಂದಿದ್ದು ಚೀನಾದಿಂದ ಅಲ್ಲ... ಶಿವನಿಂದ, ನಾನೇ ಶಿವ!
- Sports
ಯುಎಇ ಆಟಗಾರರಿಂದ ಮ್ಯಾಚ್ ಫಿಕ್ಸಿಂಗ್; ಅಮಾನತು ಮಾಡಿದ ಐಸಿಸಿ
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದುಬಾರಿ ಬೆಲೆಯ ಐಷಾರಾಮಿ ಕಾರವಾನ್ ಖರೀದಿಸಿದ ಜನಪ್ರಿಯ ನಟ
ಮಮ್ಮುಟ್ಟಿ ಮಲಯಾಳಂ ಸಿನಿಮಾಗಳಲ್ಲಿ ಮಾತ್ರವಲ್ಲದೆ ತಮಿಳು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತರ ನಟರಂತೆ ಮಮ್ಮುಟ್ಟಿ ಸಹ ವಾಹನಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಮಮ್ಮುಟ್ಟಿರವರ ಕಾರು ಗ್ಯಾರೇಜ್ 369 ಗ್ಯಾರೇಜ್ ಎಂದೇ ಜನಪ್ರಿಯವಾಗಿದೆ.

ಮಮ್ಮುಟ್ಟಿರವರ ಬಳಿಯಿರುವ ಎಲ್ಲಾ ವಾಹನಗಳ ನೋಂದಣಿ ಸಂಖ್ಯೆ 369 ಆಗಿದೆ. ಈಗ ಇದೇ ನೋಂದಣಿ ಸಂಖ್ಯೆಯನ್ನು ಹೊಂದಿರುವ ಹೊಸ ವಾಹನವೊಂದು ಮಮ್ಮುಟ್ಟಿರವರ ಕಾರು ಗ್ಯಾರೇಜ್‌ಗೆ ಬಂದಿದೆ. ಸೆಮಿ-ಬುಲೆಟ್ ಪ್ರೂಫ್ ಸೂಪರ್ ಕಾರವಾನ್ ಮಮ್ಮುಟ್ಟಿರವರ ಕಾರು ಗ್ಯಾರೇಜ್‌ಗೆ ಬಂದಿರುವ ಹೊಸ ವಾಹನವಾಗಿದೆ.

ಮಮ್ಮುಟ್ಟಿ ಇತ್ತೀಚೆಗಷ್ಟೇ ಈ ಐಷಾರಾಮಿ ಕಾರವಾನ್ ಅನ್ನು ಖರೀದಿಸಿದ್ದಾರೆ. ಈ ಹೊಸ ಕಾರವಾನ್ ಸಹ ಮಮ್ಮುಟ್ಟಿ ಅವರ ನೆಚ್ಚಿನ ನೋಂದಣಿ ಸಂಖ್ಯೆಯನ್ನೇ ಹೊಂದಿದೆ. ಈ ಕಾರವಾನ್‌ನ ಸಂಖ್ಯೆ ಕೆಎಲ್ 07 ಸಿಯು 369 ಎಂಬುದು ಗಮನಾರ್ಹ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಕಾರವಾನ್ ಅನ್ನು ಓಜ್ ಆಟೋಮೊಬೈಲ್ಸ್ ವಿನ್ಯಾಸಗೊಳಿಸಿದೆ. ಆಟೋ ಉತ್ಸಾಹಿಗಳಿಗೆ ಓಜೆಸ್ ಆಟೋಮೊಬೈಲ್ಸ್ ಬಗ್ಗೆ ತಿಳಿದೇ ಇರುತ್ತದೆ. ಓಜೆಸ್ ಆಟೋಮೊಬೈಲ್ಸ್ ಭಾರತದಲ್ಲಿರುವ ಪ್ರಮುಖ ಕಾರವಾನ್ ತಯಾರಕ ಕಂಪನಿಗಳಲ್ಲಿ ಒಂದಾಗಿದೆ.

ನಟ ಮಮ್ಮುಟ್ಟಿ ಅವರ ಅಗತ್ಯಕ್ಕೆ ತಕ್ಕಂತೆ ಓಜೆಸ್ ಆಟೋಮೊಬೈಲ್ಸ್ ಈ ಕಾರವಾನ್ ಅನ್ನು ವಿನ್ಯಾಸಗೊಳಿಸಿದೆ. ವರದಿಗಳ ಪ್ರಕಾರ, ವೋಲ್ವೋ ವಾಹನವೊಂದನ್ನು ಕಾರವಾನ್ ಆಗಿ ಮಾಡಿಫೈ ಮಾಡಲಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಕಾರವಾನ್‌ನಲ್ಲಿ ಮಲಗುವ ಕೋಣೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ. ಆರಾಮದಾಯಕ ಪ್ರಯಾಣಕ್ಕಾಗಿ ಆರಾಮದಾಯಕವಾದ ಸೀಟುಗಳನ್ನು ಸಹ ನೀಡಲಾಗಿದೆ. ಕಾರವಾನ್‌ನ ಹೊರಭಾಗವು ನೀಲಿ ಹಾಗೂ ಬಿಳಿ ಬಣ್ಣವನ್ನು ಹೊಂದಿದೆ.

ನಟ ಮಮ್ಮುಟ್ಟಿ ಖರೀದಿಸಿರುವ ಹೊಸ ಕಾರವಾನ್‌ನ ಫೋಟೋಗಳು ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮಮ್ಮುಟ್ಟಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕಾರವಾನ್ ಫೋಟೋಗಳನ್ನು ಖುಷಿಯಿಂದ ಶೇರ್ ಮಾಡುತ್ತಿದ್ದಾರೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಕಾರವಾನ್'ನ ಬೆಲೆ ಎಷ್ಟು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ನಟ ಮಮ್ಮುಟ್ಟಿ ಈ ಐಷಾರಾಮಿ ಕಾರವಾನ್ ಮಾತ್ರವಲ್ಲದೆ ಬಿಎಂಡಬ್ಲ್ಯು ಇ 46 ಎಂ 3, ಜಾಗ್ವಾರ್ ಎಕ್ಸ್‌ಜೆ ಸೇರಿದಂತೆ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಈಗ ಖರೀದಿಸಿರುವ ಕಾರವಾನ್ ಮಮ್ಮುಟ್ಟಿರವರ ಗ್ಯಾರೇಜ್‌ನಲ್ಲಿರುವ ಅತ್ಯಂತ ದುಬಾರಿ ವಾಹನವೆಂದು ಹೇಳಲಾಗಿದೆ. ಮಮ್ಮುಟ್ಟಿ ಬೇರೆ ನಟರಿಗಿಂತ ವಿಭಿನ್ನವಾದ ಜಾಗ್ವಾರ್ ಎಕ್ಸ್‌ಜೆ ಕಾರನ್ನು ಹೊಂದಿದ್ದಾರೆ. ಮಮ್ಮುಟ್ಟಿ ಅವರ ಬಳಿ ದುಬಾರಿ ಬೆಲೆಯ ಟೊಯೊಟಾ ಲ್ಯಾಂಡ್ ಕ್ರೂಸರ್ ಸಹ ಇದೆ. ಈ ಚಿತ್ರಗಳನ್ನು ಓಜೆಸ್ ಆಟೋಮೊಬೈಲ್ಸ್ ಹಾಗೂ ಆಲ್ ಕೇರಳ ಕಾಂಟ್ರಾಕ್ಟ್ ಕ್ಯಾರಿಯೇಜ್'ಗಳಿಂದ ಪಡೆಯಲಾಗಿದೆ.